Bangalore News: ಕನ್ನಡದಲ್ಲಿ ವಿಜ್ಞಾನದ ರಸದೌತಣ: ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್‌ನಿಂದ ವಿಶೇಷ ಅಭಿಯಾನ!
ಬೆಂಗಳೂರಿನ ಜಯನಗರದಲ್ಲಿರುವ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್‌ನಲ್ಲಿ(ParSEC) ಈ ತಿಂಗಳು ಪೂರ್ತಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡುವ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ. ಕೇಂದ್ರಕ್ಕೆ ಭೇಟಿ ನೀಡುವ ಎಲ್ಲ ಸಂದರ್ಶ ಕರಿಗೆ ಗ್ಯಾಲರಿಯಲ್ಲಿನ ವಿಜ್ಞಾನದ ಕೌತುಕಗಳನ್ನು ಕನ್ನಡ ಭಾಷೆಯಲ್ಲಿಯೇ ಮನಮುಟ್ಟು ವಂತೆ ವಿವರಿಸಲಾಗುತ್ತದೆ.
-
ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ: ಇಡೀ ತಿಂಗಳು ವಿಜ್ಞಾನದ ವಿವರಣೆ ಕನ್ನಡದಲ್ಲೇ!
ಟೆಕ್ಸ್‌ಟೈಲ್ಸ್ ಮತ್ತು 'ಸೈನ್ಸ್ ಆಫ್ ಸೌಂಡ್' ಕುರಿತು ಕಾರ್ಯಾಗಾರಗಳ ಆಯೋಜನೆ
ಕರ್ನಾಟಕದ ಕೌತುಕ, ವಿಜ್ಞಾನದ ಹಿನ್ನೆಲೆ ಕುರಿತು ಸಂದರ್ಶಕರೊಂದಿಗೆ ಸಂವಾದ
ಇದು ವಿಜ್ಞಾನ-ತಂತ್ರಜ್ಞಾನದ ಪ್ರಾಯೋಗಿಕ ಕಲಿಕಾ ಕೇಂದ್ರ
ಬೆಂಗಳೂರು: ಬೆಂಗಳೂರಿನ ಜಯನಗರದಲ್ಲಿರುವ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್‌ನಲ್ಲಿ (ParSEC) ಈ ತಿಂಗಳು ಪೂರ್ತಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡುವ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ. ಕೇಂದ್ರಕ್ಕೆ ಭೇಟಿ ನೀಡುವ ಎಲ್ಲ ಸಂದರ್ಶ ಕರಿಗೆ ಗ್ಯಾಲರಿಯಲ್ಲಿನ ವಿಜ್ಞಾನದ ಕೌತುಕಗಳನ್ನು ಕನ್ನಡ ಭಾಷೆಯಲ್ಲಿಯೇ ಮನಮುಟ್ಟು ವಂತೆ ವಿವರಿಸಲಾಗುತ್ತದೆ.
ವಿಜ್ಞಾನದ ವಿಷಯಗಳನ್ನು ಹೆಚ್ಚು ಆಕರ್ಷಕವಾಗಿಸಲು ಸಿಬ್ಬಂದಿ ವರ್ಗವು ಸಂದರ್ಶಕ ರೊಂದಿಗೆ ಸಂವಾದ ನಡೆಸಲಿದೆ. ಉದಾಹರಣೆಗೆ, ‘ನೀವೇನಾದರೂ ಕನ್ನಡದಲ್ಲಿ ಒಂದು ನುಡಿಗಟ್ಟು ಹೇಳಿದರೆ, ಅದರ ಹಿಂದಿನ ವಿಜ್ಞಾನದ ಹಿನ್ನೆಲೆ (Science behind it) ನಿಮಗೆ ಗೊತ್ತೇ?’ ಅಥವಾ ‘ಕರ್ನಾಟಕದಲ್ಲಿ ಬಳಕೆಯಲ್ಲಿರುವ ಯಾವುದಾದರೂ ತಂತ್ರಜ್ಞಾನದ ಹಿಂದಿನ ವಿಜ್ಞಾನವೇನು?’ ಎಂದು ಪ್ರಶ್ನಿಸುವ ಮೂಲಕ ಅವರನ್ನು ವಿಷಯದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಈ ರೀತಿಯಾಗಿ ವಿಜ್ಞಾನವನ್ನು ಕನ್ನಡದೊಂದಿಗೆ ಬೆಸೆಯುವ ಪ್ರಯತ್ನ ನಡೆಯಲಿದೆ.
