Festival Fashion 2025: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಲೆಹೆಂಗಾ ರೂಪದಲ್ಲಿ ಲಗ್ಗೆ ಇಟ್ಟ ಲಂಗ-ದಾವಣಿ
Festival Fashion 2025: ಮುಂಬರುವ ಗೌರಿ-ಗಣೇಶನ ಹಬ್ಬದ ಸಂಭ್ರಮ ಹೆಚ್ಚಿಸಲು ರೇಷ್ಮೆಯ ಡಿಸೈನರ್ ಲಂಗ-ದಾವಣಿಗಳು ಲೆಹೆಂಗಾ ರೂಪದಲ್ಲಿಎಂಟ್ರಿ ನೀಡಿದ್ದು, ಸದ್ಯಕ್ಕೆ ಇವು ಫೆಸ್ಟೀವ್ ಸೀಸನ್ ಫ್ಯಾಷನ್ನ ಟಾಪ್ ಲಿಸ್ಟ್ನಲ್ಲಿವೆ. ಯಾವ್ಯಾವ ಬಗೆಯವು ಬಂದಿವೆ? ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಸಿಂಧೂ ರೆಡ್ಡಿ ಅಫಿಷಿಯಲ್., ಮಾಡೆಲ್: ಸಿನಿ ಮುರಳಿಧರನ್


ಮುಂಬರುವ ಗೌರಿ-ಗಣೇಶ ಹಬ್ಬದ ಸಂಭ್ರಮ ಹೆಚ್ಚಿಸಲು ರೇಷ್ಮೆಯ ಡಿಸೈನರ್ ಲಂಗ-ದಾವಣಿಗಳು ಲೆಹೆಂಗಾ ರೂಪದಲ್ಲಿ ಫ್ಯಾಷನ್ಲೋಕಕ್ಕೆ ಕಾಲಿಟ್ಟಿವೆ. ನೋಡಲು ಅತ್ಯಾಕರ್ಷಕ ಡಿಸೈನ್ನಲ್ಲಿ ಬಿಡುಗಡೆಗೊಂಡಿರುವ ಈ ಲಂಗ-ದಾವಣಿಗಳು ಈಗಾಗಲೇ ಬೇಡಿಕೆ ಹೆಚ್ಚಿಸಿಕೊಂಡಿವೆ.
ಟ್ರೆಡಿಷನಲ್ ಲುಕ್ಗಾಗಿ ಲಂಗ-ದಾವಣಿ
ಲಂಗ-ದಾವಣಿಯು ಈ ಸಾಲಿನ ಟ್ರೆಡಿಷನಲ್ ಡ್ರೆಸ್ಕೋಡ್ನಲ್ಲಿ ಟಾಪ್ ಲಿಸ್ಟ್ನಲ್ಲಿದೆ. ಹೆಣ್ಣು ಮಕ್ಕಳು ಹಬ್ಬಗಳಲ್ಲಿ ಮಾತ್ರವಲ್ಲ, ಮದುವೆ ಹಾಗೂ ಮನೆಯ ಇನ್ನಿತರೆ ಸಮಾರಂಭಗಳಲ್ಲೂ ಧರಿಸುವಂತಹ ನಾನಾ ವಿನ್ಯಾಸಗಳಲ್ಲಿ ಅದರಲ್ಲೂ ಹೊಸ ರೂಪದಲ್ಲಿ ಇವು ಬಿಡುಗಡೆಗೊಂಡಿವೆ.

ಟ್ರೆಂಡಿಯಾಗಿರುವ ಲಂಗ-ದಾವಣಿಗಳಿವು
ಮೊದಲೆಲ್ಲಾ ಲಂಗ ದಾವಣಿ ಎಂದಾಕ್ಷಣಾ ಒಂದೇ ವರ್ಣದ ರೇಷ್ಮೆಯ ಫ್ಯಾಬ್ರಿಕ್ ಅಥವಾ ಸೀರೆಯಲ್ಲಿ ಹೊಲೆಸಲಾಗುತ್ತಿತ್ತು. ಈಗ ಹಾಗಿಲ್ಲ. ಲಂಗ ರೇಷ್ಮೆಯದ್ದಾದರೆ, ಅದಕ್ಕೆ ಹೊಂದುವಂತಹ ಬ್ಲೌಸನ್ನುಇತರೆ ಫ್ಯಾಬ್ರಿಕ್ನಲ್ಲಿ ಸಿದ್ಧಪಡಿಸಲಾಗುತ್ತದೆ. ಕಾಂಟ್ರಸ್ಟ್ ವರ್ಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ದಾವಣಿಗೆ ಅತಿ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ನೋಡಲು ಅತ್ಯಾಕರ್ಷಕವಾಗಿ ಕಾಣುವಂತಹ ಫ್ಯಾಬ್ರಿಕ್ ಆರಿಸಿಕೊಳ್ಳಲಾಗುತ್ತದೆ. ಒಟ್ನಲ್ಲಿ ಇಡೀ ಉಡುಗೆಗೆ ಟ್ರೆಡಿಷನಲ್ ಟಚ್ ನೀಡಲಾಗುತ್ತದೆ. ಸೌತ್ ಇಂಡಿಯನ್ ಲುಕ್ನ ಲಂಗ-ದಾವಣಿಗೆ ರಾಯಲ್ ಲುಕ್ ಮೆರಗು ನೀಡಲಾಗುತ್ತದೆ ಎನ್ನುತ್ತಾರೆ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಸಿಂಧೂ ರೆಡ್ಡಿ.

