ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Khawaja Asif: ಎಲ್ಲಾ ಆಫ್ಘನ್ನರು ಮನೆಗೆ ಮರಳಿ, ನಮ್ಮ ಭೂಮಿ 250 ಮಿಲಿಯನ್ ಪಾಕಿಸ್ತಾನಿಗಳಿಗೆ ಮಾತ್ರ ; ರಕ್ಷಣಾ ಸಚಿವನಿಂದ ಘೋಷಣೆ

ಪಾಕಿಸ್ತಾನ (Pakistan) ಹಾಗೂ ಅಫ್ಘಾನಿಸ್ತಾನದ ನಡುವೆ ನಡೆಯುತ್ತಿರುವ ಕದನ ಮತ್ತೆ ಮುಂದುವರಿದಿದೆ. ಈ ನಡುವೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಶುಕ್ರವಾರ ಪಾಕಿಸ್ತಾನದಲ್ಲಿ ವಾಸಿಸುವ ಎಲ್ಲಾ ಆಫ್ಘನ್ನರು ತಮ್ಮ ತಾಯ್ನಾಡಿಗೆ ಮರಳಬೇಕು ಎಂದು ಹೇಳಿದ್ದು, ಅಫ್ಘಾನಿಸ್ತಾನದೊಂದಿಗಿನ ಹಳೆಯ ಸಂಬಂಧಗಳ ಯುಗ ಮುಗಿದಿದೆ ಎಂದು ಘೋಷಿಸಿದ್ದಾರೆ.

ಎಲ್ಲಾ ಆಫ್ಘನ್ನರು ಮನೆಗೆ ಮರಳಿ ; ರಕ್ಷಣಾ ಸಚಿವನಿಂದ ಘೋಷಣೆ

-

Vishakha Bhat Vishakha Bhat Oct 18, 2025 10:07 AM

ಇಸ್ಲಾಮಾಬಾದ್‌: ಪಾಕಿಸ್ತಾನ (Pakistan) ಹಾಗೂ ಅಫ್ಘಾನಿಸ್ತಾನದ ನಡುವೆ ನಡೆಯುತ್ತಿರುವ ಕದನ ಮತ್ತೆ ಮುಂದುವರಿದಿದೆ. ಈ ನಡುವೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಶುಕ್ರವಾರ ಪಾಕಿಸ್ತಾನದಲ್ಲಿ ವಾಸಿಸುವ ಎಲ್ಲಾ ಆಫ್ಘನ್ನರು ತಮ್ಮ ತಾಯ್ನಾಡಿಗೆ ಮರಳಬೇಕು ಎಂದು ಹೇಳಿದ್ದು, ಅಫ್ಘಾನಿಸ್ತಾನದೊಂದಿಗಿನ ಹಳೆಯ ಸಂಬಂಧಗಳ ಯುಗ ಮುಗಿದಿದೆ ಎಂದು ಘೋಷಿಸಿದ್ದಾರೆ. ಪಾಕಿಸ್ತಾನದ ನೆಲದಲ್ಲಿ ವಾಸಿಸುವ ಎಲ್ಲಾ ಆಫ್ಘನ್ನರು ತಮ್ಮ ತಾಯ್ನಾಡಿಗೆ ಮರಳಬೇಕು; ಅವರು ಈಗ ತಮ್ಮದೇ ಆದ ಸರ್ಕಾರವನ್ನು ಹೊಂದಿದ್ದಾರೆ, ಕಾಬೂಲ್‌ನಲ್ಲಿ ತಮ್ಮದೇ ಆದ ಕ್ಯಾಲಿಫೇಟ್ ಅನ್ನು ಹೊಂದಿದ್ದಾರೆ" ಎಂದು ಆಸಿಫ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಭೂಮಿ ಮತ್ತು ಸಂಪನ್ಮೂಲಗಳು 250 ಮಿಲಿಯನ್ ಪಾಕಿಸ್ತಾನಿಗಳಿಗೆ ಸೇರಿವೆ ಎಂದರು.

