ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚುನಾವಣಾ ಸೋಲಿನ 10 ವರ್ಷಗಳ ಅನಂತರ ಇರಾನ್‌ನ ಮಧ್ಯಂತರ ಪರಮೋಚ್ಛ ನಾಯಕನಾದ ಅಲಿರೆಜಾ ಅರಾಫಿ; ಏನಿವರ ಹಿನ್ನೆಲೆ?

ಹತ್ತು ವರ್ಷಗಳ ಹಿಂದೆ ಚುನಾವಣೆಯಲ್ಲಿ ಸೋತಿದ್ದ ಅಯತೊಲ್ಲಾ ಅಲಿರೆಜಾ ಅರಾಫಿ ಅವರು ಈಗ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಬಳಿಕ ಮಧ್ಯಂತರ ನಾಯಕನಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಧರ್ಮಗುರು ಆಗಿರುವ ಇವರು ಖಮೇನಿ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆ ಇದೆಯೇ? ಇಲ್ಲಿದೆ ಮಾಹಿತಿ.

ಖಮೇನಿ ಉತ್ತರಾಧಿಕಾರಿ ಆಗ್ತಾರಾ ಅಲಿರೆಜಾ ಅರಾಫಿ ?

ಸಂಗ್ರಹ ಚಿತ್ರ -

ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ (Iran Supreme Leader) ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ನಿಧನದ ಬಳಿಕ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ (Alireza Arafi) ಅವರು ಮಧ್ಯಂತರ ನಾಯಕನಾಗಿ (interim leader) ಆಯ್ಕೆಯಾಗಿದ್ದಾರೆ. ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಶನಿವಾರ ಬೆಳಗ್ಗೆ ಟೆಹ್ರಾನ್ (tehran) ಮೇಲೆ ನಡೆಸಿದ ದಾಳಿಯಲ್ಲಿ ಖಮೇನಿ ಅವರು ಸಾವನ್ನಪ್ಪಿದ್ದಾರೆ. ಅವರ ಸಾವಿನ ಬಳಿಕ ಅವರ ಉತ್ತರಾಧಿಕಾರಿ ಯಾರಾಗ್ತಾರೆ ಎನ್ನುವ ಕುತೂಹಲದ ಮಧ್ಯೆ ಇದೀಗ ಅರಾಫಿ ಅವರನ್ನು ಮಧ್ಯಂತರ ನಾಯಕನಾಗಿ ಆಯ್ಕೆ ಮಾಡಲಾಗಿದೆ.

ಅಯತೊಲ್ಲಾ ಅರಾಫಿ ಯಾರು?

ಅಲಿ ಖಮೇನಿ ಹತ್ಯೆಯ ಬಳಿಕ ಇರಾನ್ ನಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ ತಾತ್ಕಾಲಿಕವಾಗಿ ದೇಶದ ಆಡಳಿತವನ್ನು ಮುನ್ನಡೆಸಲು ಅರಾಫಿ ಅವರನ್ನು ಮಧ್ಯಂತರ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಮ್-ಹೊಸೇನ್ ಮೊಹ್ಸೆನಿ-ಎಜೆಯ್ ಅವರು ನಾಯಕತ್ವ ಮಂಡಳಿಯನ್ನು ರಚಿಸಿದ್ದಾರೆ. ತಜ್ಞರ ಸಭೆಯು ಶಾಶ್ವತ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ಇವರು ಸರ್ವೋಚ್ಚ ನಾಯಕನ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ.

ಅಯತೊಲ್ಲಾ ಅಲಿ ಖಮೇನಿ ಹತ್ಯೆ: ಇರಾನ್‌ನ ಸರ್ವೋಚ್ಚ ನಾಯಕನ ಉತ್ತರಾಧಿಕಾರಿ ಯಾರು?

ಇರಾನ್‌ನ ಯಾಜ್ದ್ ಪ್ರಾಂತ್ಯದ ಮೇಬೋಡ್‌ನಲ್ಲಿ 1959ರಲ್ಲಿ ಜನಿಸಿದ ಅರಾಫಿ, ಅರೇಬಿಕ್ ಮತ್ತು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಸುಮಾರು ೨೪ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರು ಜನಪ್ರಿಯತೆ ಗಳಿಸುವುದಕ್ಕಿಂತ ಹೆಚ್ಚು ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತಾರೆ.

