ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tech Tips: ಬಿಸಿಲಿಗೆ ನಿಮ್ಮ ಸ್ಮಾರ್ಟ್​ಫೋನ್ ಓವರ್ ಹೀಟ್ ಆಗ್ತಿದೆಯಾ? ತಂಪಾಗಿಡಲು ಇಲ್ಲಿದೆ ಟಿಪ್ಸ್!..

ಬಿಸಿಲ ದಗೆಯಿಂದ ಸ್ಮಾರ್ಟ್​ಫೋನ್​ಗಳೂ ಸಿಕ್ಕಾಪಟ್ಟೆ ಹೀಟ್ ಆಗುತ್ತಿದೆ. ಈ ಸಮಯದಲ್ಲಿ ಬ್ಯಾಟರಿ ಮತ್ತು ಸ್ಮಾರ್ಟ್​ಫೋನ್ ಕಾರ್ಯಾಚರಣೆಯಲ್ಲಿ ಸಮಸ್ಯೆ ಉಂಟಾಗಬಹುದು.ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಸ್ಪೋಟ ಗೊಳ್ಳುವ ಸಾಧ್ಯತೆಯು ಇದೆ. ಹಾಗಾಗಿ ತೀವ್ರ ಬಿಸಿಲಿನ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಸುವಾಗ ಎಚ್ಚರಿಕೆ ವಹಿಸಬೇಕು.ಹಾಗಾದರೆ ಬಿಸಿಲ ಬೇಗೆ ಯಿಂದ ನಿಮ್ಮ ಮೊಬೈಲ್ ತಂಪಾಗಿಡುವುದು ಹೇಗೆ ಎಂಬುದಕ್ಕೆ ಟಿಪ್ಸ್ ಇಲ್ಲಿದೆ.

ಬೇಸಿಗೆಯಲ್ಲಿ ಸ್ಮಾರ್ಟ್ ಪೋನ್ ತಂಪಾಗಿಡಲು ಈ ಟಿಪ್ಸ್ ಪಾಲಿಸಿ!

Profile Pushpa Kumari Apr 18, 2025 4:48 PM

ನವದೆಹಲಿ: ರಾಜ್ಯ ದೆಲ್ಲೆಡೆ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಬಿಸಿಲಿಗೆ ಜನರು ಹೈರಾಣಾಗಿದ್ದಾರೆ. ಆದರೆ ಬೇಸಿಗೆಯ ತಾಪದ ಪರಿಣಾಮ ನಮಗಷ್ಟೇ ಅಲ್ಲದೆ ನಾವು ಬಳಸುವ ಸ್ಮಾರ್ಟ್ ಫೋನ್ ಮೇಲೂ ಸಾಕಷ್ಟು ಬೀರುತ್ತದೆ. ಈ ಬಿಸಿಲ ದಗೆ ಯಿಂದ ಸ್ಮಾರ್ಟ್​ಫೋನ್​ಗಳೂ ಸಿಕ್ಕಾಪಟ್ಟೆ ಹೀಟ್ ಆಗುತ್ತಿದೆ. ಈ ಸಮಯದಲ್ಲಿ ಬ್ಯಾಟರಿ ಮತ್ತು ಸ್ಮಾರ್ಟ್​ಫೋನ್ ಕಾರ್ಯಾ ಚರಣೆಯಲ್ಲಿ ಸಮಸ್ಯೆ ಉಂಟಾಗಬಹುದು.ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಸ್ಪೋಟಗೊಳ್ಳುವ ಸಾಧ್ಯತೆಯೂ ಇದೆ.  ಹಾಗಾಗಿ  ತೀವ್ರ ಬಿಸಿಲಿನಲ್ಲಿ ಸ್ಮಾರ್ಟ್‌ಫೋನ್ ಬಳಸುವಾಗ ಎಚ್ಚರಿಕೆ ವಹಿಸಬೇಕು. ಹಾಗಾದರೆ ಬಿಸಿಲ ಬೇಗೆಯಿಂದ ನಿಮ್ಮ ಮೊಬೈಲ್ ತಂಪಾಗಿಡುವುದು (Tech Tips) ಹೇಗೆ ಎಂಬುದಕ್ಕೆ ಟಿಪ್ಸ್ ಇಲ್ಲಿದೆ.

