ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Star Fashion 2026: ಚಳಿಗಾಲಕ್ಕೆ ಮುನ್ನವೇ ಲಾಂಗ್‌ ಲೈನ್‌ ಟ್ರೆಂಚ್‌ ಕೋಟ್‌ನಲ್ಲಿ ಕಾಣಿಸಿಕೊಂಡ ಪರಿಣೀತಿ ಚೋಪ್ರಾ

ಚಳಿಗಾಲ ಆರಂಭವಾಗಿಲ್ಲ! ಆಗಲೇ ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಲಾಂಗ್‌ ಲೈನ್‌ ಟ್ವೀಡ್‌ ಟ್ರೆಂಚ್‌ ಕೋಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಔಟ್‌ ಆಫ್‌ ಫ್ಯಾಷನ್‌ ಟ್ರೆಂಡ್‌ಗೆ ಸೈ ಎಂದಿದ್ದಾರೆ. ಇದ್ಯಾವ ಬಗೆಯ ಲುಕ್‌? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಲಾಂಗ್‌ ಲೈನ್‌ ಟ್ರೆಂಚ್‌ ಕೋಟ್‌ನಲ್ಲಿ ಕಾಣಿಸಿಕೊಂಡ ಪರಿಣೀತಿ ಚೋಪ್ರಾ

ಚಿತ್ರಗಳು: ಪರಿಣೀತಿ ಚೋಪ್ರಾ, ಬಾಲಿವುಡ್‌ ನಟಿ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಔಟ್‌ ಆಫ್‌ ಸೀಸನ್‌ ಫ್ಯಾಷನ್‌ವೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ. ಎಲ್ಲರಿಗೂ ಗೊತ್ತಿರುವಂತೆ ಚಳಿಗಾಲ ಇನ್ನೂ ಆರಂಭವಾಗಿಲ್ಲ! ಆಗಲೇ ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ, ಲಾಂಗ್‌ ಲೈನ್‌ ಟ್ವೀಡ್‌ ಲುಕ್‌ ನೀಡುವ ಟ್ರೆಂಚ್‌ ಕೋಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಔಟ್‌ ಆಫ್‌ ಫ್ಯಾಷನ್‌ ಟ್ರೆಂಡ್‌ಗೆ ಸೈ ಎಂದಿದ್ದಾರೆ.

Bollywood actress Parineeti Chopra

ಪರಿಣೀತಿ ಚೋಪ್ರಾ ಟ್ವೀಡ್‌ ಟ್ರೆಂಚ್‌ ಕೋಟ್‌

ಅಂದಹಾಗೆ, ಪರಿಣೀತಿ ಚೋಪ್ರಾ ತಮ್ಮದೇ ಆದ ಸಿನಿಮಾ ಇವೆಂಟ್‌ನಲ್ಲಿ ಧರಿಸಿರುವ ಈ ಔಟ್‌ಫಿಟ್‌ ಲುಕ್‌ ಫ್ಯಾಷನ್‌ ಪ್ರಿಯರಿಗೆ ಅಸಮಾಧಾನ ತಂದಿದೆ. ಇದೇನಿದು? ಪರಿಣೀತಿ? ಸೀಸನ್‌ಗೂ ಹೊಂದದ ಹಾಗೂ ಸದ್ಯ ಫ್ಯಾಷನ್‌ನಲ್ಲೂ ಇರದಂತಹ ಫ್ಯಾಷನ್‌ವೇರ್‌ನಲ್ಲೆ ಕಾಣಿಸಿಕೊಂಡಿದ್ದೀರಿ? ಎಂದು ನೆಟ್ಟಿಗರು ಅದರಲ್ಲೂ ಅವರನ್ನು ಫಾಲೋ ಮಾಡುವಂತಹ ಫ್ಯಾಷನ್‌ ಪ್ರಿಯರು ಪ್ರಶ್ನೆ ಹಾಕಿದ್ದಾರೆ.

Long line trench coat

ಏನಿದು ಲಾಂಗ್‌ ಲೈನ್‌ ಟ್ರೆಂಚ್‌ ಕೋಟ್‌?

ಫ್ಯಾಷನಿಸ್ಟಾಗಳ ಪ್ರಕಾರ, ಪಾದದವರೆಗೂ ಇರುವಂತಹ ಟ್ರೆಂಚ್‌ ಕೋಟನ್ನು ಲಾಂಗ್‌ ಲೈನ್‌ ಟ್ರೆಂಚ್‌ ಕೋಟ್‌ ಎಂದು ಕರೆಯಲಾಗುತ್ತದೆ. ಹೆಚ್ಚಾಗಿ ಈ ಕೋಟನ್ನು ಚಳಿಗಾಲದಲ್ಲಿ ಧರಿಸಲಾಗುತ್ತದೆ. ಇಲ್ಲವೇ ಮಳೆಗಾಲದಲ್ಲಿ ಹಾಲಿಡೇ ಫ್ಯಾಷನ್‌ನಲ್ಲಿ ಧರಿಸಲಾಗುತ್ತದೆ. ಓವರ್‌ಕೋಟ್‌ನಂತೆ ಬಳಸಲಾಗುತ್ತದೆ.

Parineeti Chopra

ಪರಿಣೀತಿ ಚೋಪ್ರಾ ಔಟ್‌ಫಿಟ್‌ ವಿಮರ್ಶೆ

ಇನ್ನು ಫ್ಯಾಷನ್‌ ವಿಮರ್ಶಕರು ಕೂಡ ಪರಿಣಿತಿಯ ಈ ಔಟ್‌ಫಿಟ್‌ಗೆ ಹೆಚ್ಚೇನೂ ಮಾರ್ಕ್ಸ್ ನೀಡಿಲ್ಲ! ವೆಸ್ಟರ್ನ್‌ ಲುಕ್‌ ನೀಡುವಂತಹ ಈ ಔಟ್‌ಫಿಟ್‌ ಪರಿಣೀತಿಯ ವೆಬ್‌ ಸೀರೀಸ್‌ಗೆ ಹೊಂದುವಂತಹ ಲುಕ್‌ ಇರಬಹುದು! ಹಾಗಾಗಿ ಅವರು ಈ ಔಟ್‌ಆಫ್‌ ಸೀಸನ್‌ ಫ್ಯಾಷನ್‌ಗೆ ಮೊರೆ ಹೋಗಿದ್ದಾರೆ ಎಂದಿದ್ದಾರೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)