ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UK digital ID scheme: ಬ್ರಿಟಿಷ್ ನಾಗರಿಕರಿಗೆ ಆಧಾರ್ ಕಾರ್ಡ್; ಪ್ರಧಾನಿ ಸ್ಟಾರ್ಮರ್ ಯೋಜನೆ ಏನು?

ಭಾರತಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಆಧಾರ್ ಐಡಿ ಕಾರ್ಡ್ ವ್ಯವಸ್ಥೆಯನ್ನು ಬಹು ದೊಡ್ಡ ಯಶಸ್ಸು ಎಂದು ಹೊಗಳಿದ್ದರು. ಇದೀಗ ಆಧಾರ್ ಮಾದರಿಯ ಡಿಜಿಟಲ್ ಐಡಿಯನ್ನು ಇದೀಗ ಬ್ರಿಟಿಷ್ ನಾಗರಿಕರಿಗೆ ಪರಿಚಯಿಸಲು ಅವರು ಮುಂದಾಗಿದ್ದಾರೆ.

ಬ್ರಿಟಿಷ್ ನಾಗರಿಕರಿಗೆ ಆಧಾರ್ ಕಾರ್ಡ್?

-

ಲಂಡನ್: ಬ್ರಿಟಿಷ್ ನಾಗರಿಕರಿಗೆ ಆಧಾರ್ ಕಾರ್ಡ್ (Aadhaar card) ಪರಿಚಯಿಸಲು ಪ್ರಧಾನಿ ಕೀರ್ ಸ್ಟಾರ್ಮರ್ (British Prime Minister Keir Starmer) ಮುಂದಾಗಿದ್ದಾರೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅವರು ಭಾರತೀಯರಿಗೆ ನೀಡಲಾಗಿರುವ ಆಧಾರ್ ಐಡಿ ಕಾರ್ಡ್ ವ್ಯವಸ್ಥೆಯನ್ನು ಬಹು ದೊಡ್ಡ ಯಶಸ್ಸು ಎಂದು ಹೊಗಳಿದ್ದರು. ಇದೀಗ ಇದೇ ಮಾದರಿಯಲ್ಲಿ ಬ್ರಿಟಿಷ್ ನಾಗರಿಕರಿಗೆ ಡಿಜಿಟಲ್ ಐಡಿಯನ್ನು (UK digital ID scheme) ನೀಡಲು ಯೋಜನೆ ರೂಪಿಸುತ್ತಿದ್ದಾರೆ. ಬ್ರಿಟನ್‌ನ ಯೋಜಿತ ಡಿಜಿಟಲ್ ಐಡಿ ಬ್ರಿಟ್ ಕಾರ್ಡ್ (Brit Card) ಎನ್ನುವ ಹೆಸರು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಎರಡು ದಿನಗಳ ಪ್ರವಾಸಕ್ಕಾಗಿ ಮುಂಬೈಗೆ ಬಂದಿದ್ದ ಸ್ಟಾರ್ಮರ್ ಈ ವೇಳೆ ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಯುಐಡಿಎಐ ಅಧ್ಯಕ್ಷ ನಂದನ್ ನಿಲೇಕಣಿ ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಿದ್ದರು. ಈ ವೇಳೆ ಅವರು ಭಾರತದಲ್ಲಿ ಚಾಲ್ತಿಯಲ್ಲಿರುವ ಆಧಾರ್ ಕಾರ್ಡ್‌ನಂತಹ ಡಿಜಿಟಲ್ ಐಡಿ ವ್ಯವಸ್ಥೆಯನ್ನು ಯುನೈಟೆಡ್ ಕಿಂಗ್‌ಡಂನಲ್ಲಿ ಶಾಲಾ ಅರ್ಜಿಗಳು, ಅಡಮಾನಗಳು ಮತ್ತು ಚಾಲನಾ ಪರವಾನಗಿಗಳಿಗೆ ಅನ್ವಯಿಸುವಂತೆ ಜಾರಿಗೆ ತರಬಹುದು ಎಂದು ಹೇಳಿದ್ದರು.

ಭಾರತದಲ್ಲಿ 15 ವರ್ಷಗಳ ಹಿಂದೆ ಪರಿಚಯಿಸಲಾಗಿರುವ ಆಧಾರ್ ಕಾರ್ಡ್ ಇಂದು ಬಹುತೇಕ ಎಲ್ಲರಿಗೂ ಪ್ರಮುಖ ಗುರುತಿನ ದಾಖಲೆಯಾಗಿದೆ. ವಿವಿಧ ಕಲ್ಯಾಣ ಮತ್ತು ಸೇವೆಗಳನ್ನು ಪಡೆಯಲು ಆಧಾರ್ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಿದರೆ, 'ಬ್ರಿಟ್ ಕಾರ್ಡ್' ಅಕ್ರಮ ವಲಸೆಯನ್ನು ತಡೆಯುವ ಗುರಿಯನ್ನು ಹೊಂದಿದೆ. ಆದರೂ ಗೌಪ್ಯತೆಯ ಕಾಳಜಿ ಬಗ್ಗೆ ಆತಂಕ ಕೇಳಿ ಬರುತ್ತಿದೆ.