ಸೂರ್ಯನ ಬೆಳಕಿಗೆ ನೇರವಾಗಿ ಇಡುವುದನ್ನು ತಪ್ಪಿಸಿ:

ಸ್ಮಾರ್ಟ್‌ಫೋನ್ ನೇರ ಸೂರ್ಯನ ಬೆಳಕಿನಲ್ಲಿ ಅಥವಾ ಬಿಸಿ ಸ್ಥಳಗಳಲ್ಲಿ ಇಡುವುದರಿಂದ ಅದರ ತಾಪಮಾನ ಹೆಚ್ಚಾಗುತ್ತದೆ. ಇದರಿಂದ ಶಾಖವು ಸಂಗ್ರಹವಾಗಿ‌ ಸ್ಪೋಟ ಗೊಳ್ಳಬಹುದು. ಹಾಗಾಗಿ‌ ಸ್ಮಾರ್ಟ್‌ಫೋನ್ ನೇರ ಸೂರ್ಯನ ಬೆಳಕಿನಲ್ಲಿ ಅಥವಾ ಬಿಸಿಯಾದ ಸ್ಥಳಗಳಲ್ಲಿ ಇಡುವ ಅಭ್ಯಾಸ ಮಾಡಿಕೊಳ್ಳಬೇಡಿ

ಕಳಪೆ ಮಟ್ಟದ ಚಾರ್ಜರ್ ತಪ್ಪಿಸಿ:

ವೇಗವಾಗಿ ಮೊಬೈಲ್ ಚಾರ್ಜ್ ಆಗಬೇಕು ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ದೊರೆಯುವ ವೇಗ ಚಾರ್ಜರ್‌ ಗಳನ್ನು ಬಳಸಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬೇಡಿ.ಕಳಪೆ ಗುಣಮಟ್ಟದ ಚಾರ್ಜರ್ ಬಳಸುವುದರಿಂದ ಅತಿಯಾದ ಶಾಖವನ್ನು ಉತ್ಪಾದಿಸಬಹುದು ಮತ್ತು ಫೋನ್ ಸ್ಫೋಟಗೊಳ್ಳಬಹುದು.ಹಾಗಾಗಿ ಸ್ಮಾರ್ಟ್‌ ಫೋನ್ ಚಾರ್ಜ್ ಮಾಡುವಾಗ ಗುಣಮಟ್ಟದ ಚಾರ್ಜರ್ ಅನ್ನು ಮಾತ್ರ ಬಳಸಿ ಅದರ ಜೊತೆಗೆ‌ ಫೋನ್ ಚಾರ್ಜ್ ಆಗುತ್ತಿರುವಾಗ ಬಳಕೆಯನ್ನು ಕಡಿಮೆ ಮಾಡಿ.

ಬ್ರೈಟ್‌ನೆಸ್ ಕಡಿಮೆ ಮಾಡಿ:

ಸ್ಕ್ರೀನ್ ಬ್ರೈಟ್​ನೆಸ್ ಹೆಚ್ಚಾಗಿ ಇಡುವುದರಿಂದ ಬ್ಯಾಟರಿಯ ಬಳಕೆ ಹೆಚ್ಚಾಗಿ ಫೋನ್ ಕೂಡ ಬಿಸಿಯಾಗುತ್ತದೆ. ಹಾಗಾಗಿ ಮನೆಯ ಒಳಗಡೆ ಮತ್ತು ರಾತ್ರಿಯ ಸಮಯದಲ್ಲಿ ಬ್ರೈಟ್ ನೆಸ್ ಅಧಿಕವಾಗಿ ಹೆಚ್ಚಿಸುವ ಅಗತ್ಯವಿರುವುದಿಲ್ಲ. ಆಗ ಬ್ರೈಟ್ ಕಡಿಮೆಗೊಳಿಸಿ.

