ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮತ್ತೆ ಹೊತ್ತಿ ಉರಿದ ಪಶ್ಚಿಮ ಏಷ್ಯಾ; ಕದನ ವಿರಾಮದ ನಂತರ ಇಸ್ರೇಲ್-ಇರಾನ್ ದಾಳಿ-ಪ್ರತಿ ದಾಳಿ

Iran Launches Ballistic Missile Attack: ಕದನ ವಿರಾಮ ಘೋಷಣೆಯ ನಂತರವೂ ಯುದ್ಧದ ಕಾರ್ಮೋಡ ಸರಿದಿಲ್ಲ. ಇರಾನ್‌ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ದಾಳಿ ಮಾಡಿದ ಕೆಲವೇ ಗಂಟೆಗಳ ನಂತರ ಸಂಘರ್ಷವು ಮತ್ತೊಂದು ಅಪಾಯಕಾರಿ ತಿರುವು ಪಡೆದುಕೊಂಡಿತು. ಇರಾನ್‌ ಇಸ್ರೇಲ್‌ ಮೇಲೆ ಪ್ರತಿ ದಾಳಿ ನಡೆಸಿದೆ.

ಇಸ್ರೇಲ್ ವಿರುದ್ಧ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಇರಾನ್

ಇಸ್ರೇಲ್ ವಿರುದ್ಧ ಇರಾನ್‌ನ ಕ್ಷಿಪಣಿ ದಾಳಿ -

Priyanka P
Priyanka P Jun 8, 2026 4:23 PM

ಟೆಹರಾನ್, ಜೂ. 8: ಕದನ ವಿರಾಮ ಘೋಷಣೆಯ ನಂತರವೂ ಯುದ್ಧದ ಕಾರ್ಮೋಡ ಸರಿದಿಲ್ಲ. ಲೆಬನಾನ್‌ನ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ದಾಳಿ (Israel attack) ಮಾಡಿದ ಕೆಲವೇ ಗಂಟೆಗಳ ನಂತರ, ಸಂಘರ್ಷವು ಮತ್ತೊಂದು ಅಪಾಯಕಾರಿ ತಿರುವು ಪಡೆದುಕೊಂಡಿತು. ಭಾನುವಾರ (ಜೂನ್‌ 7) ರಾತ್ರಿ ಉತ್ತರ ಇಸ್ರೇಲ್‌ನ ಹಲವು ಪ್ರದೇಶಗಳಲ್ಲಿ ವೈಮಾನಿಕ ದಾಳಿಯ ಎಚ್ಚರಿಕೆ ಸೈರನ್‌ಗಳು ಮೊಳಗಿದವು. ಇಸ್ರೇಲ್‌ನತ್ತ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿತು. ಏಪ್ರಿಲ್ 8ರಂದು ಜಾರಿಗೆ ಬಂದಿದ್ದ ಕದನ ವಿರಾಮದ ಬಳಿಕ ಇಸ್ರೇಲ್ ವಿರುದ್ಧ ಇರಾನ್ ನಡೆಸಿದ ಮೊದಲ ನೇರ ದಾಳಿ ಇದಾಗಿದೆ.

ಇರಾನ್‌ನಿಂದ ಹಾರಿಸಲಾದ ಕ್ಷಿಪಣಿಗಳನ್ನು ಪತ್ತೆಹಚ್ಚಿ ತಕ್ಷಣವೇ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಬೆದರಿಕೆಯ ಬಗ್ಗೆ ನಿವಾಸಿಗಳಿಗೆ ಎಚ್ಚರಿಕೆ ನೀಡುತ್ತಿದ್ದಂತೆ ಹಲವು ಪ್ರದೇಶಗಳಲ್ಲಿ ಸೈರನ್‌ಗಳು ಮೊಳಗಿದವು.

