ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಪಂಜಾಬ್‌ ಎದುರು ಗುಜರಾತ್‌ ಗೆಲುವಿಗೆ ನೈಜ ಕಾರಣ ತಿಳಿಸಿದ ಆರ್‌ ಅಶ್ವಿನ್‌!

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ಗುಜರಾತ್‌ ಟೈಟನ್ಸ್‌ ತಂಡ 4 ವಿಕೆಟ್‌ ಗೆಲುವು ಪಡೆಯಿತು. ಈ ಪಂದ್ಯದ ಬಳಿಕ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟನ್ಸ್‌ ತಂಡವನ್ನು ಆರ್‌ ಅಶ್ವಿನ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಪಂಜಾಬ್‌  ವಿರುದ್ಧ ಗುಜರಾತ್‌ ಜಯಕ್ಕೆ ಕಾರಣ ತಿಳಿಸಿದ ಅಶ್ವಿನ್‌!

ಗುಜರಾತ್‌ ಟೈಟನ್ಸ್‌ ತಂಡವನ್ನು ಶ್ಲಾಘಿಸಿದ ಆರ್‌ ಅಶ್ವಿನ್‌. -

Profile
Ramesh Kote May 4, 2026 5:35 PM

ಅಹಮದಾಬಾದ್‌: ಪಂಜಾಬ್‌ ಕಿಂಗ್ಸ್‌ (PBKS) ಎದುರು ಕೊನೆಯ ಓವರ್‌ನಲಿ ರೋಚಕ ಗೆಲುವು ಪಡೆದಿದ್ದ ಗುಜರಾತ್‌ ಟೈಟನ್ಸ್‌ ತಂಡವನ್ನು(GT) ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಶುಭಮನ್‌ ಗಿಲ್‌ ಸಾರಥ್ಯದ ಜಿಟಿ ತಂಡ 4 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಇದೀಗ 12 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ ಹಾಗೂ ಅಗ್ರ ನಾಲ್ಕರೊಳಗೆ ಪ್ರವೇಶಿಸುವ ಸನಿಹದಲ್ಲಿದೆ. ಇನ್ನು ಸೋತ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿಯೇ ಉಳಿದಿದೆ.

ಪಂಜಾಬ್‌ ಕಿಂಗ್ಸ್‌ ಎದುರಿನ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡ ಅತ್ಯುತ್ತಮ ಸಂಯೋಜನೆಯನ್ನು ತೋರಿದೆ. ಜಿಟಿ ಬ್ಯಾಟ್ಸ್‌ಮನ್‌ಗಳು ಟಾರ್ಗೆಟ್‌ಗೆ ತಕ್ಕಂತೆ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಕೈ ಹಾಕುವುದಕ್ಕೂ ಮುನ್ನ ಕಂಡೀಷನ್ಸ್‌ಗೆ ತಕ್ಕ ಹಾಗೆ ಬ್ಯಾಟ್‌ ಮಾಡಿದ್ದಾರೆ. ಇದರ ಫಲವಾಗಿ ಅವರು ಗೆಲುವು ಪಡೆದಿದ್ದಾರೆ. ಇದರ ಶ್ರೇಯವನ್ನು ಗುಜರಾತ್‌ ಟೈಟನ್ಸ್‌ ತಂಡದ ಮ್ಯಾನೇಜ್‌ಮೆಂಟ್‌ಗೆ ಸಲ್ಲಬೇಕೆಂದು ತಿಳಿಸಿದ್ದಾರೆ.

"ಗುಜರಾತ್ ಟೈಟನ್ಸ್ ಮತ್ತೊಮ್ಮೆ ತಮ್ಮ ಚೇಸ್ ಅನ್ನು ಹೇಗೆ ಸಮಾಧಾನದಿಂದ ನಡೆಸಿದೆ ಎಂಬುದು ಗಮನಾರ್ಹವಾಗಿದೆ. ಅವರ ಬ್ಯಾಟಿಂಗ್ ಯಾವಾಗಲೂ ಸ್ಫೋಟಕವಾಗಿ ಕಾಣಿಸದೇ ಇರಬಹುದು, ಆದರೆ ಅದು ಅತ್ಯಂತ ಕ್ರಮಬದ್ಧವಾಗಿದ್ದು, ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವಿಕೆಯನ್ನು ಇದು ಆಧರಿಸಿದೆ. ಇಂತಹ ಪಿಚ್‌ಗಳಲ್ಲಿ 160–170 ರನ್‌ಗಳು ಸ್ಪರ್ಧಾತ್ಮಕ ಮೊತ್ತವಾಗಿರುವಾಗ, ದೊಡ್ಡ ಮೊತ್ತಗಳನ್ನು ಬೆನ್ನಟ್ಟುವುದಕ್ಕಿಂತ ಆಟವನ್ನು ನಿಯಂತ್ರಿಸುವುದು ಮತ್ತು ನಿಮ್ಮ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದೇ ಮುಖ್ಯವೆಂದು,"ಆರ್‌ ಅಶ್ವಿನ್ ಜಿಯೋಸ್ಟಾರ್‌ಗೆ ತಿಳಿಸಿದ್ದಾರೆ.

