ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಷ್ಯಾ ತೈಲ ಖರೀದಿಸುವ ಭಾರತದ ವಿರುದ್ಧ ಅಮೆರಿಕ ಕೆಂಡ; ಶೇಕಡಾ 100 ಸುಂಕ ವಿಧಿಸುವ ಸೆನೆಟರ್ ಲಿಂಡ್ಸೆ ಗ್ರಹಾಂ ಮಸೂದೆಗೆ ಅಂಗೀಕಾರ

ರಷ್ಯಾ ವಿರುದ್ಧ ನಿರ್ಬಂಧ ವಿಧಿಸುವ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಗೌರವಾರ್ಥ ಮಸೂದೆಯನ್ನು ಅಮೆರಿಕದ ಸೆನೆಟ್ ಅನುಮೋದಿಸಿದೆ. ಈ ಮಸೂದೆಯು ರಷ್ಯಾದ ತೈಲ ಅಥವಾ ನೈಸರ್ಗಿಕ ಅನಿಲದ ವಿಶ್ವದ ಐದು ಅಗ್ರ ಖರೀದಿದಾರರ ಮೇಲೆ ಪರಿಣಾಮ ಬೀರಲಿದೆ. ಉಕ್ರೇನ್ ಯುದ್ಧ ಪ್ರಾರಂಭಿಸಿದ್ದಕ್ಕಾಗಿ ರಷ್ಯಾ ವಿರುದ್ಧ ಹೊಸ ನಿರ್ಬಂಧಗಳನ್ನು ಗ್ರಹಾಂ ಬಲವಾಗಿ ಪ್ರತಿಪಾದಿಸಿದ್ದರಿಂದ ಅವರ ಹೆಸರನ್ನು ಈ ಮಸೂದೆಗೆ ಇಡಲಾಗಿದೆ.

ರಷ್ಯಾ ವಿರುದ್ಧ ನಿರ್ಬಂಧ ಮಸೂದೆ ಅಂಗೀಕಾರ

ಸಂಗ್ರಹ ಚಿತ್ರ -

ವಾಷಿಂಗ್ಟನ್: ರಷ್ಯಾದಿಂದ (Russia) ತೈಲ ಅಥವಾ ನೈಸರ್ಗಿಕ ಅನಿಲ ಖರೀದಿ ಮಾಡುವ ರಾಷ್ಟ್ರಗಳ ಮೇಲೆ ಶೇಕಡಾ 100 ಸುಂಕ ವಿಧಿಸುವ ಮಸೂದೆಯನ್ನು (US Senator Lindsey Graham's bill) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ನೇತೃತ್ವದ ಅಮೆರಿಕ ಸೆನೆಟ್ (US Senate) ಅನುಮೋದಿಸಿದೆ. ಈ ಮಸೂದೆಯು ಭಾರತ (India), ಚೀನಾ (China) ಸೇರಿದಂತೆ ರಷ್ಯಾದಿಂದ ಇಂಧನ ಖರೀದಿ ಮಾಡುವ ವಿಶ್ವದ ಐದು ಅಗ್ರ ಖರೀದಿದಾರರ ಮೇಲೆ ಪರಿಣಾಮ ಬೀರಲಿದೆ. ಐದು ವರ್ಷಗಳಿಂದ ಉಕ್ರೇನ್ ಜೊತೆ ಯುದ್ಧ ಮಾಡುತ್ತಿರುವ ರಷ್ಯಾವನ್ನು ನಿರ್ಬಂಧಿಸಲು ಸೆನೆಟರ್ ಲಿಂಡ್ಸೆ ಗ್ರಹಾಂ ಬಲವಾಗಿ ಪ್ರತಿಪಾದಿಸಿದ್ದರು. ಅವರು ಜುಲೈ 11ರಂದು ನಿಧನರಾಗಿದ್ದು, ಅವರ ಗೌರವಾರ್ಥ ಈ ಮಸೂದೆಗೆ ಅವರ ಹೆಸರನ್ನೇ ಇಡಲಾಗಿದೆ.

ಉಕ್ರೇನ್‌ನ ಕಟ್ಟಾ ಬೆಂಬಲಿಗರಾದ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ಪ್ರತಿಪಾದಿಸಿದ್ದ ಮಸೂದೆಯನ್ನು ಅಮೆರಿಕ ಸೆನೆಟ್ 86-11 ಮತಗಳಿಂದ ಅಂಗೀಕರಿಸಿದೆ. ಇದರ ಬಳಿಕ ಮಾತನಾಡಿದ ಸೆನೆಟ್‌ನಲ್ಲಿ ಗ್ರಹಾಂ ಅವರ ಉತ್ತರಾಧಿಕಾರಿಯಾದ ಅವರ ಸಹೋದರಿ ಡಾರ್ಲಿನ್ ಗ್ರಹಾಂ, ಈ ಮಸೂದೆಯು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ದೊಡ್ಡ ಹೊಡೆತವನ್ನು ನೀಡಲಿದೆ ಎಂದು ಹೇಳಿದರು.

