ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nobel Peace Prize: 8 ಯುದ್ಧ ನಿಲ್ಲಿಸಿದರೂ ಟ್ರಂಪ್‌ಗೆ ಸಿಗಲಿಲ್ಲ ನೊಬೆಲ್‌; ಪ್ರಶಸ್ತಿ ಕೈ ತಪ್ಪಿದ್ದರ ಮುಖ್ಯ ಕಾರಣ ಇಲ್ಲಿದೆ

ನೊಬೆಲ್ ಸಮಿತಿಯು ಇಂದು (ಶುಕ್ರವಾರ) ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊ ಅವರನ್ನು 2025ರ ನೊಬೆಲ್ ಶಾಂತಿ ಪ್ರಶಸ್ತಿಯ (Nobel Peace Prize) ವಿಜೇತರೆಂದು ಘೋಷಿಸಿತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ತಾವೇ ಅರ್ಹರು ಎಂದು ಪದೇ ಪದೇ ಹೇಳುತ್ತಿದ್ದರು. ಅವರಿಗೆ ಪ್ರಶಸ್ತಿ ಕೈತಪ್ಪಿ ಹೋಗಿದರ ಮುಖ್ಯ ಕಾರಣ ಇಲ್ಲಿದೆ.

8 ಯುದ್ಧ ನಿಲ್ಲಿಸಿದರೂ ಟ್ರಂಪ್‌ಗೆ ಸಿಗಲಿಲ್ಲ ನೊಬೆಲ್‌; ಏನಿದೆ ಕಾರಣ?

-

Vishakha Bhat Vishakha Bhat Oct 10, 2025 6:42 PM

ವಾಷಿಂಗ್ಟನ್‌: ನೊಬೆಲ್ ಸಮಿತಿಯು ಇಂದು (ಶುಕ್ರವಾರ) ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊ ಅವರನ್ನು 2025ರ ನೊಬೆಲ್ ಶಾಂತಿ ಪ್ರಶಸ್ತಿಯ (Nobel Peace Prize) ವಿಜೇತರೆಂದು ಘೋಷಿಸಿತು. ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸುವ ಮತ್ತು ಸರ್ವಾಧಿಕಾರದ ಬದಲಾಗಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ನಿಟ್ಟಿನಲ್ಲಿ (Donald Trump) ಅವರ ಹೋರಾಟಕ್ಕಾಗಿ ಆಕೆ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯ ರೇಸ್​​ನಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಶಸ್ತಿ ಕೈತಪ್ಪಿದೆ. ಅದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ತಾವೇ ಅರ್ಹರು ಎಂದು ಪದೇ ಪದೇ ಹೇಳುತ್ತಿದ್ದರು. ಈ ಪ್ರಶಸ್ತಿ ತಮಗೆ ನೀಡದಿದ್ದರೆ ಅದು ಅಮೆರಿಕಕ್ಕೆ ಮಾಡಿದ ಅವಮಾನವಾಗುತ್ತದೆ ಎಂದು ಸಹ ಅವರು ಹೇಳಿಕೊಂಡಿದ್ದರು. ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿ ನೀವು ಇದರ ಬಗ್ಗೆ ಏನು ಹೇಳುತ್ತೀರಿ? ಎಂಬ ಪ್ರಶ್ನೆಗೆ ಇದೀಗ ಸಮಿತಿ ಉತ್ತಿರಿಸಿದೆ. ನೊಬೆಲ್ ಶಾಂತಿ ಪ್ರಶಸ್ತಿಯ ದೀರ್ಘ ಇತಿಹಾಸದಲ್ಲಿ ಈ ಸಮಿತಿಯು ಎಲ್ಲ ರೀತಿಯ ಪ್ರಚಾರ, ಮಾಧ್ಯಮಗಳ ಒತ್ತಡಗಳನ್ನು ಕಂಡಿದೆ. ಪ್ರತಿ ವರ್ಷ ಸಾವಿರಾರು ಜನರು ಶಾಂತಿ ಎಂದರೆ ಏನು ಎಂದು ಹೇಳುವ ಪತ್ರಗಳನ್ನು ನಾವು ಸ್ವೀಕರಿಸುತ್ತೇವೆ.

