Prince Harry: ಯುಕೆಯಲ್ಲಿ ಪ್ರಿನ್ಸ್ ಹ್ಯಾರಿ-ತಂದೆ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗುವರೇ?
ರಾಜಮನೆತನದಲ್ಲಿರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು 20 ತಿಂಗಳ ಬಳಿಕ ಮೊದಲ ಬಾರಿಗೆ ಪ್ರಿನ್ಸ್ ಹ್ಯಾರಿ ಬ್ರಿಟನ್‌ಗೆ ಮರಳುತ್ತಿದ್ದಾರೆ. ಹ್ಯಾರಿ ಅವರು ತಮ್ಮ ಅಜ್ಜಿ ರಾಣಿ ಎಲಿಜಬೆತ್ ಅವರ ಮೂರನೇ ವರ್ಷದ ಪುಣ್ಯತಿಥಿಯ ಅಂಗವಾಗಿ ನಡೆಯುವ ವಾರ್ಷಿಕ ದತ್ತಿ ಕಾರ್ಯಕ್ರಮವಾದ ವೆಲ್‌ಚೈಲ್ಡ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲಿದ್ದು, ಈ ವೇಳೆ ಅವರು ತಂದೆ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಬಹುದು ಎನ್ನಲಾಗಿದೆ.

-

ಬ್ರಿಟನ್: ರಾಣಿ ಎಲಿಜಬೆತ್ (Queen Elizabeth) ಅವರ ಮೂರನೇ ವರ್ಷದ ಪುಣ್ಯತಿಥಿಯಾದ (death third anniversary) ಸೋಮವಾರ ತೀವ್ರ ಅಸ್ವಸ್ಥ ಮಕ್ಕಳಿಗಾಗಿ ನಡೆಯುವ ವಾರ್ಷಿಕ ದತ್ತಿ ಕಾರ್ಯಕ್ರಮ ವೆಲ್‌ಚೈಲ್ಡ್ ಪ್ರಶಸ್ತಿ ಪ್ರಧಾನ (WellChild Awards) ಸಮಾರಂಭದಲ್ಲಿ ಪ್ರಿನ್ಸ್ ಹ್ಯಾರಿ (Prince Harry) ಬ್ರಿಟನ್ ಗೆ (Britain) ಬರಲಿದ್ದು, ಈ ವೇಳೆ ಅವರು ತಂದೆ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಬಹುದು ಎನ್ನಲಾಗಿದೆ. ಇವರಿಬ್ಬರ ಭೇಟಿಯು ಕುಟುಂಬದದಲ್ಲಿರುವ ಭಿನ್ನಾಭಿಪ್ರಾಯ ದೂರ ಮಾಡುತ್ತದೆ ಎನ್ನುವ ನಿರೀಕ್ಷೆಗಳು ಹೆಚ್ಚಾದಂತಿದೆ. 76 ವರ್ಷದ ಕಿಂಗ್ ಚಾರ್ಲ್ಸ್ ಮತ್ತು ಅವರ ಮಗ ಹ್ಯಾರಿ ಭೇಟಿಗೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.
ಕುಟುಂಬದಲ್ಲಿನ ಭಿನ್ನಾಭಿಪ್ರಾಯ ದೂರ ಮಾಡಲು 20 ತಿಂಗಳ ಬಳಿಕ ತಾತ್ಕಾಲಿಕ ಹೆಜ್ಜೆಯಾಗಿ ಪ್ರಿನ್ಸ್ ಹ್ಯಾರಿ ಬ್ರಿಟನ್‌ಗೆ ಮರಳುತ್ತಿದ್ದಾರೆ. ಹ್ಯಾರಿ ಅವರು ತಮ್ಮ ಅಜ್ಜಿ ರಾಣಿ ಎಲಿಜಬೆತ್ ಅವರ ಮೂರನೇ ವರ್ಷದ ಪುಣ್ಯತಿಥಿಯ ಅಂಗವಾಗಿ ನಡೆಯುವ ವಾರ್ಷಿಕ ದತ್ತಿ ಕಾರ್ಯಕ್ರಮವಾದ ವೆಲ್‌ಚೈಲ್ಡ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಕಿಂಗ್ ಚಾರ್ಲ್ಸ್ ಮತ್ತು ಅವರ ಮಗ ಹ್ಯಾರಿ ಪರಸ್ಪರ ಭೇಟಿಯಾಗಿ ಕುಟುಂಬದಲ್ಲಿರುವ ಉನ್ನತ ಮಟ್ಟದ ಬಿರುಕುಗಳನ್ನು ಸರಿಪಡಿಸಬಹುದು ಎನ್ನಲಾಗುತ್ತಿದೆ. ಹ್ಯಾರಿ ಬ್ರಿಟನ್ ಗೆ ಬಂದಿರುವುದರಿಂದ ಅವರು ತಮ್ಮ ತಂದೆಯನ್ನು ಭೇಟಿಯಾಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ ಎಂದು ಲಂಡನ್‌ನಲ್ಲಿರುವ ರಾಜಮನೆತನದ ವರದಿ ಮಾಡುವ ಸೈಮನ್ ಪೆರ್ರಿ ತಿಳಿಸಿದ್ದಾರೆ.