ಶಾಲೆಯಲ್ಲಿ ಗುಂಡಿನ ದಾಳಿ: ಹದಿಹರೆಯದ ಬಾಲಕನಿಂದ ಫೈರಿಂಗ್, ಐವರು ಸಾವು

ಕಳೆದ ಒಂದು ವರ್ಷದಿಂದ ಮಸೂದೆ ಅಂಗೀಕಾರಕ್ಕೆ ಗ್ರಹಾಂ ಜೊತೆಗೆ ಒತ್ತಾಯಿಸಿದ್ದ ಡೆಮೋಕ್ರಾಟ್ ರಿಚರ್ಡ್ ಬ್ಲೂಮೆಂಥಾಲ್ ಮಾತನಾಡಿ, ಉಕ್ರೇನ್ ಜನರು ಏಕಾಂಗಿಯಾಗಿಲ್ಲ. ಇದನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್‌ನಿಂದ ಮತ್ತು ಪುಟಿನ್ ಮಾಸ್ಕೋದಿಂದ ವೀಕ್ಷಿಸುತ್ತಿದ್ದಾರೆ. ಲಿಂಡ್ಸೆ ಗ್ರಹಾಂ ಕೂಡ ನೋಡುತ್ತಿದ್ದರೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.

ಮಸೂದೆಯಲ್ಲಿ ಏನಿದೆ ?

ರಷ್ಯಾದಿಂದ ತೈಲ ಖರೀದಿ ಮಾಡುವ ಐದು ಪ್ರಮುಖ ರಾಷ್ಟ್ರಗಳಾದ ಭಾರತ, ಚೀನಾ ಅಜೆರ್ಬೈಜಾನ್, ಹಂಗೇರಿ ಮತ್ತು ಸ್ಲೋವಾಕಿಯಾ ಮೇಲೆ ಈ ಮಸೂದೆ ಪರಿಣಾಮ ಬೀರಲಿದೆ. ಈ ರಾಷ್ಟ್ರಗಳ ಮೇಲೆ ಶೇಕಡಾ 100ರಷ್ಟು ತೆರಿಗೆ ವಿಧಿಸಲು ಅಮೆರಿಕ ಅಧ್ಯಕ್ಷರಿಗೆ ಇದು ಅವಕಾಶ ನೀಡುತ್ತದೆ. ಅಲ್ಲದೇ ರಷ್ಯಾದಿಂದ ನೈಸರ್ಗಿಕ ಅನಿಲದ ಶೇ.15ಕ್ಕಿಂತ ಕಡಿಮೆ ಆಮದು ಮಾಡಿಕೊಳ್ಳುವ ಮತ್ತು ಆ ಆಮದುಗಳನ್ನು ಇನ್ನಷ್ಟು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ದೇಶಗಳಿಗೆ ಈ ಮಸೂದೆಯಿಂದ ವಿನಾಯಿತಿ ಸಿಗಲಿದೆ.

ಈ ಮಸೂದೆಯು ರಷ್ಯಾದ ಹಣಕಾಸು ಸಂಸ್ಥೆಗಳು ಮತ್ತು ಇಂಧನ ಯೋಜನೆಗಳ ಮೇಲೆ ನಿರ್ಬಂಧ ವಿಧಿಸಲಿದೆ. ರಷ್ಯಾದ ತೈಲ ಮತ್ತು ಇಂಧನ ಆದಾಯದ ಮೇಲೆ ಕೂಡ ಈ ಮಸೂದೆಯು ಅಮೆರಿಕದ ನಿರ್ಬಂಧಗಳನ್ನು ವಿಸ್ತರಿಸುತ್ತದೆ. ಒಂದು ವೇಳೆ ಇದು ರಾಷ್ಟ್ರದ ಪೂರಕವಾಗಿದ್ದರೆ ಈ ನಿರ್ಬಂಧಗಳನ್ನು ಮನ್ನಾ ಮಾಡುವ ಅನುಮತಿ ಕೂಡ ಅಮೆರಿಕ ಅಧ್ಯಕ್ಷರಿಗೆ ದೊರೆಯಲಿದೆ.

81ರ ವೃದ್ಧೆ, 24ರ ಯುವಕ: ಸೋಶಿಯಲ್ ಮೀಡಿಯಾ ಪ್ರೀತಿ, ಏರ್‌ಪೋರ್ಟ್‌ನಲ್ಲಿ ಭಾವುಕ ಭೇಟಿ! ವಿಡಿಯೊ ವೈರಲ್

ರಷ್ಯಾ ಮಾತ್ರವಲ್ಲ ಇರಾನ್ ಮೇಲೆ ನಿರ್ಬಂಧವನ್ನು ವಿಧಿಸುವ ಈ ಮಸೂದೆಯು 1996 ರ ಇರಾನ್ ನಿರ್ಬಂಧಗಳ ಕಾಯ್ದೆಯಯನ್ನು 2031 ರವರೆಗೆ ವಿಸ್ತರಿಸುತ್ತದೆ. ಇದರಿಂದ ಇರಾನ್‌ನ ಇಂಧನ ವಲಯದಲ್ಲಿ ಹೂಡಿಕೆ ಮಾಡುವ ಕಂಪೆನಿಗಳು ಭಾರಿ ದಂಡ ಪಾವತಿಸಬೇಕಾಗುತ್ತದೆ ಎಂಬುದನ್ನು ಒಳಗೊಂಡಿದೆ.