ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Palestinians Killed: ಗಾಜಾದಲ್ಲಿ ರಕ್ತಪಾತ- ಇಸ್ರೇಲ್ ಸೇನೆಯ ಗುಂಡಿನ ದಾಳಿಗೆ 93 ಪ್ಯಾಲೆಸ್ತೀನಿಯನ್ನರು ಬಲಿ

Palestinians: 1947ರಲ್ಲಿ ಸ್ವತಂತ್ರ ಸಿಕ್ಕಿದಾಗಿನಿಂದ ಅರ್ಧದಷ್ಟು ಕಾಲ ಸೈನಿಕ ಆಡಳಿತದ ಅಡಿಯಲ್ಲಿದ್ದ ಪಾಕಿಸ್ತಾನದಲ್ಲಿ, ಸೈನಿಕ ದಂಗೆಯ ಚರ್ಚೆ ಹೊಸದೇನಲ್ಲ. ಆದರೆ, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪ್ರಧಾನಮಂತ್ರಿ ಶೆಹಬಾಜ್ ಶರೀಫ್‌ಗಿಂತ ಮೊದಲೇ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾಗಿ, ವೈಟ್‌ಹೌಸ್‌ನಲ್ಲಿ ಎರಡು ಗಂಟೆಗಳ ಕಾಲ ಡಿನ್ನರ್ ಸಭೆ ನಡೆಸಿದ್ದು, ಗಮನ ಸೆಳೆದಿದೆ. ಇದೀಗ, ಮುನೀರ್ ಶರೀಫ್ ಇಲ್ಲದೇ ಶ್ರೀಲಂಕಾ ಮತ್ತು ಇಂಡೋನೇಷಿಯಾದ ನಾಯಕರನ್ನು ಭೇಟಿಯಾಗಲು ತೆರಳಿದ್ದಾರೆ.

ಉತ್ತರ ಗಾಜಾ ಮೇಲೆ ಇಸ್ರೇಲ್ ದಾಳಿ; 93 ಬಲಿ..!

Profile Sushmitha Jain Jul 21, 2025 4:23 PM

ಗಾಜಾ: ಗಾಜಾದ (Gaza) ವಿವಿಧ ಭಾಗಗಳಲ್ಲಿ ಮಾನವೀಯ ನೆರವಿಗಾಗಿ ಸೇರಿದ ಜನರ ಮೇಲೆ ಇಸ್ರೇಲ್ ಸೇನೆ ಗುಂಡಿನ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದ್ದು, ಭಾನುವಾರ ಕನಿಷ್ಠ 93 ಪ್ಯಾಲೆಸ್ಟಿನಿಯನ್ನರು (Palestinians) ಸಾವನ್ನಪ್ಪಿ ಹಲವು ಜನ ಗಾಯಗೊಂಡಿದ್ದಾರೆ ಎಂದು ಗಾಜಾದ ಸಿವಿಲ್ ಡಿಫೆನ್ಸ್ ಏಜೆನ್ಸಿ (Civil Defence Agency) ತಿಳಿಸಿದೆ. ಯುದ್ಧಪೀಡಿತ ಗಾಜಾದಲ್ಲಿ ಕ್ಷಾಮ, ವಲಸೆ ಮತ್ತು ನಾಗರಿಕರ ಸಾವು ಸಾಮಾನ್ಯವಾಗಿರುವ ಈ ಘಟನೆ ಮತ್ತೊಂದು ರಕ್ತಪಾತದ ಸರಣಿಯಾಗಿದೆ.

ಉತ್ತರ ಗಾಜಾದಲ್ಲಿ ಭಾರೀ ಪ್ರಮಾಣದ ಸಾವು ಸಂಭವಿಸಿದ್ದು, ಆಹಾರಕ್ಕಾಗಿ ಧಾವಿಸಿದ ಜನಸಂದಣಿಯ ಮೇಲೆ ದಾಳಿ ನಡೆಸಲಾಗಿದ್ದು 80 ಜನರು ಮೃತಪಟ್ಟಿದ್ದಾರೆ. ರಫಾದಲ್ಲಿ 9 ಮತ್ತು ಖಾನ್ ಯೂನಿಸ್‌ನಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಯುಎನ್ ವಿಶ್ವ ಆಹಾರ ಕಾರ್ಯಕ್ರಮ (WFP) ತನ್ನ 25 ಟ್ರಕ್‌ಗಳ ತಂಡವು ಗಾಜಾ ನಗರದ ಬಳಿ ದಾಳಿಗೆ ಸಿಲುಕಿತು ಎಂದು ದೃಢಪಡಿಸಿದೆ.

