ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಾರ್ಮೊಜ್‌ ದಾಟಲು ಇಂದಿನಿಂದಲೇ ಟೋಲ್‌ ಶುರು ಮಾಡಿದ ಇರಾನ್‌; ಭಾರತದ ಮೇಲೆ ಪರಿಣಾಮವೇನು?

ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವ ಮಧ್ಯೆ, ಹೊರ್ಮೊಜ್‌ ಜಲಸಂಧಿಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಸಾಧಿಸುವ ಪ್ರಯತ್ನದಲ್ಲಿ, ಇರಾನ್‌ನ ಸಂಸದೀಯ ಭದ್ರತಾ ಸಮಿತಿಯು ಹೊಸ ನಿರ್ವಹಣಾ ಯೋಜನೆಯನ್ನು ಅನುಮೋದಿಸಿದೆ. ಅಮೆರಿಕ ಮತ್ತು ಇಸ್ರೇಲಿ ಹಡಗುಗಳು ಜಲಮಾರ್ಗದ ಮೂಲಕ ಹಾದುಹೋಗುವುದನ್ನು ನಿಷೇಧಿಸುವ ಕ್ರಮಗಳನ್ನು ಈ ಯೋಜನೆ ಒಳಗೊಂಡಿದೆ.

ಇಂದಿನಿಂದಲೇ ಹಾರ್ಮೊಜ್‌ ಜಲಸಂಧಿ ದಾಟಲು ಟೋಲ್‌ ಶುರು ಮಾಡಿದ ಇರಾನ್‌

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 31, 2026 3:44 PM

ಟೆಹರಾನ್‌: ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವ ಮಧ್ಯೆ, ಹೊರ್ಮೊಜ್‌ (Hormuz) ಜಲಸಂಧಿಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಸಾಧಿಸುವ ಪ್ರಯತ್ನದಲ್ಲಿ, ಇರಾನ್‌ನ ಸಂಸದೀಯ ಭದ್ರತಾ ಸಮಿತಿಯು ಹೊಸ ನಿರ್ವಹಣಾ ಯೋಜನೆಯನ್ನು ಅನುಮೋದಿಸಿದೆ. ಮುಖ ಇಂಧನ ಕಾರಿಡಾರ್ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಟೋಲ್‌ಗಳನ್ನು ವಿಧಿಸುವ ಮತ್ತು ಅಮೆರಿಕ ಮತ್ತು ಇಸ್ರೇಲಿ ಹಡಗುಗಳು ಜಲಮಾರ್ಗದ ಮೂಲಕ ಹಾದುಹೋಗುವುದನ್ನು ನಿಷೇಧಿಸುವ ಕ್ರಮಗಳನ್ನು ಈ ಯೋಜನೆ ಒಳಗೊಂಡಿದೆ.

ಅಮೆರಿಕ ಮತ್ತು ಇಸ್ರೇಲಿ ಹಡಗುಗಳ ಹೊರತಾಗಿ, ಇರಾನ್ ವಿರುದ್ಧ ಏಕಪಕ್ಷೀಯ ನಿರ್ಬಂಧಗಳನ್ನು ಜಾರಿಗೊಳಿಸುವಲ್ಲಿ ಭಾಗವಹಿಸಿರುವ ಎಲ್ಲಾ ದೇಶಗಳ ಹಡಗುಗಳು ಜಲಸಂಧಿಯ ಮೂಲಕ ಸಾಗುವುದನ್ನು ನಿಷೇಧಿಸುವ ಗುರಿಯನ್ನು ಹೊಸ ಯೋಜನೆ ಹೊಂದಿದೆ. ಹೊಸ ಯೋಜನೆಯು ಹಾರ್ಮೊಜ್‌ ಜಲಸಂಧಿಯ ಮೇಲೆ ಇರಾನ್‌ನ ಸಾರ್ವಭೌಮ ನಿಯಂತ್ರಣವನ್ನು ಬಲಪಡಿಸುತ್ತದೆ. ಜಲಮಾರ್ಗಕ್ಕಾಗಿ ಒಮಾನ್‌ನೊಂದಿಗೆ ಕಾನೂನು ಚೌಕಟ್ಟನ್ನು ಸ್ಥಾಪಿಸುವ ಗುರಿಯನ್ನು ಸಹ ಇದು ಹೊಂದಿದೆ.

