ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming Case: ಈ ಬಾರಿ ರಾಕಿ ಕಟ್ಟಲು ಆಗಲ್ಲ... ತಮ್ಮನಿಗೆ ಪತ್ರ ಬರೆದಿಟ್ಟು ಅಕ್ಕ ಆತ್ಮಹತ್ಯೆ

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ 24 ವರ್ಷದ ಮಹಿಳೆ ಶ್ರೀವಿದ್ಯ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಲ ನನಗೆ ರಾಖಿ ಕಟ್ಟೋಕೆ ಆಗಲ್ಲ, ಕ್ಷಮಿಸಿಬಿಡು ಎಂದು ತಮ್ಮನಿಗೆ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ. ಶ್ರೀವಿದ್ಯ ಗ್ರಾಮೀಣ ಸರ್ವೇಯರ್ ಆಗಿದ್ದ ರಾಂಬಾಬುವನ್ನು ವಿವಾಹವಾಗಿ ಕೇವಲ ಆರು ತಿಂಗಳ ನಂತರ ಈ ದುರಂತ ಸಂಭವಿಸಿದೆ. ಪತ್ರದಲ್ಲಿ, ವಿವಾಹವಾದ ಒಂದು ತಿಂಗಳಿನಿಂದಲೇ ಗಂಡನಿಂದ ಕಿರುಕುಳವನ್ನು ಎದುರಿಸುತ್ತಿದ್ದೆ ಎಂದು ಆಕೆ ತಿಳಿಸಿದ್ದಾಳೆ.

ಈ ಬಾರಿ ರಾಕಿ ಕಟ್ಟಲ್ಲ...ತಮ್ಮನಿಗೆ ಪತ್ರ ಬರೆದಿಟ್ಟು ಅಕ್ಕ ಆತ್ಮಹತ್ಯೆ..!

ಆತ್ಮಹತ್ಯೆ ಮಾಡಿಕೊಂಡ ಶ್ರೀವಿದ್ಯ

Profile Sushmitha Jain Aug 5, 2025 11:51 AM

ಕೃಷ್ಣ: ಆಂಧ್ರಪ್ರದೇಶದ (Andhra Pradesh) ಕೃಷ್ಣ (Krishna) ಜಿಲ್ಲೆಯಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದರಲ್ಲಿ, 24 ವರ್ಷದ ಶ್ರೀವಿದ್ಯ (Srividya) ಎಂಬ ಕಾಲೇಜು ಉಪನ್ಯಾಸಕಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾಳೆ. ಆಕೆ ತನ್ನ ತಮ್ಮನಿಗೆ ಬರೆದಿಟ್ಟ ಭಾವುಕ ಪತ್ರದಲ್ಲಿ, "ಜಾಗರೂಕನಾಗಿರು, ತಮ್ಮ. ಈ ಬಾರಿ ನಾನು ನಿನಗೆ ರಾಖಿ ಕಟ್ಟಲು ಆಗುವುದಿಲ್ಲವೇನೋ" ಎಂದು ಬರೆದಿದ್ದಾಳೆ.

ಶ್ರೀವಿದ್ಯ ಗ್ರಾಮೀಣ ಸರ್ವೇಯರ್ ಆಗಿದ್ದ ರಾಂಬಾಬುವನ್ನು ವಿವಾಹವಾಗಿ ಕೇವಲ ಆರು ತಿಂಗಳ ನಂತರ ಈ ದುರಂತ ಸಂಭವಿಸಿದೆ. ಪತ್ರದಲ್ಲಿ, ವಿವಾಹವಾದ ಒಂದು ತಿಂಗಳಿನಿಂದಲೇ ಗಂಡನಿಂದ ಕಿರುಕುಳವನ್ನು ಎದುರಿಸುತ್ತಿದ್ದೆ ಎಂದು ಆಕೆ ತಿಳಿಸಿದ್ದಾಳೆ.

ಕಿರುಕುಳದ ವಿವರ

ಶ್ರೀವಿದ್ಯ ಬರೆದ ಪತ್ರದಲ್ಲಿ ಗಂಡನ ಕ್ರೂರ ಹಿಂಸೆಯ ವಿವರಗಳಿವೆ. ರಾಂಬಾಬು ಕುಡಿದು ಮನೆಗೆ ಬಂದು ಆಕೆಯನ್ನು ದೈಹಿಕವಾಗಿ ಹಿಂಸಿಸುತ್ತಿದ್ದನು ಮತ್ತು ನಿಂದಿಸುತ್ತ ಕೀಳಾಗಿ ನಡೆಸಿಕೊಳ್ಳುತ್ತಿದ್ದ ಎಂದು ಆಕೆ ತಿಳಿಸಿದ್ದಾಳೆ. ಪತ್ನಿಯನ್ನು ಗೇಲಿ ಮಾಡುತ್ತಿದ್ದ, ಮತ್ತೊಬ್ಬ ಮಹಿಳೆಯ ಮುಂದೆ ಆಕೆಯನ್ನು ಅವಮಾನಿಸುತ್ತಿದ್ದನು, ಆಕೆಯ ತಲೆಯನ್ನು ಹಾಸಿಗೆಗೆ ಅಪ್ಪಳಿಸಿ ಬೆನ್ನಿಗೆ ಗುದ್ದುತ್ತಿದ್ದನು ಎಂದು ಆಕೆ ವಿವರಿಸಿದ್ದಾಳೆ. ಈ ನಿರಂತರ ಹಿಂಸೆ ಮತ್ತು ಕಿರುಕುಳವು ಶ್ರೀವಿದ್ಯಗೆ ಸಹಿಸಲು ಆಗಲಿಲ್ಲ, ಅಂತಿಮವಾಗಿ ಆಕೆ ಆತ್ಮಹತ್ಯೆಯಂತಹ ತೀವ್ರ ಹೆಜ್ಜೆ ಇಡಲು ಕಾರಣವಾಯಿತು.

