ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

New Diploma Course: ಸಹಕಾರಿ ಲೆಕ್ಕಪರಿಶೋಧನೆಗೆ ಹೊಸ ಡಿಪ್ಲೊಮಾ ಕೋರ್ಸ್‌: ಇದೇ 30ರಿಂದ ಅರ್ಜಿ ಸಲ್ಲಿಕೆ ಆರಂಭ

ಕೇವಲ ಸಿದ್ಧಾಂತಕ್ಕೆ ಸೀಮಿತವಾಗದೆ ತರಗತಿ ಬೋಧನೆ, ಕೇಸ್ ಸ್ಟಡೀಸ್, ಫೀಲ್ಡ್ ಸ್ಟಡೀಸ್ ಮತ್ತು ಪ್ರಾಯೋಗಿಕ ಲೆಕ್ಕಪರಿಶೋಧನಾ ಕೆಲಸದ ಅನುಭವವನ್ನು ಈ ಕೋರ್ಸ್ ಒಳಗೊಂಡಿರಲಿದೆ ಎಂದರು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಕಾಂ, ಬಿಬಿಎಂ ಅಥವಾ ಯಾವುದೇ ಪದವಿಯಲ್ಲಿ ಅಕೌಂಟೆನ್ಸಿಯನ್ನು ಒಂದು ವಿಷಯವಾಗಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರಲಿದ್ದಾರೆ.

ಸಹಕಾರಿ ಲೆಕ್ಕಪರಿಶೋಧನೆಗೆ ಹೊಸ ಡಿಪ್ಲೊಮಾ ಕೋರ್ಸ್‌

-

Profile
Ashok Nayak Oct 30, 2026 12:03 AM

ಬೆಂಗಳೂರು: ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಕೌಶಲ್ಯಯುತ ಹಾಗೂ ವೃತ್ತಿಪರ ಮಾನವ ಸಂಪನ್ಮೂಲ ವನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸಹಕಾರ ಇಲಾಖೆಯ ಸಹಯೋಗದೊಂದಿಗೆ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್ (ಡಿಸಿಎ) ಎಂಬ ಆರು ತಿಂಗಳ ಅವಧಿಯ ನೂತನ ಡಿಪ್ಲೊಮಾ ಕೋರ್ಸ್(Diploma Course0 ಆರಂಭಿಸುವುದಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಹಕಾರ ಸಚಿವ ಲಕ್ಷ್ಮಣ ಸವದಿ(Laxman Savadi) ಮಾತನಾಡಿ, ಆರು ತಿಂಗಳ ಸುದೀರ್ಘ ಕೋರ್ಸ್‌ನಲ್ಲಿ ಸಹಕಾರ ಕಾಯ್ದೆ ಮತ್ತು ನಿಯಮಗಳು, ಅಕೌಂಟಿಂಗ್ ಆಂಡ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್, ಕೋ- ಆಪರೇಟಿವ್ ಆಡಿಟಿಂಗ್, ಕೋ-ಆಪರೇಟಿವ್ ಇಕೋ-ಸಿಸ್ಟಂ ಹಾಗೂ ಟ್ಯಾಲಿ ಸೇರಿದಂತೆ ಇತ್ತೀಚಿನ ಆಧುನಿಕ ಡಿಜಿಟಲ್ ಪ್ಲಾಟ್ʼಫಾರ್ಮ್‌ಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ಕೇವಲ ಸಿದ್ಧಾಂತಕ್ಕೆ ಸೀಮಿತವಾಗದೆ ತರಗತಿ ಬೋಧನೆ, ಕೇಸ್ ಸ್ಟಡೀಸ್, ಫೀಲ್ಡ್ ಸ್ಟಡೀಸ್ ಮತ್ತು ಪ್ರಾಯೋಗಿಕ ಲೆಕ್ಕಪರಿಶೋಧನಾ ಕೆಲಸದ ಅನುಭವವನ್ನು ಈ ಕೋರ್ಸ್ ಒಳಗೊಂಡಿರಲಿದೆ ಎಂದರು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಕಾಂ, ಬಿಬಿಎಂ ಅಥವಾ ಯಾವುದೇ ಪದವಿಯಲ್ಲಿ ಅಕೌಂಟೆನ್ಸಿಯನ್ನು ಒಂದು ವಿಷಯವಾಗಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರಲಿದ್ದಾರೆ.