ಮೊಬೈಲ್ ಕವರ್ ತೆಗೆಯಿರಿ:

ಸಾಮಾನ್ಯವಾಗಿ ಫೋನ್​ಗಳ ಸುರಕ್ಷತೆಗಾಗಿ ಹಾಕುವ ಕವರ್​ಗಳು ಬಿಸಿಯನ್ನು ಹಿಡಿದಿಟ್ಟುಕೊಳ್ಳಬಹುದು.ಸ್ಮಾರ್ಟ್‌ಫೋನ್ ಗೆ  ಬಳಸಿರುವ ಮೊಬೈಲ್ ಕವರ್ ಬಳಕೆಯೂ ಕೂಡ ಸ್ಮಾರ್ಟ್‌ಫೋನ್ ಬಿಸಿಯಾಗಲು ಕಾರಣವಾಗಿದೆ. ಹಾಗಾಗಿ ಮೊಬೈಲ್ ಕವರ್ ಇಲ್ಲದೇ ಬಳಕೆ ಮಾಡಿದರೆ ಬಿಸಿಯಾಗುವುದನ್ನು ತಪ್ಪಿಸಬಹುದಾಗಿದೆ.

ಫೋನ್ ಆಫ್ ಮಾಡಿ:

ನಿಮ್ಮ ಸ್ಮಾರ್ಟ್ ಫೋನ್  ಬಿಸಿಲಿನ ತೀವ್ರತೆಗೆ ಓವರ್ ಹೀಟ್ ಆಗಿದ್ದರೆ  ಫೋನ್ ಸ್ವಲ್ಪ ಸಮಯದವರೆಗೆ ಆಫ್ ಮಾಡಿ ಮತ್ತೆ ಆನ್ ಮಾಡಿಕೊಳ್ಳಬಹುದು. ಫೋನ್ ತೀರಾ ಬಿಸಿಯಾಗಿರುವಾಗ ಅದನ್ನು  ಮತ್ತೆ ಬಳಸಿದರೆ ಅದರ ಶಾಖ ಮತ್ತೂ ಹೆಚ್ಚಾಗುತ್ತದೆ.

ಇದನ್ನು ಓದಿ: Mobile Phone: ನೀವು ಖರೀದಿಸಿದ ಮೊಬೈಲ್‌ ಫೋನ್‌ ಅಸಲಿಯೋ, ನಕಲಿಯೋ? ಡೋಂಟ್‌ ವರಿ ತಿಳಿದುಕೊಳ್ಳಲು ಇಲ್ಲಿದೆ ಟಿಪ್ಸ್‌

ಇಂಟರ್ನೆಟ್ ಮತ್ತು ಬ್ಲೂಟೂತ್ ಆಫ್ ಮಾಡಿ:

ನಿಮ್ಮ ಮೊಬೈಲ್ ನ ಇಂಟರ್ ನೆಟ್ ಸಂಪರ್ಕ, ಹಾಟ್ ಸ್ಪಾಟ್ ಅಥವಾ ಬ್ಲೂಟೂತ್ ಆನ್ ಮಾಡಿದ್ದರೆ ಫೋನ್ ಬಿಸಿ ಯಾಗುತ್ತದೆ. ಹಾಗಾಗಿ ಇವನ್ನು ಆಫ್ ಮಾಡಿದರೆ ಆದಷ್ಟೂ ಫೋನ್ ಬಿಸಿಯಾಗದಂತೆ ತಡೆಯಬಹುದು.

ಅನಗತ್ಯ ಅಪ್ಲಿಕೇಶನ್ ಡಿಲೀಟ್ ಮಾಡಿ:

ಮೊಬೈಲ್‌ನಲ್ಲಿ ಅನಗತ್ಯ  ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ. ನಮ್ಮ ಫೋನಿನ ಬ್ಯಾಕ್ ಗ್ರೌಂಡ್ ರನ್ನಿಂಗ್ ಅಪ್ಲಿಕೇಶನ್​ಗಳನ್ನು ತೆಗೆಯದೆ ಇದ್ದಾಗ, ಫೋನಿನ ವೇಗ ಕಡಿಮೆ ಯಾಗಿ ನಮ್ಮ ಮೊಬೈಲ್ ಬಿಸಿ ಆಗಬಹುದು. ಹಾಗಾಗಿ ಅನಗತ್ಯ ಅಪ್ಲಿಕೇಶನ್ ಡಿಲೀಟ್ ಮಾಡುವುದು ಉತ್ತಮ.