Eye Makeup 2025: ಕಣ್ಣಿಗೆ ಐ ಶ್ಯಾಡೋ ಹಚ್ಚುವ ಮುನ್ನ ತಿಳಿದುಕೊಳ್ಳಬೇಕಾದ 5 ಸಂಗತಿಗಳು
Eye Makeup 2025: ಕಂಗಳ ಅಂದವನ್ನು ಹೆಚ್ಚಿಸುವ ಐ ಶ್ಯಾಡೋಗಳನ್ನು ಹಚ್ಚುವ ಮುನ್ನ ಪ್ರಮುಖ 5 ಸಂಗತಿಗಳನ್ನು ತಿಳಿದುಕೊಳ್ಳುವುದು ಅಗತ್ಯ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ರಕ್ಷಾ. ಇದಕ್ಕಾಗಿ ಒಂದಿಷ್ಟು ಸಿಂಪಲ್ ಸಲಹೆ ಕೂಡ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್ -


ಕಂಗಳ ಅಂದವನ್ನು ಹೆಚ್ಚಿಸುವಲ್ಲಿ ಐ ಶ್ಯಾಡೋ ಪಾತ್ರ ದೊಡ್ಡದು. ಇಡೀ ಮೇಕಪ್ನಲ್ಲಿ ಅತ್ಯಾಕರ್ಷಕವಾಗಿ ಕಾಣುವ ಕಂಗಳ ಸೌಂದರ್ಯ, ಐ ಶ್ಯಾಡೋ ಬಳಸುವುದರಿಂದ ಹೆಚ್ಚಾಗುತ್ತದೆ. ಈ ಬಗ್ಗೆ ಮೇಕಪ್ ಆರ್ಟಿಸ್ಟ್ ರಕ್ಷಾ 5 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲು ತಿಳಿಸಿದ್ದಾರೆ.
ಸೀಸನ್ ಕಲರ್ಸ್ಗೆ ಆದ್ಯತೆ ನೀಡಿ
ಐ ಶ್ಯಾಡೋ ಮೇಕಪ್ ಮಾಡುವಾಗ ಆದಷ್ಟೂ ಟ್ರೆಂಡಿ ಕಲರ್ಸ್ ಆಯ್ಕೆ ಮಾಡಿ. ಕೆಲವೊಮ್ಮೆ ಟ್ರೆಂಡ್ ಫಾಲೋ ಮಾಡುತ್ತಾ ಮುಖಕ್ಕೆ ಸೂಟ್ ಆಗದಿದ್ದನ್ನು ಹಚ್ಚಿಕೊಳ್ಳಬೇಡಿ. ಈ ಸೀಸನ್ಗೆ ಹೊಂದುವಂತಹ ಐ ಶ್ಯಾಡೋ ಆಯ್ಕೆ ಮಾಡಿ. ಧರಿಸುವ ಡ್ರೆಸ್ಗಳಿಗೂ ಮ್ಯಾಚ್ ಆಗಬೇಕು ಎಂಬುದನ್ನು ಮರೆಯದಿರಿ.

ರೆಪ್ಪೆಯ ಸ್ಕಿನ್ ಟೋನ್ಗೆ ತಕ್ಕಂತಿರಲಿ
ನಿಮ್ಮ ರೆಪ್ಪೆಯ ಸ್ಕಿನ್ ಟೋನ್ ಗೆ ತಕ್ಕಂತೆ ಐ ಶ್ಯಾಡೋ ಹಚ್ಚಿ. ಜಿಡ್ಡಿನಾಂಶ ಹೊಂದಿದ ರೆಪ್ಪೆ ನಿಮ್ಮದ್ದಾಗಿದ್ದಲ್ಲಿ ಪ್ರೈಮರ್ ಜತೆಗೆ ಫೌಂಡೇಷನ್ ಬಳಸಬೇಕಾಗುತ್ತದೆ. ಇಲ್ಲವಾದಲ್ಲಿ ಪ್ಯಾಚ್ ವರ್ಕ್ನಂತೆ ಕಾಣಬಹುದು. ಡ್ರೈ ಸ್ಕಿನ್ ಹೊಂದಿದ್ದಲ್ಲಿ ಆಯಿಲ್ ಬೇಸ್ ಶ್ಯಾಡೋ ಬಳಸಬಹುದು. ಮುಖದ ಮೇಕಪ್ಗೆ ಮುನ್ನ ಶ್ಯಾಡೋ ಹಚ್ಚಿ. ಮೇಕಪ್ ನಂತರವಾದಲ್ಲಿ ಕಂಗಳ ಕೆಳಗೆ ಟಿಶ್ಯೂ ಪೇಪರ್ ಇರಿಸಿ, ನಂತರ ಐ ಮೇಕಪ್ ಮಾಡಿ. ಇಲ್ಲವಾದಲ್ಲಿ ಒಂದಕ್ಕೊಂದು ಮಿಕ್ಸ್ ಆಗುವ ಸಂಭವವಿರುತ್ತದೆ. ಕಣ್ಣಿನ ರೆಪ್ಪೆಯ ತನಕ ಹಚ್ಚಬೇಡಿ. ಐ ಲೈನ್ ಹಾಗೂ ಮಸ್ಕರಾಗೆ ಟಚ್ ಆಗಕೂಡದು.

