ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangladesh Unrest: ಚುನಾವಣೆ ಹೊಸ್ತಿಲಿನಲ್ಲಿ ಬಾಂಗ್ಲಾದೇಶ ಧಗಧಗ: ಕಾರಣವೇನು?

ಬಾಂಗ್ಲಾದೇಶ ಮತ್ತೊಮ್ಮೆ ನಿಗಿನಿಗಿ ಕೆಂಡವಾಗಿದೆ. ಕಳೆದ ವರ್ಷ ಶೇಖ್‌ ಹಸೀನಾ ಪದಚ್ಯುತಿಯ ನಂತರ ಮೊದಲ ಬಾರಿಗೆ 2026ರ ಫೆಬ್ರವರಿ 12ಕ್ಕೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ನಡುವೆ ಬಾಂಗ್ಲಾದೇಶದಲ್ಲಿ ಗಲಭೆ ಮರುಕಳಿಸಿದೆ. ಮತ್ತೊಮ್ಮೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಾಗಾದರೆ ನೆರೆ ರಾಷ್ಟ್ರದಲ್ಲಿ ನಡೆಯುತ್ತಿರುವುದೇನು? ಇದಕ್ಕೆ ಕಾರಣ ಯಾರು? ಇಲ್ಲಿದೆ ವಿವರ.

ಚುನಾವಣೆ ಹೊಸ್ತಿಲಿನಲ್ಲಿ ಬಾಂಗ್ಲಾದೇಶ ಧಗಧಗ

ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ (ಸಂಗ್ರಹ ಚಿತ್ರ) -

ಢಾಕಾ, ಡಿ. 20: ಬಾಂಗ್ಲಾದೇಶ ಮತ್ತೊಮ್ಮೆ ಹೊತ್ತಿ ಉರಿಯುತ್ತಿದೆ (Bangladesh Unrest). ಕಳೆದ ವರ್ಷ ಶೇಖ್‌ ಹಸೀನಾ ಪದಚ್ಯುತಿಯ ನಂತರ ಮೊದಲ ಬಾರಿಗೆ 2026ರ ಫೆಬ್ರವರಿ 12ಕ್ಕೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ನಡುವೆ ಬಾಂಗ್ಲಾದೇಶದಲ್ಲಿ ಗಲಭೆ ಮರುಕಳಿಸಿದೆ. ಹಂಗಾಮಿ ಸರಕಾರದ ಮುಖ್ಯಸ್ಥ, ನೊಬೆಲ್‌ ಪುರಸ್ಕೃತ ಮಹಮ್ಮದ್‌ ಯೂನಸ್‌ಗೆ ಅಧಿಕಾರದ ಅಮಲು ಏರಿದೆಯೇ? ಅವರು ಇಸ್ಲಾಮಿಸ್ಟ್‌ ಗಳನ್ನು ಅಧಿಕಾರಕ್ಕೆ ತರಲು ಯತ್ನಿಸುತ್ತಿದ್ದಾರೆಯೇ?

ಭಾರತ ವಿರೋಧಿ ಚಟುವಟಿಕೆಗಳ ಮೂಲಕ ಅಲ್ಲಿ ಯುವ ನಾಯಕನಾಗಿ ಹೊರಹೊಮ್ಮಿದ್ದ ಷರೀಫ್‌ ಉಸ್ಮಾನ್‌ ಹದಿಯನ್ನು ಢಾಕಾದಲ್ಲಿ ಮುಸುಕುಧಾರಿ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಇದಾದ ನಂತರ ಒಸ್ಮಾನ್‌ನ ಹಿಂಬಾಲಕರು ಭಾರಿ ದಾಂಧಲೆ ನಡೆಸಿದ್ದಾರೆ.

ಡಿಸೆಂಬರ್‌ 19ರಿಂದ ದಂಗೆ ಭುಗಿಲೆದ್ದಿದೆ. ಭಾರತ ವಿರೋಧಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಪದಚ್ಯುತರಾಗಿದ್ದ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಇದು ಬಾಂಗ್ಲಾದೇಶದಲ್ಲಿ ಭಾರತ ವಿರೋಧಿಗಳ ದಂಗೆಗೆ ಕಾರಣವಾಗಿದೆ.

