ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Social Media Trending 2026: ಇನ್ಸ್ಟಾಗ್ರಾಮ್‌ನಲ್ಲಿ ಇದೀಗ 80ರ ದಶಕದ ಫ್ಯಾಷನ್‌ ಫೋಟೋಗಳದ್ದೇ ಹವಾ!

ಇದೀಗ ಇನ್ಸ್ಟಾಗ್ರಾಮ್‌ನಲ್ಲಿ 80 ರ ದಶಕದ ರೆಟ್ರೋ ಫ್ಯಾಷನ್ ಫೋಟೋಗಳನ್ನು ಅಪ್‌ಲೋಡ್‌ ಮಾಡುವುದೇ ಕ್ರೇಝ್‌ ಆಗಿದೆ. ಇದಕ್ಕೆ ಸಿನಿ ತಾರೆಯರೂ ಹೊರತಾಗಿಲ್ಲ! ಈ ಫೋಟೋಗಳಲ್ಲಿನ ವಿಶೇಷತೆ ಎಂದರೇ ಅಂದಿನ ಫ್ಯಾಷನ್‌ ಹಾಗೂ ಸ್ಟೈಲಿಂಗ್‌ ಲುಕ್‌ ಹೈಲೈಟಾಗಿರುವುದು. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಇನ್ಸ್ಟಾಗ್ರಾಮ್‌ನಲ್ಲಿ ಇದೀಗ 80ರ ದಶಕದ ಫ್ಯಾಷನ್‌ ಫೋಟೋಗಳದ್ದೇ ಹವಾ

ಚಿತ್ರಕೃಪೆ: ಇನ್ಸ್ಟಾಗ್ರಾಮ್‌ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇನ್ಸ್ಟಾಗ್ರಾಮ್‌ನಲ್ಲಂತೂ 80 ರ ದಶಕದ ಫ್ಯಾಷನ್‌ ಫೋಟೋಗಳದ್ದೇ ಹವಾ! ಹೌದು, ಇನ್ಸ್ಟಾಗ್ರಾಮ್‌ (Social Media Trending 2026) ತೆರೆದರೇ ಸಾಕು! 80 ರ ದಶಕದಲ್ಲಿ ರೆಟ್ರೋ ಫ್ಯಾಷನ್‌ನಲ್ಲಿ ಹೇಗೆ ಕಾಣಿಸುತ್ತೇವೆ? ಎಂಬ ಊಹೆಗೆ ಮೀರಿದ ಎಐ ಫೋಟೋಗಳದ್ದೇ ಮೇನಿಯಾ. ಅದರಲ್ಲೂ ಈ ಫೋಟೋಗಳಲ್ಲಿನ ವಿಶೇಷತೆ ಎಂದರೇ ಅಂದಿನ ಫ್ಯಾಷನ್‌ ಹಾಗೂ ಸ್ಟೈಲಿಂಗ್‌ ಲುಕ್‌ ಹೈಲೈಟಾಗಿರುವುದು. ಅಂದು ನಾವು ಹೇಗೆ ಕಾಣಿಸುತ್ತಿದ್ದೆವು? ಎಂದು ಊಹಿಸಿರುವ ಫೋಟೋಗಳು ಎನ್ನುತ್ತಾರೆ ಆನ್‌ಲೈನ್‌ ಪ್ರೇಮಿಗಳಾದ ದಿಗಂತೆ ಹಾಗೂ ಜೆನ್ನಿ.

80s retro fashion photos

ತಾರೆಯರ ರೆಟ್ರೋ ಲುಕ್‌ ಕ್ರೇಝ್‌

ಈ ರೆಟ್ರೋ ಲುಕ್‌ ಫೋಟೋಗಳನ್ನು ಅಪ್‌ಲೋಡ್‌ ಮಾಡುವುದರಲ್ಲಿ ಇದೀಗ ತಾರೆಯರು ಹೊರತಾಗಿಲ್ಲ! ಸ್ಯಾಂಡಲ್‌ವುಡ್‌ ತಾರೆಯರಿಂದಿಡಿದು ಬಾಲಿವುಡ್‌ ತಾರೆಯರು ಕೂಡ ತಮ್ಮದೇ ಆದ ರೆಟ್ರೋ ಫ್ಯಾಷನ್‌ ಲುಕ್‌ ಇರುವಂತಹ ಎಐ ಫೋಟೋಗಳನ್ನು ಈಗಾಗಲೇ ಅಪ್‌ಲೋಡ್‌ ಮಾಡುತ್ತಿದ್ದಾರೆ. ಟ್ರೆಂಡ್‌ ಹುಟ್ಟು ಹಾಕಿದ್ದಾರೆ ಎನ್ನುತ್ತಾರೆ ಟೆಕ್ಕಿ ಸೈಂದವ್.

Retro fashion

ಇನ್ಸ್ಟಾದಲ್ಲಿ ಮೂಡಿದ ತಾರೆಯರ ರೆಟ್ರೊ ಫ್ಯಾಷನ್‌

ಇನ್ನು, ಈಗಾಗಲೇ ಸ್ಯಾಂಡಲ್‌ವುಡ್‌ನ ಶುಭಾ ಪೂಂಜಾ, ಭಾವನಾ, ಸುಕೃತಾ ವಾಗ್ಲೆಅರೋಹಿ ನಾರಾಯಣ್‌, ಚೈತ್ರಾ, ಮಯೂರಿ, ರೀಷ್ಮಾ ನಾಣಯ್ಯ ಸೇರಿದಂತೆ ಸಾಕಷ್ಟು ನಟಿಯರು ಈ ಟ್ರೆಂಡ್‌ ಫಾಲೋ ಮಾಡುವವರಲ್ಲಿ ಸೇರಿಕೊಂಡಿದ್ದಾರೆ. ಸದ್ಯ ಬಾಲಿವುಡ್‌ನಲ್ಲಂತೂ ಲೆಕ್ಕವಿಲ್ಲದಷ್ಟು ಮಂದಿ ಅಪ್‌ಲೋಡ್‌ ಮಾಡತೊಡಗಿದ್ದಾರೆ.

Latest Fashion

ನೀವೂ ಟ್ರೆಂಡ್‌ ಫಾಲೋ ಮಾಡುವುದಾದಲ್ಲಿ ಹೀಗೆ ಮಾಡಿ

  • ನಿಮ್ಮ ಯಾವುದಾದರೂ ಸ್ಟೈಲಿಶ್‌ ಆಗಿರುವ ಫೋಟೋವನ್ನು ಎಐ ಮೂಲಕ 80 ರ ದಶಕದ ಲುಕ್‌ಗೆ ಬದಲಿಸಿ.
  • ಇನ್ಸ್ಟಾಗ್ರಾಮ್‌ನಲ್ಲಿ ಹಾಕುವಾಗ ರೆಟ್ರೊ ಹಾಡನ್ನೇ ಚೂಸ್‌ ಮಾಡಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)