ಇದನ್ನೂ ಓದಿ: Bangalore News: ಬ್ರಿಟಿಷ್ ಕೌನ್ಸಿಲ್ʼನ ಮೊದಲ ‘ಕ್ರಿಯೇಟಿವ್ ಕನ್ವರ್ಜೆನ್ಸ್: ಗ್ರೋತ್ ರೀಇಮ್ಯಾಜಿನ್’ ಬೆಂಗಳೂರಿನಲ್ಲಿ ಆರಂಭ
ವಾರಾಂತ್ಯದಲ್ಲಿ ವಿಜ್ಞಾನದ ವಿಶೇಷ ಕಾರ್ಯಾಗಾರಗಳು!
ಕೇವಲ ಗ್ಯಾಲರಿ ವಿವರಣೆಗೆ ಸೀಮಿತವಾಗದೇ, ಮಕ್ಕಳು ಹಾಗೂ ಸಂದರ್ಶಕರಲ್ಲಿ ವಿಜ್ಞಾನದ ಬಗೆಗೆ ಆಸಕ್ತಿ ಹೆಚ್ಚಿಸಲು ಪ್ರತಿ ಶನಿವಾರ ಮತ್ತು ಭಾನುವಾರ ಎರಡು ಮುಖ್ಯ ಕಾರ್ಯಾ ಗಾರಗಳನ್ನು ಆಯೋಜಿಸಲಾಗಿದೆ. ಇದಕ್ಕೆ ಹಾಜರಾಗಲು 'ಬುಕ್ ಮೈ ಶೋ' (Book My Show) ಮೂಲಕ ಟಿಕೆಟ್ ಕಾಯ್ದಿರಿಸಬಹುದು.
- ಟೆಕ್ಸ್‌ಟೈಲ್ಸ್ ವರ್ಕ್‌ಶಾಪ್ (ಬಟ್ಟೆಗಳಿಗೆ ಕಲರಿಂಗ್): ಈ ಕಾರ್ಯಾಗಾರದಲ್ಲಿ ಬಟ್ಟೆ ಗಳಿಗೆ ವಿಭಿನ್ನ ಬಣ್ಣಗಳನ್ನು ನೀಡುವುದು (ಕಲರ್ ಪೇಂಟ್ ಮಾಡುವುದು) ಸೇರಿದಂತೆ, ಸಿಲ್ಕ್‌ನಂತಹ ಮೆಟೀರಿಯಲ್‌ಗಳು ಎಲ್ಲಿಂದ ಬಂದಿವೆ? ಅವುಗಳ ಹಿಂದಿನ ವಿಜ್ಞಾನ ವೇನು? ಎಂಬುದನ್ನು ಕನ್ನಡದಲ್ಲಿ ಪ್ರಾಯೋಗಿಕವಾಗಿ ವಿವರಿಸಲಾಗುತ್ತದೆ.
- 2. ಸೈನ್ಸ್ ಆಫ್ ಸೌಂಡ್ (ಧ್ವನಿಯ ವಿಜ್ಞಾನ): ಈ ಕಾರ್ಯಕ್ರಮವು ಕನ್ನಡ ಭಾಷೆ ಯನ್ನು ವಿಜ್ಞಾನದೊಂದಿಗೆ ವಿಶಿಷ್ಟವಾಗಿ ಸಂಯೋಜಿಸುತ್ತದೆ. ಕನ್ನಡದಲ್ಲಿನ ಭಾಷೆಗಳ ವ್ಯತ್ಯಾಸಗಳು ಮತ್ತು ಬರೆಯುವ ಶೈಲಿಯ ವೈಜ್ಞಾನಿಕ ಹಿನ್ನೆಲೆಯನ್ನು ಧ್ವನಿ ವಿಜ್ಞಾನಕ್ಕೆ ಜೋಡಿಸಿ ಕಲಿಸಿಕೊಡಲಾಗುತ್ತದೆ.
ಈ ಕಾರ್ಯಾಗಾರಗಳು ಪ್ರತಿ ವಾರಾಂತ್ಯದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ನಡೆಯುತ್ತವೆ. ಒಂದು ವಾರ ಕಾರ್ಯಕ್ರಮ ತಪ್ಪಿಸಿಕೊಂಡವರು ಮುಂದಿನ ವಾರವೂ ಇದೇ ಕಾರ್ಯಾ ಗಾರಗಳಿಗೆ ಹಾಜರಾಗಲು ಇದು ಅನುಕೂಲ ಕಲ್ಪಿಸುತ್ತದೆ.
ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್‌ನ ವಿಶೇಷತೆ ಏನು?
ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್ (ParSEC) ಎಂಬುದು ಬೆಂಗಳೂರಿನ ಜಯ ನಗರದ 7ನೇ ಬ್ಲಾಕ್‌ನಲ್ಲಿರುವ ಪ್ರಾಯೋಗಿಕ ವಿಜ್ಞಾನ ಕಲಿಕಾ ಕೇಂದ್ರವಾಗಿದೆ. ವಿಜ್ಞಾನದ ತತ್ವಗಳನ್ನು ಪ್ರಾಯೋಗಿಕವಾಗಿ ಮತ್ತು ವಿನೋದಮಯವಾಗಿ ಅರಿಯಲು ಅವಕಾಶ ಕಲ್ಪಿಸುವ ನಾವೀನ್ಯತಾ ಕೇಂದ್ರವಾಗಿದೆ. ಇಲ್ಲಿ ಕೈನೆಟಿಕ್, ಟ್ಯಾಕ್ಟೈಲ್, ಡಿಜಿಟಲ್, ವಿಮಾನ, ಇಲ್ಯೂಷನ್, ಇಂಟ್ರೊಡಕ್ಷನ್ ಎಂಬ ಆರು ಮುಖ್ಯ ಗ್ಯಾಲರಿಗಳಿದ್ದು, ಒಟ್ಟು 80ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳಿವೆ. ವಿಜ್ಞಾನ ಮತ್ತು ತಂತ್ರಜ್ಞಾನವು ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಅಡಗಿದೆ ಎಂಬುದನ್ನು ಇಲ್ಲಿ ಎಲ್ಲ ವಯೋಮಾನದವರೂ ತಿಳಿದು ಕೊಳ್ಳಬಹುದು.
ಚನ್ನೇನಹಳ್ಳಿಯಲ್ಲಿ ಅತಿದೊಡ್ಡ ಮಲ್ಟಿ ಎಕ್ಸ್‌ಪೀರಿಯನ್ಸ್ ಸೆಂಟರ್!
ಬೆಂಗಳೂರಿನ ಮಾಗಡಿರಸ್ತೆಯ ಚನ್ನೇನಹಳ್ಳಿಯಲ್ಲಿ ಸುಮಾರು 15 ಎಕರೆ ಜಾಗದಲ್ಲಿ ಪರಮ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರ ನಿರ್ಮಾಣಗೊಳ್ಳುತ್ತಿದೆ. ಈ ಕೇಂದ್ರವು, ಭಾರತ ದಲ್ಲಿ ರೂಪುಗೊಳ್ಳುತ್ತಿರುವ ಅತಿದೊಡ್ಡ ಮಲ್ಟಿ ಎಕ್ಸ್‌ಪೀರಿಯನ್ಸ್ ತಾಣವಾಗಿದೆ. ಇದು ವಿಜ್ಞಾನ, ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ವೇದಿಕೆಯನ್ನು ಒದಗಿಸಿ ಕೊಡಲಿದೆ.
ಇಲ್ಲಿ, ವೈಜ್ಞಾನಿಕ ಆವಿಷ್ಕಾರಗಳೂ, ಸಾಂಸ್ಕೃತಿಕ ಕಲಿಕಾ ಸೌಲಭ್ಯಗಳೂ ಇರಲಿವೆ. ಅಲ್ಲದೇ, ಇವೆಲ್ಲದ್ದಕ್ಕೂ ಏಷ್ಯಾದಲ್ಲಿಯೇ ಅತ್ಯುತ್ಕೃಷ್ಟ (Excellent) ಸೌಲಭ್ಯಗಳನ್ನು ಹೊಂದಿರುವ ತಾಣವಾಗಲಿದೆ. ಹೀಗಾಗಿ, "ಪರಮ್" ಕಲಿಕೆಗೂ, ಮನೋರಂಜನಾತ್ಮಕ ಚಟುವಟಿಕೆಗಳಿಗೂ ಬೃಹತ್ ಕೇಂದ್ರ ತಾಣವಾಗಿ ರೂಪುಗೊಳ್ಳುತ್ತಿದೆ.
ಪರಮ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರದಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಭವನ, ಪ್ರದರ್ಶನ ಭವನ, ವಿಜ್ಞಾನ ಕೇಂದ್ರ ಹಾಗೂ ಅತ್ಯುತ್ತಮ ಸೌಲಭ್ಯಗಳುಳ್ಳ ಅತಿಥಿ ಗೃಹಗಳು ನಿರ್ಮಾಣಗೊಳ್ಳುತ್ತಿವೆ. ಈ ಕೇಂದ್ರದ ಮೂಲಕ ಸೇವಾ ಸಂಸ್ಥೆಯು ಯುವ ಮನಸ್ಸುಗಳಿಗೆ ಆಧುನಿಕ ವಿಜ್ಞಾನ (Modern Science) ಮತ್ತು ಭಾರತೀಯ ಪ್ರಾಚೀನ ವಿಜ್ಞಾನ (Ancient Indian Science), ಇತಿಹಾಸ, ಸಂಸ್ಕೃತಿ, ಕಲೆಯ ಬಗ್ಗೆ ಆಸಕ್ತಿ ಮೂಡಿ ಸುವ ಉದ್ದೇಶ ಹೊಂದಿದೆ.