Devil Movie: ಡಿ ಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್! ಇದ್ರೆ ನೆಮ್ದಿಯಾಗ್ ಇರ್ಬೇಕು ಸಾಂಗ್ ರಿಲೀಸ್‌ಗೆ ಮುಹೂರ್ತ ಫಿಕ್ಸ್
Devil Song Release: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಂಡು ನಟ ದರ್ಶನ್ ಜೈಲುಪಾಲಾಗಿರುವುದು ಅವರ ಬಹು ನಿರೀಕ್ಷಿತ ಡೆವಿಲ್ ಸಿನಿಮಾದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈಗಾಗಲೇ ರಿಲೀಸ್ ಆಗ್ಬೇಕಿದ್ದ ಡೆವಿಲ್ ಸಿನಿಮಾದ ಇದ್ರೆ ನೆಮ್ದಿಯಾಗರ್ಬೇಕು ಎಂಬ ಹಾಡಿನ ರಿಲೀಸ್ ಕೂಡ ಮುಂದೂಡಲಾಗಿತ್ತು. ಇದೀಗ ಈ ಹಾಡಿನ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ.


ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್(Actor Darshan) ಅಭಿಮಾನಿಗಳಿಗೆ ಬೆಳ್ಳಂ ಬೆಳಗ್ಗೆ ಗುಡ್‌ನ್ಯೂಸ್ ಸಿಕ್ಕಿದೆ. ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ತಂಡದಿಂದ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ʻಇದ್ರೆ ನೆಮ್ದಿಯಾಗಿರ್ಬೇಕುʼ ಹಾಡಿನ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಆಗಸ್ಟ್ 24 ಭಾನುವಾರ ಬೆಳಗ್ಗೆ 10- 05 ಕ್ಕೆ " ದಿ ಡೆವಿಲ್ "(Devil Movie) ನ , ಮೊದಲನೆ ಹಾಡು ಬಿಡುಗಡೆಯಾಗಲಿದೆ ಎಂದು ಜೈಮಾತಾ ಕಂಬೈನ್ಸ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಂಡು ನಟ ದರ್ಶನ್ ಜೈಲುಪಾಲಾಗಿರುವುದು ಅವರ ಬಹು ನಿರೀಕ್ಷಿತ ಡೆವಿಲ್ ಸಿನಿಮಾದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈಗಾಗಲೇ ರಿಲೀಸ್ ಆಗ್ಬೇಕಿದ್ದ ಡೆವಿಲ್ ಸಿನಿಮಾದ ಇದ್ರೆ ನೆಮ್ದಿಯಾಗರ್ಬೇಕು ಎಂಬ ಹಾಡಿನ ರಿಲೀಸ್ ಕೂಡ ಮುಂದೂಡಲಾಗಿತ್ತು. ಇದೀಗ ಈ ಹಾಡಿನ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ.
ಹಾಡಿನ ಮಾಹಿತಿ ಕೊಟ್ಟಿದ್ದ ನಟ
ಇನ್ನು ಈ ಹಿಂದೆ ಈ ಹಾಡಿನ ಕುರಿತು ಸ್ವತಃ ನಟ ದರ್ಶನ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಅಷ್ಟೇ ಅಲ್ಲದೆ ಈ ಪೋಸ್ಟ್ನಲ್ಲಿ ಡೆವಿಲ್ ಮೂವಿಯ ಫಸ್ಟ್ ಸಿಂಗಲ್ ಬಗ್ಗೆ ಬರೆದುಕೊಂಡಿದ್ದರು. ಡೆವಿಲ್ ಮೂವಿಯ ಮೊದಲ ಹಾಡು ಇದ್ರೆ ನೆಮ್ದಿಯಾಗಿರ್ಬೇಕ್ ಆಗಸ್ಟ್ 15ರಂದು ಬೆಳಗ್ಗೆ 10.05ಕ್ಕೆ ರಿಲೀಸ್ ಆಗಲಿದೆ ಎಂದು ದರ್ಶನ್ ಬರೆದಿದ್ದರು. ಸದ್ಯ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ದರ್ಶನ್ ಸೇರಿದಂತೆ ಇತರ ಕಲಾವಿದರು ಈ ಚಿತ್ರದ ಡಬ್ಬಿಂಗ್ ಕೆಲಸವನ್ನು ಮುಗಿಸಿದ್ದಾರೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸವೂ ನಡೆದಿತ್ತು.
ಆಗಸ್ಟ್ 24 ಭಾನುವಾರ ಬೆಳಗ್ಗೆ 10- 05 ಕ್ಕೆ " ದಿ ಡೆವಿಲ್ " ನ , ಮೊದಲನೆ ಹಾಡು ಬಿಡುಗಡೆ
— Shri Jaimatha Combines (@sjmcfilms) August 20, 2025
The Devil Unleashes The Heat on 24th August! #IdreNemdiyaagIrbek First Single from #TheDevil Drops at 10.05 AM!
A @AJANEESHB Musical 🎶
Challenging Star @dasadarshan #RachanaRai @YoodleeFilms… pic.twitter.com/4Zp4Fu3j2I
ʼಇದ್ರೆ ನೆಮ್ದಿಯಾಗ್ ಇರ್ಬೇಕ್' ಎಂಬ ಹಾಡು ಬಿಡುಗಡೆಗೂ ಮೊದಲೇ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ. ದಿ ಡೆವಿಲ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಇದು ದರ್ಶನ್ ಅವರೊಂದಿಗಿನ ಅವರ ಮೊದಲ ಸಹಯೋಗವನ್ನು ಗುರುತಿಸುತ್ತದೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರ ಪ್ರಭಾವಶಾಲಿ ಸಂಗೀತಗಳಿಗೆ ಹೆಸರುವಾಸಿಯಾದ ಅಜನೀಶ್, ಇದೀಗ ಡೆವಿಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಕುತೂಹಲಕಾರಿಯಾಗಿ, ಚಿತ್ರದ ಆಡಿಯೋ ಹಕ್ಕುಗಳನ್ನು ಯೋಜನೆಯ ಪ್ರಾರಂಭದ ಸಮಯದಲ್ಲಿಯೇ ಸರಿಗಮ ಮ್ಯೂಸಿಕ್ ಲೇಬಲ್ ಪಡೆದುಕೊಂಡಿದೆ.
ಈ ಸುದ್ದಿಯನ್ನೂ ಓದಿ: Actor Darshan: ದರ್ಶನ್ ಬೇಲ್ ಕ್ಯಾನ್ಸಲ್‌ಗೆ ಫ್ಯಾನ್ಸ್ ಕಾರಣಾನಾ? ಸುಪ್ರೀಂ ಕೋರ್ಟ್ ಆದೇಶದ 64ನೇ ಪುಟದಲ್ಲೇನಿದೆ?
ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಮಾಡಲು ಚಿತ್ರತಂಡ ಕಾಯುತ್ತಿತ್ತು. ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗುವುದು ಎಂದು ಚಿತ್ರತಂಡ ಹೇಳಿತ್ತು. ಆದರೆ ಇದೀಗ ದರ್ಶನ್ ಮತ್ತೆ ಜೈಲು ಸೇರಬೇಕಾಗಿದೆ. ಕಳೆದ 2024 ಡಿಸೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ನ್ಯಾ.ಜೆ.ಬಿ ಪರ್ದಿವಾಲಾ ಹಾಗೂ ನ್ಯಾ.ಆರ್.ಮಹದೇವನ್ ಅವರ ಪೀಠ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.