ಧರಿಸುವ ಡ್ರೆಸ್ಗಳಿಗೆ ಮ್ಯಾಚ್ ಆಗುವುದು ಅಗತ್ಯ
ಕಂಗಳ ಮಾದಕತೆಯನ್ನು ಹೆಚ್ಚಿಸುವ ಐ ಶ್ಯಾಡೋ ಟ್ರೈ ಮಾಡುವ ಮೊದಲು ನೀವು ಧರಿಸುವ ಉಡುಪು ಅದಕ್ಕೆ ಮ್ಯಾಚ್ ಆಗುತ್ತದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಉಡುಪಿನ ಬಣ್ಣ ಒಂದು ಹಾಗೂ ಐ ಶ್ಯಾಡೋ ಮತ್ತೊಂದು ಬಣ್ಣ ಆದಲ್ಲಿ ಜೋಕರ್ನಂತೆ ಕಾಣಬಹುದು. ದೇಸಿ ಲುಕ್ಗಾದಲ್ಲಿ ಶೈನಿಂಗ್ ಬಣ್ಣ ಬಳಸಬೇಡಿ. ಕ್ಯಾಶುವಲ್ ಉಡುಪಿಗೆ ತಕ್ಕಂತೆ ಐ ಶ್ಯಾಡೋ ಕಲರ್ಸ್ ಬಳಸಿ.

ಆನ್ಲೈನ್ ಟ್ರೆಂಡ್ ಫಾಲೋ ಮಾಡುವ ಮುನ್ನ
ಕೆಲವೊಮ್ಮೆ ಆನ್ಲೈನ್ನಲ್ಲಿ ಇರುವ ಐ ಶ್ಯಾಡೋ ಟ್ರೆಂಡ್ ಪ್ರಸ್ತುತವಾಗಿರುವುದಿಲ್ಲ! ಹಾಗಾಗಿ ಕನ್ಫ್ಯೂಸ್ ಆಗಬೇಡಿ. ನೀವೇನಾದರೂ ಆನ್ಲೈನ್ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾದಲ್ಲಿ ಮಾತ್ರ ಮೊದಲೇ ಈ ಬಗ್ಗೆ ಅಪ್ಡೇಟ್ ಆಗಿರುವುದು ಅಗತ್ಯ. ಆನ್ಸ್ಕ್ರೀನ್ ಐ ಮೇಕಪ್ ವೈಬ್ರೆಂಟ್ ಆಗಿರುತ್ತದೆ. ಸುಮ್ಮನೆ ಹೇಗೋ ಇರುವಂತಹ ಐ ಮೇಕಪ್ ಫೋಟೋ ಅಪ್ಲೋಡ್ ಮಾಡಬೇಡಿ. ಮುಜುಗರಕ್ಕೊಳಗಬೇಕಾದೀತು ಜೋಕೆ!

ಐ ಶ್ಯಾಡೋ ರಿಮೂವರ್
ಐ ಶ್ಯಾಡೋ ತೆಗೆಯುವಾಗ ಕ್ಲೆನ್ಸರ್ ಬಳಸಿ. ಕಣ್ಣಿನ ಜಾಗ ಸೂಕ್ಷ್ಮವಾಗಿರುವುದರಿಂದ ತಾಳ್ಮೆಯಿಂದ ಹತ್ತಿಯಲ್ಲಿಒರೆಸಬೇಕು. ಹೆಚ್ಚು ಉಜ್ಜಕೂಡದು. ಇದೀಗ ಮಾರುಕಟ್ಟೆಯಲ್ಲಿ ಮೇಕಪ್ ರಿಮೂವರ್ ದೊರೆಯುತ್ತವೆ. ಇವನ್ನು ಬಳಸಿ ಸುರಕ್ಷಿತವಾಗಿ ಐ ಮೇಕಪ್ ತೆಗೆಯಬಹುದು.