2016ರಲ್ಲಿ ನಡೆದ ತಜ್ಞರ ಸಭೆಯ ಚುನಾವಣೆಯಲ್ಲಿ ಟೆಹ್ರಾನ್‌ನಲ್ಲಿ 16 ಸ್ಥಾನಗಳಿಗೆ ಸ್ಪರ್ಧಿಸಿದ್ದ ಅಕ್ಬರ್ ಹಶೆಮಿ ರಫ್ಸಂಜಾನಿ ಅವರ ಬೆಂಬಲಿತ ಪಕ್ಷವು ಭರ್ಜರಿ ಜಯಗಳಿಸಿತು. 16 ಸ್ಥಾನಗಳಲ್ಲಿ 15 ಸ್ಥಾನಗಳನ್ನು ಅದು ತನ್ನದಾಗಿಸಿಕೊಂಡಿತ್ತು. ಆಗ ಸಂಪ್ರದಾಯವಾದಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರಾಫಿಗೆ ಯಾವುದೇ ಸ್ಥಾನ ದೊರೆಯಲಿಲ್ಲ. ಈ ಚುನಾವಣೆಯಲ್ಲಿ ಸೋತರೂ ಅವರು ರಾಜಕೀಯ ಜೀವನದಲ್ಲಿ ಹಿನ್ನಡೆಯನ್ನು ಅನುಭವಿಸಲಿಲ್ಲ. 2024ರ ಚುನಾವಣೆಗೂ ಮೊದಲೇ ಅವರು 2021 ರ ಜೂನ್ ತಿಂಗಳಲ್ಲಿ ಮಧ್ಯಂತರ ಉಪಚುನಾವಣೆಯ ಮೂಲಕ ತಜ್ಞರ ಸಭೆಯನ್ನು ಸೇರಿಕೊಂಡರು.

2009 ರಿಂದ 2018 ರವರೆಗೆ ಶಿಯಾ ವಿದ್ಯಾರ್ಥಿ ವೇತನವನ್ನು ವಿದೇಶಗಳಿಗೆ ರಫ್ತು ಮಾಡಲು ಮೀಸಲಾಗಿರುವ ಕೋಮ್ ಮೂಲದ ಸಂಸ್ಥೆಯಾದ ಅಲ್-ಮುಸ್ತಫಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಅಧ್ಯಕ್ಷರಾಗಿದ್ದ ಅರಾಫಿ, ತಮ್ಮ ಅಧಿಕಾರಾವಧಿಯಲ್ಲಿ ಈ ಸಂಸ್ಥೆಯು ಹತ್ತಾರು ಮಿಲಿಯನ್ ಜನರನ್ನು ಶಿಯಾ ಇಸ್ಲಾಂಗೆ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಸಿದ್ಧಾಂತವನ್ನು ಪ್ರಚಾರ ಮಾಡಲು ಕೃತಕ ಬುದ್ದಿ ಮತ್ತೆಯನ್ನು ಅವರು ಬೆಂಬಲಿಸಿದ್ದರು.

ಇರಾನ್‌ನ ಸಂಪೂರ್ಣ ಇಸ್ಲಾಮಿಕ್ ಸೆಮಿನರಿ ವ್ಯವಸ್ಥೆಯ ಮುಖ್ಯಸ್ಥರಾಗಿ ಬಡ್ತಿ ಪಡೆದ ಅವರು ದೇಶದ ಧಾರ್ಮಿಕ ಶಾಲೆಗಳ ಜಾಲವನ್ನು ಮೇಲ್ವಿಚಾರಣೆ ವಹಿಸಿಕೊಂಡರು. ಬಳಿಕ ಖಮೇನಿ ಅವರನ್ನು ಕಾನೂನುಗಳು ಮತ್ತು ಚುನಾವಣಾ ಅಭ್ಯರ್ಥಿಗಳನ್ನು ಪರಿಶೀಲಿಸುವ ಸಂಸ್ಥೆಯಾದ ಗಾರ್ಡಿಯನ್ ಕೌನ್ಸಿಲ್‌ಗೆ ಸೇರಿಸಿಕೊಂಡರು.

ನಿಲ್ಲದ ಸಂಘರ್ಷ; ಕುವೈತ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ

2024ರ ಮಾರ್ಚ್ ನಲ್ಲಿ ನಡೆದ ತಜ್ಞರ ಸಭೆಯ ಚುನಾವಣೆಯಲ್ಲಿ ಅರಾಫಿ ಕೇವಲ ಅಭ್ಯರ್ಥಿಯಾಗಿ ಮಾತ್ರವಲ್ಲ ಮುಂಚೂಣಿಯಲ್ಲಿ ಸ್ಪರ್ಧಿಸಲು ಸಾಕಷ್ಟು ಸಾಂಸ್ಥಿಕ ಬಂಡವಾಳವನ್ನು ಸಂಗ್ರಹಿಸಿದ್ದರು. ಇದರ ಪರಿಣಾಮವೇ ಟೆಹ್ರಾನ್‌ನಲ್ಲಿ ಅವರು ಅತಿ ಹೆಚ್ಚು ಮತ ಗಳಿಸಿದರು. ಬಳಿಕ ಅಸೆಂಬ್ಲಿಯೊಳಗೆ ಅವರು ಎರಡನೇ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅವರನ್ನು ಖಮೇನಿ ಅವರ ಉತ್ತರಾಧಿಕಾರಿ ಎನ್ನುವಂತೆಯೂ ನೋಡಲಾಯಿತು.