ಇಸ್ರೇಲ್ ಸೇನೆ ಈ ಸಾವಿನ ಸಂಖ್ಯೆಯನ್ನು ನಿರಾಕರಿಸಿದ್ದು “ಎಚ್ಚರಿಕೆಯ ಗುಂಡು” ಮಾತ್ರ ಹಾರಿಸಲಾಗಿದೆ ಎಂದಿದೆ. ಆದರೆ, ಪ್ಯಾಲೆಸ್ಟಿನಿಯಜನ ಇದನ್ನು “ಹತ್ಯಾಕಾಂಡ” ಎಂದು ಬಣ್ಣಿಸಿದ್ದಾರೆ. “ಟ್ಯಾಂಕ್‌ಗಳು ಅನಿಯಂತ್ರಿತವಾಗಿ ಗುಂಡು ಹಾರಿಸಿದವು, ಸ್ನೈಪರ್‌ಗಳು ಪ್ರಾಣಿಗಳ ಮೇಲೆ ಶಿಕಾರಿಯಂತೆ ಗುರಿಯಿಟ್ಟರು” ಎಂದು ಗಾಜಾ ನಗರದ 36 ವರ್ಷದ ಕಾಸೆಮ್ ಅಬು ಖಾತರ್ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಕನ್ವಾರ್ ಯಾತ್ರೆ ವೇಳೆ ಏಕಾಏಕಿ ನುಗ್ಗಿದ ಗಜಪಡೆ; ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

ಶನಿವಾರ ಗಾಜಾದ ಹೋಲಿ ಫ್ಯಾಮಿಲಿ ಚರ್ಚ್‌ನ ಮೇಲೆ ಇಸ್ರೇಲ್ ದಾಳಿಯಿಂದ ಮೂವರು ಸಾವನ್ನಪ್ಪಿದ್ದರು. ಇಸ್ರೇಲ್ ಪ್ರಧಾನಿ ನೆತನ್ಯಾಹು ಈ ದಾಳಿಯನ್ನು ಆಕಸ್ಮಿಕ ಎಂದು ಕರೆದು, ಪೋಪ್ ಲಿಯೋ XIVಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಪೋಪ್ ಲಿಯೋ ಯುದ್ಧದ “ಕ್ರೂರತೆ”ಯನ್ನು ಖಂಡಿಸಿದ್ದಾರೆ. ಜೆರುಸಲೆಂನ ಕ್ಯಾಥೊಲಿಕ್ ಲ್ಯಾಟಿನ್ ಪ್ಯಾಟ್ರಿಯಾರ್ಕ್ ಪಿಯರ್‌ಬಟಿಸ್ಟಾ ಪಿಜ್ಜಾಬಾಲ್ಲಾ ಗಾಜಾಕ್ಕೆ ಭೇಟಿ ನೀಡಿ, ಧ್ವಂಸಗೊಂಡ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಗಾಜಾದ 87.8% ಭಾಗವನ್ನು ಖಾಲಿ ಮಾಡುವ ಆದೇಶ ಮಾಡಲಾಗಿದ್ದು, 2.1 ಮಿಲಿಯನ್ ಜನರು ಕೇವಲ 12% ಭಾಗದಲ್ಲಿ ಸೀಮಿತರಾಗಿದ್ದಾರೆ ಎಂದು ಯುಎನ್‌ನ OCHA ವರದಿ ತಿಳಿಸಿದೆ. ಡೀರ್ ಎಲ್-ಬಲಾಹ್‌ನಲ್ಲಿ ಇಸ್ರೇಲ್ ಸೇನೆ ಭಾನುವಾರ ಹೊಸದಾಗ ಜಾಗಗಳನ್ನು ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ. “ನಾವು ಎಲ್ಲಿಗೆ ಹೋಗಬೇಕೆಂದು ಗೊತ್ತಿಲ್ಲ, ಆಶ್ರಯವಿಲ್ಲ,” ಎಂದು ವಲಸೆಗಾರರೊಬ್ಬರು ತಿಳಿಸಿದ್ದಾರೆ.