PBKS vs GT: ಟೇಬಲ್‌ ಟಾಪರ್‌ ಪಂಜಾಬ್‌ಗೆ ಸೋಲುಣಿಸಿದ ಟೈಟಾನ್ಸ್‌

ಗುಜರಾತ್ ಟೈಟನ್ಸ್ ತಂಡದ ಗೆಲುವಿನ ಬಗ್ಗೆ ಮಾತನಾಡಿದ ಅವರು, “ಈ ರೀತಿಯ ಸಂಯೋನೆಯೊಂದಿಗೆ ಅವರು ವರ್ಷಗಳಿಂದ ಗಮನಾರ್ಹ ಸ್ಥಿರತೆಯನ್ನು ತೋರಿಸಿದ್ದಾರೆ. ತಮ್ಮ ಪ್ರಕ್ರಿಯೆಗೆ ಬದ್ಧರಾಗಿದ್ದು, ಒತ್ತಡದ ಸಂದರ್ಭಗಳಲ್ಲಿಯೂ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಟೀಮ್‌ ಮ್ಯಾನೇಜ್‌ಮೆಂಟ್‌ ಹಾಗೂ ಆಟಗಾರರಿಗೆ ಶ್ರೇಯಸ್ಸು ಸಲ್ಲುತ್ತದೆ,” ಎಂದು ಹೇಳಿದ್ದಾರೆ.

ವಾಷಿಂಗ್ಟನ್‌ ಸುಂದರ್‌ಗೆ ಅಶ್ವಿನ್‌ ಮೆಚ್ಚುಗೆ

ಚೇಸಿಂಗ್‌ ವೇಳೆ 23 ಎಸೆತಗಳಲ್ಲಿ ಅಜೇಯ 43 ರ್‌ ಗಳಿಸಿ ಗುಜರಾತ್‌ ತಂಡವನ್ನು ಗೆಲುವಿನ ದಡ ಸೇರಿಸಿದ್ದ ವಾಷಿಂಗ್ಟನ್‌ ಸುಂದರ್‌ ಅವರನ್ನು ಕೂಡ ಇದೇ ವೇಳೆ ಆರ್‌ ಅಶ್ವಿನ್‌ ಗುಣಗಾನ ಮಾಡಿದ್ದಾರೆ.

ಗುಜರಾತ್‌ ವಿರುದ್ಧದ ಸೋಲಿಗೆ ಪ್ರಾಮಾಣಿಕ ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್

"ಗುಜರಾತ್ ಟೈಟನ್ಸ್ ಮಧ್ಯಮ ಕ್ರಮದ ಬಗ್ಗೆ ಇದ್ದ ಪ್ರಮುಖ ಪ್ರಶ್ನೆಗೆ ಉತ್ತರ ನೀಡುವಲ್ಲಿ ವಾಷಿಂಗ್ಟನ್ ಸುಂದರ್ ಅವರ ಇನಿಂಗ್ಸ್ ಅತ್ಯಂತ ಮಹತ್ವದ ಪಾತ್ರ ವಹಿಸಿತು. ತಂಡದ ಬಹುತೇಕ ರನ್‌ಗಳು ಟಾಪ್-3 ಆಟಗಾರರಿಂದಲೇ ಬರುತ್ತವೆ ಎನ್ನುವ ಸಂದರ್ಭದಲ್ಲಿ, ಇಂತಹ ಕೊಡುಗೆಗಳು ಅವರ ತಂಡದ ಆಳವನ್ನು ತೋರಿಸುತ್ತವೆ."

"ವಾಷಿಂಗ್ಟನ್‌ ಸುಂದರ್ ಅವರನ್ನು ಬಹುಮುಖ್ಯವಾಗಿ ಹೊಂದಿಕೊಳ್ಳುವ ಆಯ್ಕೆಯಾಗಿ ಬಳಸಲಾಗುತ್ತಿತ್ತು, ಆದರೆ ಈ ಬಾರಿ ಅವರು ಮುಂದಕ್ಕೆ ಬಂದು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ, ಚೇಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಅದು ಹೆಚ್ಚು ಚಮತ್ಕಾರಿಕವಾಗಿ ಕಾಣಿಸದಿದ್ದರೂ, ತಂಡವನ್ನು ಗೆಲುವಿನ ಗಡಿ ದಾಟಿಸುವಲ್ಲಿ ಅದು ಅತ್ಯಂತ ಸಮಾಧಾನಕರ ಮತ್ತು ನಿಖರವಾದ ಪ್ರಯತ್ನವಾಗಿತ್ತು," ಎಂದು ಅಶ್ವಿನ್‌ ಶ್ಲಾಘಿಸಿದ್ದಾರೆ.