Fashion Tips 2026: ಕೋಲ್ಡ್ ಶೋಲ್ಡರ್ ಫ್ಯಾಷನ್‌ವೇರ್ ಪ್ರಿಯರಿಗೆ ಸಿಂಪಲ್ ಟಿಪ್ಸ್
Cold shoulder fashionwear: ಸಮ್ಮರ್‌ನಲ್ಲಿ ಟ್ರೆಂಡಿಯಾಗಿರುವ ಕೋಲ್ಡ್ ಶೋಲ್ಡರ್ ಡ್ರೆಸ್ ಪ್ರಿಯರ ಸ್ಟೈಲಿಂಗ್ ಆಕರ್ಷಕವಾಗಿ ಕಾಣಿಸಲು ಒಂದಿಷ್ಟು ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಕರೀಷ್ಮಾ ತನ್ನಾ, ನಟಿ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿಬಾರಿಯಂತೆ ಈ ಬಾರಿಯೂ ಕೋಲ್ಡ್ ಶೋಲ್ಡರ್ ಫ್ಯಾಷನ್‌ವೇರ್‌ಗಳು ಟ್ರೆಂಡಿಯಾಗಿವೆ. ಈ ಸೆಕೆಗಾಲದಲ್ಲಿ ನೋಡಲು ಆಕರ್ಷಕವಾಗಿ ಹಾಗೂ ತಂಪಾಗಿಡುವ ಈ ಶೈಲಿಯ ಉಡುಗೆಗಳನ್ನು ಧರಿಸಿದಾಗ ಏನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು? ಯಾವ ರೀತಿಯಲ್ಲಿ ಸ್ಟೈಲಿಂಗ್ ಮಾಡಬೇಕು? ಡ್ರೆಸ್ ಆಯ್ಕೆ ಹೇಗೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾ ಜೆನ್ ಒಂದಿಷ್ಟು ಸಿಂಪಲ್ ಟಿಪ್ಸ್ (Fashion Tips 2026) ಹಾಗೂ ಐಡಿಯಾ ನೀಡಿದ್ದಾರೆ.
ಕೋಲ್ಡ್ ಶೋಲ್ಡರ್ ಡ್ರೆಸ್ ಆಯ್ಕೆ ಹೀಗಿರಲಿ
ಕೋಲ್ಡ್ ಶೋಲ್ಡರ್ ಡ್ರೆಸ್‌ಗಳು ಆದಷ್ಟೂ ದೊಗಲೆಯಾಗಿರುತ್ತವೆ. ಹಾಗೆಂದು ತೀರಾ ಲೂಸಾದ ಹಾಗೂ ಫಿಟ್ಟಿಂಗ್ ಇಲ್ಲದವನ್ನು ಆಯ್ಕೆ ಮಾಡಬೇಡಿ. ಸ್ಲೀವ್ ಆಕರ್ಷಕವಾಗಿರುವಂತದ್ದನ್ನು ಆಯ್ಕೆ ಮಾಡಿ. ಇವು ನಿಮ್ಮ ತೋಳುಗಳನ್ನು ಗ್ಲಾಮರಸ್ ಆಗಿ ಬಿಂಬಿಸುತ್ತವೆ.
ಟ್ರೆಂಡಿಯಾಗಿರುವ ಪ್ರಿಂಟೆಡ್ ಉಡುಗೆಗೆ ಆದ್ಯತೆ ನೀಡಿ
ಈ ಬಾರಿ ಟ್ರಾಪಿಕಲ್ ಹಾಗೂ ಗಾರ್ಡನ್ ಪ್ರಿಂಟೆಡ್ ಡಿಸೈನ್‌ನವು ಹೊಸ ಡಬ್ಬಲ್ ತ್ರಿಬ್ಬಲ್ ಶೇಡ್‌ಗಳಲ್ಲಿ ಬಂದಿವೆ. ಆದಷ್ಟೂ ಇವಂತವನ್ನೇ ಪ್ರಿಫರ್ ಮಾಡಿ, ಧರಿಸಿ. ಫ್ಯಾಷನೆಬಲ್ ಆಗಿ ಕಾಣಿಸುವಿರಿ.
ಕೋಲ್ಡ್ ಶೋಲ್ಡರ್ ಬಲೂನ್ ಸ್ಲೀವ್ಸ್
ಈ ಡಿಸೈನ್‌ನಲ್ಲಿ ಬಲೂನ್ ಸ್ಲೀವ್ಸ್ ಇರುವಂತದ್ದನ್ನು ಆಯ್ಕೆ ಮಾಡುವುದಾದಲ್ಲಿ ಮೊದಲು ಟ್ರಯಲ್ ನೋಡಿ ಕೊಳ್ಳಿ. ಆನ್‌ಲೈನ್‌ನಲ್ಲಿ ಕೊಳ್ಳುವುದಾದಲ್ಲಿ ಅವುಗಳ ಲೆಂತ್ ಹಾಗೂ ಸೈಝ್ ನೋಡಿ ಖರೀದಿಸಿ.
ಆಕ್ಸೆಸರೀಸ್ ಬೇಡವೇ ಬೇಡ!
ಈ ವಿನ್ಯಾಸದ ಉಡುಗೆಗಳಿಗೆ ಯಾವುದೇ ಕಾರಣಕ್ಕೂ ಕತ್ತಿಗೆ ಆಕ್ಸೆಸರೀಸ್ ಧರಿಸಕೂಡದು. ಧರಿಸಿದರೂ ಕಾಣಿಸುವುದಿಲ್ಲ! ಹಾಗಾಗಿ ಆಕ್ಸೆಸರೀಸ್ ಅವಾಯ್ಡ್ ಮಾಡಿ.
Summer Fashion 2026: ಬೇಸಿಗೆಯಲ್ಲಿ ಟ್ರೆಂಡಿಯಾದ ಫ್ಲೋರಲ್ ಕೋ ಆರ್ಡ್ ಸೆಟ್
ಧರಿಸುವ ಮೊದಲು ಕೈಗಳ ಆರೈಕೆ ಅಗತ್ಯ
ಈ ಉಡುಗೆಯನ್ನು ಧರಿಸುವವರು ಆದಷ್ಟೂ ಕೈಗಳ ಆರೈಕೆ ಮೊದಲೇ ಮಾಡಿರುವುದು ಉತ್ತಮ. ಯಾಕೆಂದರೆ ತೋಳುಗಳು ಹೈಲೈಟಾಗುವುದರಿಂದ ಇವುಗಳ ಆರೈಕೆ ಕಡೆಗೂ ಮೊದಲೇ ಗಮನ ನೀಡಬೇಕು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)