ಭಾರತೀಯ ಚುನಾವಣಾ ಮುಖ್ಯಸ್ಥರ ಪ್ರಶ್ನೆಯಿಂದಾಗಿ ಸೇವ್ ಅಮೆರಿಕ ಕಾಯ್ದೆ ನವೀಕರಣ: ಬೆಂಬಲಕ್ಕೆ ಡೊನಾಲ್ಡ್ ಟ್ರಂಪ್ ಮನವಿ
ಸೇವ್ ಅಮೆರಿಕ ಕಾಯ್ದೆ ನವೀಕರಣಕ್ಕೆ ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದಕ್ಕೆ ಭಾರತೀಯ ಚುನಾವಣಾ ಮುಖ್ಯಸ್ಥರ ಪ್ರಶ್ನೆ ಕಾರಣ ಎಂದು ತಿಳಿಸಿದ್ದಾರೆ. ಈ ಕುರಿತು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದಿದ್ದು, ಅಮೆರಿಕ ಚುನಾವಣೆಗಳಲ್ಲಿ ಮತ ಚಲಾಯಿಸಲು ಭಾರತದಲ್ಲಿರುವಂತೆ ಕಠಿಣ ಕ್ರಮಗಳ ಅವಶ್ಯಕತೆ ಇರುವುದಾಗಿ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ದೇಶಾದ್ಯಂತ ಚುನಾವಣಾ ಅಕ್ರಮಗಳ ಬಗ್ಗೆ ವಿರೋಧ ಪಕ್ಷಗಳು ಮಾತನಾಡುತ್ತಿದ್ದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Save America Act) ಅವರು ಭಾರತದ ಚುನಾವಣಾ ವ್ಯವಸ್ಥೆ (Indian poll) ಮತ್ತು ಮತದಾರರ ಗುರುತಿನ ದಾಖಲೆಗಳ ಬಗ್ಗೆ ಹೊಗಳಿದ್ದಾರೆ ಮಾತ್ರವಲ್ಲ ಅಮೆರಿಕ ಚುನಾವಣೆಗಳಲ್ಲಿ ಮತ ಚಲಾಯಿಸಲು ಕಠಿಣ ಕ್ರಮಗಳ ಅವಶ್ಯಕತೆ ಇರುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಸೇವ್ ಅಮೆರಿಕ ಕಾಯ್ದೆ (Save America Act) ಅಂಗೀಕಾರಕ್ಕೂ ಮೊದಲು ನವೀಕರಿಣೆಗೆ ಕರೆ ನೀಡಿರುವುದಾಗಿ ಹೇಳಿದ್ದಾರೆ. ಈ ಕುರಿತು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಾದ ಟ್ರುತ್ ಸೋಶಿಯಲ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸೇವ್ ಅಮೆರಿಕ ಕಾಯ್ದೆ ನವೀಕರಣಕ್ಕೆ ಒಂದು ಮುಖ್ಯ ಕಾರಣ ಭಾರತೀಯ ಚುನಾವಣಾ ಮುಖ್ಯಸ್ಥರ ಪ್ರಶ್ನೆಯಾಗಿದೆ ಎಂದ ಅವರು, ಭಾರತದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಶೇಕಡಾ ಒಂದು ಭಾಗದಷ್ಟು ಮತದಾರರು ಕೂಡ ಅಂಚೆ ಮತಪತ್ರಗಳನ್ನು ಬಳಸಿಲ್ಲ ಮತ್ತು ಪ್ರತಿಯೊಬ್ಬ ಮತದಾರರು ಮಾನ್ಯವಾದ ಫೋಟೋ ಗುರುತಿನ ದಾಖಲೆಯನ್ನು ಹೊಂದಿರುವುದನ್ನು ತಾವು ಗಮನಿಸಿರುವುದಾಗಿ ಹೇಳಿದರು.
