Bigboss Fashion 2026: ಮೆನ್ಸ್ ಹೈ ಫ್ಯಾಷನ್ ಟಾಪ್ ಲಿಸ್ಟ್‌ಗೆ ಸೇರಿದ ಸುದೀಪ್ ಬ್ಲ್ಯಾಕ್ ಡಿಸೈನರ್ ಜಾಕೆಟ್
ಬಿಗ್‌ಬಾಸ್ ಸೀಸನ್13ರ ವೇದಿಕೆಯಲ್ಲಿ ಸುದೀಪ್ ಧರಿಸಿದ್ದ ಬ್ಲ್ಯಾಕ್ ಶೇಡ್‌ನ ವೆಲ್ವೆಟ್ ಡಿಸೈನರ್ ಜಾಕೆಟ್ ಸದ್ಯ ಹೈ ಫ್ಯಾಷನ್ ಲಿಸ್ಟ್‌ಗೆ ಸೇರ್ಪಡೆಯಾಗಿದೆ. ಅಂದಹಾಗೆ, ಸುದೀಪ್‌ರ ಈ ಅತ್ಯಾಕರ್ಷಕ ಔಟ್‌ಫಿಟ್ ಸೃಷ್ಟಿಕರ್ತ ಬೇರ್ಯಾರು ಅಲ್ಲ! ಎಂದಿನಂತೆ ಪ್ರತಿ ಬಾರಿಯೂ ಡಿಸೈನ್ ಮಾಡುವ ಸೆಲೆಬ್ರೆಟಿ ಡಿಸೈನರ್ ಭರತ್ ಸಾಗರ್. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಸುದೀಪ್, ನಟ., ಚಿತ್ರ ಕೃಪೆ: ಕಲರ್ಸ್ ಕನ್ನಡ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯಾರಿಗೆಲ್ಲಾ ಬಿಗ್‌ಬಾಸ್ ಸೀಸನ್ 13ರಲ್ಲಿ (Bigboss Fashion 2026) ಸುದೀಪ್ ಧರಿಸಿದ್ಧ ಬ್ಲ್ಯಾಕ್ ಡಿಸೈನರ್ ಜಾಕೆಟ್ ಇಷ್ಟವಾಗಿದೆ? ಹುಡುಗರಿಗೆ ಮಾತ್ರವಲ್ಲ, ಹುಡುಗಿಯರಿಗೂ ಪ್ರಿಯವಾಗಿದೆ. ಹೌದೌದು! ಇದಕ್ಕೆ ಸಾಕ್ಷಿ ಎಂಬಂತೆ, ಈ ಬಾರಿಯ ಬಿಗ್‌ಬಾಸ್ ಆರಂಭದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸುದೀಪ್ ಧರಿಸಿದ್ದ ಡೀಪ್ ಬ್ಲ್ಯಾಕ್ ಶೇಡ್‌ನ ವೆಲ್ವೆಟ್ ಡಿಸೈನರ್ ಜಾಕೆಟ್ ಸದ್ಯ ಮೆನ್ಸ್ ಹೈ ಫ್ಯಾಷನ್ ಲಿಸ್ಟ್‌ಗೆ ಟಾಪ್ ಲಿಸ್ಟ್‌ಗೆ ಸೇರ್ಪಡೆಯಾಗಿದೆ.
