ಮುಂದಿನ ಜನರೇಶನ್ ಇಂಟ್ರಾಓಕ್ಯುಲರ್ ಲೆನ್ಸ್ ಅನ್ನು ಪರಿಚಯಿಸಿದ ಜಾನ್ಸನ್ ಮತ್ತು ಜಾನ್ಸನ್
ಹೊಸ ಫುಲ್ ವಿಸುವಲ್ ರೇಂಜ್*1 ಐಓಎಲ್ ಉನ್ನತ ಗುಣಮಟ್ಟದ ಹಾಗೂ ನಿರಂತರ ದೃಷ್ಟಿಯನ್ನು, ಸಾಟಿಯಿಲ್ಲದ ಶ್ರೇಣಿಯೊಂದಿಗೆ ಒದಗಿಸುತ್ತದೆ$6,16 ಇದರಿಂದ ರೋಗಿಗಳು ದೂರದಿಂದ ಹತ್ತಿರದವರೆಗೆ ಹಾಗೂ ಮಧ್ಯಂತರ ದೂರಗಳಲ್ಲೂ ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ ಮತ್ತು ಕನ್ನಡಕದ ಅವಶ್ಯಕತೆ ಕಡಿಮೆಯಾಗುತ್ತದೆ.‡+2,6,7 ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಟೆಕ್ನಿಸ್ ಪ್ಲಾಟ್ ಫಾರ್ಮ್ ಮೇಲೆ ತಯಾರಿಸಲಾಗಿದ್ದು, ಸುಧಾರಿತ ಆಪ್ಟಿಕ್ಸ್ ಮತ್ತು ಸ್ವಂತ ವಸ್ತುಗಳನ್ನು ಹೊಂದಿರುವ ಟೆಕ್ನಿಸ್ ಒಡಿಸ್ಸಿ ಐಓಎಲ್ ಸದಾ ಸ್ಪಷ್ಟ ಮತ್ತು ಹೈ-ಕಾಂಟ್ರಾಸ್ಟ್ ದೃಷ್ಟಿಯನ್ನು ಒದಗಿಸುತ್ತದೆ
-
ಬೆಂಗಳೂರು: ಜಾನ್ಸನ್ ಮತ್ತು ಜಾನ್ಸನ್ ಇಂದು ಭಾರತದಲ್ಲಿ ಟೆಕ್ನಿಸ್ ಒಡಿಸ್ಸಿ ಐಓಎಲ್ ಪರಿಚಯಿಸುವ ಮೂಲಕ ತನ್ನ ಪ್ರೆಸ್‌ಬೈಯೋಪಿಯಾ-ಸರಿಪಡಿಸುವ ಇಂಟ್ರಾಓಕ್ಯುಲರ್ ಲೆನ್ಸ್ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುತ್ತಿದೆ ಎಂದು ಘೋಷಿಸಿದೆ ಈ ಹೊಸ ಫುಲ್ ವಿಸುವಲ್ ರೇಂಜ್*1 ಐಓಎಲ್ ಉನ್ನತ ಗುಣಮಟ್ಟದ ಹಾಗೂ ನಿರಂತರ ದೃಷ್ಟಿಯನ್ನು, ಸಾಟಿಯಿಲ್ಲದ ಶ್ರೇಣಿಯೊಂದಿಗೆ ಒದಗಿಸುತ್ತದೆ$6,16 ಇದರಿಂದ ರೋಗಿಗಳು ದೂರದಿಂದ ಹತ್ತಿರದವರೆಗೆ ಹಾಗೂ ಮಧ್ಯಂತರ ದೂರಗಳಲ್ಲೂ ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ ಮತ್ತು ಕನ್ನಡಕದ ಅವಶ್ಯಕತೆ ಕಡಿಮೆಯಾಗುತ್ತದೆ.‡+2,6,7 ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಟೆಕ್ನಿಸ್ ಪ್ಲಾಟ್ ಫಾರ್ಮ್ ಮೇಲೆ ತಯಾರಿಸಲಾಗಿದ್ದು, ಸುಧಾರಿತ ಆಪ್ಟಿಕ್ಸ್ ಮತ್ತು ಸ್ವಂತ ವಸ್ತುಗಳನ್ನು ಹೊಂದಿರುವ ಟೆಕ್ನಿಸ್ ಒಡಿಸ್ಸಿ ಐಓಎಲ್ ಸದಾ ಸ್ಪಷ್ಟ ಮತ್ತು ಹೈ-ಕಾಂಟ್ರಾಸ್ಟ್ ದೃಷ್ಟಿಯನ್ನು ಒದಗಿಸುತ್ತದೆ
