ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿಗಳ ಭೀಕರ ಕ್ಷಿಪಣಿ ದಾಳಿ: 12 ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ 12 ಜನರು ಸಾವನ್ನಪ್ಪಿ, 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿಗಳ ಭೀಕರ ಕ್ಷಿಪಣಿ ದಾಳಿ: 12 ಸಾವು

ರಿಯಾದ್‌ ವಿಮಾನ ನಿಲ್ದಾಣದ ಮೇಲೆ ದಾಳಿ -

Vishakha Bhat Heggar
Vishakha Bhat Heggar Oct 11, 2026 9:36 AM

ರಿಯಾದ್‌: ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Riyadh Airport Attack) ಮೇಲೆ ನಡೆದ ದಾಳಿಯಲ್ಲಿ 12 ಜನರು ಸಾವನ್ನಪ್ಪಿ, 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮೃತರಲ್ಲಿ ನಾಲ್ವರು ಸೌದಿ ನಾಗರಿಕರು, ಇಬ್ಬರು ಬಾಂಗ್ಲಾದೇಶದವರು ಹಾಗೂ ಅಮೆರಿಕ, ಜೋರ್ಡಾನ್, ಪ್ಯಾಲೆಸ್ಟೈನ್, ಸಿರಿಯಾ, ಸುಡಾನ್ ಮತ್ತು ಈಜಿಪ್ಟ್ ದೇಶದ ತಲಾ ಒಬ್ಬೊಬ್ಬರು ಸೇರಿದ್ದಾರೆ.

ದಾಳಿಯ ಹಿನ್ನೆಲೆಯಲ್ಲಿ ಕಿಂಗ್ ಖಾಲಿದ್ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ರಿಯಾದ್‌ಗೆ ಬರಬೇಕಿದ್ದ ಎಲ್ಲಾ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಈ ದಾಳಿ ನಡೆಸಿದ್ದು, ವಿಮಾನ ನಿಲ್ದಾಣದ ಟರ್ಮಿನಲ್ 3 ಮತ್ತು 4 ಕ್ಕೆ ಭಾರಿ ಹಾನಿ ಉಂಟುಮಾಡಿದೆ. ಹೆಚ್ಚುತ್ತಿರುವ ಭದ್ರತಾ ಕಾಳಜಿಗಳ ಕಾರಣ ಹಲವಾರು ವಿಮಾನಯಾನ ಸಂಸ್ಥೆಗಳು ರಿಯಾದ್ ಮತ್ತು ಇತರ ಸೌದಿ ವಿಮಾನ ನಿಲ್ದಾಣಗಳಿಗೆ ಸೇವೆಗಳನ್ನು ಈಗಾಗಲೇ ಸ್ಥಗಿತಗೊಳಿಸಿವೆ. ಸೌದಿ ವಿಮಾನ ನಿಲ್ದಾಣಗಳು, ಮಿಲಿಟರಿ ಸೌಲಭ್ಯಗಳು ಮತ್ತು ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ಹೆಚ್ಚುತ್ತಿರುವ ಮಧ್ಯೆಯೇ ಇತ್ತೀಚಿನ ದಾಳಿ ನಡೆದಿದೆ.

ಹೊಣೆ ಹೊತ್ತ ಹೌತಿ

ಹೌತಿ ಬಂಡುಕೋರರ ಹಿರಿಯ ಅಧಿಕಾರಿ ಮೊಹಮ್ಮದ್ ಅಲ್-ಬುಖೈತಿ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಯೆಮೆನ್‌ನಲ್ಲಿ ಸೌದಿ ನಡೆಸುತ್ತಿರುವ ಸರಣಿ ವೈಮಾನಿಕ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಯೆಮೆನ್‌ನಲ್ಲಿ ಸೌದಿ ಬೆಂಬಲಿತ ಸರ್ಕಾರಿ ಪಡೆಗಳು ಕೆಂಪು ಸಮುದ್ರದ ಆಯಕಟ್ಟಿನ ಬಾಬ್ ಅಲ್-ಮಂದಬ್ ಜಲಸಂಧಿಯನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಉಭಯ ಬಣಗಳ ನಡುವೆ ಯುದ್ಧ ತೀವ್ರಗೊಂಡಿದೆ. ಹೌತಿಗಳು ಸೌದಿ ಆಕಾಶಕ್ಷೇತ್ರವನ್ನು ಮಿಲಿಟರಿ ವಲಯ ಎಂದು ಘೋಷಿಸಿ, ನಾಗರಿಕ ವಿಮಾನಗಳು ಇಲ್ಲಿ ಸಂಚರಿಸದಂತೆ ಎಚ್ಚರಿಕೆ ನೀಡಿದ್ದಾರೆ.

ಇರಾನ್‌-ಇಸ್ರೇಲ್‌ ಯುದ್ಧ: ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಬಾಂಬ್‌ ದಾಳಿ

ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಲಿಕಿ ಇದನ್ನು "ಸಂಪೂರ್ಣ ಯುದ್ಧಾಪರಾಧ" ಎಂದು ಕರೆದಿದ್ದು, ಹೌತಿಗಳ ವಿರುದ್ಧ ನಿಶ್ಚಿತ ಹಾಗೂ ಭೀಕರ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಯನ್ನು "ಘೋರ ಕೃತ್ಯ" ಎಂದು ಖಂಡಿಸಿದ್ದಾರೆ. ಹೌತಿಗಳ ವಿರುದ್ಧದ ಸೇನಾ ಕಾರ್ಯಾಚರಣೆಯಲ್ಲಿ ಅಮೆರಿಕ ಜಂಟಿಯಾಗುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಮತ್ತು ಈ ಬಗ್ಗೆ ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಶೀಘ್ರದಲ್ಲೇ ದೂರವಾಣಿ ಮೂಲಕ ಚರ್ಚಿಸುವುದಾಗಿ ತಿಳಿಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಕೂಡ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.