ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SSLC, 2nd PUC Exam 2026 TimeTable: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಕರ್ನಾಟಕ SSLC, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2, 2026 ವೇಳಾಪಟ್ಟಿ: ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-1, 2026ರ ಮಾರ್ಚ್‌ 18ರಿಂದ ಏಪ್ರಿಲ್‌ 2ರವರೆಗೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ-1, 2026ರ ಫೆಬ್ರವರಿ 28ರಿಂದ ಮಾರ್ಚ್‌ 17ರವರೆಗೆ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

-

Prabhakara R Prabhakara R Nov 5, 2025 4:22 PM

ಬೆಂಗಳೂರು, ನ.5: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ಅಂತಿಮ ವೇಳಾಪಟ್ಟಿಯನ್ನು ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಬುಧವಾರ ಪ್ರಕಟಿಸಿದೆ. ಮಂಡಳಿಯ ವೆಬ್‌ಸೈಟ್‌ನಲ್ಲಿ ವೇಳಾಪಟ್ಟಿ (SSLC, 2nd PUC Exam 2026 TimeTable) ಪ್ರಕಟಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ-1, 2026ರ ಮಾರ್ಚ್‌ 18ರಿಂದ ಏಪ್ರಿಲ್‌ 2ರವರೆಗೆ ನಡೆಯಲಿದೆ. ಹಾಗೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಮೇ 18ರಿಂದ 25ರವರೆಗೆ ನಡೆಯಲಿದೆ. ಇನ್ನು ದ್ವಿತೀಯ ಪಿಯುಸಿ ಪರೀಕ್ಷೆ-1, 2026ರ ಫೆಬ್ರವರಿ 28ರಿಂದ ಮಾರ್ಚ್‌ 17ರವರೆಗೆ ನಡೆಯಲಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ-2, 2026ರ ಏಪ್ರಿಲ್‌ 25ರಿಂದ ಮೇ 9ರವರೆಗೆ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಅಂತಿಮ ವೇಳಾಪಟ್ಟಿ

  • ಮಾರ್ಚ್ 18, 2026: ಪ್ರಥಮ ಭಾಷೆ- ಕನ್ನಡ, ಮರಾಠಿ, ತೆಲುಗು,ಹಿಂದಿ, ತಮಿಳು, ತಮಿಳು, ಇಂಗ್ಲಿಷ್‌, ಸಂಸ್ಕೃತ
  • ಮಾರ್ಚ್ 23, 2026: (ಕೋರ್‌ ಸಬ್ಜೆಕ್ಟ್‌) ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
  • ಮಾರ್ಚ್ 25, 2026: ದ್ವಿತೀಯ ಭಾಷೆ- ಇಂಗ್ಲಿಷ್‌,ಕನ್ನಡ
  • ಮಾರ್ಚ್ 28, 2026: (ಕೋರ್ ಸಬ್ಜೆಕ್ಟ್) ಗಣಿತ, ಸಮಾಜಶಾಸ್ತ್ರ
  • ಮಾರ್ಚ್ 30, 2026: ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ,
  • ಏಪ್ರಿಲ್ 02, 2026: ಸಮಾಜ ವಿಜ್ಞಾನ

SSLC Exam 1

SSLC Exam 1 New

ದ್ವಿತೀಯ ಪಿಯುಸಿ ಪರೀಕ್ಷೆ-1 ಅಂತಿಮ ವೇಳಾಪಟ್ಟಿ

  • ಫೆ.28, 2026: ಕನ್ನಡ, ಅರೇಬಿಕ್
  • ಮಾ.2, 2026: ಭೂಗೋಳಶಾಸ್ತ್ರ, ಮನಶಾಸ್ತ್ರ, ಸಂಖ್ಯಾಶಾಸ್ತ್ರ
  • ಮಾ.3, 2026: ಇಂಗ್ಲಿಷ್
  • ಮಾ.4, 2026: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • ಮಾ.5, 2026: ಇತಿಹಾಸ
  • ಮಾ.6, 2026: ಭೌತಶಾಸ್ತ್ರ
  • ಮಾ.7, 2026: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
  • ಮಾ.9, 2026: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲಗಣಿತ
  • ಮಾ.10, 2026: ಅರ್ಥಶಾಸ್ತ್ರ
  • ಮಾ.11, 2026: ತರ್ಕಶಾಸತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹವಿಜ್ಞಾನ
  • ಮಾ.12, 2026: ಹಿಂದಿ
  • ಮಾ.13, 2026: ರಾಜ್ಯಶಾಸ್ತ್ರ
  • ಮಾ.14, 2026: ಲೆಕ್ಕಶಾಸ್ತ್ರ, ಗಣಿತ
  • ಮಾ.16, 2026: ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕವಿಜ್ಞಾನ
  • ಮಾ.17, 2026: ಹಿಂದೂಸ್ಥಾನಿ ಸಂಗೀತ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್​ನೆಸ್​​

Second PUC Exam 1

Second PUC Exam 1 New

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಅಂತಿಮ ವೇಳಾಪಟ್ಟಿ

SSLC Exam 2

SSLC Exam 2 new

ದ್ವಿತೀಯ ಪಿಯುಸಿ ಪರೀಕ್ಷೆ-2 ಅಂತಿಮ ವೇಳಾಪಟ್ಟಿ

II PUC Exam 2

II PUC Exam 2 new

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ಅಂತಿಮ ವೇಳಾಪಟ್ಟಿಗಾಗಿ ಈ ವೆಬ್‌ಸೈಟ್‌ ಲಿಂಕ್‌ www.kseab.karnataka.gov.in ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ | KEA Recruitment 2025: ವಿವಿಧ ಇಲಾಖೆಗಳ 708 ಹುದ್ದೆ ನೇಮಕಾತಿ; ಅರ್ಜಿ ಸಲ್ಲಿಕೆ ಅವಧಿ ನ.14ರವರೆಗೆ ವಿಸ್ತರಣೆ