Operation Sindoor 2.0: ಪಾಕಿಸ್ತಾನಿಗಳನ್ನು ಭಾರತೀಯ ಸೇನೆಯಿಂದ ದಯವಿಟ್ಟು ರಕ್ಷಿಸಿ; ಪಾರ್ಲಿಮೆಂಟಿನಲ್ಲಿ ಗೋಳಾಡಿದ ಸಂಸದ!
ಪಹಾಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಮೇ 7ರ ಬೆಳಗಿನ ಜಾವ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್ ಸಿಂದೂರ್ (Operation Sindoor) ನಡೆಸಿ ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಸಂಸದನಾಗಿರುವ ತಾಹೀರ್ ಇಕ್ಬಾಲ್ ಪಾಕ್ ಸೇನೆಯ ನಿವೃತ್ತ ಮೇಜರ್ ಎಂದು ಮೂಲಗಳು ತಿಳಿಸಿವೆ.


ಇಸ್ಲಾಮಾಬಾದ್: ಪಹಾಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಮೇ 7ರ ಬೆಳಗಿನ ಜಾವ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್ ಸಿಂದೂರ್ (Operation Sindoor) ನಡೆಸಿ ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಇದೀಗ ಆಪರೇಷನ್ ಸಿಂದೂರ್ 2.0 ಕೂಡ ಶುರುವಾಗಿದೆ. ಭಾರತದ ದಿಢೀರ್ ದಾಳಿಗೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿ ಹೋಗಿದೆ. ಭಾರತದ ದಾಳಿಯ ಕುರಿತು ಇದೀಗ ಪಾಕಿಸ್ತಾನದ ಪಾರ್ಲಿಮೆಂಟ್‌ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ ಎಂಬ ಮಾಹಿತಿಯಿದೆ. ಈ ಮಧ್ಯೆ ಪಾಕ್ ಮೂಲದ ಸಂಸದ ತಾಹೀರ್ ಇಕ್ಬಾಲ್ ಪಾಕಿಸ್ತಾನದ ಪ್ರಜೆಗಳನ್ನು ಕಾಪಾಡುವಂತೆ ಕೋರಿ ಸಂಸತ್ತಿನಲ್ಲಿಯೇ ಅತ್ತು ಗೋಳಾಡಿದ್ದಾನೆ. "ಭಾರತದ ದಾಳಿಯಿಂದ ಪಾಕಿಸ್ತಾನದ ನಿವಾಸಿಗಳನ್ನು ದಯವಿಟ್ಟು ರಕ್ಷಿಸಿ. ಭಾರತದ ದಾಳಿಯಿಂದಾಗಿ ಅಮಾಯಕ ಜನರು ಸಾಯುತ್ತಾರೆ. ಸರ್ಕಾರವು ನಾಗರಿಕರನ್ನು ರಕ್ಷಿಸಲೇಬೇಕು" ಎಂದು ಇಕ್ಬಾಲ್ ಕಣ್ಣೀರಿಟ್ಟಿದ್ದಾನೆ. ಸಂಸದನಾಗಿರುವ ತಾಹೀರ್ ಇಕ್ಬಾಲ್ ಪಾಕ್ ಸೇನೆಯ ನಿವೃತ್ತ ಮೇಜರ್ ಎಂದು ಮೂಲಗಳು ತಿಳಿಸಿವೆ.
The video of the day 💀🔥🔥
— Sumit (@SumitHansd) May 8, 2025
I'm begging you all, save Pakistan from India - Pakistani MP#IndiaPakistanWar #OperationSindoor2 pic.twitter.com/x72cCDQR7o
ಆಪರೇಷನ್ ಸಿಂದೂರ್ ಯಶಸ್ವಿಯಾಗುತ್ತಿದ್ದಂತೆ ಭಾರತೀಯ ಸೇನೆಯು ಇದೀಗ ಆಪರೇಷನ್ ಸಿಂದೂರ್ 2.O ಶುರು ಮಾಡಿದೆ. ನಿನ್ನೆ(ಮೇ.7) ನಡೆದ ದಾಳಿಯಿಂದ ಥರಗುಟ್ಟಿ ಹೋಗಿದ್ದ ಪಾಕ್‌ಗೆ ಭಾರತೀಯ ಸೇನೆ ಮತ್ತೊಮ್ಮೆ ಶಾಕ್ ನೀಡಿದೆ. ಲಾಹೋರ್ ಮತ್ತು ಕರಾಚಿ ಮೇಲೆ ದಾಳಿ ಬಳಿಕ ಇದೀಗ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಹೊಸ ಸ್ಫೋಟಗಳು ವರದಿಯಾಗಿವೆ. ಪಾಕಿಸ್ತಾನದ ಮಿಲಿಟರಿ ಪ್ರಧಾನ ಕಚೇರಿ ಬಳಿ ಸ್ಪೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾವಲ್ಪಿಂಡಿಯ ಹೊರತಾಗಿ, ಗುಜ್ರಾನ್‌ವಾಲಾ, ಚಕ್ವಾಲ್, ಅಟ್ಟಾಕ್, ಬಹಾವಲ್ಪುರ್, ಮಿಯಾನೋ ಮತ್ತು ಚೋರ್‌ಗಳಲ್ಲಿಯೂ ಸ್ಫೋಟಗಳು ವರದಿಯಾಗಿವೆ. ರಾವಲ್ಪಂಡಿ ಕ್ರಿಕೆಟ್ ಮೈದಾನದ ಬಳಿಯೇ ಸ್ಪೋಟ ಸಂಭವಿಸಿದೆ ಎಂಬ ಮಾಹಿತಿಯಿದೆ.
ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್ ಸಿಂಧೂರ್ ನಂತರ ನೇರಪ್ರಸಾರದ ವೇಳೆ ಕಣ್ಣೀರಿಟ್ಟ ಪಾಕಿಸ್ತಾನಿ ನ್ಯೂಸ್ ಆ್ಯಂಕರ್
ಈಗಾಗಲೇ ಸಿಯಾಲ್‌ಕೋಟ್ ಮತ್ತು ಲಾಹೋರ್‌ನಲ್ಲಿರುವ ಪಾಕಿಸ್ತಾನ ಸೇನೆಯ ವಾಯು ರಕ್ಷಣಾ ಘಟಕದ ಮೇಲೆ ಭಾರತ ಮತ್ತೊಮ್ಮೆ ದಾಳಿ ನಡೆಸಿದೆ. ಭಾರತದ 15 ನಗರಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಪ್ಲ್ಯಾನ್ ಮಾಡಿದೆ ಎಂಬ ಮಾಹಿತಿಯಿತ್ತು. ಆದರೆ ಭಾರತೀಯ ಸೇನೆಯು ಪಾಕ್‌ನ ಪ್ರತೀಕಾರದ ಪ್ರಯತ್ನವನ್ನು ವಿಫಲಗೊಳಿಸಿದೆ.ಪಾಕಿಸ್ತಾನದ ಡಿಫೆನ್ಸ್ ಸಿಸ್ಟಮ್ HQ-9 ಧ್ವಂಸಗೊಳಿಸಿದೆ ಎಂದು ತಿಳಿದು ಬಂದಿದೆ. ಇದೀಗ ಇಡೀ ಪಾಕಿಸ್ತಾನ ನಲುಗಿ ಹೋಗಿದೆ.