ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Railways: ಭಾರತೀಯ ರೈಲ್ವೆಯಲ್ಲಿ ಹೊಸ ನಿಯಮ; ಹೆಚ್ಚು ಲಗೇಜ್‌ ತೆಗೆದುಕೊಂಡು ಹೋದರೆ ಬೀಳುತ್ತೆ ದಂಡ!

ಕೆಲ ಪ್ರಯಾಣಿಕರು ಅಗತ್ಯಕ್ಕಿಂತ ಹೆಚ್ಚು ತೂಕದ ಲಗೇಜ್‌ನೊಂದಿಗೆ ಪ್ರಯಾಣಿಸುತ್ತಾರೆ. ಅದಕ್ಕಾಗಿಯೇ ಭಾರತೀಯ ರೈಲ್ವೇ ಹೊಸ ನಿಯಮವನ್ನು ಜಾರಿ ಮಾಡಿದ್ದು, ಭಾರತೀಯ ರೈಲ್ವೆಯ ಅಧಿಕೃತ ನಿಯಮಗಳ ಪ್ರಕಾರ ಯಾವ ಕ್ಲಾಸ್‌ನಲ್ಲಿ ಎಷ್ಟು ಲಗೇಜ್‌ ಫ್ರೀ ತಗೊಂಡು ಹೋಗಬಹುದು ಎಂಬ ಮಾಹಿತಿ ಇಲ್ಲಿದೆ.

ರೈಲಿನಲ್ಲಿ  ಹೆಚ್ಚು ಲಗೇಜ್‌ ತೆಗೆದುಕೊಂಡು ಹೋದ್ರೆ ಬೀಳುತ್ತೆ ದಂಡ!

Profile Sushmitha Jain Aug 20, 2025 10:23 AM

ನವದೆಹಲಿ: ಭಾರತೀಯ ರೈಲ್ವೆಯು (Indian Railways) ಪ್ರಯಾಣಿಕರ ಸುರಕ್ಷತೆ (Passenger Safety) ಮತ್ತು ಸೌಕರ್ಯವನ್ನು ಹೆಚ್ಚಿಸಲು ಕ್ರಾಂತಿಕಾರಿ ಬದಲಾವಣೆಯನ್ನು ಜಾರಿಗೊಳಿಸುತ್ತಿದೆ. ವಿಮಾನ ನಿಲ್ದಾಣಗಳ (Airport) ರೀತಿಯಲ್ಲಿ, ಪ್ರಮುಖ ರೈಲು ನಿಲ್ದಾಣಗಳಲ್ಲಿ (Railway Station) ಲಗೇಜ್‌ಗಳ ತೂಕ (Luggage weight) ಮತ್ತು ಗಾತ್ರವನ್ನು ಪರಿಶೀಲಿಸುವ ನಿಯಮವನ್ನು ಆರಂಭಿಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಉತ್ತರ ಮಧ್ಯ ರೈಲ್ವೆಯ ಪ್ರಯಾಗ್‌ರಾಜ್ ವಿಭಾಗದ ಪ್ರಮುಖ ನಿಲ್ದಾಣಗಳಾದ ಪ್ರಯಾಗ್‌ರಾಜ್ ಜಂಕ್ಷನ್, ಪ್ರಯಾಗ್‌ರಾಜ್ ಛೋಕಿ, ಸುಬೇದಾರ್‌ಗಂಜ್, ಕಾನ್ಸುರ್ ಸೆಂಟ್ರಲ್, ಮಿರ್ಜಾಪುರ, ತುಂಡ್ಲಾ, ಅಲಿಗಢ ಜಂಕ್ಷನ್, ಗೋವಿಂದಪುರಿ, ಮತ್ತು ಇಟಾವಾದಲ್ಲಿ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಇದಕ್ಕಾಗಿ ಎಲೆಕ್ಟ್ರಾನಿಕ್ ಲಗೇಜ್ ತೂಕ ಯಂತ್ರಗಳನ್ನು ಸ್ಥಾಪಿಸಲಾಗುವುದು.

