ಪತಿ ಜತೆ ಲಾಡ್ಜ್‌ಗೆ ತೆರಳಿದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ಸುಪಾರಿ ಕೊಟ್ಟ ಪತ್ನಿ!
Crime News: ಕೇರಳಂನ ತ್ರಿಶೂರ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಲಾಡ್ಜ್‌ನಲ್ಲಿ ಪ್ರಿಯತಮನ ಜತೆ ತಂಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪೊಲೀಸ್ ಅಧಿಕಾರಿಗಳಂತೆ ನಟಿಸಿದ ಐವರು ಬಲವಂತವಾಗಿ ಅವರ ಕೋಣೆಗೆ ನುಗ್ಗಿ, ವ್ಯಕ್ತಿ ಮತ್ತು ಮಹಿಳೆ ಇಬ್ಬರ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ, ಬಾಯಿ ಮುಚ್ಚಿ ಕಾರಿನಲ್ಲಿ ತಮಿಳುನಾಡಿಗೆ ಅಪಹರಿಸಿದ್ದಾರೆ.
ಬಂಧಿತ ಮೂವರು ಆರೋಪಿಗಳು -
ತಿರುವನಂತಪುರಂ, ಅ. 1: ವಿವಾಹಿತ ಸ್ನೇಹಿತನೊಂದಿಗೆ ಖಾಸಗಿ ಲಾಡ್ಜ್‌ಗೆ ಹೋಗಿದ್ದ ಮಹಿಳೆಯೊಬ್ಬಳನ್ನು ಐವರು ಕಿಡಿಗೇಡಿಗಳು ಪೊಲೀಸ್ ಅಧಿಕಾರಿಗಳಂತೆ ನಟಿಸಿ ಅಪಹರಿಸಿದ್ದಾರೆ. ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಕೇರಳಂನ (Keralam) ತ್ರಿಶೂರ್‌ನಲ್ಲಿ ನಡೆದಿದೆ. ಆಕೆಯೊಂದಿಗೆ ಬಂದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದ್ದು, ಕೈ ಮತ್ತು ಕಾಲುಗಳು ಮುರಿತಕ್ಕೊಳಗಾಗಿದೆ. ನಂತರ ಆ ವ್ಯಕ್ತಿಯನ್ನು ತಮಿಳುನಾಡಿನ ಆಸ್ಪತ್ರೆಯ ಹೊರಗೆ ಬಿಟ್ಟು ತೆರಳಿದ್ದಾರೆ (Crime News). ಮಹಿಳೆಯ ಸ್ನೇಹಿತನ ಪತ್ನಿಯೇ ಸುಪಾರಿ ಕೊಟ್ಟಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಈ ಘಟನೆ ನಡೆದಿದ್ದು, ತಮಿಳುನಾಡಿನ ತಿರುಪ್ಪೂರಿನ ಮಹಿಳೆ ತನ್ನ ಸ್ನೇಹಿತನೊಂದಿಗೆ ಕೇರಳಂಗೆ ಪ್ರಯಾಣ ಬೆಳೆಸಿದ್ದಳು. ತ್ರಿಶೂರ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಲಾಡ್ಜ್‌ನಲ್ಲಿ ಇಬ್ಬರೂ ಒಟ್ಟಿಗೆ ತಂಗಿದ್ದರು. ಸ್ವಲ್ಪ ಸಮಯದ ನಂತರ, ಪೊಲೀಸ್ ಅಧಿಕಾರಿಗಳಂತೆ ನಟಿಸಿದ ಐವರು ಬಲವಂತವಾಗಿ ಅವರ ಹೋಟೆಲ್ ಕೋಣೆಗೆ ನುಗ್ಗಿ, ವ್ಯಕ್ತಿ ಮತ್ತು ಮಹಿಳೆ ಇಬ್ಬರ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ, ಬಾಯಿ ಮುಚ್ಚಿ ಕಾರಿನಲ್ಲಿ ತಮಿಳುನಾಡಿಗೆ ಕರೆದೊಯ್ದರು.
ಪ್ರಯಾಣದುದ್ದಕ್ಕೂ ಆ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಯಿತು. ಅವನ ಕೈ ಮತ್ತು ಕಾಲುಗಳು ಮುರಿದಿವೆ. ತಿರುಪ್ಪೂರಿನ ಆಸ್ಪತ್ರೆಯ ಬಳಿ ಆತನನ್ನು ಬಿಟ್ಟು ಹೋದ ನಂತರ, ಮಹಿಳೆಯನ್ನು ಮತ್ತೊಂದು ಕಾರಿಗೆ ವರ್ಗಾಯಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಸಂತ್ರಸ್ತ ನೀಡಿದ ಮಾಹಿತಿಯ ಆಧಾರದ ಮೇಲೆ, ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತ್ರಿಶೂರ್ ನಗರ ಪೊಲೀಸರಿಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.
ಮೊಮ್ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನ: 75 ವರ್ಷದ ಅಜ್ಜನ ವಿರುದ್ಧ ಪೋಕ್ಸೋ ಕೇಸ್
ತನಿಖೆಯಲ್ಲಿ, ಆ ವ್ಯಕ್ತಿಯ ಪತ್ನಿಯೇ ಅಪರಾಧ ನಡೆಸಲು ಆರೋಪಿಗಳಿಗೆ ಹೇಳಿದ್ದಳು ಎಂದು ತಿಳಿದುಬಂದಿದೆ. ಆಕೆ ತನ್ನ ಪತಿಯ ಫೋನ್ ಸ್ಥಳವನ್ನು ಟ್ರ್ಯಾಕ್ ಮಾಡಿ ಮಾಹಿತಿಯನ್ನು ಗ್ಯಾಂಗ್‌ಗೆ ರವಾನಿಸಿದ್ದಾಳೆ ಎನ್ನಲಾಗಿದೆ. ಪೊಲೀಸರು ಆ ವ್ಯಕ್ತಿಯ ಪತ್ನಿ ಸೇರಿ ಎಲ್ಲ ಐದು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಬೈಕಲ್ಲಿ ತೆರಳುತ್ತಿದ್ದ ಯುವ ಜೋಡಿಯನ್ನು ನಿಂದಿಸಿ ಕಿರುಕುಳ
ಬಿಹಾರದ ಗಯಾದಲ್ಲಿ ಬೈಕ್‌ನಲ್ಲಿದ್ದ ಸಾಗುತ್ತಿದ್ದ ಯುವ ಜೋಡಿಯನ್ನು ನಿಂದಿಸಿ ಕಿರುಕುಳ ನೀಡಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಗಯಾದ ಗುರುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.