ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangladesh Unrest: ಬಾಂಗ್ಲಾದಲ್ಲಿ ನಿಲ್ಲುತ್ತಿಲ್ಲ ಹಿಂದೂಗಳ ಮೇಲಿನ ದೌರ್ಜನ್ಯ; ಮನೆಗೆ ಬೆಂಕಿ ಹಚ್ಚಿ, ನೋಟಿಸ್‌ ಕೊಟ್ಟ ದುಷ್ಟರು

ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿಗಳು ಮುಂದುವರೆದಿದ್ದು, ದುಷ್ಕರ್ಮಿಗಳು ಹಿಂದೂ ಕುಟುಂಬದ ಮನೆಗೆ ಬೆಂಕಿ ಹಚ್ಚಿ, ಅವರ ಸಾಕುಪ್ರಾಣಿಗಳನ್ನು ಸುಟ್ಟುಹಾಕಿ, ಮನೆಯ ಎಲ್ಲಾ ವಸ್ತುಗಳನ್ನು ನಾಶಪಡಿಸಿದ ಹೊಸ ಘಟನೆ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೇ ಸ್ಥಳದ ಬಳಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕುವ ಬ್ಯಾನರ್ ಕಂಡುಬಂದಿದೆ.

ಬಾಂಗ್ಲಾದಲ್ಲಿ ನಿಲ್ಲುತ್ತಿಲ್ಲ ಹಿಂದೂಗಳ ಮೇಲಿನ ದೌರ್ಜನ್ಯ!

ಸಾಂಧರ್ಬಿಕ ಚಿತ್ರ -

Vishakha Bhat
Vishakha Bhat Dec 23, 2025 4:29 PM

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿಗಳು ಮುಂದುವರೆದಿದ್ದು, ದುಷ್ಕರ್ಮಿಗಳು (Bangladesh Unrest) ಹಿಂದೂ ಕುಟುಂಬದ ಮನೆಗೆ ಬೆಂಕಿ ಹಚ್ಚಿ, ಅವರ ಸಾಕುಪ್ರಾಣಿಗಳನ್ನು ಸುಟ್ಟುಹಾಕಿ, ಮನೆಯ ಎಲ್ಲಾ ವಸ್ತುಗಳನ್ನು ನಾಶಪಡಿಸಿದ ಹೊಸ ಘಟನೆ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೇ ಸ್ಥಳದ ಬಳಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕುವ ಬ್ಯಾನರ್ ಕಂಡುಬಂದಿದೆ. ಚಟ್ಟೋಗ್ರಾಮ್‌ನಲ್ಲಿರುವ ವಲಸಿಗರಾದ ಜಯಂತಿ ಸಂಘ ಮತ್ತು ಬಾಬು ಶುಕುಶಿಲ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಬೆಂಕಿ ಹಾಕಿದ ಕೂಡಲೇ ಮನೆ ಮಂದಿಯಲ್ಲಾ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದಾಗ್ಯೂ, ಅವರ ಮನೆಯ ವಸ್ತುಗಳು ನಾಶವಾದವು ಮತ್ತು ಸಾಕುಪ್ರಾಣಿಗಳು ಸಾವನ್ನಪ್ಪಿವೆ.

ಮುಸ್ಲಿಂ ಸಮುದಾಯದ ವಿರುದ್ಧ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪ ನಿಮ್ಮ ಮೇಲಿದೆ. ನಿಮ್ಮ ಚಲನವಲನಗಳು, ಸಭೆಗಳು ಮತ್ತು ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ನಿಮಗೆ ಇಲ್ಲಿ ಎಚ್ಚರಿಕೆ ನೀಡಲಾಗಿದೆ. ನೀವು ಅನುಸರಿಸಲು ವಿಫಲವಾದರೆ, ನೀವು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಎಂದು ಬಂಗಾಳಿ ಭಾಷೆಯಲ್ಲಿ ಬರೆದ ಕೈಬರಹದ ಬ್ಯಾನರ್‌ನಲ್ಲಿ ಬರೆಯಲಾಗಿದೆ. ಹಿಂದೂ ಸಮುದಾಯದ ಸದಸ್ಯರು ನಿರ್ದೇಶನಗಳನ್ನು ಪಾಲಿಸಲು ವಿಫಲವಾದರೆ, ಅವರ ಮನೆಗಳು, ಆಸ್ತಿಗಳು ಮತ್ತು ವ್ಯವಹಾರಗಳನ್ನು ಬಿಡಲಾಗುವುದಿಲ್ಲ ಮತ್ತು "ಯಾರೂ ನಿಮ್ಮನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ.

ಇತ್ತೀಚೆಗೆ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್ ಅವರನ್ನು ಗುಂಪೊಂದು ಹೊಡೆದು ಕೊಲೆ ಮಾಡಿತ್ತು. ಭಾಲುಕಾ ಉಪಜಿಲಾದ ದುಬಾಲಿಯಾ ಪಾರಾ ಪ್ರದೇಶದಲ್ಲಿ ದಾಸ್‌ ವಾಸಿಸುತ್ತಿದ್ದ. ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ಎಂಬ ಕಾರಣಕ್ಕೆ ಡಿಸೆಂಬರ್ 16 ರಂದು ದಾಸ್‌ ಕಾರ್ಖಾನೆಯ ಮೇಲ್ವಿಚಾರಕರು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ಅಷ್ಟೇ ಅಲ್ಲದೇ ಇಸ್ಲಾಮಿಕ್‌ ಗುಂಪೊಂದು ಆತನನ್ನು ಹಿಡಿದು ಥಳಿಸಿತ್ತು. ನಂತರ ಆತನ ದೇಹವನ್ನು ನೇಣು ಹಾಕಿ ಬೆಂಕಿ ಹಚ್ಚಲಾಯಿತು, ದಾಸ್ ಸಹೋದ್ಯೋಗಿಗಳು ಕ್ರೂರ ಹತ್ಯೆಯಲ್ಲಿ ಭಾಗವಹಿಸಿದ್ದಾರೆಂದು ವರದಿಯಾಗಿದೆ.

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿದೆ ಭಾರತ ವಿರೋಧಿ ಮನಸ್ಥಿತಿ; ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಕಳವಳ

ಏತನ್ಮಧ್ಯೆ, ದೀಪು ದಾಸ್ ಅವರ ಹತ್ಯೆಯನ್ನು ಭಾರತದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಮಧ್ಯಂತರ ಸರ್ಕಾರದ ಪ್ರಧಾನ ಮಂತ್ರಿ ಮುಹಮ್ಮದ್ ಯೂನಸ್ ಘೋಷಿಸಿದರು. ಹತ್ತು ಜನರಲ್ಲಿ ಏಳು ಜನರನ್ನು ರಾಪಿಡ್ ಆಕ್ಷನ್ ಬೆಟಾಲಿಯನ್ (RAB) ಬಂಧಿಸಿದರೆ, ಮೂವರನ್ನು ಪೊಲೀಸರು ಪ್ರಕರಣದಲ್ಲಿ ಶಂಕಿತರೆಂದು ಬಂಧಿಸಿದ್ದಾರೆ.