ರಕ್ತದಾನದಿಂದ ಜೀವ ಉಳಿಸುವುದು ಮಾತ್ರವಲ್ಲ! ನಿಮ್ಮ ಆರೋಗ್ಯಕ್ಕೂ ವರದಾನ!
Health Tips: ಆರೋಗ್ಯವಂತರು ನಿಮ್ಮ ರಕ್ತವನ್ನು ರಕ್ತಹೀನರಿಗೆ ನಿಯಮಿತವಾಗಿ ದಾನ ಮಾಡುವುದರಿಂದ ತುರ್ತು ಅಗತ್ಯತೆಗಳಿಗೆ ಇದು ನೆರವಾಗುತ್ತದೆ. ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಪಡೆಯುವ ರೋಗಿಗಳು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಹಾಗೂ ಅಪಘಾತಕ್ಕೀಡಾದವರ ಪಾಲಿಗೆ ಇಂತಹ ರಕ್ತದಾನವೇ ನೆರವಾಗುತ್ತದೆ.. ಆದರೆ ಹೆಚ್ಚಿನ ಜನರು ಇತರರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ, ಆದರೆ ಅನೇಕರು ಆಗಾಗ್ಗೆ "ರಕ್ತದಾನವು ನಿಜವಾಗಿಯೂ ನನಗೆ ಏನಾದರೂ ತೊಂದರೆ ಮಾಡುತ್ತದೆಯೇ"? ಎನ್ನುವ ಆತಂಕ ಇದ್ದೇ ಇರುತ್ತದೆ. ಈ ಬಗ್ಗೆ ತಜ್ಞರು ಸಲಹೆ ನೀಡಿದ್ದು ರಕ್ತದಾನ ಮಾಡುವುದರಿಂದ ನಿಮ್ಮ ದೇಹಕ್ಕೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂದಿದ್ದಾರೆ. ಹಾಗಿದ್ರೆ ರಕ್ತದಾನ ಮಾಡುವುದರಿಂದ ಏನೆಲ್ಲಾ ಆರೋಗ್ಯ ಲಾಭ ಇದೆ?..
ಸಂಗ್ರಹ ಚಿತ್ರ -
ನವದೆಹಲಿ,ಜೂ.12: ರಕ್ತದಾನವನ್ನು "ಮಹಾದಾನ" ಎಂದು ಕರೆಯಲಾಗುತ್ತದೆ. ಆರೋಗ್ಯ ವಂತರು ನಿಮ್ಮ ರಕ್ತವನ್ನು ರಕ್ತಹೀನರಿಗೆ ನಿಯಮಿತವಾಗಿ ದಾನ ಮಾಡುವುದರಿಂದ (Blood Donation) ತುರ್ತು ಅಗತ್ಯತೆಗಳಿಗೆ ಇದು ನೆರವಾಗುತ್ತದೆ. ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಪಡೆ ಯುವ ರೋಗಿಗಳು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಹಾಗೂ ಅಪಘಾತಕ್ಕೀಡಾದವರ ಪಾಲಿಗೆ ಇಂತಹ ರಕ್ತದಾನವೇ ನೆರವಾಗುತ್ತದೆ. ಆದರೆ ಹೆಚ್ಚಿನ ಜನರು ಇತರರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ, ಆದರೆ ಅನೇಕರು ಆಗಾಗ್ಗೆ "ರಕ್ತದಾನವು ನಿಜವಾಗಿಯೂ ನನಗೆ ಏನಾದರೂ ತೊಂದರೆ ಮಾಡುತ್ತದೆಯೇ"? ಎನ್ನುವ ಆತಂಕ ಇದ್ದೇ ಇರುತ್ತದೆ. ಈ ಬಗ್ಗೆ ತಜ್ಞರು ಸಲಹೆ ನೀಡಿದ್ದು ರಕ್ತದಾನ ಮಾಡುವುದರಿಂದ ನಿಮ್ಮ ದೇಹಕ್ಕೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂದಿದ್ದಾರೆ. ಹಾಗಿದ್ರೆ ರಕ್ತದಾನ ಮಾಡುವುದರಿಂದ ಏನೆಲ್ಲಾ ಆರೋಗ್ಯ ಲಾಭ ಇದೆ?