ಅಮೆರಿಕದ ಚುನಾವಣೆಗಳಲ್ಲಿ ಮತ ಚಲಾಯಿಸಲು ಕಠಿಣ ಕ್ರಮಗಳ ಅವಶ್ಯಕತೆ ಇರುವುದಾಗಿ ಹೇಳಿರುವ ಅವರು ಇದಕ್ಕಾಗಿ ಸೇಫ್‌ಗಾರ್ಡ್ ಅಮೆರಿಕನ್ ವೋಟರ್ ಎಲಿಜಿಬಿಲಿಟಿ ಅಥವಾ ಸೇವ್ ಅಮೆರಿಕ ಕಾಯ್ದೆ ನವೀಕರಣಕ್ಕೆ ಕರೆ ನೀಡಿರುವುದಾಗಿ ತಿಳಿಸಿದ್ದಾರೆ. ಭಾರತದ ಚುನಾವಣಾ ವ್ಯವಸ್ಥೆ ಮತ್ತು ಮತದಾರರ ಗುರುತಿನ ಅವಶ್ಯಕತೆಗಳ ಕುರಿತು ತಾನು ಗಮನಿಸಿರುವುದಾಗಿ ತಿಳಿಸಿದ್ದಾರೆ.
ಅಮೆರಿಕದಲ್ಲಿ ಇತ್ತೀಚೆಗೆ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಅಮೆರಿಕದಲ್ಲಿ ಚುನಾವಣೆಗಳು ಮಾನ್ಯವಾದ ಫೋಟೋ ಗುರುತು ಚೀಟಿ ಇಲ್ಲದೆ ಏಕೆ ನಡೆಯುತ್ತವೆ ಎಂದು ಅಮೆರಿಕ ಆಡಳಿತವನ್ನು ಪ್ರಶ್ನಿಸಿದ್ದರು. ಅಲ್ಲದೇ ಚುನಾವಣಾ ವಂಚನೆಯನ್ನು ತಡೆಯಲು ಪ್ರತಿಯೊಬ್ಬ ಯುಎಸ್ ಮತದಾರರಿಗೂ ಕಡ್ಡಾಯವಾದ ಫೋಟೋ ಐಡಿಗಳಿಗಾಗಿ ಅವರು ವಾದಿಸಿದ್ದರು ಎಂದು ಟ್ರಂಪ್ ಹೇಳಿದ್ದಾರೆ.
ಭಾರತದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಶೇಕಡಾ ಒಂದು ಭಾಗದಷ್ಟು ಮತದಾರರು ಕೂಡ ಅಂಚೆ ಮತಪತ್ರಗಳನ್ನು ಬಳಸಿಲ್ಲ. ಪ್ರತಿಯೊಬ್ಬ ಮತದಾರರು ಮಾನ್ಯವಾದ ಫೋಟೋ ಗುರುತಿನ ದಾಖಲೆಯನ್ನು ಬಳಸಿ ಮತದಾನ ಮಾಡಿದ್ದಾರೆ ಎಂದರು.
President Donald J. Trump is absolutely correct! 646 MILLION voters, every single one required an ID in India’s last election. Congress should pass THE SAVE AMERICA ACT! pic.twitter.com/lqQHSZvWk7
— Ambassador Sergio Gor (@USAmbIndia) August 18, 2026
ಅಮೆರಿಕದಲ್ಲಿ ಇನ್ನು ಮುಂದೆ ಮತ ಚಲಾಯಿಸಲು, ಮತದಾನಕ್ಕಾಗಿ ನೋಂದಾಯಿಸಲು ಅಮೆರಿಕನ್ನರು ಪೌರತ್ವದ ಪುರಾವೆಯನ್ನು ತೋರಿಸಬೇಕು, ರಾಷ್ಟ್ರವ್ಯಾಪಿ ಮತದಾರರ ಗುರುತು ಪತ್ರ ತೋರಿಸಿ ಮತದಾನ ಮಾಡಬೇಕು. ಇ-ಮೇಲ್ ಮೂಲಕ ಮತದಾನ ಕಡಿಮೆಯಾಗಬೇಕು ಎಂಬ ಸೇವ್ ಅಮೆರಿಕ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸಲು ಅವರು ಈ ಮೂಲಕ ತಿಳಿಸಿದ್ದಾರೆ.
