ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay Hazare Trophy 2025-26: ದೆಹಲಿ ಪರ ಮತ್ತೊಂದು ಪಂದ್ಯವನ್ನು ಆಡಲಿರುವ ವಿರಾಟ್‌ ಕೊಹ್ಲಿ!

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ 15 ವರ್ಷಗಳ ಬಳಿಕ ವಿಜಯ ಹಝಾರೆ ಟ್ರೋಫಿ ಟೂರ್ನಿಗೆ ಇತ್ತೀಚೆಗೆ ಮರಳಿದ್ದರು. ಅವರು ಒಂದು ಶತಕ ಹಾಗೂ ಒಂದು ಅರ್ಧಶತಕವನ್ನು ಬಾರಿಸಿದ್ದರು. ಇದೀಗ ಅವರು ದೆಹಲಿ ತಂಡದ ಪರ ಮತ್ತೊಂದು ಪಂದ್ಯವನ್ನು ಆಡಲಿದ್ದಾರೆಂದು ಹೇಳಲಾಗುತ್ತಿದೆ.

ದೆಹಲಿ ಪರ ಮತ್ತೊಂದು ಪಂದ್ಯವನ್ನು ಆಡಲಿರುವ ವಿರಾಟ್‌ ಕೊಹ್ಲಿ!

ದೆಹಲಿ ಪರ ಮತ್ತೊಂದು ಪಂದ್ಯವನ್ನು ಆಡಲಿರುವ ವಿರಾಟ್‌ ಕೊಹ್ಲಿ. -

Profile
Ramesh Kote Dec 27, 2025 7:27 PM

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರು ಬಿಡುವಿನ ಸಮಯದಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಕಡ್ಡಾಯವಾಗಿ ಎರಡು ಪಂದ್ಯಗಳನ್ನು ಆಡಬೇಕಾಗುತ್ತದೆ. ಹಾಗಾಗಿ ಆಧುನಿಕ ಕ್ರಿಕೆಟ್‌ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ(Virat Kohli) 15 ವರ್ಷಗಳ ದೇಶಿ ಕ್ರಿಕೆಟ್‌ ಪಂದ್ಯವನ್ನು ಆಡಿದ್ದರು. ಅವರು ಇತ್ತೀಚೆಗೆ ದೆಹಲಿ (Delhi) ತಂಡದ ಪರ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯ ಎರಡು ಪಂದ್ಯಗಳನ್ನು ಆಡಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಮೈದಾನದಲ್ಲಿ ಆಂಧ್ರ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 131 ರನ್‌ಗಳನ್ನು ಬಾರಿಸಿದ್ದರು. ನಂತರ ಗುಜರಾತ್‌ ವಿರುದ್ದದ ಎರಡನೇ ಸುತ್ತಿನ ಪಂದ್ಯದಲ್ಲಿ 77 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ದೆಹಲಿ ತಂಡದ ಗೆಲುವಿಗೆ ನೆರವು ನೀಡಿದ್ದರು.

ಅಂದ ಹಾಗೆ ದೆಹಲಿ ಪರ ಎರಡು ಪಂದ್ಯಗಳನ್ನು ಆಡಿದ ಬಳಿಕ ವಿರಾಟ್‌ ಕೊಹ್ಲಿ ನ್ಯೂಜಿಲೆಂಡ್‌ ವಿರುದ್ಧದ ಮೂರು ಏಕದಿನ ಸರಣಿಗೆ ತಯಾರಿ ನಡೆಸಲಿದ್ದಾರೆಂದು ಹೇಳಲಾಗಿತ್ತು. ಆದರೆ, ಅವರು ಇದೀಗ ದೆಹಲಿ ಪರ ಮೂರನೇ ಪಂದ್ಯವನ್ನು ರೈಲ್ವೇಸ್‌ ವಿರುದ್ಧ ಆಡಲಿದ್ದಾರೆಂದು ವರದಿಯಾಗಿದೆ. ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಮೊದಲನೇ ಏಕದಿನ ಪಂದ್ಯ ಜನವರಿ 11 ರಂದು ನಡೆಯಲಿದೆ. ಈ ಪಂದ್ಯದ ಮೂಲಕ ಏಕದಿನ ಸರಣಿ ಆರಂಭವಾಗಲಿದೆ. ಹಾಗಾಗಿ ಇದಕ್ಕೂ ಮುನ್ನ ಅವರು ಜನವರಿ 6 ರಂದು ರೈಲ್ವೇಸ್‌ ಆಡಲಿದ್ದಾರೆಂದು ವರದಿಯಾಗಿದೆ.