ಬಾಂಗ್ಲಾದೇಶದಲ್ಲಿನ ಗಲಾಟೆ:



ಒಸ್ಮಾನ್‌ ಹದಿಯ ಹತ್ಯೆಯ ಬೆನ್ನಲ್ಲೇ ಢಾಕಾದಲ್ಲಿ ಸಾವಿರಾರು ಮಂದಿ ಸಾರ್ವಜನಿಕ ಆಸ್ತಿಗಳನ್ನು ಲೂಟಿ ಮಾಡಿದ್ದಾರೆ. ಪತ್ರಿಕಾ ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಢಾಕಾದಲ್ಲಿ ಭಾರತೀಯ ರಾಯಭಾರ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ. ಚಿತ್ತಗಾಂಗ್‌ನಲ್ಲಿ ಭಾರತೀಯ ಡೆಪ್ಯುಟಿ ಹೈಕಮಿಶನ್‌ ಕಚೇರಿ ಮೇಲೆ ಕಲ್ಲು ತೂರಲಾಗಿದೆ.

ಬಾಂಗ್ಲಾದೇಶದ ಪ್ರಮುಖ ಪತ್ರಿಕೆಯಾದ ಪ್ರಥಮ್‌ ಅಲೊ ಕಚೇರಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲಾಗಿದೆ. ಈ ಪತ್ರಿಕೆ ಶೇಖ್‌ ಹಸೀನಾ ಪರ ಇದೆ ಎಂಬುದು ಪ್ರತಿಭಟನಾಕಾರರ ಆರೋಪ. ಉಸ್ಮಾನ್‌ ಹದಿ ವಿದ್ಯಾರ್ಥಿ ನಾಯಕನಾಗಿದ್ದ. ಭಾರಿ ಮತಾಂಧ ವ್ಯಕ್ತಿಯೀತ. 2024ರಲ್ಲಿ ವಿದ್ಯಾರ್ಥಿ ಚಟುವಳಿ ನಡೆಸಿದ್ದ. ಶೇಖ್‌ ಹಸೀನಾ ಸರಕಾರ ಪತನವಾಗುವಲ್ಲಿ ಈತನ ಪಾತ್ರವೂ ಇದೆ. 2026ರ ಫೆಬ್ರವರಿಯಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ರೆಡಿಯಾಗಿದ್ದ.

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆ; 7 ಮಂದಿ ಶಂಕಿತರ ಬಂಧನ

ಭಾರತವು ಬಾಂಗ್ಲಾದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನಿಕಟವಾಗಿ ಗಮನಿಸುತ್ತಿದೆ. ಅಲ್ಲಿ ಫೆಬ್ರವರಿ 12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆಯನ್ನು ಮುಂದೂಡುವ ಸಲುವಾಗಿಯೇ ಮಹಮ್ಮದ್‌ ಯುನೂಸ್‌ ನೇತೃತ್ವದ ಹಂಗಾಮಿ ಸರಕಾರವು ಗಲಭೆಗೆ ಕುಮ್ಮಕ್ಕು ನೀಡುತ್ತಿರುವ ಸಾಧ್ಯತೆಯೂ ಇದೆ. ದೇಶದಲ್ಲಿ ಸುರಕ್ಷಿತ ಚುನಾವಣೆ ನಡೆಸುವ ಕಾಲ ಪಕ್ವ ವಾಗಿಲ್ಲ ಎಂಬ ಸಂದೇಶ ರವಾನಿಸಲು ಗಲಭೆಗೆ ಕುಮ್ಮಕ್ಕು ನೀಡುವ ಸಾಧ್ಯತೆ ಇದೆ.

ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಕ್ಷವನ್ನು ನಿಷೇಧಿಸಲಾಗಿದೆ. ಈ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಾರೆಯೇ ಇಲ್ಲವೇ ಎಂಬ ಕುತೂಹಲ ಉಂಟಾಗಿದೆ. ಬಾಂಗ್ಲಾದೇಶದಲ್ಲಿ ಶಾಂತಿಯುತ ಮತ್ತು ನ್ಯಾಯಬದ್ಧ ರೀತಿಯಲ್ಲಿ ಚುನಾವಣೆ ಆಗಬೇಕು ಎಂದು ಭಾರತೀಯ ವಿದೇಶಾಂಗ ಇಲಾಖೆ ಡಿಸೆಂಬರ್‌ 14ರಂದು ಹೇಳಿಕೆ ನೀಡಿತ್ತು.

