ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರತಿಯೊಬ್ಬ ನಾಗರಿಗಕನಿಗೂ ಭಾರತದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವ ಸ್ವಾತಂತ್ರ್ಯವಿದೆ: ವಿಶ್ವಸಂಸ್ಥೆಗೆ ಭಾರತೀಯ ರಾಯಭಾರಿಯಿಂದ ಸ್ಪಷ್ಟನೆ

ಭಾರತದಲ್ಲಿ ನಡೆಯುತ್ತಿರುವ ಯುವ ಜನರ ಪ್ರತಿಭಟನೆಗೆ ಸಂಬಂಧಿಸಿ ವಿಶ್ವ ಸಂಸ್ಥೆಯ ವರದಿಗಾರರ ಹೇಳಿಕೆಗಳನ್ನು ವಿಶ್ವಸಂಸ್ಥೆಯಲ್ಲಿನ ಭಾರತೀಯ ರಾಯಭಾರಿ ಅನುಜ್ ಸ್ವರೂಪ್ ಅವರು ತಳ್ಳಿ ಹಾಕಿದ್ದಾರೆ. ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಸ್ವಾತಂತ್ರ್ಯವಿದೆ ಎಂದು ಸ್ಪಷ್ಟಪಡಿಸಿರುವ ಅವರು ಭಾರತದ ಯುವಜನರು ಸಾಮಾಜಿಕ ಕಳಂಕವನ್ನು ಎದುರಿಸುತ್ತಿದ್ದಾರೆ ಎನ್ನುವ ಆರೋಪಗಳನ್ನು ನಿರಾಕರಿಸಿದರು.

ಯುವಜನರ ಪ್ರತಿಭಟನೆ: ವಿಶ್ವಸಂಸ್ಥೆ ವರದಿಗಾರರ ಹೇಳಿಕೆ ತಳ್ಳಿ ಹಾಕಿದ ಭಾರತ

ಸಂಗ್ರಹ ಚಿತ್ರ -

ವಾಷಿಂಗ್ಟನ್: ಭಾರತದಲ್ಲಿ ಯುವಜನರು ಸಾಮಾಜಿಕ ಕಳಂಕವನ್ನು (social stigmatisation ) ಎದುರಿಸುತ್ತಿದ್ದಾರೆ ಎಂದು ವರದಿಗಾರರ ಹೇಳಿಕೆಯನ್ನು ಭಾರತ ತಳ್ಳಿ ಹಾಕಿದೆ. ಯುವಜನರಿಗೆ ಭಾರತದಲ್ಲಿ ಲಭ್ಯವಿರುವ ನಾಗರಿಕ ಅವಕಾಶಗಳ ಕುರಿತು ಮಾಡಲಾದ ವರದಿಯ ಕುರಿತು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸಿರುವ ಭಾರತ, ರಾಜಕೀಯ ಚಳವಳಿಗಳಲ್ಲಿ (Political Movement) ಭಾಗವಹಿಸುತ್ತಿರುವ ದೇಶದ ಯುವಜನರು (citizen of India) ಸರ್ಕಾರದ ಹಿರಿಯ ನಾಯಕರೊಂದಿಗೆ ಸಂವಾದ ನಡೆಸುತ್ತಿರುವುದಾಗಿ ಸ್ಪಷ್ಟನೆಯನ್ನು ನೀಡಿದೆ. ಭಾರತದ ಮೇಲೆ ಮಾಡಲಾಗಿರುವ ಆರೋಪಗಳು ಅನಾಮಧೇಯ ಮಾಹಿತಿಯಿಂದ ಆಧಾರಿತವಾಗಿದೆ ಎಂದು ತಿಳಿಸಿದೆ.

ಭಾರತದಲ್ಲಿ ಲಿಂಗ ತಾರತಮ್ಯದ ಕುರಿತು ಪ್ರಶ್ನಿಸಿರುವ ಯುವಜನರ ಮೇಲೆ ಸಾಮಾಜಿಕ ಕಳಂಕವನ್ನು ಉಂಟಾಗಿದೆ ಎಂದು ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಜಿನಾ ರೊಮೆರೊ ಆರೋಪಿಸಿದ್ದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೂರನೇ ಸಮಿತಿಯ 81ನೇ ಅಧಿವೇಶನದಲ್ಲಿ ಇದನ್ನು ನಿರಾಕರಿಸಿದ ವಿಶ್ವಸಂಸ್ಥೆಯಲ್ಲಿನ ಭಾರತೀಯ ರಾಜತಾಂತ್ರಿಕ ಅನುಜ್ ಸ್ವರೂಪ್ ಅವರು, ಈ ಆರೋಪಗಳು ಆಧಾರ ರಹಿತವಾಗಿದೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯಗೆ ಪ್ರಿಯಾಂಕ್ ವಿವರಣೆ, ಡಿಕೆ ಭೇಟಿ ರದ್ದು: ಬಯಲಾಗದ ಸ್ಟಿಂಗ್‌ ರಹಸ್ಯ

ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತ ಸಭೆ ಸೇರುವ ಮತ್ತು ಸಂಘಟಿತರಾಗುವ ಹಕ್ಕುಗಳ ಸ್ವಾತಂತ್ರ್ಯಗಳನ್ನು ಖಾತರಿಪಡಿಸುತ್ತದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದೊಂದಿಗೆ ಈ ಸ್ವಾತಂತ್ರ್ಯಗಳನ್ನು ನಮ್ಮ ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ನೀಡಲಾಗಿದೆ. ಇವುಗಳನ್ನು ಸ್ವತಂತ್ರ ನ್ಯಾಯಾಂಗ, ಮುಕ್ತ ಪತ್ರಿಕಾ ರಂಗ ಮತ್ತು ಸಬಲೀಕರಣಗೊಂಡ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಕ್ಷಿಸುತ್ತವೆ ಎಂದು ಹೇಳಿ ಭಾರತದ ಯುವಜನರ ಕುರಿತಾದ ವರದಿಯಲ್ಲಿರುವ ಹೇಳಿಕೆಗಳ ಆಧಾರವೇನು ಎಂದು ಪ್ರಶ್ನಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಭಾರತದಲ್ಲಿ ಯುವಜನರು ವ್ಯಾಪಕ ಪ್ರತಿಭಟನೆಗಳನ್ನು ನಡೆಸುತ್ತಿರುವ ಸಂದರ್ಭದಲ್ಲೇ ಜಿನಾ ರೊಮೆರೊ ಅವರು ಭಾರತದ ಯುವಜನರು ಮಾನಸಿಕ ಆರೋಗ್ಯ ಅಥವಾ ಲಿಂಗ ನ್ಯಾಯದ ಬಗ್ಗೆ ಚರ್ಚಿಸಿದ್ದಕ್ಕಾಗಿ ಕಳಂಕವನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ಈ ಕುರಿತು ಸ್ಪಷ್ಟನೆಯನ್ನು ನೀಡಿರುವ ಅನುಜ್ ಸ್ವರೂಪ್, ಇಂತಹ ಗಂಭೀರ ಆರೋಪಗಳನ್ನು ಮಾಡುವುದು ಸಾಕ್ಷ್ಯವಾಗಲಾರದು. ಇದು ಕೇವಲ ವದಂತಿ. ಇದನ್ನು ವಿಶ್ವಸಂಸ್ಥೆಯ ವರದಿಯ ಸೋಗಿನಲ್ಲಿ ಪ್ರಸ್ತುತಪಡಿಸಲಾಗಿದೆ ಎಂದು ಹೇಳಿದ ಅವರು, ರಾಜಕೀಯ ಚಳುವಳಿಗಳಲ್ಲಿ ಯುವಜನರ ಭಾಗವಹಿಸುವಿಕೆ ಮತ್ತು ಹಿರಿಯ ಸರ್ಕಾರಿ ನಾಯಕರೊಂದಿಗೆ ಅವರ ಸಂಬಂಧಗಾಲ ಕುರಿತು ವಿವರಿಸಿದರು.

ವಿಪರ್ಯವೆಂದರೆ ಈ ವರದಿಯಲ್ಲಿ ಭಾರತೀಯ ಯುವ ಭಾರತೀಯರು ವಿಡಂಬನಾತ್ಮಕ ರಾಜಕೀಯ ಚಳುವಳಿಯನ್ನು ಸೃಷ್ಟಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ ಇದು ಸುಳ್ಳು. ನಮ್ಮ ರಾಷ್ಟ್ರ ರಾಜಧಾನಿಯಲ್ಲಿ ಯುವಜನರು ಮೆರವಣಿಗೆ ಮಾಡುತ್ತಾರೆ, ಹಿರಿಯ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆಗಳನ್ನು ಕೂಡ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಮಾನವ ಹಕ್ಕುಗಳ ಮಂಡಳಿಯಲ್ಲಿ ಯುಎನ್ ಮಾನವ ಹಕ್ಕುಗಳ ಆಯುಕ್ತ ವೋಲ್ಕರ್ ಟರ್ಕ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿ ಯುವ ನೇತೃತ್ವದ ಚಳುವಳಿಯ ಸಂದರ್ಭದಲ್ಲಿ ಯುವ ನಾಯಕರೊಂದಿಗಿನ ಸಂವಾದವು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದರು ಎಂದರು.

ಎದೆಯ ಸೋಂಕು; ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು

ಸಾರ್ವಜನಿಕ ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಸರ್ಕಾರದ ಪ್ರತಿಕ್ರಿಯೆಯ ಬಗ್ಗೆಯೂ ತಿಳಿಸಿದ ಅವರು, ಭಾರತದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರದ ಕುರಿತು ಕೂಡ ಸಭೆಯಲ್ಲಿ ಮಾಹಿತಿ ನೀಡಿದರು. ಅಲ್ಲದೇ ವಿಶೇಷ ವರದಿಗಾರರು ತಮ್ಮ ವರದಿಯಲ್ಲಿ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.