ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi: ಪ್ರಧಾನಿ ಮೋದಿ ಭೂತಾನ್ ಭೇಟಿ: ಅತೀ ಚಿಕ್ಕ ನೆರೆ ರಾಷ್ಟ್ರದ ಜತೆ ಭಾರತದ ಸಂಬಂಧಕ್ಕೆ ಯಾಕಿಷ್ಟು ಆದ್ಯತೆ?

Pm Modi Bhutan Visit: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಭೂತಾನ್ ಪ್ರವಾಸ ಕೈಗೊಂಡಿದ್ದಾರೆ. ಭೂತಾನ್ ರಾಜ ಜಿಗ್ಮೆ ಸಿಂಘೆ ವಾಂಗ್‌ಚುಕ್ ಅವರ 70ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ತೆರಳಿದ್ದಾರೆ. ದೆಹಲಿಯ ಬಾಂಬ್ ಸ್ಫೋಟದ ನಂತರವೂ ಮೋದಿ ಭೂತಾನ್‌ಗೆ ಭೇಟಿ ನೀಡಿದ್ದಾರೆ.

ಭೂತಾನ್ ಪ್ರವಾಸದಲ್ಲಿ ಪಿಎಂ ಮೋದಿ

ಭೂತಾನ್‌ಗೆ ಭೇಟಿ ನೀಡಿದ ಪಿಎಂ ಮೋದಿ -

Profile
Sushmitha Jain Nov 11, 2025 10:55 PM

ನವದೆಹಲಿ: ನ. 10ದಂದು ಉಗ್ರ ದಾಳಿಗೆ(Terrorist Attack) ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿ ಹೋಗಿತ್ತು. ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಭೀಕರ ಕಾರು ಬಾಂಬ್ ಸ್ಪೋಟಕ್ಕೆ(Bomb Blast) 10 ಜನರು ಪ್ರಾಣ ತೆರಬೇಕಾಯ್ತು. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೂತಾನ್ ಪ್ರವಾಸ ನಿಗದಿಯಾಗಿತ್ತು. ಪ್ರಧಾನಿ ಮೋದಿ ನ. 11ರಂದು ಭೂತಾನ್ ಪ್ರವಾಸ ಕೈಗೊಳ್ಳಬೇಕಿತ್ತು. ಈ ಹಿಂದೆಯೂ ಪ್ರಧಾನಿ ಮೋದಿ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಸಂದರ್ಭದಲ್ಲೇ ಪಹಲ್ಗಾಮ್ ದಾಳಿ ನಡೆದಿತ್ತು. ದೆಹಲಿ ಸ್ಪೋಟದ ಬಳಿಕ ಪ್ರಧಾನಿ ಮೋದಿ ತಮ್ಮ ಭೂತಾನ್ ಪ್ರವಾಸದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ತನ್ನ ನೆರೆಯ ಪುಟ್ಟ ರಾಷ್ಟ್ರಕ್ಕೆ ನಿಗದಿಯಾಗಿದ್ದ ತನ್ನ ಪ್ರವಾಸವನ್ನು ಮುಂದುವರಿಸಬೇಕೇ ಅಥವಾ ರದ್ದುಗೊಳಿಸಬೇಕೇ ಎಂಬ ಪ್ರಶ್ನೆ ಪ್ರಧಾನಿಯವರ ಮುಂದಿತ್ತು. ಆದರೆ ಪ್ರಧಾನಿ ಮೋದಿ ನಿಗದಿಯಾದ ದಿನದಂದೇ ಭೂತಾನ್‌ಗೆ ವಿಮಾನ ಹತ್ತಿಯೇ ಬಿಟ್ಟರು!

ಇಲ್ಲೇ ಇರೋದು ಸ್ಟ್ರಾಟಜಿ. ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ ತನ್ನ ನೆರೆಯ ಪುಟ್ಟ ದೇಶ ಭೂತಾನ್‌ನೊಂದಿಗೆ ಗಾಢ ಮೈತ್ರಿಯನ್ನು ಸಾಧಿಸಲು ಯಾಕಿಷ್ಟು ತವಕಿಸುತ್ತಿದೆ ಎಂಬುದರಲ್ಲೆ ಭಾರತದ ರಾಜತಾಂತ್ರಿಕ ಗುಟ್ಟು ಅಡಗಿದೆ! ಭೂತಾನ್ ಜತೆ ತನ್ನ ರಾಜತಾಂತ್ರಿಕ ಬಾಂಧವ್ಯವನ್ನು ಎಂದೂ ಹದಗೆಡಲು ಭಾರತ ಬಿಟ್ಟಿಲ್ಲ. ಭಾರತ ಮತ್ತು ಪ್ರಧಾನಿ ಮೋದಿ ಅವರ ಈ ದಿಟ್ಟ ನಿಲುವನ್ನು ಭೂತಾನ್ ದೊರೆ ಜಿಗ್ಮೆ ಸಿಂಗ್ಯೆ ವಾಂಗ್ ಚುಕ್ ಪ್ರಶಂಸಿದ್ದಾರೆ. ಇದೇ ಸಂದರ್ಭದಲ್ಲಿ ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ‘ʼದೆಹಲಿ ಸ್ಫೋಟಕ್ಕೆ ಕಾರಣರಾದ ಎಲ್ಲರನ್ನೂ ನ್ಯಾಯಾಲಯದ ಕಟಕಟೆ ಮೇಲೆ ನಿಲ್ಲಿಸುತ್ತೇವೆ’ʼ ಎಂದು ಶಪಥ ಮಾಡಿದ್ದಾರೆ.