ಈ ನಡುವೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ದೀಪು ಚಂದ್ರದಾಸ್‌ ಎಂಬ ಸಾಮಾನ್ಯ ಹಿಂದೂ ಯುವಕನ ಮೇಲೆ ಭಾರಿ ಹಲ್ಲೆ ನಡೆಸಿ, ಕಂಬಕ್ಕೆ ಕಟ್ಟಿ ಸಜೀವ ದಹನಗೊಳಿಸಲಾಗಿದೆ. ಭಾರತ ಬಾಂಗ್ಲಾದೇಶದ ಜತೆಗಿನ ಗಡಿ ಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಿದೆ.

ಶೇಖ್‌ ಹಸೀನಾ ಪುತ್ರ ಹೇಳೋದೇನು?

ಶೇಖ್‌ ಹಸೀನಾ ಅವರ ಪುತ್ರ ಸಜೀಬ್‌ ವೇಜ್ಡ್‌ ಜೋಯ್‌ ಪ್ರಕಾರ, ಮಹಮ್ಮದ್‌ ಯೂನಸ್‌ ಇಸ್ಲಾಮಿಸ್ಟ್‌ಗಳನ್ನು ಅಧಿಕಾರಕ್ಕೆ ತರಲು ಯತ್ನಿಸುತ್ತಿದ್ದಾರೆ. ಇದರ ಬಗ್ಗೆ ಭಾರತವು ನಿಗಾ ವಹಿಸಬೇಕಾಗಿದೆ ಎನ್ನುತ್ತಾರೆ ಅವರು. ಒಂದು ವೇಳೆ ಬಾಂಗ್ಲಾದೇಶದಲ್ಲಿ ಇಸ್ಲಾಮಿಸ್ಟ್‌ಗಳು ಅಧಿಕಾರಕ್ಕೆ ಬಂದರೆ ಭಾರತಕ್ಕೆ ಭದ್ರತೆಯ ಬೆದರಿಕೆಯಾಗಬಹುದು ಎಂದು ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಮುಖ್ಯವಾಗಿ ಎರಡು ಪಾರ್ಟಿಗಳು ಇವೆ. ಬಾಂಗ್ಲಾದೇಶ ನ್ಯಾಶನಲಿಸ್ಟ್‌ ಪಾರ್ಟಿ ಮತ್ತು ಈ ವರ್ಷ ಬ್ಯಾನ್‌ ಆಗಿರುವ ಶೇಖ್‌ ಹಸೀನಾ ಅವರ ಅವಾಮಿ ಲೀಗ್.‌ ಬಾಂಗ್ಲಾದೇಶ ಜಮಾತೆ ಇಸ್ಲಾಮಿ ಬಾಂಗ್ಲಾದೇಶದ ದೊಡ್ಡ ಇಸ್ಲಾಮಿಸ್ಟ್‌ ಪಾರ್ಟಿ ಆಗಿದೆ. ಶೇಖ್‌ ಹಸೀನಾ ಅವರು ಇದರ ಮೇಲೆ ವಿಧಿಸಿದ್ದ ನಿಷೇಧವನ್ನು ಮಹಮ್ಮದ್‌ ಯೂನಸ್‌ ನೇತೃತ್ವದ ಮಹಮ್ಮದ್‌ ಯೂನಸ್‌ ತೆರವುಗೊಳಿಸಿದ್ದರು.

ಈಗ ಉಳಿದಿರುವ ಪ್ರಶ್ನೆ ಏನೆಂದರೆ, 2026ರ ಫೆಬ್ರವರಿಯಲ್ಲಿ ನಡೆಯಲಿರುವ ಬಾಂಗ್ಲಾದೇಶ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿಯನ್ನು ಜಮಾತೆ ಇಸ್ಲಾಮಿ ಸೋಲಿಸಲಿದೆಯೇ? ಎಂಬ ಪ್ರಶ್ನೆ.

