ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಿಲ್ಲದ ಅಮೆರಿಕ- ಇರಾನ್‌ ಯುದ್ಧ; ಜೋರ್ಡಾನ್‌, ಬಹ್ರೇನ್‌ನಲ್ಲಿರೋ ಯುಎಸ್‌ ನೆಲೆಗಳ ಮೇಲೆ ಕ್ಷಿಪಣಿ ದಾಳಿ

ಮಂಗಳವಾರ ರಾತ್ರಿ ಇರಾನ್ ವಿರುದ್ಧ ಅಮೆರಿಕ ಹೊಸ ದಾಳಿ ನಡೆಸಿದ್ದು , ದೇಶದ ದಕ್ಷಿಣ ಕರಾವಳಿಯಲ್ಲಿರುವ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆದಿದೆ. ಇದಕ್ಕೆ ಪ್ರತೀಕಾರವಾಗಿ ಜೋರ್ಡಾನ್‌ನಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಿದ್ದಲ್ಲದೇ, ಬಹ್ರೇನ್‌ನಲ್ಲಿರುವ ಮಿಲಿಟರಿ ನೆಲೆಯ ಮೇಲೆ ಬೃಹತ್‌ ಪ್ರಮಾಣದ ಡ್ರೋನ್‌ ದಾಳಿ ನಡೆಸಿದೆ.

ಜೋರ್ಡಾನ್‌, ಬಹ್ರೇನ್‌ನಲ್ಲಿರೋ ಯುಎಸ್‌ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Sep 2, 2026 9:04 AM

ಟೆಹರಾನ್‌: ಮಂಗಳವಾರ ರಾತ್ರಿ ಇರಾನ್ ವಿರುದ್ಧ ಅಮೆರಿಕ ಹೊಸ ದಾಳಿ ನಡೆಸಿದ್ದು , ದೇಶದ ದಕ್ಷಿಣ ಕರಾವಳಿಯಲ್ಲಿರುವ ಇಸ್ಲಾಮಿಕ್ (Iran- America) ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆದಿದೆ. ಇದಕ್ಕೆ ಪ್ರತೀಕಾರವಾಗಿ ಜೋರ್ಡಾನ್‌ನಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಿದ್ದಲ್ಲದೇ, ಬಹ್ರೇನ್‌ನಲ್ಲಿರುವ ಮಿಲಿಟರಿ ನೆಲೆಯ ಮೇಲೆ ಬೃಹತ್‌ ಪ್ರಮಾಣದ ಡ್ರೋನ್‌ ದಾಳಿ ನಡೆಸಿದೆ. ಆದರೆ, ತನ್ನ ವಾಯುಪ್ರದೇಶ ಪ್ರವೇಶಿಸಿದ 13 ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ 10 ಅನ್ನು ನಮ್ಮ ವಾಯು ರಕ್ಷಣಾ ವ್ಯವಸ್ಥೆಗಳು ತಡೆಹಿಡಿದಿವೆ.

ಹಾರ್ಮೊಜ್‌ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳು ಹಾಗೂ ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡಿರುವ ಅಮೆರಿಕ ಸೈನಿಕರ ಮೇಲೆ ದಾಳಿಗೆ ಯತ್ನಿಸಿದ್ದಕ್ಕೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನೆಲೆಗಳ ಮೇಲೆ ಅಮೆರಿಕ ಸೇನೆ ದಾಳಿ ಆರಂಭಿಸಿತ್ತು. ಇದಕ್ಕೆ ಇರಾನ್‌ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದೆ. ಬಹ್ರೇನ್‌ನಲ್ಲಿರುವ ಅಮೆರಿಕದ ನೆಲೆಯ ಮೇಲೆ ದೊಡ್ಡ ಪ್ರಮಾಣದ ಡ್ರೋನ್ ದಾಳಿ ನಡೆದಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇರಾನಿನ ಡ್ರೋನ್‌ಗಳನ್ನು ತಡೆದು ನಾಶಪಡಿಸಲಾಗಿದೆ ಎಂದು ಬಹ್ರೇನ್ ಹೇಳಿದೆ.

ಇರಾನಿನ ಆಕ್ರಮಣ ಎಂದು ಬಣ್ಣಿಸಿದ ನಂತರ, ಕುವೈತ್‌ನ ಸೇನೆಯು ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಪ್ರತಿಕೂಲ ಡ್ರೋನ್ ದಾಳಿಗೆ ಪ್ರತಿಕ್ರಿಯಿಸುತ್ತಿವೆ ಎಂದು ಪ್ರತ್ಯೇಕವಾಗಿ ಹೇಳಿದೆ. ಬಂದರ್ ಅಬ್ಬಾಸ್, ಚಾಬಹಾರ್, ಜಾಸ್ಕ್, ಸಿರಿಕ್ ಮತ್ತು ಅಸಲುಯೆಹ್ ಹಾಗೂ ಹಾರ್ಮೊಜ್‌ ಜಲಸಂಧಿಯಲ್ಲಿರುವ ಕೆಶ್ಮ್ ದ್ವೀಪ ಸೇರಿದಂತೆ ದಕ್ಷಿಣ ಇರಾನ್‌ನ ಹಲವಾರು ಸ್ಥಳಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ.

ಅಮೆರಿಕ-ಇರಾನ್‌ ಸಂಘರ್ಷ ಮತ್ತೆ ತಾರಕಕ್ಕೆ: ಇಂದೇ ರಾತ್ರಿ ದಾಳಿ ಮಾಡುವುದಾಗಿ ಡೊನಾಲ್ಡ್‌ ಟ್ರಂಪ್ ಎಚ್ಚರಿಕೆ

ಅಮೆರಿಕ ನಡೆಸಿದ ದಾಳಿಯೊಂದರಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ಮನೆಯೊಂದು ಗುರಿಯಾಗಿದ್ದು, ಐವರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ಸೆಂಟ್ರಲ್ ಕಮಾಂಡ್ ನಿನ್ನೆ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ವಾಯು ರಕ್ಷಣಾ ತಾಣಗಳು, ರಾಡಾರ್ ವ್ಯವಸ್ಥೆಗಳು ಮತ್ತು ಸಮುದ್ರ ಸಂಬಂಧಿತ ಸೇನಾ ಸೌಲಭ್ಯಗಳು ಸೇರಿದಂತೆ ಇರಾನ್‌ನ ಸೇನಾ ಗುರಿಗಳ ವಿರುದ್ಧದ ಇತ್ತೀಚಿನ ದಾಳಿಯನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.