ಎರಡು ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಕಡಿಮೆಯಾಗಿ ಸ್ಥಳೀಯ ಸಮಯ ಸಂಜೆ 6 ಗಂಟೆಗೆ 48 ಗಂಟೆಗಳ ಕದನ ವಿರಾಮ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ. ಡುರಾಂಡ್ ರೇಖೆಯ ಉದ್ದಕ್ಕೂ ಇರುವ ಪಕ್ತಿಕಾ ಪ್ರಾಂತ್ಯದ ಹಲವಾರು ಜಿಲ್ಲೆಗಳಲ್ಲಿ ಇಸ್ಲಾಮಾಬಾದ್ ವೈಮಾನಿಕ ದಾಳಿ ನಡೆಸಿದೆ ಎಂದು ತಾಲಿಬಾನ್ ಹೇಳಿದೆ. ಪಾಕಿಸ್ತಾನದ ವಾಯುದಾಳಿಯ ನಂತರ, ಹಿರಿಯ ತಾಲಿಬಾನ್ ಅಧಿಕಾರಿಯೊಬ್ಬರು ಎರಡೂ ಕಡೆಯವರ ನಡುವಿನ ಕದನ ವಿರಾಮ "ಮುರಿದುಹೋಗಿದೆ" ಎಂದು ಹೇಳಿದ್ದಾರೆ.

ಪಾಕಿಸ್ತಾನವು ಹಿಂದಿನಂತೆ ಕಾಬೂಲ್ ಜೊತೆ ಸಂಬಂಧವನ್ನು ಉಳಿಸಿಕೊಳ್ಳಲು ಇನ್ನು ಮುಂದೆ ಸಾಧ್ಯವಿಲ್ಲ" ಎಂದು ಆಸಿಫ್ ಬರೆದಿದ್ದಾರೆ, ಇಸ್ಲಾಮಾಬಾದ್ "ವರ್ಷಗಳಿಂದ ತಾಳ್ಮೆಯಿಂದ" ವರ್ತಿಸಿದೆ ಆದರೆ ಅಫ್ಘಾನಿಸ್ತಾನದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ ಎಂದು ಅವರು ಹೇಳಿದರು. ಕಾಬೂಲ್‌ನಲ್ಲಿರುವ ತಾಲಿಬಾನ್ ಸರ್ಕಾರವು "ಭಾರತದ ಪ್ರಾಕ್ಸಿ"ಯಂತೆ ಕೆಲಸ ಮಾಡುತ್ತಿದೆ ಮತ್ತು ನವದೆಹಲಿ ಮತ್ತು ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಜೊತೆ ಮೈತ್ರಿ ಮಾಡಿಕೊಂಡು ಪಾಕಿಸ್ತಾನದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಆಸಿಫ್ ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Pakistan-Taliban: ಪಾಕ್-ಅಫ್ಘನ್ ಗಡಿ ಬಿಕ್ಕಟ್ಟು; ಇಂದು ಉಭಯ ದೇಶಗಳ ನಡುವೆ ನಿರ್ಣಾಯಕ ಮಾತುಕತೆ

ಕಳೆದವಾರವಷ್ಟೇ ಕಾಬೂಲ್(Kabul) ಮೇಲೆ ಪಾಕ್ ವೈಮಾನಿಕ ದಾಳಿ ನಡೆಸಿದ್ದು, ಪಾಕ್ ಮತ್ತು ಅಫ್ಘಾನಿಸ್ತಾನದ ಮಧ್ಯೆ ಉದ್ವಿಗ್ನತೆ ನಿರ್ಮಾಣವಾಗಿತ್ತು. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಈ ದಾಳಿಗಳು ಸಂಭವಿಸಿವೆ. ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿವ ಮುನ್ನವೇ ನಡೆದ ಈ ದಾಳಿಗಳಿಂದ, ಉಭಯ ದೇಶಗಳಲ್ಲಿ ಭಾರಿ ಸಾವು ನೋವುಗಳು ಸಂಭವಿಸಿದೆ.