“ಟೆಕ್ನಿಸ್ ಒಡಿಸ್ಸಿ ಐಓಎಲ್ ಕನ್ನಡಕದ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಬಯಸುವ ಕ್ಯಾಟರಾಕ್ಟ್ ರೋಗಿಗಳ ಪ್ರಮುಖ ಅಗತ್ಯವನ್ನು ಪೂರೈಸುತ್ತದೆ+. ಭಾರತದಲ್ಲಿ ಇದರ ಪರಿಚಯವು ಎಲ್ಲಾ ದೂರಗಳಲ್ಲಿ ಉನ್ನತ ಗುಣಮಟ್ಟದ ನಿರಂತರ ದೃಷ್ಟಿಯನ್ನು ಒದಗಿಸುವ ಸುಧಾರಿತ ಐಓಎಲ್ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರವೇಶವನ್ನು ನೀಡುತ್ತದೆ. ಟೆಕ್ನಿಸ್ ಪ್ಯೂರ್‌ಸೀ ಜೊತೆಗೂಡಿ, ಟೆಕ್ನಿಸ್ ಒಡಿಸ್ಸಿ ಐಓಎಲ್ ನಮ್ಮ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಇಂದಿನ ವಯೋವೃದ್ಧ ಜನಸಂಖ್ಯೆಯ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ,” ಎಂದು ಜಾನ್ಸನ್ ಮತ್ತು ಜಾನ್ಸನ್ನ ಸರ್ಜಿಕಲ್ ವಿಷನ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಕಂಟ್ರಿ ಮ್ಯಾನೇಜರ್ ಬರ್ಜಿನ್ ಶಹಾನಾ ಹೇಳಿದರು.
ಇದನ್ನೂ ಓದಿ: TATA Mumbai Marathon 2026: ಅಂತಾರಾಷ್ಟ್ರೀಯ, ಭಾರತೀಯ ಎಲೀಟ್ ಓಟಗಾರರು ಸಜ್ಜು!
ಪ್ರಸ್ತುತ, 50 ವರ್ಷ ಮತ್ತು ಮೇಲ್ಪಟ್ಟ ಸುಮಾರು 94 ಮಿಲಿಯನ್ ಜನರಿಗೆ ಮಧ್ಯಮದಿಂದ ಗಂಭೀರ ದೂರದ ದೃಷ್ಟಿ ಸಮಸ್ಯೆ ಅಥವಾ ಅಂಧತ್ವವಿದ್ದು, ಲೆನ್ಸ್ ಬದಲಾವಣೆ ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಬಹುದು. 8 ಪ್ರೆಸ್ಬಯೋಪಿಯಾ ಮತ್ತು ಕಣ್ಣಿನ ಪೊರೆಯ ಬೆಳವಣಿಗೆ ವಯಸ್ಸಾಗುವ ಪ್ರಕ್ರಿಯೆಯ ಭಾಗವಾಗಿರುವುದರಿಂದ ಈ ಅಂಕಿಅಂಶಗಳು ಹೆಚ್ಚಾಗುವ ನಿರೀಕ್ಷೆಯಿದೆ. ಪ್ರೆಸ್ ಬೈಯೋಪಿಯಾ ಒಂದು ಕ್ರಮೇಣ ಹೆಚ್ಚಾಗುವ ಕಣ್ಣಿನ ಸಮಸ್ಯೆಯಾಗಿದ್ದು, ಹತ್ತಿರದ ವಸ್ತುಗಳನ್ನು ಗಮನಿಸುವುದನ್ನು ಕಷ್ಟವಾಗಿಸುತ್ತದೆ ಮತ್ತು ಸಾಮಾನ್ಯವಾಗಿ 40 ವರ್ಷ ವಯಸ್ಸಿನ ನಂತರ ಕಾಣಿಸಿಕೊಳ್ಳುತ್ತದೆ9 ಲೆನ್ಸ್ ರಿಪ್ಲೇಸೆಮೆಂಟ್ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರೆಸ್ಬಯೋಪಿಯಾವನ್ನು ಸರಿಪಡಿಸಲು ಪೂರ್ಣ ದೃಶ್ಯ ಶ್ರೇಣಿಯ ಐಒಎಲ್‌ಗಳು ಅವಕಾಶವನ್ನು ಒದಗಿಸುತ್ತವೆ.
