ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Navaratri Fashion 2026: ನವರಾತ್ರಿಯ 4ನೇ ದಿನ ರಾಯಲ್ ಬ್ಲ್ಯೂ ಕಲರ್‌ನಲ್ಲಿ ಅಂದವಾಗಿ ಕಾಣಿಸಿಕೊಳ್ಳಿ

ನವರಾತ್ರಿಯ ನಾಲ್ಕನೇಯ ದಿನದ ಬಣ್ಣ ರಾಯಲ್‌ ಬ್ಲ್ಯೂ ಆಗಿದೆ. ಈ ದಿನದಂದು ಕೂಷ್ಮಾಂಡ ದೇವಿಯ ಆರಾಧನೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ರಾಯಲ್ ನೀಲಿ ವರ್ಣದ ಎಥ್ನಿಕ್‌ವೇರ್ಸ್ ಹಾಗೂ ಸೀರೆಗಳು ಮಾನಿನಿಯರಿಗೆ ಅತ್ಯಾಕರ್ಷಕವಾಗಿ ಕಾಣಿಸುತ್ತವೆ. ರಾಯಲ್ ನೀಲಿ ವರ್ಣದ ಎಥ್ನಿಕ್‌ವೇರ್ಸ್ ಹಾಗೂ ಸೀರೆಗಳ ಆಯ್ಕೆ ಹಾಗೂ ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ರಾಯಲ್ ಬ್ಲ್ಯೂ ಕಲರ್‌ನಲ್ಲಿ ಅಂದವಾಗಿ ಕಾಣಿಸಿಕೊಳ್ಳಿ

ಚಿತ್ರಕೃಪೆ: ಪಿಕ್ಸೆಲ್ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವರಾತ್ರಿಯಲ್ಲಿ ರಾಯಲ್ ಬ್ಲ್ಯೂ ವರ್ಣದ ಎಥ್ನಿಕ್‌ವೇರ್ಸ್ ಹಾಗೂ ಸೀರೆಗಳು (Navaratri Fashion 2026) ಮಾನಿನಿಯರಿಗೆ ಅತ್ಯಾಕರ್ಷಕವಾಗಿ ಕಾಣಿಸುತ್ತವೆ. ಜತೆಗೆ ರಾಯಲ್ ಲುಕ್ ನೀಡುತ್ತವೆ. ಹೌದು, ಈ ಬಣ್ಣದಲ್ಲೂ ತಿಳಿ ಹಾಗೂ ಡಾರ್ಕ್ ಶೇಡ್‌ಗಳು ಲಭ್ಯ. ಗಾಢ ನೀಲಿ, ತಿಳಿ ನೀಲಿ ಹೀಗೆ ನಾನಾ ವರ್ಣಗಳು ಕಾಣ ಸಿಗುತ್ತವೆ. ಹಾಗಾಗಿ ಖರೀದಿಸುವಾಗ ಕೇಳಿ, ಬಣ್ಣವನ್ನು ಕಣ್ಣಿಂದ ನೋಡಿ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ಫ್ಯಾಷನಿಸ್ಟಾ ಶ್ವೇತಾ.

Navaratri Fashion

ರಾಯಲ್ ಬ್ಲ್ಯೂ ಎಥ್ನಿಕ್‌ವೇರ್ಸ್

ಲೆಹೆಂಗಾ-ಚೋಲಿ, ಗಾಗ್ರಾ, ಶರಾರ, ಲಾಚಾ, ಅನಾರ್ಕಲಿ ಗೌನ್, ಚೂಡಿದಾರ್, ಸಲ್ವಾರ್, ದಾವಣಿ-ಲಂಗ, ಲಾಂಗ್‌ ಸ್ಕರ್ಟ್, ಕುರ್ತಾ, ಅಂಬ್ರೆಲ್ಲಾ ಫ್ರಾಕ್ ಸೇರಿದಂತೆ ಲೆಕ್ಕವಿಲ್ಲದಷ್ಟು ಶೈಲಿಯವು ಈ ಕಲರ್‌ನಲ್ಲಿ ದೊರೆಯುತ್ತವೆ. ಅದರಲ್ಲೂ ಬಾರ್ಡರ್, ಪ್ರಿಂಟ್ಸ್, ಎಂಬ್ರಾಯ್ಡರಿ, ಗೋಲ್ಡ್, ಸಿಲ್ವರ್ ಬಾರ್ಡರ್‌ನವು ಟ್ರೆಡಿಷನಲ್ ಲುಕ್ ನೀಡುತ್ತವೆ. ಎಂತಹವರನ್ನು ಹೈಲೈಟ್ ಮಾಡುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾ ಶ್ವೇತಾ.

Latest Fashion

ರಾಯಲ್ ಬ್ಲ್ಯೂ ಸೀರೆಯ ಜಾದೂ

ನಿಮಗೆ ಗೊತ್ತೇ! ರಾಯಲ್ ಬ್ಲ್ಯೂ ಮೈಸೂರ್ ಸಿಲ್ಕ್ ಸೀರೆ ಅಥವಾ ಯಾವುದೇ ರೇಷ್ಮೆ ಸೀರೆ ಉಟ್ಟಲ್ಲಿ, ಮುಡಿಗೆ ಮಲ್ಲಿಗೆ ಹೂವು ಮುಡಿಯಿರಿ. ನಿಮ್ಮ ಅಂದ ದುಪಟ್ಟಾಗುವುದು. ಇಂಡೋ-ವೆಸ್ಟರ್ನ್ ಸೀರೆ ಲುಕ್ಗಾದಲ್ಲಿ ಡಿಸೈನರ್ ಕ್ರಾಪ್ ಬ್ಲೌಸ್, ಸ್ಲಿವ್‌ಲೆಸ್ ಬ್ಲೌಸ್ ಧರಿಸಿ.

Royal blue colour Sarees

ರಾಯಲ್ ಬ್ಲ್ಯೂ ಲುಕ್‌ನ ಮೇಕೋವರ್ ಹೀಗಿರಲಿ

  • ಗೋಲ್ಡನ್ ಜ್ಯುವೆಲರಿ ಬದಲು ನೀಲಿ ಬಣ್ಣದ ಸ್ಟೇಟ್‌ಮೆಂಟ್ ಆಭರಣಗಳನ್ನು ಧರಿಸಿ.
  • ರಾಯಲ್ ನೀಲಿ ಸೀರೆಗೆ ಬನ್ ಹೇರ್‌ಸ್ಟೈಲ್ ಇಲ್ಲವೇ, ವೈವಿಧ್ಯಮಯ ಜಡೆ ಹೆಣೆಯಿರಿ.
  • ಟ್ರೆಡಿಷನಲ್ ಲುಕ್ ನೀಲಿ ವರ್ಣದ ಡಿಸೈನರ್‌ವೇರ್‌ಗೆ ಚೆನ್ನಾಗಿ ಹೊಂದುತ್ತವೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)