ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದ ತೈಲ ಸಂಗ್ರಹ ಸಾಮರ್ಥ್ಯಕ್ಕೆ ಪಾಕಿಸ್ತಾನ ಸಚಿವರ ಮೆಚ್ಚುಗೆ

ಮಧ್ಯ ಪ್ರಾಚ್ಯ ಸಂಘರ್ಷದ ನಡುವೆ ತೈಲ ಬಿಕ್ಕಟ್ಟು ತೀವ್ರವಾಗುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಮಲಿಕ್ ಭಾರತದಲ್ಲಿರುವ 60–70 ದಿನಗಳ ವ್ಯೂಹಾತ್ಮಕ ತೈಲ ಸಂಗ್ರಹ ಸಾಮರ್ಥ್ಯವನ್ನು ಮೆಚ್ಚಿದ್ದಾರೆ. ಪಾಕಿಸ್ತಾನದಲ್ಲಿ ಒಂದು ದಿನದ ಅಗತ್ಯಕ್ಕೂ ಸಾಕಾಗುವ ಸಂಗ್ರಹಾಗಾರ ಇಲ್ಲವೆಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಪಾಕ್ ಸಚಿವರಿಂದ ಭಾರತದ ತೈಲ ಸಂಗ್ರಹಕ್ಕೆ ಶ್ಲಾಘನೆ

ಸಾಂದರ್ಭಿಕ ಚಿತ್ರ -

Profile
Sushmitha Jain Apr 29, 2026 8:57 PM

ಇಸ್ಲಾಮಾಬಾದ್‌, ಏ. 29: ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷದ ಪರಿಣಾಮ ತೈಲ ಬಿಕ್ಕಟ್ಟು (Oil Crisis) ಗಂಭೀರವಾಗುತ್ತಿರುವ ಸಂದರ್ಭದಲ್ಲಿ ಭಾರತ ಸರ್ಕಾರದ ತೈಲ ನಿರ್ವಹಣೆ ಬಗ್ಗೆ ವಿಪಕ್ಷಗಳು ಟೀಕಿಸುತ್ತಿರುವಾಗಲೇ ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಮಲಿಕ್ (Pak Minister Ali Malik) ಭಾರತದ ನಡೆಯನ್ನು ಮೆಚ್ಚಿದ್ದಾರೆ. ಭಾರತದ ವ್ಯೂಹಾತ್ಮಕ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ಶ್ಲಾಘಿಸಿದ ಅವರು, ಪಾಕಿಸ್ತಾನದಲ್ಲಿ ಕನಿಷ್ಠ ಒಂದು ದಿನದ ಅಗತ್ಯವನ್ನೂ ಪೂರೈಸುವಷ್ಟು ಸಂಗ್ರಹಾಗಾರ ಇಲ್ಲವೆಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಮಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಅಲಿ ಮಲಿಕ್, “ನಮ್ಮ ದೇಶದಲ್ಲಿ ಈಗ ಕೇವಲ 15 ದಿನಗಳ ಅವಶ್ಯಕತೆಯನ್ನು ಪೂರೈಸಬಲ್ಲ ವಾಣಿಜ್ಯ ಕಚ್ಚಾ ತೈಲ ಮಾತ್ರ ಇದೆ. ತೈಲ ಮಾರಾಟ ಕಂಪನಿಗಳಲ್ಲಿಯೂ 20–21 ದಿನಗಳ ಬಳಕೆಗೆ ಸಾಕಾಗುವಷ್ಟು ಸಂಗ್ರಹವಿದೆ. ಆದರೆ ಒಂದು ದಿನದ ಅಗತ್ಯವನ್ನೂ ನಿಭಾಯಿಸುವ ವ್ಯೂಹಾತ್ಮಕ ತೈಲ ಸಂಗ್ರಹಾಗಾರ ನಮ್ಮ ಬಳಿ ಇಲ್ಲ” ಎಂದು ಹೇಳಿದ್ದಾರೆ. ಟಿವಿಗೆ ನೀಡಿದ ಸಂದರ್ಶನದಲ್ಲಿ ಅಲಿ ಮಲಿಕ್, “ನಮ್ಮ ದೇಶದಲ್ಲಿ ಈಗ ಕೇವಲ 15 ದಿನಗಳ ಅವಶ್ಯಕತೆಯನ್ನು ಪೂರೈಸಬಲ್ಲ ವಾಣಿಜ್ಯ ಕಚ್ಚಾ ತೈಲ ಮಾತ್ರ ಇದೆ. ತೈಲ ಮಾರಾಟ ಕಂಪನಿಗಳಲ್ಲಿ 20–21 ದಿನಗಳ ಬಳಕೆಗೆ ಸಾಕಾಗುವಷ್ಟು ಸಂಗ್ರಹವಿದೆ. ಆದರೆ ಒಂದು ದಿನದ ಅಗತ್ಯವನ್ನೂ ನಿಭಾಯಿಸುವ ವ್ಯೂಹಾತ್ಮಕ ತೈಲ ಸಂಗ್ರಹಾಗಾರ ನಮ್ಮ ಬಳಿ ಇಲ್ಲ” ಎಂದಿದ್ದಾರೆ.