ಇದನ್ನೂ ಓದಿ: GTTC Diploma ಓದಿದವರಿಗೂ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ; ಸರ್ಕಾರದಿಂದ ಮಹತ್ವದ ಆದೇಶ

ಈ ಕೋರ್ಸ್‌ʼನ ಪ್ರವೇಶ ಶುಲ್ಕವು ಸಾಮಾನ್ಯ ಹಾಗೂ ಇತರೆ ಅಭ್ಯರ್ಥಿಗಳಿಗೆ 10 ಸಾವಿರ ರು. ಆಗಿದ್ದು, ಬಿಪಿಎಲ, ಎಸ್‌ಸಿ ಹಾಗೂ ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಅರ್ಜಿ ಸಲ್ಲಿಕೆಯು ಇದೇ ಅ.30ರಿಂದ ಆರಂಭವಾಗ ಲಿದ್ದು, ಪ್ರಕಟಣೆ ಹೊರಬಂದ ದಿನಾಂಕದಿಂದ 15 ದಿನಗಳ ಒಳಗಾಗಿ ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ರಾಜ್ಯದ ಎಂಟು ಪ್ರಮುಖ ಸಹಕಾರ ತರಬೇತಿ ಕೇಂದ್ರಗಳಾದ ಬೆಂಗಳೂರು, ಧಾರವಾಡ, ಮೈಸೂರು, ಮಡಿಕೇರಿ, ಕಲಬುರಗಿ, ಮಂಗಳೂರು, ಶಿವಮೊಗ್ಗ ಹಾಗೂ ಬೆಳಗಾವಿಗಳಲ್ಲಿ ಈ ಕೋರ್ಸ್ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಅಧಿಕೃತ ವೆಬ್‌ಸೈಟ್ https://dca.kscfl.in ಅಥವಾ ಬೆಂಗಳೂರಿನ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ವಾರ್ಷಿಕ 500 ಲೆಕ್ಕ ಪರಿಶೋಧಕರನ್ನು ಸೃಷ್ಟಿಸುವ ಗುರಿ ಸಹಕಾರ ಸಂಘಗಳ ರಚನೆ, ಆಡಳಿತ, ಹಣಕಾಸು ನಿರ್ವಹಣೆ ಹಾಗೂ ಲೆಕ್ಕಪರಿಶೋಧನಾ ವಿಧಾನಗಳನ್ನು ಬಲಪಡಿಸುವುದು ಈ ಕೋರ್ಸ್‌ನ ಆಶಯ. ಕೌಶಲ್ಯ ಯುತ ಮತ್ತು ಸಮರ್ಥ ಲೆಕ್ಕಪರಿಶೋಧಕರನ್ನು ತಯಾರಿಸುವುದರ ಜತೆಗೆ, ಸಂಸ್ಥೆಗಳ ವ್ಯವಹಾರಿಕ ಲೋಪದೋಷಗಳನ್ನು ತಡೆಗಟ್ಟಿ ಕಾನೂನುಬದ್ಧ ನಿಯಮಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಈ ತರಬೇತಿಯು ಸಹಕಾರಿಯಾಗಲಿದೆ.

ಕೋರ್ಸ್ ಪಡೆದವರಿಗೆ ಅಧಿಕೃತ ಮಾನ್ಯತೆ ಪತ್ರವನ್ನು ಇಲಾಖೆಯಿಂದ ನೀಡಲಾಗುವುದು. ಅವರು ಮಾಡುವ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ವರದಿಯನ್ನು ಸಹಕಾರ ಇಲಾಖೆಯವರು ಅಧಿಕಾರಿಗಳು ಪರಿಶೀಲಿಸಿ ಅಧಿಕೃತ ಮಾನ್ಯತೆ ನೀಡಲಿದ್ದಾರೆ. ವಾರ್ಷಿಕವಾಗಿ 500 ಜನ ಲೆಕ್ಕಪರಿಶೋಧಕರನ್ನು ಸೃಷ್ಟಿಸುವ ಗುರಿ ಹೊಂದಲಾಗಿದ್ದು, ಅರ್ಜಿಗಳನ್ನು ಗಮನಿಸಿ ಮುಂದಿನ ಯೋಜನೆ ರೂಪಿಸಲಿದ್ದೇವೆ ಎಂದು ಸಚಿವ ಲಕ್ಷ್ಮಣ ಸವದಿ ವಿವರಿಸಿದ್ದಾರೆ.

image

ರಾಜ್ಯದಲ್ಲಿ ಸಹಕಾರ ಚಳವಳಿ ಬಲಪಡಿಸುವುದು ಹಾಗೂ ಸಹಕಾರ ಸಂಸ್ಥೆಗಳ ಸಾಧನೆ, ಕಾರ್ಯ ಚಟುವಟಿಕೆ ಮತ್ತು ಜನಪರ ಸೇವೆಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ನವೆಂಬರ್ 14ರಿಂದ ಏಳು ದಿನಗಳ ಕಾಲ ಸಹಕಾರ ಸಪ್ತಾಹ ಆಯೋಜಿಸಲಾಗುತ್ತಿದೆ. ಇದರ ಉದ್ಘಾಟನಾ ಅಥವಾ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D K Shivakumar) ಭಾಗವಹಿಸಲಿದ್ದಾರೆ.

- ಲಕ್ಷ್ಮಣ ಸವದಿ, ಸಹಕಾರ ಸಚಿವ