ಕಳೆದ ವರ್ಷ ಮರಿಯಾ ಮಚಾಡೊ ಅವರಿಗೆ ತಲೆಮರೆಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿತ್ತು. ಅವರ ಜೀವಕ್ಕೆ ಗಂಭೀರ ಬೆದರಿಕೆಗಳಿದ್ದರೂ ಅವರು ಆ ದೇಶದಲ್ಲಿಯೇ ಇದ್ದಾರೆ. ಇದು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಆಯ್ಕೆಯಾಗಿದೆ. ಸರ್ವಾಧಿಕಾರಿಗಳು ಅಧಿಕಾರವನ್ನು ವಶಪಡಿಸಿಕೊಂಡಾಗ ಎದ್ದು ನಿಲ್ಲುವ ಮತ್ತು ವಿರೋಧಿಸುವ ಧೈರ್ಯದಿಂದ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವವರನ್ನು ಗುರುತಿಸುವುದು ಬಹಳ ಮುಖ್ಯ ಎಂಬ ಕಾರಣಕ್ಕೆ ನಾವು ಅವರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Donald Trump: ಜನರ ಜೀವ ಕಾಪಾಡುವುದೇ ಅವರ ಗುರಿ; ನೊಬೆಲ್‌ ಕೈತಪ್ಪಿದ ಬಳಿಕ ಶ್ವೇತ ಭವನ ಹೇಳಿದ್ದೇನು?

ನೊಬೆಲ್ ಶಾಂತಿ ಪ್ರಶಸ್ತಿಗೆ ಈ ಬಾರಿ 338 ಅರ್ಜಿಗಳು ಅಥವಾ ಶಿಫಾರಸುಗಳು ಬಂದಿದ್ದವು. ಈ ವರ್ಷದ ಪ್ರಶಸ್ತಿಗೆ ನಾಮನಿರ್ದೇಶನಗಳು ಜನವರಿ ಅಂತ್ಯದಲ್ಲಿ ಕೊನೆಗೊಂಡಿತ್ತು. ಆಗಷ್ಟೇ ಟ್ರಂಪ್ ಮತ್ತೊಮ್ಮೆ ಅಧಿಕಾರಕ್ಕೇರಿ ಶ್ವೇತಭವನಕ್ಕೆ ಪ್ರವೇಶಿಸಿದ್ದರು. ಅವರು ಪ್ರಚಾರ ನಡೆಸುವಷ್ಟರಲ್ಲಿ ನಾಮನಿರ್ದೇಶನದ ಅವಧಿ ಅಂತ್ಯಗೊಂಡಿತ್ತು. ವಿಜೇತರನ್ನು ಘೋಷಿಸುವಾಗ ನೊಬೆಲ್ ಸಮಿತಿ ಹೇಳಿದಂತೆ, “ಪ್ರಜಾಪ್ರಭುತ್ವವು ಹಿಮ್ಮೆಟ್ಟುತ್ತಿರುವ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ. ಅಲ್ಲಿ ಹೆಚ್ಚು ಹೆಚ್ಚು ಸರ್ವಾಧಿಕಾರಿ ಆಡಳಿತಗಳು ರೂಢಿಗಳನ್ನು ಪ್ರಶ್ನಿಸುತ್ತಿವೆ ಮತ್ತು ಹಿಂಸಾಚಾರವನ್ನು ಆಶ್ರಯಿಸುತ್ತಿವೆ. ಪ್ರಜಾಪ್ರಭುತ್ವಕ್ಕೆ ಶಾಂತಿಯುತ ಪರಿವರ್ತನೆಗಾಗಿ ಮಚಾಡೊ ಅವರನ್ನು ಆಯ್ಕೆ ಮಾಡಲಾಗಿದೆ” ಎಂದು ಸಮಿತಿ ಸ್ಪಷ್ಟಪಡಿಸಿದೆ.