ಜಲಸಂಧಿಯ ಮೂಲಕ ಹಾದುಹೋಗಲು ಕೆಲವು ಹಡಗುಗಳಿಗೆ 2 ಮಿಲಿಯನ್ ಡಾಲರ್ (ಸುಮಾರು ರೂ. 18.8 ಕೋಟಿ) ಶುಲ್ಕ ವಿಧಿಸಲು ಇರಾನ್ ನಿರ್ಧರಿಸಿ ಎಂದು ಈ ಹಿಂದೆ ಹೇಳಲಾಗುತಿತ್ತು. ಆದರೆ ಇರಾನ್‌ ರಾಯಭಾರಿ ಕಚೇರಿ ಅದನ್ನು ಅಲ್ಲಗಳೆದಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ಮೇಲೆ ನಿರ್ಬಂಧಗಳನ್ನು ವಿಧಿಸಿದ ದೇಶಗಳಿಗೆ ಸಂಬಂಧಿಸಿದ ಹಡಗುಗಳು ಪ್ರಮುಖ ಜಲಮಾರ್ಗದ ಮೂಲಕ ಹಾದುಹೋಗಲು ಅನುಮತಿಸುವುದಿಲ್ಲ ಎಂದು ಇರಾನ್‌ ಸ್ಪಷ್ಟವಾಗಿ ಹೇಳಿದೆ. ಜಲಸಂಧಿಯನ್ನು ಮತ್ತೆ ತೆರೆಯದಿದ್ದರೆ, ಅಮೆರಿಕವು ಇರಾನ್‌ನ ವಿದ್ಯುತ್ ಮೂಲಸೌಕರ್ಯವನ್ನು ಗುರಿಯಾಗಿಸಬಹುದು ಎಂದು ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಇರಾನ್‌ಗೆ ಬೆದರಿಕೆ ಹಾಕಿದ್ದರು. ಟ್ರಂಪ್‌ ಬೆದರಿಕೆ ಹಾಕಿದ ಕೆಲವೇ ಗಂಟೆಗಳಲ್ಲಿ ಇರಾನ್‌ ಈ ನಿರ್ಧಾರವನ್ನು ತೆಗೆದುಕೊಂಡಿತ್ತು.

ʼʼಭಾರತ ಬ್ರೋಕರ್‌ ಕೆಲಸ ಮಾಡುವುದಿಲ್ಲʼʼ: ಇರಾನ್‌-ಅಮೆರಿಕ ಮಧ್ಯೆ ಪಾಕಿಸ್ತಾನದ ಮಧ್ಯಸ್ಥಿಕೆ ಬಗ್ಗೆ ಎಸ್. ಜೈಶಂಕರ್ ಹೇಳಿದ್ದೇನು?

ದಕ್ಷಿಣ ಏಷ್ಯಾ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ತೈಲ ಸರಬರಾಜು ಆಗುವ ಹೊರ್ಮುಝ್ ಜಲಸಂಧಿ 33 ಕಿಮೀ ಅಗಲವಿದೆ. ಎರಡು ದೊಡ್ಡ ಭೂಖಂಡಗಳನ್ನು ಪ್ರತ್ಯೇಕಿಸುವ ಕಿರಿದಾದ ಜಲಮಾರ್ಗವನ್ನು ಜಲಸಂಧಿ ಎಂದು ಕರೆಯಲಾಗುತ್ತದೆ. ಇರಾನ್ ಈ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಪ್ರತಿದಿನ ಸುಮಾರು 2 ಕೋಟಿ ಬ್ಯಾರೆಲ್ ತೈಲ ಈ ಮಾರ್ಗದ ಮೂಲಕ ಸಾಗುತ್ತದೆ. ವಿಶ್ವದ ಒಟ್ಟು ಎಲ್‌ಎನ್‌ಜಿ ಪೂರೈಕೆಯ ಶೇ. 20ರಷ್ಟು ಭಾಗ ಇಲ್ಲಿಂದಲೇ ಸಾಗುತ್ತದೆ.