ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಿಳಿ ಬೆಡ್‌ಶೀಟ್‌ಗೆ ಗುಡ್‌ಬೈ; ಇನ್ನು ರೈಲಿನ ಎಸಿ ಕೋಚ್‌ಗಳಲ್ಲಿ ಸಿಗಲಿದೆ ಜೈಪುರದ ಕಲಾತ್ಮಕ ಬ್ಲಾಂಕೆಟ್‌

ಬಹಳ ಹಿಂದಿನಿಂದಲೂ ರೈಲ್ವೆಯಲ್ಲಿರುವ ಸೌಲಭ್ಯಗಳ ಬಗ್ಗೆ ಅಸಮಾಧಾನ ಇದೆ. ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ ಎಂಬ ಆರೋಪಗಳು ಪ್ರಯಾಣಿಕರಿಂದ ಕೇಳಿ ಬರುತ್ತಲೇ ಇದೆ. ಈ ಎಲ್ಲ ಸಮಸ್ಯೆಗಳ ನಡುವೆ ಭಾರತೀಯ ರೈಲ್ವೆಯು ತನ್ನ ಪ್ರಯಾಣಿಕರಿಗೆ ಹೊಸ ಸೌಕರ್ಯವನ್ನು ಕಲ್ಪಿಸಿಕೊಡುತ್ತಿದೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ರೈಲ್ವೆಗೂ ಬಂತು  ಜೈಪುರದ ಕಲರ್ ಫುಲ್ ಬ್ಲಾಂಕೆಟ್‌

ಸಂಗನೆರಿ ಮುದ್ರಣ ಬ್ಲಾಂಕೇಟ್‌ -

Profile Sushmitha Jain Oct 18, 2025 7:20 PM

ಜೈಪುರ: ರೈಲ್ವೆ ಪ್ರಯಾಣ ಇದೀಗ ಆಕರ್ಷಕ ಜತೆಗೆ ಮತ್ತಷ್ಟು ಆರಾಮದಾಯಕವಾಗಲಿದೆ. ಭಾರತೀಯ ರೈಲ್ವೆಯು (Indian Railway) ಹೊಸ ಸೌಕರ್ಯವನ್ನು ಪರಿಚಯಿಸುತ್ತಿದ್ದು, ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಾಜಸ್ಥಾನ (Rajasthan)ದ ಪರಂಪರೆಯ ಸಂಗನೆರಿ(Sanganeri) ಮುದ್ರಣ ಹೊಂದಿರುವ ಹೊಸ ಬ್ಲಾಂಕೇಟ್‌(Blanket)ಗಳನ್ನು ನೀಡಲಿದೆ.
ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಯಪುರ(Jaipur)ದ ಖಾತಿಪುರಾ(Khatipura) ರೈಲ್ವೆ ನಿಲ್ದಾಣದಲ್ಲಿ ಆರಂಭಿಸಲಾಗಿದೆ. ಕೆಲ ಆಯ್ದ ರೈಲುಗಳಲ್ಲಿ ಇದನ್ನು ಪರೀಕ್ಷಿಸಿದ ಬಳಿಕ, ದೇಶಾದ್ಯಂತೆ ಈ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಸ್ವಚ್ಛತೆ ಮತ್ತು ಕಲಾತ್ಮಕ ಸ್ಪರ್ಶ

ಹಿಂದಿನ ಬಿಳಿ ಬ್ಲಾಂಕೆಟ್‌ಗಳ ಅಸ್ವಚ್ಛತೆಯ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬಂದ ಹಿನ್ನೆಲೆ ಈ ಹೊಸ ಸೌಲಭ್ಯ ಕೈಗೊಳ್ಳಲಾಗಿದೆ. ಮೊದಲ ದಿನವೇ, ರಾತ್ರಿ 8:45ಕ್ಕೆ ಹೊರಟ ಜಯಪುರ–ಅಹಮದಾಬಾದ್ (ಅಸರ್ವಾ) ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ಈ ಹೊಸ ಸಂಗನೆರಿ ಮುದ್ರಣ ಹೊಂದಿರುವ ಕವರ್‌ಗಳನ್ನು ನೀಡಲಾಗಿದೆ.