Earlier this month, India’s Chief Election Commissioner, Gyanesh Kumar, asked our Administration — How can you have Elections in the U.S. without a valid Photo ID? India’s last Election had 646,000,000 Voters! Less than 1% voted by mail, and every single Voter had to have a VALID… pic.twitter.com/dWtL287nkk
— Commentary Donald J. Trump Truth Social Posts On X (@TrumpTruthOnX) August 17, 2026
ಸೆರ್ಗಿಯೋ ಗೋರ್ ಬೆಂಬಲ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೇವ್ ಅಮೆರಿಕ ಕಾಯ್ದೆಗೆ ಭಾರತದ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಬೆಂಬಲ ವ್ಯಕ್ತಪಡಿಸಿದ್ದು, ಭಾರತದ 2024 ರ ಸಾರ್ವತ್ರಿಕ ಚುನಾವಣೆಯು ಮತದಾರರ ದೃಢೀಕರಣಕ್ಕೆ ಜಾಗತಿಕ ಮಾನದಂಡವೆಂದು ಉಲ್ಲೇಖಿಸಿದರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಚುನಾವಣೆಯಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳಲು, ಭಾರತದ ಮತದಾನ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ ಮತಯಂತ್ರದ ಕಾರ್ಯವಿಧಾನಗಳನ್ನು ಗಮನಿಸಿ ಅಮೆರಿಕ ಅಧ್ಯಕ್ಷರು ಅಮೆರಿಕನ್ ಚುನಾವಣಾ ಕಾರ್ಯವಿಧಾನಗಳನ್ನು ಪರಿಷ್ಕರಿಸಲು ಮುಂದಾಗಿರುವುದನ್ನು ಬೆಂಬಲಿಸಿದರು. ದೇಶದ 646 ಮಿಲಿಯನ್ ಮತದಾರರು ಮತ್ತು ಕಾಂಗ್ರೆಸ್ ದಿ ಸೇವ್ ಅಮೆರಿಕ ಕಾಯ್ದೆಯನ್ನು ಅಂಗೀಕರಿಸಬೇಕು ಎಂದು ಹೇಳಿದರು.
ಉಚಿತ ಎಲೆಕ್ಟ್ರಿಕ್ ಸ್ಟೌ ಸುಳ್ಳು ಸಂದೇಶ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ
ಏನು ಈ ಕಾಯ್ದೆ?
ಸೇವ್ ಅಮೆರಿಕ ಕಾಯ್ದೆಯನ್ನು ಅಂಗೀಕರಿಸಲು ರಿಪಬ್ಲಿಕನ್ ನಾಯಕರು ಒತ್ತಾಯಿಸುತ್ತಿದ್ದು, ಇದು ಚುನಾವಣಾ ವಂಚನೆಯನ್ನು ತಡೆಯುತ್ತದೆ ಎಂದು ವಾದಿಸಿದ್ದಾರೆ. ಈ ಮಸೂದೆಯನ್ನು ಜನವರಿ 29 ರಂದು ಪರಿಚಯಿಸಲಾಗಿದ್ದು, ಇದನ್ನು ಅಂಗೀಕರಿಸುವ ಕುರಿತು ಡೆಮೋಕ್ರಾಟ್ ಮತ್ತು ರಿಪಬ್ಲಿಕನ್ನರ ನಡುವೆ ಭಿನ್ನಾಭಿಪ್ರಾಯವಿದೆ. ಈ ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿ ಯುಎಸ್ ಸೆನೆಟ್ ಈ ತಿಂಗಳ ಆರಂಭದಲ್ಲಿ ಯಾವುದೇ ನಿರ್ಣಯಕ್ಕೆ ಕೈಗೊಳ್ಳಲಾಗದೆ ಐದು ವಾರಗಳ ಕಾಲ ಮುಂದೂಡಲ್ಪಟ್ಟಿತು.
ಈ ಮಸೂದೆಯು ಇ- ಮೇಲ್ ಇನ್ ಮತಪತ್ರಗಳ ಮೇಲಿನ ನಿರ್ಬಂಧಗಳನ್ನು ಪ್ರಸ್ತಾಪಿಸುತ್ತದೆ. ಅನಾರೋಗ್ಯ, ಅಂಗವೈಕಲ್ಯ, ಮಿಲಿಟರಿ ಸೇವೆ ಅಥವಾ ಪ್ರಯಾಣವನ್ನು ಒಳಗೊಂಡ ಸಂದರ್ಭಗಳಿಗೆ ಮಾತ್ರ ಇದಕ್ಕೆ ಅನುಮತಿಸುವುದಾಗಿ ತಿಳಿಸಿದೆ. ಅಲ್ಲದೇ ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ನಿರ್ದೇಶಿಸುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮತ ಚಲಾಯಿಸಲು, ಮತದಾರನಾಗಿ ನೋಂದಾಯಿಸಲು ಬಯಸಿದರೆ ಕಡ್ಡಾಯವಾಗಿ ಮತದಾರ ಯುನೈಟೆಡ್ ಸ್ಟೇಟ್ಸ್ ನಾಗರಿಕರಾಗಿರಬೇಕು ಎಂದು ಮಸೂದೆ ಹೇಳಿದೆ.