ಕಸ್ಟಮೈಸ್ಡ್ ವಿನ್ಯಾಸದ ಲಂಗ-ದಾವಣಿ
ಲೆಹೆಂಗಾ ರೂಪದ ಲಂಗ-ದಾವಣಿಗಳು ಆದಷ್ಟೂ ಸೆಮಿ ಸ್ಟಿಚ್ಡ್ ಶೈಲಿಯಲ್ಲಿ ದೊರೆಯುತ್ತವೆ. ಆಯಾ ಹೆಣ್ಣುಮಕ್ಕಳ ಪರ್ಸನಾಲಿಟಿಗೆ ತಕ್ಕಂತೆ ಬೊಟಿಕ್ ಇಲ್ಲವೇ ಟೈಲರ್ ಬಳಿ ಹೊಲೆಸಬೇಕಾಗುತ್ತದೆ. ಸೆಮಿ ಸ್ಟಿಚ್ನಲ್ಲಿ ಫ್ಯಾಬ್ರಿಕ್ ದೊರೆಯುವುದರಿಂದ ಕಡಿಮೆ ಸಮಯದಲ್ಲಿ ಇವನ್ನು ಸಿದ್ಧಪಡಿಸಬಹುದು ಎನ್ನುತ್ತಾರೆ ಮಾಡೆಲ್ ಸಿನಿ ಮುರಳಿಧರನ್.

ಮಲ್ಟಿ ಕಲರ್ ಡಿಸೈನರ್ ದಾವಣಿ ಲಂಗ
ಒಂದು ಕಲರ್ನ ಬ್ಲೌಸ್, ಮತ್ತೊಂದು ರೇಷ್ಮೆಯ ಫ್ಯಾಬ್ರಿಕ್ನ ಲಂಗ, ಇದಕ್ಕೆ ಗ್ರ್ಯಾಂಡ್ ಲುಕ್ ನೀಡುವಂತಹ ವಿನ್ಯಾಸದ ದುಪಟ್ಟಾ, ಹೀಗೆ ಮಲ್ಟಿ ಕಲರ್ನ ಲೆಹೆಂಗಾ ಸ್ಟೈಲ್ನ ಲಂಗ-ದಾವಣಿ ಸೆಟ್ ಇತ್ತೀಚೆಗೆ ಟಿನೇಜ್ ಹುಡುಗಿಯರನ್ನು ಹೆಚ್ಚು ಆಕರ್ಷಿಸುತ್ತಿವೆ ಎನ್ನುತ್ತಾರೆ ಅವರು.

ಲೆಹೆಂಗಾ ಸ್ಟೈಲ್ ಲಂಗ-ದಾವಣಿ ಪ್ರಿಯರಿಗೆ ಟಿಪ್ಸ್
- ಹಬ್ಬಕ್ಕೆ ರೇಷ್ಮೆ ಫ್ಯಾಬ್ರಿಕ್ನದ್ದು ಖರೀದಿಸಿದಲ್ಲಿ ಇತರೇ ಸಮಾರಂಭಗಳಿಗೂ ಧರಿಸಬಹುದು.
- ದುಪಟ್ಟಾ ಗ್ರ್ಯಾಂಡ್ ಆಗಿದ್ದಲ್ಲಿ ನೋಡಲು ಸೆಲೆಬ್ರೆಟಿ ಲುಕ್ ನೀಡುವುದು.
- ಬಾಡಿ ಮಾಸ್ ಇಂಡೆಕ್ಸ್ಗೆ ತಕ್ಕಂತೆ ಹೊಂದುವ ವಿನ್ಯಾಸದ್ದನ್ನು ಸ್ಟಿಚ್ ಮಾಡಿಸುವುದು ಉತ್ತಮ.
- ಲೈಟ್ವೇಟ್ ಫ್ಯಾಬ್ರಿಕ್ನದ್ದನ್ನು ಚೂಸ್ ಮಾಡಿ.
- ಟ್ರೆಡಿಷನಲ್ ಆಭರಣಗಳನ್ನು ಮ್ಯಾಚ್ ಮಾಡಿ ಧರಿಸಿ.