Season Fashion 2026: ಸ್ಟೈಲಿಶ್ ಲುಕ್‌ಗೆ ಸಾಥ್ ನೀಡುವ ಶರ್ಟ್ ಡ್ರೆಸ್
ವೆಸ್ಟರ್ನ್ ಲುಕ್ ನೀಡುವ ಶರ್ಟ್ ಡ್ರೆಸ್‌ಗಳು ಎಂತಹವರಿಗೂ ಸ್ಟೈಲಿಶ್ ಲುಕ್ ನೀಡುತ್ತವೆ. ಸದ್ಯ ಟ್ರೆಂಡ್ ಲಿಸ್ಟ್‌ಗೆ ಮರಳಿರುವ ಇವನ್ನು ಹೇಗೆಲ್ಲಾ ಧರಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು 3 ಸಿಂಪಲ್ ಐಡಿಯಾ ನೀಡಿದ್ದಾರೆ. ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಪ್ರಿಯಾ ಜೇತಾನಿ, ನಟಿ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಸೀಸನ್‌ಗೆ ಶರ್ಟ್ ಡ್ರೆಸ್ ಫ್ಯಾಷನ್ (Season Fashion 2026) ಮರಳಿದೆ. ಹೌದು, ನಾನಾ ಸ್ಟೈಲಿಂಗ್‌ಗಳಲ್ಲಿ ಡಿಫರೆಂಟ್ ವಿನ್ಯಾಸದಲ್ಲಿ ಮರಳಿ ಲಗ್ಗೆ ಇಟ್ಟಿವೆ. ಇಂದು ಪ್ರತಿ ಹುಡುಗಿಯ ಬಳಿಯೂ ಒಂದಲ್ಲ ಒಂದು ಶರ್ಟ್ ಡ್ರೆಸ್ ಇದ್ದೇ ಇರುತ್ತದೆ. ಅದು ಸಿಂಪಲ್ ಸಾದಾ ಕಲರ್‌ನದ್ದಾಗಿರಬಹುದು ಅಥವಾ ಪ್ರಿಂಟೆಡ್ ಆಗಿರಬಹುದು, ಇಲ್ಲವೇ ಚೆಕ್ಸ್, ಗಿಂಗ್ನಂ ಹೀಗೆ ನಾನಾ ವಿನ್ಯಾಸದ್ದಾಗಿರಬಹುದು ಎನ್ನುವ ಫ್ಯಾಷನಿಸ್ಟಾ ಜೆನ್ ಪ್ರಕಾರ, ಶರ್ಟ್ ಡ್ರೆಸ್‌ಗಳಿಗೂ ಡಿಫರೆಂಟ್ ಇಮೇಜ್ ನೀಡಬಹುದು ಎನ್ನುತ್ತಾರೆ. ಈ ಕುರಿತಂತೆ 3 ಸಿಂಪಲ್ ಐಡಿಯಾಗಳನ್ನು ನೀಡಿದ್ದಾರೆ.
ಶರ್ಟ್ ಡ್ರೆಸ್‌ಗೆ ಬೆಲ್ಟ್ ಧರಿಸಿ
ಶರ್ಟ್ ಡ್ರೆಸ್‌ಗೆ ಸ್ಟೇಟ್‌ಮೆಂಟ್ ಬೆಲ್ಟ್‌ಗಳನ್ನು ಧರಿಸಿದಲ್ಲಿ ಇಡೀ ಡ್ರೆಸ್‌ನ ಲುಕ್ ಬದಲಾಗುವುದು. ಜತೆಗೆ ನೋಡಲು ಡಿಫರೆಂಟಾಗಿ ಕಾಣಿಸುವುದು. ಮಿಡಿ ಸ್ಕರ್ಟ್‌ನಂತೆ ಕಾಣಿಸುವುದು. ಇದೀಗ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ನಾನಾ ಬಗೆಯ ಬಕಲ್ ಬೆಲ್ಟ್‌ಗಳು ಹಾಗೂ ಸ್ಟೇಟ್‌ಮೆಂಟ್ ಬೆಲ್ಟ್‌ಗಳು ಈ ಡ್ರೆಸ್‌ಗೆ ಸಖತ್ತಾಗಿ ಮ್ಯಾಚ್ ಆಗುತ್ತವೆ.
ಇನ್ನರ್ ಟಾಪ್ ಮೇಲೆ ಶರ್ಟ್ ಡ್ರೆಸ್
ಇನ್ನರ್ ಟಾಪ್ ಧರಿಸಿ ಅದರ ಮೇಲೆ ಶರ್ಟ್ ಡ್ರೆಸ್ ಕೂಡ ಧರಿಸಬಹುದು. ಆದರೆ, ಇದಕ್ಕಾಗಿ ಒಂದೆರೆಡು ಬಟನ್‌ಗಳು ಓಪನ್ ಆಗಿರಬೇಕು. ಆಗ ಮಾತ್ರ, ಮಿಕ್ಸ್ ಮ್ಯಾಚ್ ಆದಂತಿರುವ ಶರ್ಟ್ ಡ್ರೆಸ್ ಹೈಲೈಟಾಗುತ್ತದೆ. ಕಾಂಟ್ರಸ್ಟ್ ಶೇಡ್‌ನವನ್ನು ಧರಿಸಬಹುದು. ಬೇಕಿದ್ದಲ್ಲಿ ಶರ್ಟ್ ಡ್ರೆಸ್‌ನ ಬಟನ್ ಕೋಟ್‌ನಂತೆ ಅರ್ಧಂಬರ್ಧ ಓಪನ್ ಮಾಡಬಹುದು. ಕೋಟ್ ಡ್ರೆಸ್‌ನಂತೆ ಕಾಣಿಸುವುದು.
ಲೇಯರ್ ಲುಕ್
ಮಳೆಗಾಲದಲ್ಲಿ ಈ ಡ್ರೆಸ್‌ನಿಂದ ಲೇಯರ್ ಲುಕ್ ನೀಡಬಹುದು. ಶರ್ಟ್ ಡ್ರೆಸ್ ಮೇಲೆ ತೆಳುವಾದ ಅಥವಾ ಶೀರ್ ಕೋಟ್‌ನಂತಹ ಲಾಂಗ್ ಶ್ರಗ್ಸ್ ಅಥವಾ ಜಾಕೆಟ್ ಧರಿಸಿದಲ್ಲಿ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುವುದರಲ್ಲಿ ಸಂಶಯವಿಲ್ಲ! ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)