ʻಕೇವಲ ಎರಡೇ ದಿನದಲ್ಲಿ ನಾಲ್ಕನೇ ಟೆಸ್ಟ್‌ ಅಂತ್ಯʼ: ಎಂಸಿಜಿ ಪಿಚ್‌ ಅನ್ನು ಟೀಕಿಸಿದ ದಿನೇಶ್‌ ಕಾರ್ತಿಕ್‌!

ದೆಹಲಿ ತಂಡದ ಪರ ವಿರಾಟ್‌ ಕೊಹ್ಲಿ ಎರಡು ಪಂದ್ಯಗಳನ್ನು ಮುಗಿಸಿದ್ದಾರೆ ಹಾಗೂ ಅವರು ತಂಡವನ್ನು ತೊರೆದಿದ್ದಾರೆ. ಆದರೆ, ಅವರ ಕಿಟ್‌ ಹಾಗೂ ಜೆರ್ಸಿ ದೆಹಲಿ ತಂಡದಲ್ಲಿಯೇ ಇದ್ದು, ಅವರು ಮತ್ತೊಂದು ಪಂದ್ಯಕ್ಕೆ ಮರಳಿದ್ದಾರೆಂದು ಹೇಳಲಾಗುತ್ತಿದೆ. ಅಂದ ಹಾಗೆ ಕಿವೀಸ್‌ ಎದುರಿನ ಏಕದಿನ ಸರಣಿಗೂ ಮುನ್ನ ಬಿಸಿಸಿಐ ಯಾವ ರೀತಿ ಯೋಜನೆಯನ್ನು ಹಾಕಿಕೊಳ್ಳಲಿದೆ ಎಂಬುದರ ಮೇಲೆ ಇದು ನಿರ್ಣಯವಾಗಲಿದೆ. ಒಂದು ವೇಳೆ ವಿರಾಟ್‌ ಕೊಹ್ಲಿಗೆ ಅವಕಾಶ ಸಿಕ್ಕರೆ, ಅವರು ಜನವರಿ6 ರಂದು ರೈಲ್ವೇಸ್‌ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ.

ವಿರಾಟ್‌ ಕೊಹ್ಲಿ ದೆಹಲಿ ತಂಡದ ಪರ ಆಡುವುದು ಯುವ ಆಟಗಾರರಿಗೆ ತುಂಬಾ ನೆರವಾಗಲಿದೆ. ಆಟದ ಕೌಶಲ, ವಿಶ್ವಾಸ, ಡ್ರೆಸ್ಸಿಂಗ್‌ ರೂಂ ವಾತಾವರಣ ಎಲ್ಲವೂ ಉತ್ತಮವಾಗಿರುತ್ತದೆ. ಇದರಿಂದ ಟೀಮ್‌ ಇಂಡಿಯಾ ಮಾಜಿ ನಾಯಕನಿಂದ ಯುವ ಆಟಗಾರರುಕಲಿಯುವುದು ತುಂಬಾ ಇದೆ. ಕಳೆದ ಎರಡು ಪಂದ್ಯಗಳು ಈ ಸಂಗತಿಗಳು ಯುವ ಆಟಗಾರರ ಮೇಲೆ ಪ್ರಭಾವ ಬೀರಿವೆ. ಇದೀಗ ಮತ್ತೊಂದು ಪಂದ್ಯಕ್ಕೆ ವಿರಾಟ್‌ ಕೊಹ್ಲಿ ಬಂದರೆ, ದೆಹಲಿ ತಂಡಕ್ಕೆ ತುಂಬಾ ನೆರವಾಗಲಿದೆ.

AUS vs ENG: 15 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್‌ ಡೇ ಟೆಸ್ಟ್‌ ಗೆದ್ದ ಇಂಗ್ಲೆಂಡ್‌!

ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚಿದ್ದ ಕೊಹ್ಲಿ

ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ಏಕದಿನ ಸರಣಿಯಲ್ಲಿ ಎರಡು ಶತಕಗಳನ್ನು ಬಾರಿಸಿದ್ದರು. ಆ ಮೂಲಕ ಟೀಮ್‌ ಇಂಡಿಯಾದ ಏಕದಿನ ಸರಣಿ ಗೆಲುವಿಗೆ ನೆರವು ನೀಡಿದ್ದರು. ಆ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿ, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.