ಬಕಿಂಗ್ ಹ್ಯಾಮ್ ಅರಮನೆಯು ಖಾಸಗಿ ಕುಟುಂಬದ ವಿಷಯಗಳನ್ನು ಎಂದಿಗೂ ಚರ್ಚಿಸುವುದಿಲ್ಲ ಎಂಡಿರುವ ಹ್ಯಾರಿಯ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಬಕಿಂಗ್ ಹ್ಯಾಮ್ ಅರಮನೆಯಲ್ಲಿರುವ ಕಿಂಗ್ ಚಾರ್ಲ್ಸ್ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಹ್ಯಾರಿ ತನ್ನ ತಂದೆಯನ್ನು ಕೊನೆಯ ಬಾರಿಗೆ ಭೇಟಿಯಾಗಿದ್ದರು. 2020ರಲ್ಲಿ ಅವರು ರಾಜಮನೆತನದ ಕರ್ತವ್ಯಗಳನ್ನು ತೊರೆದು ಕ್ಯಾಲಿಫೋರ್ನಿಯಾಗೆ ತೆರಳಿದ್ದರು.
ಸಂದರ್ಶನಗಳಲ್ಲಿ ಹ್ಯಾರಿ ತನ್ನ ತಂದೆ ಮತ್ತು ಹಿರಿಯ ಸಹೋದರ, ಉತ್ತರಾಧಿಕಾರಿ ಪ್ರಿನ್ಸ್ ವಿಲಿಯಂ ಅನ್ನು ಟೀಕಿಸಿದ್ದರು. ತನ್ನ ಭದ್ರತೆಯ ಕುರಿತು ಬ್ರಿಟಿಷ್ ಸರ್ಕಾರದೊಂದಿಗಿನ ಕಾನೂನು ಹೋರಾಟದಲ್ಲಿ ಸೋತ ಬಳಿಕ ಅವರು ತಾನು ಹೊಂದಾಣಿಕೆಯನ್ನು ಬಯಸುತ್ತೇನೆ ಎಂದು ತಿಳಿಸಿದ್ದರು.
ನನ್ನ ಕುಟುಂಬದ ಕೆಲವು ಸದಸ್ಯರು ಪುಸ್ತಕ ಬರೆದಿದ್ದಕ್ಕಾಗಿ ನನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ. ಖಂಡಿತ ಅವರು ನನ್ನನ್ನು ಅನೇಕ ವಿಷಯಗಳಿಗೆ ಎಂದಿಗೂ ಕ್ಷಮಿಸುವುದಿಲ್ಲ. ನನ್ನ ಕುಟುಂಬದೊಂದಿಗೆ ನಾನು ರಾಜಿ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ಇನ್ನು ಮುಂದೆ ಜಗಳವಾಡುವುದರಲ್ಲಿ ಅರ್ಥವಿಲ್ಲ ಮತ್ತು ಜೀವನವು ಅಮೂಲ್ಯವಾಗಿದೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಮದರಸಾದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣ: ಐವರ ಬಂಧನ
ತಂದೆಗೆ ಇನ್ನೂ ಎಷ್ಟು ಸಮಯವಿದೆ ಎಂದು ತಿಳಿದಿಲ್ಲ. ಭದ್ರತಾ ವಿಷಯಗಳ ಕಾರಣದಿಂದಾಗಿ ಅವರು ನನ್ನೊಂದಿಗೆ ಮಾತನಾಡುವುದಿಲ್ಲ, ಆದರೆ ರಾಜಿ ಮಾಡಿಕೊಳ್ಳುವುದು ಒಳ್ಳೆಯದು ಎಂದು ತಿಳಿಸಿದ್ದರು. ಕಳೆದ ಜುಲೈನಲ್ಲಿ ಕಿಂಗ್ ಚಾರ್ಲ್ಸ್ ಅವರ ಸಂವಹನ ಮುಖ್ಯಸ್ಥ ಮತ್ತು ಹ್ಯಾರಿಯ ಮಾಧ್ಯಮ ಪ್ರತಿನಿಧಿಗಳು ಲಂಡನ್‌ನಲ್ಲಿ ರಹಸ್ಯ ಸಭೆ ನಡೆಸಿದ್ದರು. ಇದು ಸಮನ್ವಯದತ್ತ ಮೊದಲ ಹೆಜ್ಜೆ ಎಂದೇ ಎಲ್ಲರೂ ಭಾವಿಸಿದ್ದಾರೆ.