ಪೊಲೀಸ್ ತನಿಖೆ

ಸ್ಥಳೀಯ ಅಧಿಕಾರಿಗಳಿಗೆ ಈ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದ್ದು, ಶ್ರೀವಿದ್ಯಳ ಸಾವಿನ ಸಂದರ್ಭಗಳ ಬಗ್ಗೆ ತನಿಖೆ ಆರಂಭವಾಗಿದೆ. ಪೊಲೀಸರು ಆಕೆಯ ಪತ್ರವನ್ನು ಆಧರಿಸಿ ರಾಂಬಾಬುವಿನ ವಿರುದ್ಧ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಘಟನೆಯು ಕೌಟುಂಬಿಕ ಹಿಂಸೆಯ ಗಂಭೀರ ಸಮಸ್ಯೆಯನ್ನು ಮತ್ತೊಮ್ಮೆ ಎತ್ತಿತೋರಿಸಿದೆ. ವಿಶೇಷವಾಗಿ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಯುವತಿಯೊಬ್ಬಳು ಇಂತಹ ದುರಂತಕ್ಕೆ ಒಳಗಾಗಿರುವುದು ಸಮಾಜದಲ್ಲಿ ಆತಂಕವನ್ನುಂಟು ಮಾಡಿದೆ.

ಈ ಹಿಂದೆ ಅತ್ತೆ-ಮಾವ ನೀಡುತ್ತಿದ್ದ ಕಿರುಕುಳ ಸಹಿಸಲಾಗದೇ ಪೊಲೀಸ್ ಕಾನ್‌ಸ್ಟೇಬಲ್ ಪತ್ನಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿತ್ತು.

ಪೊಲೀಸ್ ಕಾನ್‌ಸ್ಟೇಬಲ್ ಅನುರಾಗ್ ಸಿಂಗ್ ಅವರ ಪತ್ನಿ ಸೌಮ್ಯ ಕಶ್ಯಪ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ಇನ್‌ಸ್ಟಾದಲ್ಲಿ ವಿಡಿಯೋ ರೀಲ್ಸ್ ನೋಡುವಾಗ ಮೃತ ಪೊಲೀಸ್ ಕಾನ್‌ಸ್ಟೇಬಲ್ ಪತ್ನಿ ಹರಿಬಿಟ್ಟ ವಿಡಿಯೋ ಗಮನಿಸಿದ ಬಳಿಕ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನು ಓದಿ: Viral Video: Viral Video: ಪುಣೆಗೆ ಹೊರಟಿದ್ದ ವಿಮಾನದಲ್ಲಿ ತಪ್ಪಿದ ದುರಂತ; ಗಾಳಿಗೆ ಹಾರಿ ಬಿದ್ದ ಕಿಟಕಿಯ ಚೌಕಟ್ಟು, ವಿಡಿಯೋ ನೋಡಿ

ವಿಡಿಯೋದಲ್ಲಿ, ಅತ್ತೆ, ಮಾವ ಹಾಗೂ ಮೈದುನ ಮೂವರು ಸೇರಿ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಗಂಡನನ್ನು ನನ್ನಿಂದ ಬೇರ್ಪಡಿಸಿ, ಅವರಿಗೆ ಬೇರೆ ಮದುವೆ ಮಾಡಲು ಬಯಸುತ್ತಿದ್ದಾರೆ. ಅದೇ ಕಾರಣಕ್ಕೆ ನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಜೊತೆಗೆ ಮೈದುನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ತನ್ನ ಗಂಡನ ಚಿಕ್ಕಪ್ಪ ವಕೀಲ ಎಂದು ಅವರು ಹೇಳಿದರು. ವಕೀಲರು ನನ್ನ ಗಂಡನ ಬಳಿ ನನ್ನನ್ನು ಕೊಲ್ಲಲು ಹೇಳಿ ನನ್ನ ಗಂಡನನ್ನು ಬಚಾವ್ ಮಾಡುವುದಾಗಿ ಹೇಳಿದರು" ಎಂದು ಸೌಮ್ಯ ಕಶ್ಯಪ್ ಆತಂಕಕಾರಿ ವೀಡಿಯೊದಲ್ಲಿ ಹೇಳಿದ್ದಾರೆ. ಕಾನ್‌ಸ್ಟೆಬಲ್‌ನ ಜಿತೇಂದ್ರ ದುಬೆಪತ್ನಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಲಕ್ನೋ ಪೊಲೀಸರು ದೃಢಪಡಿಸಿದರು. ಪ್ರಭಾರ ಇನ್ಸ್‌ಪೆಕ್ಟರ್ ಮತ್ತು ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು. ಘಟನೆ ಸಂಬಂಧ ಉತ್ತರ ಲಕ್ನೋ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.