ಭಾರತದಿಂದ ಎಚ್ಚರಿಕೆಯ ನಡೆ

ಹಾಗಾದರೆ ಭಾರತವು ಗಮನಿಸುತ್ತಿರುವ ಅಂಶಗಳೇನು? ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯವನ್ನು ಗಮನಿಸುತ್ತಿದೆ. ಮುಖ್ಯವಾಗಿ ಬಂದರುಗಳು ಮತ್ತು ಡಿಫೆನ್ಸ್‌ ಸಂಬಂದಿತ ಪ್ರಾಜೆಕ್ಟ್‌ಗಳಲ್ಲಿ ಚೀನಾದ ಅಸ್ತಿತ್ವದ ಬಗ್ಗೆ ಭಾರತ ನಿಗಾ ವಹಿಸುತ್ತಿದೆ. ಏಕೆಂದರೆ ಬಾಂಗ್ಲಾದೇಶದ ಮೂಲಸೌಕರ್ಯ, ಮಿಲಿಟರಿ ಸಹಕಾರ ಮತ್ತು ಬಂದರು ಅಭಿವೃದ್ಧಿಯಲ್ಲಿ ಚೀನಾ ಭಾರಿ ಹೂಡಿಕೆ ಮಾಡುತ್ತಿದೆ.

ಎರಡನೆಯದಾಗಿ ಬಾಂಗ್ಲಾದೇಶದಲ್ಲಿ ಯುವಜನತೆ ರಾಜಕೀಯ ಯಶಸ್ಸಿಗೋಸ್ಕರ ಭಾರತ ವಿರೋಧಿ ನಡೆಯನ್ನು ಅನುಸರಿಸುತ್ತಿರುವುದು ಕಳವಳಕಾರಿ ಅಂಶವಾಗಿದೆ. ಇದು ಬಾಂಗ್ಲಾದೇಶದಲ್ಲಿ ಮತಾಂಧ ವಿದ್ರೋಹಿ ಶಕ್ತಿಗಳು, ಇಸ್ಲಾಂ ಮೂಲಭೂತವಾದಿಗಳ ಪ್ರಾಬಲ್ಯ ಹೆಚ್ಚುತ್ತಿರುವುದನ್ನು ಬಿಂಬಿಸಿದೆ. ಇತ್ತೀಚೆಗೆ ಅಪರಿಚಿತರ ಗುಂಡಿಗೆ ಹತನಾದ ವಿದ್ಯಾರ್ಥಿ ನಾಯಕ ಷರೀಫ್‌ ಒಸ್ಮಾನ್‌ ಹದಿಯನ್ನೇ ನೋಡಿ. ಈತ ಭಾರತ ವಿರೋಧಿ ನೀತಿಯನ್ನೇ ಅನುಸರಿಸಿದ.

ರೆಹಮಾನ್ ಮನೆ ಮೇಲೆ ಭಾರತ ವಿರೋಧಿ ಗುಂಪು ದಾಳಿ ಮಾಡಿದ್ದೇಕೆ?

2024ರಲ್ಲಿ ಭಾರತ ಅಣೆಕಟ್ಟೆಗಳನ್ನು ಒಡೆದು ಹಾಕಬೇಕು ಎಂದು ದೀರ್ಘ ಮೆರವಣಿಗೆ ನಡೆಸಿದ್ದ. ಭಾರತದ ಪ್ರಾಬಲ್ಯದ ವಿರುದ್ಧ ರ‍್ಯಾಲಿ ನಡೆಸುತ್ತಿದ್ದ. ಭಾರತದ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶಕ್ಕೆ ಸೇರಿಸಿದಂತೆ ಬಾಂಗ್ಲಾದೇಶದ ವಿಸ್ತೃತ ಭೂಪಟ ತಯಾರಿಸಿದ್ದ. ಪಾಕಿಸ್ತಾನದ ಜತೆಗೆ ನಿಕಟ ನಂಟು ಬೆಳೆಸಬೇಕು ಎನ್ನುತ್ತಿದ್ದ.

ಇಂಥ ವ್ಯಕ್ತಿಯನ್ನು ಬಾಂಗ್ಲಾದೇಶದ ಚೀಫ್‌ ಅಡ್ವೈಸರ್ ಮಹಮ್ಮದ್‌ ‌ ಯೂನಸ್‌ ಹಾಡಿ ಹೊಗಳುತ್ತಾರೆ. ಆತನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುತ್ತಾರೆ. ಬಾಂಗ್ಲಾದೇಶಕ್ಕೆ ಈತ ಸದಾ ಪ್ರೇರಣೆ ನೀಡಲಿದ್ದಾನೆ ಎನ್ನುತ್ತಾರೆ.