ಗೆಳೆತನದಿಂದ ಸ್ಟ್ರಾಟಜಿವರೆಗೆ

2014ರಲ್ಲಿ ಪ್ರಧಾನಿ ಮೋದಿ ಮೊಟ್ಟ ಮೊದಲ ಬಾರಿಗೆ ಭೂತಾನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅವರು ಕೇವಲ ಭಾರತದ ಹಳೆಯ ಮಿತ್ರರಾಷ್ಟ್ರಕ್ಕೆ ಔಪಚಾರಿಕ ಭೇಟಿಯನ್ನಷ್ಟೇ ಕೊಟ್ಟಿರಲಿಲ್ಲ, ಬದಲಾಗಿ ಭಾರತದ ವಿದೇಶಾಂಗ ನೀತಿ ಅದರ ಮಿತ್ರರಾಷ್ಟ್ರಗಳೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವುದರಲ್ಲಿದೆ ಎಂಬ ಬಲವಾದ ಸಂದೇಶವನ್ನು ಸಾರಿದ್ದರು.

ತಮ್ಮ ಮೊದಲ ಭೇಟಿಯಲ್ಲೇ ಪ್ರಧಾನಿ ಮೋದಿ ದಶಕಗಳ ಕಾಲ ಪರಿಣಾಮ ಬೀರಬಹುದಾದ ಮೈಲುಗಲ್ಲೊಂದನ್ನು ಮಾಡಿ ಬಿಟ್ಟಿದ್ದರು. ತಮ್ಮ ಪ್ರಥಮ ಭೇಟಿಯಲ್ಲೇ ಪ್ರಧಾನಿ ಮೋದಿ ಆ ಪುಟ್ಟ ರಾಷ್ಟ್ರದಲ್ಲಿ ಹಲವು ಪ್ರಾಜೆಕ್ಟ್‌ಗಳ ಘೋಷಣೆ ಮಾಡಿದ್ದರು. ಸ್ಕಾಲರ್ ಶಿಪ್ ಘೋಷಿಸಿದ್ದರು ಮತ್ತು ಭಾರಿ ಮೊತ್ತದ ಹೂಡಿಕೆಯ ಭರವಸೆಯನ್ನು ನೀಡಿದ್ದರು. 600 ಮೆಗಾ ವ್ಯಾಟ್ ಖೊಲೊಂಗ್ಚು ಹೈಡ್ರೋಎಲೆಕ್ಟ್ರಿಕ್ ಪ್ರಾಜೆಕ್ಟ್‌ಗೆ ಶಿಲಾನ್ಯಾಸ ಮಾಡಿದ್ದರು. ಭಾರತದಲ್ಲಿ ವಿದ್ಯಾಭ್ಯಾಸ ಮಾಡುವ ಭೂತಾನಿ ವಿದ್ಯಾರ್ಥಿಗಳ ಸ್ಕಾಲರ್ ಶಿಲ್ ಮೊತ್ತವನ್ನು 1 ಕೋಟಿ ರೂಪಾಯಿಗಳಿಂದ 2 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಿದ್ದರು. ಮಾತ್ರವಲ್ಲದೇ ಭೂತಾನ್‌ನಲ್ಲಿ ಭಾರತವು ಡಿಜಿಟಲ್ ಲೈಬ್ರೇರಿಯನ್ನು ಸ್ಥಾಪಿಸಿ ಆ ಮೂಲಕ ಎರಡು ಮಿಲಿಯನ್ ಪುಸ್ತಕಗಳು ಅಲ್ಲಿನವರಿಗೆ ಸಿಗುವಂತೆ ಮಾಡುವ ಭರವಸೆ ನೀಡಿದ್ದರು.

