Imran Khan:" ಅಸೀಮ್ ಮುನೀರ್ ಮಾನಸಿಕ ಅಸ್ವಸ್ಥ"; ಜೈಲಿನಲ್ಲಿರುವ ಇಮ್ರಾನ್ ಖಾನ್‌ಗೆ ನೀಡ್ತಾ ಇರೋ ಚಿತ್ರಹಿಂಸೆ ಏನು?
ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಿಟಿಐ ಸಂಸ್ಥಾಪಕ ಇಮ್ರಾನ್ ಖಾನ್ ಮಂಗಳವಾರ ಅಡಿಯಾಲಾ ಜೈಲಿನಲ್ಲಿದ್ದು, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಇತರ ಅಪರಾಧಗಳ ಜೊತೆಗೆ ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಇಮ್ರಾನ್ ಖಾನ್ ಹಾಗೂ ಅಸೀಮ್ ಮುನೀರ್ -
ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಮತ್ತು ಪಿಟಿಐ ಸಂಸ್ಥಾಪಕ ಇಮ್ರಾನ್ ಖಾನ್ ಮಂಗಳವಾರ ಅಡಿಯಾಲಾ ಜೈಲಿನಲ್ಲಿದ್ದು, ಭ್ರಷ್ಟಾಚಾರಕ್ಕೆ (Imran Khan) ಸಂಬಂಧಿಸಿದ ಇತರ ಅಪರಾಧಗಳ ಜೊತೆಗೆ ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಕೆಲ ದಿನಗಳಿಂದ ಇಮ್ರಾನ್ ಜೈಲಿನಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿತು. ಇದೀಗ ಇಮ್ರಾನ್ ತನ್ನ ಸಹೋದರಿಯೊಂದಿಗೆ ಮಾತನಾಡಿದ್ದ ಆಘಾತಕಾರಿ ವಿಷಯಗಳು ಬಹಿರಂಗವಾಗಿದೆ.
ಸೇನಾ ಸಂಸ್ಥೆಯು ನನ್ನ ವಿರುದ್ಧ ಸಾಧ್ಯವಾದದ್ದನ್ನೆಲ್ಲ ಮಾಡಿದೆ. ಈಗ ಅವರಿಗೆ ಉಳಿದಿರುವುದು ನನ್ನನ್ನು ಕೊಲ್ಲುವುದೊಂದೇ" ಎಂದು ಖಾನ್ ಹೇಳಿದ್ದಾರೆ ಎಂದು ಇಮ್ರಾನ್ ಖಾನ್ ತಮ್ಮ ಸಹೋದರಿ ಉಜ್ಮಾ ಖಾನ್ ತನ್ನ ಸಹೋದರ ಹೇಳಿದ್ದಾಗಿ ಹೇಳಿದ್ದಾರೆ. ಅವರನ್ನು ವಿದ್ಯುತ್ ಅಥವಾ ಸೂರ್ಯನ ಬೆಳಕು, ಪ್ರಶ್ನಾರ್ಹ ಆಹಾರ, ಶುದ್ಧ ಕುಡಿಯುವ ನೀರು, ವೈದ್ಯಕೀಯ ನೆರವು ಮತ್ತು ಕೈದಿಗಳಿಗೆ ಸಾಮಾನ್ಯವಾಗಿ ಲಭ್ಯವಿರುವ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಏಕಾಂತ ಬಂಧನದಲ್ಲಿ ಇರಿಸಲಾಗಿದೆ ಎಂದು ಉಜ್ಮಾ ಖಾನ್ ಆರೋಪಿಸಿದ್ದಾರೆ.
ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೈದಿಯಂತಹ ಪರಿಸ್ಥಿತಿಯಲ್ಲಿ ತಮ್ಮನ್ನು ಬಂಧಿಸಲಾಗಿದೆ ಎಂದು ಖಾನ್ ಆರೋಪಿಸಿದರು ಮತ್ತು ತಮಗೆ ಏನಾದರೂ ಸಂಭವಿಸಿದರೆ ಮಿಲಿಟರಿ ನಾಯಕತ್ವವೇ ಹೊಣೆಗಾರರಾಗುತ್ತಾರೆ ಎಂದು ಹೇಳಿದ್ದರು ಎಂದು ಉಜ್ಮಾ ಖಾನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನನ್ನನ್ನು ಪಂಜರದಲ್ಲಿ ಬಂಧಿಸಿ ಪ್ರಾಣಿಗಳಿಗಿಂತ ಕೆಟ್ಟದಾಗಿ ನಡೆಸಿಕೊಳ್ಳುವ ಮೂಲಕ ಚಿತ್ರಹಿಂಸೆ ನೀಡಲಾಯಿತು. ನನ್ನನ್ನು ಇರಿಸಿದ ಕೋಣೆಗೆ ಐದು ದಿನ ವಿದ್ಯುತ್ ಇರಲಿಲ್ಲ ಎಂದು ಖಾನ್ ಹೇಳಿದ್ದರು. ಅಷ್ಟೇ ಅಲ್ಲದೇ ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಮೇಲೆಯೂ ಆರೋಪಿಸಿದ್ದ ಖಾನ್ ಅಸಿಮ್ ಮುನೀರ್ ಇತಿಹಾಸದಲ್ಲಿ ಅತ್ಯಂತ ದಬ್ಬಾಳಿಕೆಯ ಸರ್ವಾಧಿಕಾರಿ ಮತ್ತು ಮಾನಸಿಕವಾಗಿ ಅಸ್ಥಿರ ಎಂದು ಹೇಳಿದ್ದರು ಎಂದು ಸಹೋದರಿ ತಿಳಿಸಿದ್ದಾರೆ.
Imran Khan: ಇಮ್ರಾನ್ ಖಾನ್ ಸಾವಿನ ಸುದ್ದಿ ಕೊನೆಗೂ ನಿಜವಾಯ್ತಾ? ಬೆಂಬಲಿಗರು ಹೇಳೋದೇನು?
ಪಾಕಿಸ್ತಾನ ಸೇನೆಯ ಜನರಲ್ ಹೆಡ್‌ಕ್ವಾರ್ಟರ್ಸ್ (GHQ) ನಿಂದ ಸ್ವಲ್ಪ ದೂರದಲ್ಲಿರುವ ರಾವಲ್ಪಿಂಡಿಯಲ್ಲಿರುವ ಅತ್ಯಾಧುನಿಕ ಭದ್ರತೆಯ ಜೈಲು ಅಡಿಯಾಲಾ ಜೈಲಿನೊಳಗೆ ಉಜ್ಮಾ ಖಾನ್ ಅವರಿಗೆ ಇಮ್ರಾನ್ ಭೇಟಿಗೆ ಅವಕಾಶ ನೀಡಲಾಗಿತ್ತು. 25 ರಿಂದ 35 ನಿಮಿಷಗಳ ಕಾಲ ಇಬ್ಬರೂ ಮಾತುಕತೆ ನಡೆಸಿದ್ದಾರೆ.