ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stealth Fighter Jet: ಐದು ವಾರಗಳ ಬಳಿಕ ಮರಳಿ ತಾಯ್ನಾಡಿಗೆ ಹೊರಡಲು ಸಜ್ಜಾದ ಎಫ್-35ಬಿ ಯುದ್ಧ ವಿಮಾನ

ಸುಮಾರು ಐದು ವಾರಗಳ ಬಳಿಕ ಬ್ರಿಟಿಷ್ ರಾಯಲ್ ನೇವಿಯ ಎಫ್-35ಬಿ (F-35B) ಯುದ್ಧ ವಿಮಾನ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಮರಳಲಿದೆ. ಈ ಯುದ್ಧ ವಿಮಾನವು ಜೂನ್ 14ರಂದು ಇಂಗ್ಲೆಂಡ್‌ನಿಂದ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದ ವೇಳೆ ಹೈಡ್ರಾಲಿಕ್ ವೈಫಲ್ಯದಿಂದ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

ಎಫ್-35ಬಿ ಯುದ್ಧ ವಿಮಾನ ದುರಸ್ತಿ ಪೂರ್ಣ

ನವದೆಹಲಿ: ಸುಮಾರು ಐದು ವಾರಗಳ ಬಳಿಕ ಬ್ರಿಟಿಷ್ ರಾಯಲ್ ನೇವಿಯ (British Royal Navy) ಎಫ್-35ಬಿ (F-35B) ಯುದ್ಧ ವಿಮಾನ (Fighter jet) ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Thiruvananthapuram International Airport) ಲಂಡನ್ (London)ಗೆ ಮರಳಲಿದೆ. ಈ ಯುದ್ಧ ವಿಮಾನವು ಜೂನ್ 14ರಂದು ಇಂಗ್ಲೆಂಡ್‌ನಿಂದ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದ ವೇಳೆ ಹೈಡ್ರಾಲಿಕ್ ವೈಫಲ್ಯದಿಂದ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಬಳಿಕ ಸಾಕಷ್ಟು ಪ್ರಯತ್ನ ನಡೆಸಿ ಇದೀಗ ವಿಮಾನವನ್ನು ದುರಸ್ತಿಗೊಳಿಸಲಾಗಿದ್ದು, ಹಾರಾಟಕ್ಕೆ ಸಿದ್ಧವಾಗಿದೆ ಎಂದು ತಜ್ಞರು ಅನುಮತಿ ನೀಡಿದ ಬಳಿಕ ಮಂಗಳವಾರ ಕೇರಳದಿಂದ ಹೊರಡಲಿದೆ.

ಬ್ರಿಟಿಷ್ ರಾಯಲ್ ನೇವಿಯ ಎಫ್-35ಬಿ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಐದು ವಾರಗಳಿಂದ ನಿಲುಗಡೆಯಾಗಿತ್ತು. ಇದೀಗ ದುರಸ್ತಿಯ ಬಳಿಕ ಮಂಗಳವಾರ ಮರಳಿ ತಾಯ್ನಾಡಿಗೆ ಪ್ರಯಾಣ ಬೆಳೆಸಲಿದೆ.

ವಿಮಾನ ತುರ್ತು ಭೂಸ್ಪರ್ಶ ಮಾಡಬೇಕಾದ ಅನಿವಾರ್ಯತೆಯನ್ನು ಉಂಟು ಮಾಡಿದ್ದ ಹೈಡ್ರಾಲಿಕ್ ವ್ಯವಸ್ಥೆಯ ದೋಷವನ್ನು ಸರಿಪಡಿಸಲಾಗಿದೆ ಮತ್ತು ಮಂಗಳವಾರ ಜೆಟ್ ಹಾರಾಟ ನಡೆಸಲು ಅನುಮತಿ ನೀಡಲಾಗಿದೆ.

ಕಡಿಮೆ ಇಂಧನ ಮತ್ತು ಪ್ರತಿಕೂಲ ಹವಾಮಾನದ ಕಾರಣದಿಂದ ಪೈಲಟ್ ಕೇರಳದ ಹತ್ತಿರದ ಸೂಕ್ತ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೇಳಿದ್ದರು. ಇದನ್ನು ಪರಿಗಣಿಸಿದ ಭಾರತೀಯ ವಾಯುಪಡೆಯು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ನೀಡಿತ್ತು.

ಸುಮಾರು ಐದು ವಾರಗಳ ದುರಸ್ತಿ ಕಾರ್ಯಗಳ ಬಳಿಕ ಇದೀಗ ಈ ಫೈಟರ್ ಜೆಟ್ ತಾಯ್ನಾಡಿಗೆ ಮರಳಲು ಸಿದ್ಧವಾಗಿದೆ.



5ನೇ ತಲೆಮಾರಿನ ಸ್ಟೆಲ್ತ್ ಫೈಟರ್ ಎಫ್-35ಬಿ ಯುದ್ಧ ವಿಮಾನವು ಇಂಗ್ಲೆಂಡ್‌ನ ಎಚ್‌ಎಂಎಸ್ ಪ್ರಿನ್ಸ್ ಆಫ್ ವೇಲ್ಸ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್‌ನ ಭಾಗವಾಗಿದೆ. ಇದು ಪ್ರಸ್ತುತ ಇಂಡೋ-ಪೆಸಿಫಿಕ್‌ನಲ್ಲಿ ಕಾರ್ಯಚರಣೆ ನಡೆಸುತ್ತಿದೆ. ಇತ್ತೀಚೆಗೆ ಇದು ಭಾರತೀಯ ನೌಕಾಪಡೆಯೊಂದಿಗೆ ಜಂಟಿ ಕಡಲ ತರಬೇತಿಯನ್ನು ನಡೆಸಿತ್ತು.

ಇದನ್ನೂ ಓದಿ: Nimisha Priya Case: ಮರಣದಂಡನೆಯಿಂದ ತಪ್ಪಿಸಿಕೊಳ್ಳಲು ನಿಮಿಷಾ ಪ್ರಿಯಾ ಮುಂದಿದೆ 5 ದಾರಿ

ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ್ದ ಈ ಫೈಟರ್ ಜೆಟ್ ಅನ್ನು ಬ್ರಿಟಿಷ್ ರಾಯಲ್ ಏರ್ ಫೋರ್ಸ್‌ನ 14 ತಾಂತ್ರಿಕ ತಜ್ಞರು ಮತ್ತು 10 ಸಿಬ್ಬಂದಿ ಸೇರಿ ದುರಸ್ತಿ ಮಾಡಿದ್ದಾರೆ.