ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಭಾರತ - ಪಾಕಿಸ್ತಾನ ಸಂಘರ್ಷ; ಪಾಕ್‌ನ 11 ಸೈನಿಕರು ಸಾವು; 78 ಜನರಿಗೆ ಗಾಯ, ಅಧಿಕೃತ ಮಾಹಿತಿ ಬಿಡುಗಡೆ

ಪಾಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಭಾರತ ಸರ್ಕಾರ ನಡೆಸಿದ್ದ (Operation Sindoor) ಆಪರೇಷನ್‌ ಸಿಂದೂರ್‌ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಕಳೆದ ವಾರ ಭಾರತದೊಂದಿಗೆ ನಡೆದ ಸಂಘರ್ಷದಲ್ಲಿ ಪಾಕಿಸ್ತಾನದ 11 ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ದಾಖಲೆಯನ್ನು ಪಾಕ್‌ ಸರ್ಕಾರ ಬಿಡುಗಡೆ ಮಾಡಿದೆ.

ಭಾರತ - ಪಾಕಿಸ್ತಾನ ಸಂಘರ್ಷ; ಪಾಕ್‌ನ 11 ಸೈನಿಕರು ಸಾವು; 78 ಜನರಿಗೆ ಗಾಯ

Profile Vishakha Bhat May 13, 2025 2:19 PM

ಇಸ್ಲಾಮಾಬಾದ್:‌ ಪಾಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಭಾರತ ಸರ್ಕಾರ ನಡೆಸಿದ್ದ ಆಪರೇಷನ್‌ ಸಿಂದೂರ್‌ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಕಳೆದ ವಾರ ಭಾರತದೊಂದಿಗೆ ನಡೆದ ಸಂಘರ್ಷದಲ್ಲಿ ಪಾಕಿಸ್ತಾನದ 11 ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ದಾಖಲೆಯನ್ನು ಪಾಕ್‌ ಸರ್ಕಾರ ಬಿಡುಗಡೆ ಮಾಡಿದೆ. ನಾಲ್ಕು ದಿನಗಳ ಕಾಲ ನಡೆದ ಈ ಘರ್ಷಣೆಯಲ್ಲಿ ಪಾಕಿಸ್ತಾನ ಸೇನೆ ಮತ್ತು ವಾಯುಪಡೆಯ ಎಪ್ಪತ್ತೆಂಟು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಮೃತಪಟ್ಟವರಲ್ಲಿ ಅಧಿಕಾರಿಗಳು ಸೇರಿದಂತೆ ಯೋಧರು ಮೃತಪಟ್ಟಿದ್ದಾರೆ.

ಪಾಕಿಸ್ತಾನ ವಾಯುಪಡೆಯ ಸ್ಕ್ವಾಡ್ರನ್ ಲೀಡರ್‌ ಉಸ್ಮಾನ್ ಯೂಸುಫ್, ಮುಖ್ಯ ತಂತ್ರಜ್ಞ ಔರಂಗಜೇಬ್, ಹಿರಿಯ ತಂತ್ರಜ್ಞ ನಜೀಬ್, ಕಾರ್ಪೋರಲ್ ತಂತ್ರಜ್ಞ ಫಾರೂಕ್ ಮತ್ತು ಹಿರಿಯ ತಂತ್ರಜ್ಞ ಮುಬಾಶಿರ್ ಮೃತಪಟ್ಟಿದ್ದಾರೆ. ಸೇನೆಯಲ್ಲಿ ನಾಯಕ್ ಅಬ್ದುಲ್ ರೆಹಮಾನ್, ಲ್ಯಾನ್ಸ್ ನಾಯಕ್ ದಿಲಾವರ್ ಖಾನ್, ಲ್ಯಾನ್ಸ್ ನಾಯಕ್ ಇಕ್ರಮುಲ್ಲಾ, ನಾಯಕ್ ವಕಾರ್ ಖಾಲಿದ್, ಸಿಪಾಯಿ ಮುಹಮ್ಮದ್ ಅದೀಲ್ ಅಕ್ಬರ್ ಮತ್ತು ಸಿಪಾಯಿ ನಿಸಾರ್ ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ನಡೆಸಿದ ನಿಖರ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಭಾರತೀಯ ಸಶಸ್ತ್ರ ಪಡೆಗಳು ಅಧಿಕೃತವಾಗಿ ಹೇಳಿಕೆಯನ್ನು ನೀಡಿತ್ತು. ಭಾರತೀಯ ಸಶಸ್ತ್ರ ಪಡೆಗಳ ಪ್ರಕಾರ 30-40 ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆಯನ್ನು ನೀಡಲಾಗಿತ್ತು.

ಭಯೋತ್ಪಾದಕರ ವಿರುದ್ಧ ಭಾರತ ತೆಗೆದುಕೊಂಡ ಕ್ರಮಕ್ಕೆ ಪ್ರತಿಯಾಗಿ, ಪಾಕಿಸ್ತಾನಿ ಸೇನೆಯು ಭಾರತೀಯ ಮಿಲಿಟರಿ ನೆಲೆಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ಗಳು ಮತ್ತು ಇತರ ಸ್ಪೋಟಕಗಳ ದಾಳಿ ನಡೆಸಿತು. ಭಾರತೀಯ ಪಡೆಗಳು ಈ ದಾಳಿಯನ್ನು ವಿಫಲಗೊಳಿಸಿದವು. ಪಾಕಿಸ್ತಾನ ನಾಗರಿಕರ ಮೇಲೆ ದಾಳಿ ಮುಂದುವರಿಸುತ್ತಿದ್ದಂತೆ, ಭಾರತವು ಪ್ರತೀಕಾರ ತೀರಿಸಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Operation Sindoor: ಭಾರತದ ನಿಖರ ದಾಳಿಗೆ ಉಗ್ರರ ತಾಣ, ಪಾಕ್‌ ವಾಯು ನೆಲೆ ಛಿದ್ರ ಛಿದ್ರ; ಇಲ್ಲಿದೆ ಸ್ಯಾಟ್‌ಲೈಟ್‌ ಚಿತ್ರಗಳು

ಭಾರತ ಪಾಕಿಸ್ತಾನ ಹಲವು ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ರಾಜಧಾನಿ ಇಸ್ಲಾಮಾಬಾದ್‌ನಿಂದ ಕೇವಲ 10 ಕೀ.ಮಿ ದೂರದಲ್ಲಿರುವ ವಾಯುನೆಲೆಗಳ ಮೇಲೆ ಭಾರತ ದಾಳಿ ಮಾಡಿದೆ. ಅದರ ಸ್ಯಾಟ್‌ಲೈಟ್‌ ಚಿತ್ರಗಳು ಇದೀಗ ಬಿಡುಗಡೆಯಾಗಿವೆ.