ಈ ಸುದ್ದಿಯನ್ನು ಓದಿ: Viral News: 48 ವರ್ಷಗಳ ಹಿಂದೆ ಗೆಳತಿಗೆ ಚಾಕುವಿನಿಂದ ಇರಿದಿದ್ದ ವ್ಯಕ್ತಿಗೆ ಜಾಮೀನು; ವಿಚಾರಣೆ ಎದುರಿಸಲಿರುವ 81ರ ವೃದ್ಧ

ಸಂಸ್ಕೃತಿಯ ಅನಾವರಣಕ್ಕೆ ವೇದಿಕೆಯಾದ ರೈಲ್ವೆ

ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw), "ತೊಳೆಯಬಹುದಾದ ಈ ಹೊಸ ಬ್ಲಾಂಕೆಟ್‌ಗಳು, ದೀರ್ಘಕಾಲಿಕವಾಗಿ ಬಳಕೆ ಮಾಡಬಹುದಾಗಿದೆ ಮತ್ತು ನಿರ್ವಹಣೆಯೂ ಸುಲಭ. ನಮ್ಮ ಮನೆಯಲ್ಲಿ ಹೇಗೆ ಕವರ್ ಹಾಕಿದ ಬ್ಲಾಂಕೆಟ್‌ಗಳನ್ನು ಬಳಸುತ್ತೇವೋ, ಅದೇ ಅನುಭವ ರೈಲ್ವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ" ಎಂದರು.

ಅಲ್ಲದೇ, "ಈ ಯೋಜನೆಯು ಕೇವಲ ಪ್ರಯಾಣಿಕರ ಕಂಫರ್ಟ್‌ಗಾಗಿ ಮಾತ್ರವಲ್ಲದೇ, ಭಾರತೀಯ ಕರಕುಶಲತೆ ಮತ್ತು ಜವಳಿ ಪರಂಪರೆಗೂ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದೆ. ಇದು ಯಶಸ್ವಿಯಾದರೆ ರಾಷ್ಟ್ರವ್ಯಾಪಿ ಈ ಯೋಜನೆಯನ್ನು ವಿಸ್ತರಿಸಲಾಗುವುದು ಮತ್ತು ಬೇರೆ ರಾಜ್ಯಗಳ ಸಾಂಪ್ರದಾಯಿಕ ಮುದ್ರಣಗಳನ್ನು ಕೂಡ ರೈಲ್ವೆಯಲ್ಲಿ ಅನಾವರಣಗೊಳಿಸುವ ಉದ್ದೇಶ ಇದೆ" ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ

ಈ ಹೊಸ ಉಪ್ರಕಮಕ್ಕೆ ಹಲವು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ರೈಲ್ವೆಯ ಈ ಹೊಸ ಬದಲಾವಣೆಯು ಹೆಚ್ಚು ಆರಾಮದಾಯಕವಾಗಿದೆ ಎಂದಿದ್ದಾರೆ. ಒಬ್ಬ ಪ್ರಯಾಣಿಕ "ಈ ಹಿಂದೆ ಕವರ್‌ಗಳಿಲ್ಲದೇ ಬ್ಲಾಂಕೆಟ್‌ಗಳನ್ನು ನೀಡಲಾಗುತ್ತಿತ್ತು. ಇದೀಗ ಸ್ವಚ್ಛ ಮುತ್ತು ಆಕರ್ಷಕ ಮುದ್ರಣ ಹೊಂದಿರುವ ಬ್ಲಾಂಕೆಟ್ ನೀಡಲಾಗುತ್ತಿದ್ದು, ಇದು ಒಳ್ಳೆಯ ಬದಲಾವಣೆ," ಎಂದರೆ, ಮತ್ತೊಬ್ಬರು, “ಅಲರ್ಜಿ ಕಾರಣದಿಂದ ವೇಳೆ ನಾನು ನನ್ನದೇ ಬ್ಲಾಂಕೆಟ್ ತರುತ್ತಿದ್ದೆ. ಈ ಹೊಸ ಉಪಕ್ರಮವು ರೈಲ್ವೆ ಇಲಾಖೆ ಸ್ವಚ್ಛತೆಯ ಕಡೆ ಗಮನ ಹರಿಸುತ್ತಿದೆ ಎಂಬ ಭರವಸೆ ನೀಡಿದೆ” ಎಂದಿದ್ದಾರೆ.

ಇನ್ನೂ ಈ ಬ್ಲಾಂಕೆಟ್ ಉಪಕ್ರಮದೊಂದಿಗೆ, ರೈಲ್ವೆ ಸಚಿವರು ವಾಯವ್ಯ ರೈಲ್ವೆ ವ್ಯಾಪ್ತಿಯ 65 ಸಣ್ಣ-ಮಧ್ಯಮ ನಿಲ್ದಾಣಗಳಲ್ಲಿ 100 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಿದ್ದಾರೆ.