ಈ ಸುದ್ದಿಯನ್ನು ಓದಿ: Lalit Modi-Vijay Mallya: ಲಂಡನ್‌ನಲ್ಲಿ ಅದ್ದೂರಿ ಪಾರ್ಟಿ; ಒಟ್ಟಿಗೆ ಹಾಡು ಹಾಡಿದ ವಿಜಯ್ ಮಲ್ಯ-ಲಲಿತ್ ಮೋದಿ; ವಿಡಿಯೊ ನೋಡಿ

ಭೂತಾನ್‌ನೊಂದಿಗೆ ಭಾರತದ ಸಂಬಂಧದ ಇಂದಿನ ಮೂಲ ಆಶಯವೇ ಎನರ್ಜಿ ಸಹಯೋಗದಲ್ಲಿ ಮುನ್ನಡೆಯುತ್ತಿದೆ. ಇದೇ ಈ ಎರಡು ದೇಶಗಳ ಸಂಬಂಧಗಳ ಬೆನ್ನೆಲುಬಾಗಿದೆ. ತಮ್ಮ ಪ್ರಥಮ ಭೇಟಿಯ ಅವಧಿಯಲ್ಲೇ ಪ್ರಧಾನಿ ಮೋದಿ 2020ರ ವೇಳೆಗೆ ಭೂತಾನ್‌ನಿಂದ 10,000 ಮೆಗಾ ವ್ಯಾಟ್ ವಿದ್ಯುತ್ ಖರೀದಿಸುವ ಭರವಸೆಯನ್ನು ನೀಡಿದ್ದರು. ಆ ನಂತರದ ವರ್ಷಗಳಲ್ಲಿ ಈ ಗುರಿ ಇನ್ನಷ್ಟು ಹೆಚ್ಚಳಗೊಂಡಿದೆ.

ಪ್ರಧಾನಿ ಮೋದಿ ಅವರ ಈ ಬಾರಿಯ ಭೂತಾನ್ ಪ್ರವಾಸದ ಸಂದರ್ಭದಲ್ಲಿ 1,020 ಮೆಗಾ ವ್ಯಾಟ್ ಸಾಮರ್ಥ್ಯದ ಪುನಸ್ಟಾಂಗ್ಚು-II ಹೈಡ್ರೋಎಲೆಕ್ಟ್ರಿಕ್ ಪ್ರಾಜೆಕ್ಟನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದು ಭೂತಾನ್ ದೇಶದ ಅತೀ ದೊಡ್ಡ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಆಗಿರುವುದು ವಿಶೇಷ. ಇದರಿಂದಾಗಿ ಭಾರತದ ವಿದ್ಯುತ್ ಜಾಲ ಇನ್ನಷ್ಟು ವಿಸ್ತಾರಗೊಳ್ಳಲಿರುವುದು ಮಾತ್ರವಲ್ಲದೇ ನಮ್ಮ ಈಶಾನ್ಯ ರಾಜ್ಯಗಳಿಗೆ ಭರಪೂರ ವಿದ್ಯುತ್ ಲಭಿಸಲಿದೆ.

ಡಿಜಿಟಲ್ ಕ್ರಾಂತಿ

2019ರಲ್ಲಿ ಭೂತಾನ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅಲ್ಲಿನ ಪ್ರಧಾನಿ ಲೋಟೇ ಶೆರಿಂಗ್ ಜತೆ ಸೇರಿ ಜಂಟಿಯಾಗಿ ರೂಪೇ ಕಾರ್ಡ್ ಯೋಜನೆಯನ್ನು ಅನಾವರಣಗೊಳಿಸಿದ್ದರು. 2020ರಲ್ಲಿ ಇದರ ಎರಡನೇ ಹಂತ ಅನಾವರಣಗೊಂಡಿತ್ತು. ಈ ಮೂಲಕ ಭಾರತದ ಭೀಮ್-ಯುಪಿಐ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊಟ್ಟಮೊದಲ ದೇಶವಾಗಿ ಭೂತಾನ್ ಮೂಡಿಬಂದಿತ್ತು.
ಚೀನಾದ ನಿರಂತರ ಒತ್ತಡ, ಬೆಳೆಯುತ್ತಿರುವ ಆರ್ಥಿಕ ದಾಹ, ಬಗೆಹರಿಯದ ಗಡಿ ಸಮಸ್ಯೆಗಳ ನಡುವೆಯೂ ಭೂತಾನ್ ಮತ್ತು ಭಾರತದ ಸಂಬಂಧ ದಿನೇ ದಿನೆ ಗಟ್ಟಿಗೊಳ್ಳುತ್ತಾ ಸಾಗುತ್ತಿದೆ.