ಏನಿದು ಬ್ರಿಟ್ ಕಾರ್ಡ್ ?

ಅಕ್ರಮ ವಲಸೆಯನ್ನು ನಿರ್ವಹಿಸಲು ಡಿಜಿಟಲ್ ಗುರುತಿನ ಚೀಟಿಗಳು ಕಡ್ಡಾಯ ಮಾಡಲಾಗುತ್ತದೆ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಇತ್ತೀಚೆಗೆ ಘೋಷಿಸಿದ್ದರು. 2029ರ ವೇಳೆಗೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ನೇತೃತ್ವದ ಸಂಸತ್ತಿನ ಅವಧಿಯ ಅಂತ್ಯದ ವೇಳೆಗೆ ಡಿಜಿಟಲ್ ಐಡಿಗಳು ಇಂಗ್ಲೆಂಡ್‌ನಲ್ಲಿ ಕಡ್ಡಾಯ ಮಾಡುವ ಯೋಜನೆ ಹೊಂದಲಾಗಿದೆ.

ಅನಿಯಮಿತ ವಲಸೆ ಬ್ರಿಟನ್‌ನ ಬಹುದೊಡ್ಡ ಸವಾಲಾಗಿದ್ದು, ಇದನ್ನು ಎದುರಿಸಲು ಇರುವುದು ಇದೊಂದೇ ದಾರಿ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಜನರು ದಕ್ಷಿಣ ಇಂಗ್ಲೆಂಡ್ ಮತ್ತು ಉತ್ತರ ಫ್ರಾನ್ಸ್‌ ಅನ್ನು ಬೇರ್ಪಡಿಸುವ ಕಿರಿದಾದ ಸಮುದ್ರ ದಾರಿಯಲ್ಲಿ ಸಣ್ಣ ದೋಣಿಗಳ ಮೂಲಕ ದೇಶವನ್ನು ಪ್ರವೇಶಿಸುತ್ತಿದ್ದಾರೆ.

ಇದನ್ನೂ ಓದಿ: Bomb Treat: ರೈಲಿನಲ್ಲಿ ಸೀಟ್ ಸಿಗಲಿಲ್ಲವೆಂದು ಹುಸಿ ಬಾಂಬ್ ಕರೆ ಮಾಡಿದ ಕಿಡಿಗೇಡಿ ಸಹೋದರರು!

ಭಾರತದ ಆಧಾರ್ ವ್ಯವಸ್ಥೆ ದತ್ತಾಂಶ ರಕ್ಷಣೆ ಮತ್ತು ಸೇವಾ ಸಂಪರ್ಕದ ಕುರಿತು ವಿವಾದಗಳನ್ನು ಹೊಂದಿದ್ದರೂ ಆಡಳಿತಾತ್ಮಕ ಮತ್ತು ಭ್ರಷ್ಟಾಚಾರದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಉಳಿಸಿದೆ. ಡಿಜಿಟಲ್ ಐಡಿ ಯೋಜನೆಯಲ್ಲಿ ಭಾರತದ ಅನುಭವವು ಇಂಗ್ಲೆಂಡ್‌ಗೆ ಅಮೂಲ್ಯವಾದ ಪಾಠಗಳನ್ನು ನೀಡುತ್ತದೆ. ಆದರೆ ಬ್ರಿಟ್ ಕಾರ್ಡ್ ಆಧಾರ್ ರೀತಿಯಲ್ಲಿ ಕಾರ್ಯ ನಿರ್ವಹಿಸಬಹುದೇ ಎನ್ನುವ ಕಳವಳಗಳಿವೆ ಎಂದು ಸ್ಟಾರ್ಮರ್ ಹೇಳಿದ್ದರು.

ಬ್ರಿಟಿಷ್ ಡಿಜಿಟಲ್ ಐಡಿ ಬಯೋಮೆಟ್ರಿಕ್ ಡೇಟಾವನ್ನು ಒಳಗೊಂಡಿರುವುದಿಲ್ಲ. ಇದು ಅಕ್ರಮ ಕೆಲಸವನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಯುಕೆ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.