ಡಿಸೈನರ್ ಭರತ್ ಸಾಗರ್ ಡಿಸೈನರ್‌ವೇರ್ ಜಾದೂ
ಅಂದಹಾಗೆ, ಸುದೀಪ್‌ರ ಈ ಅತ್ಯಾಕರ್ಷಕ ಔಟ್‌ಫಿಟ್ ಸೃಷ್ಟಿಕರ್ತ ಬೇರ್ಯಾರು ಅಲ್ಲ! ಎಂದಿನಂತೆ ಪ್ರತಿ ಬಾರಿಯೂ ಡಿಸೈನ್ ಮಾಡುವ ಸೆಲೆಬ್ರೆಟಿ ಡಿಸೈನರ್ ಭರತ್ ಸಾಗರ್. ಸದಾ ಎಲೆಮರೆ ಕಾಯಿಯಂತೆ ಇರಲು ಬಯಸುವ ಭರತ್, ಸುದೀಪ್ ಅವರಿಗೆ ಎಕ್ಸ್‌ಕ್ಲೂಸೀವ್ ಡಿಸೈನರ್‌ವೇರ್ ಸಿದ್ಧಪಡಿಸಿದ್ದಾರೆ. ಸುದೀಪ್‌ರ ಎಕ್ಸ್ಟ್ರಾರ್ಡಿನರಿ ಲುಕ್‌ನ ಕ್ರೆಡಿಟ್ ಇವರಿಗೆ ಸಲ್ಲಬೇಕು.
ಸುದೀಪ್ ಔಟ್‌ಫಿಟ್ ಸ್ಟೋರಿ
ಎಲ್ಲರಿಗೂ ಗೊತ್ತಿರುವಂತೆ ಸುದೀಪ್ ಧರಿಸಿದ್ಧ, ಬಿಗ್‌ಬಾಸ್ ವೇದಿಕೆಯ ಔಟ್‌ಫಿಟ್ ಕಂಪ್ಲೀಟ್ ಸಾಲಿಡ್ ಬ್ಲ್ಯಾಕ್ ಶೇಡ್‌ನದ್ದಾಗಿದೆ. ಜಿಪ್ ಹೊಂದಿದ ಬ್ಲ್ಯಾಕ್ ಶರ್ಟ್ ಹಾಗೂ ಲೂಸಾದ ಬ್ಲ್ಯಾಕ್ ಪ್ಯಾಂಟ್ ಒಳಗೊಂಡಿದೆ. ಇವೆರೆಡರ ಮೇಲೆ ಅವರು ಧರಿಸಿರುವ ಡಿಸೈನರ್ ಬ್ಲ್ಯಾಕ್ ಟುಕ್ಸೆಡೋ ಜಾಕೆಟ್ ಮಾತ್ರ ಅವರ ಇಡೀ ಲುಕ್ಕನ್ನು ಹೈಲೈಟ್ ಮಾಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.
ಸುದೀಪ್ ಬ್ಲ್ಯಾಕ್ ಡಿಸೈನರ್ ಜಾಕೆಟ್ ಸ್ಪೆಷಾಲಿಟಿ
ಇನ್ನು, ಸುದೀಪ್ ಡಿಸೈನರ್ ಭರತ್ ಅವರ ಪ್ರಕಾರ, ಅವರ ಈ ಸ್ಪೆಷಲ್ ಜಾಕೆಟ್, ಕಸ್ಟಮೈಸ್ಡ್ ಡಿಸೈನ್‌ನದ್ದಾಗಿದ್ದು, ಜಾಕೆಟ್ ಮೇಲೆ ಬ್ಲ್ಯಾಕ್ ಬೀಡ್ಸ್, ಕಟ್‌ದಾನ, ಜರ್ದೋಸಿ, ಪರ್ಲ್, ಹಾಗೂ ಸ್ಟೋನ್ಸ್ ಹ್ಯಾಂಡ್ ವರ್ಕನ್ನು ಸುಂದರವಾಗಿ ಮೂಡಿಸಲಾಗಿದೆ.
ಮೆನ್ಸ್ ಹೈ ಫ್ಯಾಷನ್ ಲಿಸ್ಟ್‌ಗೆ ಡಿಸೈನರ್ ಜಾಕೆಟ್
ಒಟ್ಟಾರೆ, ಸುದೀಪ್‌ರ ಈ ಲುಕ್ ಇದೀಗ ಮೆನ್ಸ್ ಹೈ ಫ್ಯಾಷನ್ ಟಾಪ್ ಲಿಸ್ಟ್‌ಗೆ ಸೇರ್ಪಡೆಯಾಗಿರುವುದು ಫ್ಯಾಷನ್ ಲೋಕದಲ್ಲಿ ಸುದ್ದಿಯಾಗಿದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)