ಇಸ್ರೇಲ್‌ ಮೇಲೆ ಇರಾನ್‌ ಆಕ್ರಮಣ:



ಇರಾನ್‌ನಿಂದ ಹಾರಿಸಲಾದ ಕ್ಷಿಪಣಿಗಳನ್ನು ಪತ್ತೆಹಚ್ಚಿ ತಕ್ಷಣವೇ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಇಸ್ರೇಲ್‌ ತಿಳಿಸಿದೆ. ಅಧಿಕಾರಿಗಳು ಬೆದರಿಕೆಯ ಬಗ್ಗೆ ನಿವಾಸಿಗಳಿಗೆ ಎಚ್ಚರಿಕೆ ನೀಡುತ್ತಿದ್ದಂತೆ ಹಲವು ಪ್ರದೇಶಗಳಲ್ಲಿ ಸೈರನ್‌ಗಳು ಮೊಳಗಿದವು. ಇರಾನ್‌ನಿಂದ ಇಸ್ರೇಲ್ ಕಡೆಗೆ ಉಡಾಯಿಸಲಾದ ಕ್ಷಿಪಣಿಗಳನ್ನು ಐಡಿಎಫ್ ಗುರುತಿಸಿದೆ. ಈ ಬೆದರಿಕೆಯನ್ನು ತಡೆಯಲು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೇಲ್‌ ಮಿಲಿಟರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಅಮೆರಿಕ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ; ಕುವೈತ್‌, ಬಹ್ರೇನ್‌ನಲ್ಲಿ ಹೈ ಅಲರ್ಟ್

ಇಸ್ರೇಲ್‌ ಸೇನೆ ಹೇಳಿದ್ದೇನು?

ಇರಾನ್‌ನಿಂದ ಹಾರಿಸಲಾದ ಎಲ್ಲ ಕ್ಷಿಪಣಿಗಳನ್ನು ವಾಯುಪಡೆಯು ಇಲ್ಲಿಯವರೆಗೆ ತಡೆಹಿಡಿದಿದೆ ಎಂದು ಸೇನೆ ತಿಳಿಸಿದೆ. ಇಸ್ರೇಲ್ ಕಡೆಗೆ ಹಾರಿಸಲಾದ ಹೆಚ್ಚುವರಿ ಕ್ಷಿಪಣಿಗಳನ್ನು ಸಹ ಅದು ಗುರುತಿಸಿದೆ ಎಂದು ಅದು ಹೇಳಿದೆ.

ಈ ದಾಳಿಯು ಏಪ್ರಿಲ್ 8ರಂದು ಜಾರಿಗೆ ಬಂದಿದ್ದ ಕದನ ವಿರಾಮದ ಬಳಿಕ ಇಸ್ರೇಲ್ ವಿರುದ್ಧ ಇರಾನ್ ನಡೆಸಿದ ಮೊದಲ ನೇರ ದಾಳಿಯಾಗಿದ್ದು, ಹಲವು ದಿನಗಳ ಬಳಿಕ ಮತ್ತೆ ಯುದ್ಧ ತೀವ್ರಗೊಳ್ಳುವ ಭೀತಿ ಎದುರಾಗಿದೆ. ಬೈರುತ್ ಮೇಲೆ ಇಸ್ರೇಲ್ ದಾಳಿ ನಡೆಸಿದರೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹಲವು ಬಾರಿ ಎಚ್ಚರಿಕೆ ನೀಡಿತ್ತು. ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿದ್ದ ಸೇನಾ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ, ಅಮೆರಿಕದೊಂದಿಗೆ ನಡೆಯುತ್ತಿದ್ದ ಪರೋಕ್ಷ ಮಾತುಕತೆಗಳನ್ನೂ ಇರಾನ್ ಸ್ಥಗಿತಗೊಳಿಸಿದೆ.

ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಮಧ್ಯ ಪ್ರವೇಶಿಸಿ, ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಭಾಗಶಃ ಕದನ ವಿರಾಮವನ್ನು ಘೋಷಿಸಿದ್ದರು. ಆದರೆ ಎರಡೂ ಕಡೆಯವರು ದಾಳಿಗಳನ್ನು ಮುಂದುವರಿಸಿದ್ದರಿಂದ ಆ ಕದನ ವಿರಾಮ ಅದೇ ದಿನ ವಿಫಲವಾಯಿತು.

ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್‌ ಪಡೆಗಳು ವೈಮಾನಿಕ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ ಈ ಕ್ಷಿಪಣಿ ಉಡಾವಣೆ ನಡೆದಿದೆ. ಈ ಪ್ರದೇಶವು ಹಿಜ್ಬೊಲ್ಲಾದ ಭದ್ರಕೋಟೆ ಎಂದು ಕರೆಯಲ್ಪಟ್ಟಿದೆ. ಇಸ್ರೇಲ್ ಲೆಬನಾನ್ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಅಥವಾ ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಕಮಾಂಡರ್ ಎಚ್ಚರಿಸಿದ್ದಾರೆ.