ಯುದ್ಧ ಆರಂಭವಾದ ಮೇಲೆ ಇರಾನ್‌ನಿಂದ ಮೊದಲ ಬಾರಿಗೆ ವಾಣಿಜ್ಯ ವಿಮಾನ ಹಾರಾಟ ಪ್ರಾರಂಭ

ಇದೇ ವೇಳೆ ಭಾರತದ ಕುರಿತು ಮಾತನಾಡಿದ ಅವರು, “ಭಾರತದ ಬಳಿ 60–70 ದಿನಗಳ ಬೇಡಿಕೆಗೆ ಸಾಕಾಗುವಷ್ಟು ಕಚ್ಚಾ ತೈಲ ಸಂಗ್ರಹವಿದೆ. ಅಗತ್ಯ ಬಂದರೆ ತಕ್ಷಣ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಮರ್ಥ್ಯ ಅವರಿಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಬಿಕ್ಕಟ್ಟು, ಯುದ್ಧ ಪರಿಸ್ಥಿತಿ ಅಥವಾ ತೈಲ ಪೂರೈಕೆ ವ್ಯತ್ಯಯದ ಸಂದರ್ಭಗಳಲ್ಲಿ ಬಳಕೆಗಾಗಿ ದೇಶಗಳು ಪ್ರತ್ಯೇಕವಾಗಿ ಭೂಗತ ವ್ಯೂಹಾತ್ಮಕ ತೈಲ ಸಂಗ್ರಹಾಗಾರಗಳನ್ನು ನಿರ್ಮಿಸಿಕೊಳ್ಳುತ್ತವೆ. ಭಾರತದಲ್ಲಿ ಕರ್ನಾಟಕದ ಮಂಗಳೂರು, ಪಾದೂರು ಹಾಗೂ ವಿಶಾಖಪಟ್ಟಣದಲ್ಲಿ ಇಂತಹ ಬೃಹತ್ ಸಂಗ್ರಹಾಗಾರಗಳಿದ್ದು, ಒಟ್ಟು 53.3 ಲಕ್ಷ ಮೆಟ್ರಿಕ್ ಟನ್ (ಸುಮಾರು 36.92 ದಶಲಕ್ಷ ಬ್ಯಾರೆಲ್) ಕಚ್ಚಾ ತೈಲ ಸಂಗ್ರಹ ಸಾಮರ್ಥ್ಯ ಹೊಂದಿವೆ. ಇದು ದೇಶದ ಸುಮಾರು 60–70 ದಿನಗಳ ಬೇಡಿಕೆಯನ್ನು ಪೂರೈಸಬಲ್ಲದು.