ಟೆಕ್ನಿಸ್ ಒಡಿಸ್ಸಿ ನೀಡುವ ವೈಶಿಷ್ಟ್ಯಗಳು:
* ರಿಫ್ರಾಕ್ಟಿವ್ ದೋಷಗಳಿಗೂ ಹೆಚ್ಚಿನ ಸಹನಶೀಲತೆ - ಟೆಕ್ನಿಸ್ ಒಡಿಸ್ಸಿ ಸರ್ಜನ್‌ಗಳ ವಿಶ್ವಾಸಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಏಕೆಂದರೆ ಫ್ರೀಫಾರ್ಮ್ ಡಿಫ್ರ್ಯಾಕ್ಟಿವ್ ಪ್ರೊಫೈಲ್ ರಿಫ್ರಾಕ್ಟಿವ್ ದೋಷಗಳಿಗೂ ಹೆಚ್ಚಿನ ಸಹನಶೀಲತೆಯನ್ನು ಹೆಚ್ಚಿಸುತ್ತದೆ.$$~~7,11
* ಡಿಸ್ಫೋಟೋಪ್ಸಿಯಾ ಸಮಸ್ಯೆ ಕಡಿಮೆ ಇರುವ ವಿನ್ಯಾಸ - ಫ್ರೀಫಾರ್ಮ್ ಡಿಫ್ರಾಕ್ಟಿವ್ ಪ್ರೊಫೈಲ್ ಡಿಸ್ಫೋಟೋಪ್ಸಿಯಾ ಸಮಸ್ಯೆ ಕಡಿಮೆ ಇರುವಿಕೆಗೆ ಸಹಾಯ ಮಾಡುತ್ತದೆ. 17
* ಹೆಚ್ಚಿನ ಇಮೇಜ್ ಕಾಂಟ್ರಾಸ್ಟ್ - ಟೆಕ್ನಿಸ್ ಒಡಿಸ್ಸಿ ಉತ್ತಮ ಕಡಿಮೆ ಬೆಳಕಿನ ಕಾಂಟ್ರಾಸ್ಟ್ ನೀಡುತ್ತದೆ$$,3,5,18
ವಿವಿಧ ದೃಷ್ಟಿ ಅಗತ್ಯಗಳು ಮತ್ತು ಜೀವನಶೈಲಿಗಳಿಗೆ ಹೊಂದುವ ಹಲವು ಆಯ್ಕೆಗಳೊಂದಿಗೆ ಟೆಕ್ನಿಸ್ ಪ್ಲಾಟ್‌ಫಾರ್ಮ್ ಹೆಚ್ಚು ರೋಗಿಗಳಿಗೆ ಸರಿಯಾದ ಪರಿಹಾರವನ್ನು ಹುಡುಕಲು ಸಹಾಯ ಮಾಡುತ್ತದೆ. ಈ ವರ್ಷಜಾನ್ಸನ್ ಮತ್ತು ಜಾನ್ಸನ್ನಲ್ಲಿ ಟೆಕ್ನಿಸ್ ನಾವೀನ್ಯತೆಯ 25 ನೇ ವಾರ್ಷಿಕೋ ತ್ಸವವನ್ನು ಸೂಚಿಸುತ್ತದೆ. ಎರಡು ದಶಕಗಳಿಗೂ ಹೆಚ್ಚು ಕಾಲ,ಟೆಕ್ನಿಸ್ ಸಹಜ ಕಣ್ಣುಗಳಿಂದ ಪ್ರೇರಿತ ಆಪ್ಟಿಕ್ಸ್ ಮೂಲಕ ದೃಷ್ಟಿಯ ವಿಜ್ಞಾನವನ್ನು ಮುಂದುವರಿಸಿಕೊಂಡಿದೆ, ಇಂಟ್ರಾ ಯೂಕ್ಯುಲರ್ ಲೆನ್ ತಂತ್ರಜ್ಞಾನದಲ್ಲಿ ಮಾನದಂಡಗಳನ್ನು ಮರುಪರಿಭಾಷಿಸಲು ಸಹಾಯ ಮಾಡುತ್ತಿದೆ. ಕ್ಲಿನಿಕಲ್ ಪುರಾವೆಗಳು ಮತ್ತು ನಿರಂತರ ನಾವೀನ್ಯತೆಯ ಪರಂಪರೆಯ ಮೇಲೆ ನಿರ್ಮಿಸಲಾದ ಟೆಕ್ನಿಸ್, ಕಣ್ಣಿನ ಆರೋಗ್ಯದಲ್ಲಿ ಪ್ರಗತಿಯನ್ನು ಹೆಚ್ಚಿಸಲು ಮತ್ತು ಸರ್ಜನ್‌ಗಳು ಮತ್ತು ರೋಗಿಗಳು ನಂಬಬಹುದಾದ ದೃಷ್ಟಿ ಫಲಿತಾಂಶಗಳನ್ನು ನೀಡಲು ಬದ್ಧವಾಗಿದೆ.
ವಿಷನ್ ಐಓಎಲ್ ನ ಸಂಪೂರ್ಣ ಶ್ರೇಣಿಯಾದ ಟೆಕ್ನಿಸ್ ಒಡಿಸ್ಸಿ ಐಓಎಲ್ ಈಗ ಭಾರತದಲ್ಲಿ ಲಭ್ಯವಿದೆ.