ನಿಯಮಗಳ ವಿವರ

ಪ್ರಯಾಣಿಕರು ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸುವ ಮೊದಲು ತಮ್ಮ ಲಗೇಜ್‌ ತೂಕ ಹಾಕಬೇಕು. ತೂಕದ ಜೊತೆಗೆ, ಬ್ಯಾಗ್‌ಗಳ ಗಾತ್ರವನ್ನೂ ಪರಿಶೀಲಿಸಲಾಗುವುದು. ಒಂದು ವೇಳೆ ಲಗೇಜ್‌ ದೊಡ್ಡದಾಗಿದ್ದರೆ ಮತ್ತು ಕೋಚ್‌ನಲ್ಲಿ ಹೆಚ್ಚಿನ ಜಾಗವನ್ನು ಆಕ್ರಮಿಸಿದರೆ, ತೂಕ ಮಿತಿಯೊಳಗಿದ್ದರೂ ದಂಡ ವಿಧಿಸಲಾಗುವುದು. ಭಾರತೀಯ ರೈಲ್ವೆಯು ಪ್ರಯಾಣ ವರ್ಗದ ಆಧಾರದಲ್ಲಿ ಉಚಿತ ಲಗೇಜ್ ಮಿತಿಯನ್ನು ನಿಗದಿಪಡಿಸಿದೆ.

  • ಮೊದಲ ಎಸಿ- 70 ಕೆಜಿ
  • ಎರಡನೇ ಎಸಿ- 50 ಕೆಜಿ
  • ಮೂರನೇ ಎಸಿ ಮತ್ತು ಸ್ಲೀಪರ್ ಕ್ಲಾಸ್- 40 ಕೆಜಿ
  • ಜನರಲ್‌ ಸಿಟ್ಟಿಂಗ್- 35 ಕೆಜಿ

ಈ ಸುದ್ದಿಯನ್ನೂ ಓದಿ: Viral Video: ಟರ್ಬನ್‌ ಬಿಚ್ಚಿ ಸಿಖ್ ವೃದ್ಧರ ಮೇಲೆ ಹಲ್ಲೆ- ವಿಡಿಯೊ ವೈರಲ್‌

ಹೆಚ್ಚುವರಿ ಶುಲ್ಕ ಮತ್ತು ದಂಡ

ಪ್ರಯಾಣಿಕರು ಬುಕಿಂಗ್ ಇಲ್ಲದೆ 10 ಕೆಜಿವರೆಗೆ ಹೆಚ್ಚುವರಿ ಲಗೇಜ್ ಸಾಗಿಸಬಹುದು. ಆದರೆ, ಈ ಮಿತಿಯನ್ನು ಮೀರಿದರೆ, ನಿಲ್ದಾಣದ ಕೌಂಟರ್‌ನಲ್ಲಿ ಲಗೇಜ್ ಬುಕ್ ಮಾಡಬೇಕು. ಬುಕಿಂಗ್ ಮಾಡದೆ ಮಿತಿಮೀರಿದ ಲಗೇಜ್‌ ಕಂಡುಬಂದರೆ, ಸಾಮಾನ್ಯ ಲಗೇಜ್ ದರಕ್ಕಿಂತ 1.5 ಪಟ್ಟು ದಂಡವನ್ನು ಪಾವತಿಸಬೇಕು. ಇದರಿಂದ ಹೆಚ್ಚುವರಿ ಲಗೇಜ್ ಸಾಗಾಟ ದುಬಾರಿಯಾಗಬಹುದು.

ಉದ್ದೇಶ ಮತ್ತು ಲಾಭ

ರೈಲ್ವೆ ಅಧಿಕಾರಿಗಳ ಪ್ರಕಾರ, ಈ ನಿಯಮವು ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಅನೇಕರು ಅತಿಯಾದ ಲಗೇಜ್‌ಗಳನ್ನು ಒಯ್ಯುವುದರಿಂದ ಇತರ ಪ್ರಯಾಣಿಕರಿಗೆ ಅನಾನುಕೂಲವಾಗುತ್ತದೆ ಮತ್ತು ಸುರಕ್ಷತಾ ಅಪಾಯಗಳು ಉಂಟಾಗುತ್ತವೆ. ವಿಶೇಷವಾಗಿ ಹಬ್ಬಗಳು ಮತ್ತು ಬೇಸಿಗೆ ರಜಾದಿನಗಳಲ್ಲಿ ಜನಸಂದಣಿಯನ್ನು ಸಮರ್ಥವಾಗಿ ನಿರ್ವಹಿಸಲು ಈ ವ್ಯವಸ್ಥೆ ಸಹಾಯಕವಾಗಲಿದೆ. ಈ ಕ್ರಮವು ರೈಲು ಕೋಚ್‌ಗಳಲ್ಲಿ ಜಾಗದ ಸಮರ್ಥ ಬಳಕೆಯಾಗುತ್ತದೆ ಜೊತೆಗೆ, ರೈಲು ಪ್ರಯಾಣವನ್ನು ಹೆಚ್ಚು ಸುರಕ್ಷಿತಗೊಳಿಸಲಿದೆ.