ಸಾಮಾನ್ಯವಾಗಿ ಎಲ್ಲರೂ ಸಾಮಾಜಿಕ ಕಳಕಳಿಯಿಂದ ರಕ್ತದಾನ ಮಾಡುತ್ತಾರೆ. ಆದರೆ ರಕ್ತದಾನ ಮಾಡುವುದರಿಂದ ದಾನಿಗಳಿಗೆ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುತ್ತವೆ. ರಕ್ತದಾನ ಮಾಡುವುದರಿಂದ ಒಂದು ಲಾಭ ಏನಪ್ಪ ಅಂದ್ರೆ ದೇಹದಿಂದ ಹೆಚ್ಚುವರಿ ಕಬ್ಬಿಣವನ್ನು ತೆಗೆದು ಹಾಕಲು ಇದು ಸಹಾಯ ಮಾಡುತ್ತದೆ. ಹಿಮೋಗ್ಲೋಬಿನ್ ತಯಾರಿಸಲು ಕಬ್ಬಿಣವು ಅತ್ಯಗತ್ಯ, ಇದು ರಕ್ತವು ಆಮ್ಲಜನಕವನ್ನು ಸಾಗಿಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ ಇದು ಹೆಚ್ಚುವರಿ ಆದರೆ ಅಂಗಾಂಗಗಳಿಗೆ ಹಾನಿ ಉಂಟುಮಾಡುವ 'ಫ್ರೀ ರಾಡಿಕಲ್ಸ್' ಸೃಷ್ಟಿಯಾಗುತ್ತವೆ. ಆದರೆ ರಕ್ತದಾನ ಮಾಡುವುದರಿಂದ ದೇಹದಲ್ಲಿನ ಹೆಚ್ಚುವರಿ ಕಬ್ಬಿಣದ ಅಂಶ ಹೊರಹೋಗಿ ದೇಹಕ್ಕೆ ಸಮತೋಲನವನ್ನು ನೀಡುತ್ತದೆ.
ಹೃದಯದ ಆರೋಗ್ಯಕ್ಕೆ ಒಳಿತು:
ನಿಯಮಿತ ರಕ್ತದಾನವು ಹೃದಯದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ದೇಹದಲ್ಲಿ ಕಡಿಮೆ ಕಬ್ಬಿಣದ ಅಂಶಗಳು ಇದ್ದಾಗ ರಕ್ತನಾಳಗಳು ಕಡಿಮೆ ಆಕ್ಸಿಡೇಟಿವ್ ಒತ್ತಡವನ್ನು ಅನುಭವಿಸಬಹುದು. ಆದರೆ ರಕ್ತದಾನದ ನಂತರ ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ಹರಿದು ಹೋಗಲು ಬಹಳಷ್ಟು ಸಹಕಾರಿಯಾಗುತ್ತದೆ.
Health Tips: ಬೇಸಗೆಯಲ್ಲಿ ಮೂಗಿನಲ್ಲಿ ರಕ್ತ ಬರುವುದೇಕೆ? ಇದಕ್ಕೇನು ಪರಿಹಾರ?
ಯಕೃತ್ತಿನ ರಕ್ಷಣೆ:
ದೇಹದಲ್ಲಿನ ಹೆಚ್ಚುವರಿ ಕಬ್ಬಿಣದ ಅಂಶವು ಯಕೃತ್ತಿನಲ್ಲಿ ಸಂಗ್ರಹವಾಗುತ್ತದೆ. ಇದು ಹೆಚ್ಚಾದಾಗ 'ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್ ನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ರಕ್ತದಾನದ ಮೂಲಕ ಕಬ್ಬಿಣದ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟರೆ ಯಕೃತ್ತಿನ ಮೇಲಿನ ಒತ್ತಡ ಕಡಿಮೆಯಾಗಬಹುದು.
ಉಚಿತ ಆರೋಗ್ಯ ತಪಾಸಣೆಗೆ ಅವಕಾಶ ಸಿಗುತ್ತದೆ:
ರಕ್ತದಾನ ಮಾಡುವ ಮೊದಲು ಮಾಡುವಂತ ಆರೋಗ್ಯ ತಪಾಸಣೆಯಿಂದ ಏನೇ ಆರೋಗ್ಯ ಸಮಸ್ಯೆ ಇದ್ದರೂ ನಿಮಗೆ ತಿಳಿಯುತ್ತದೆ. ರಕ್ತದಾನಕ್ಕೂ ಮೊದಲು, ಹಿಮೋಗ್ಲೋಬಿನ್ ನಾಡಿ ದರ, ರಕ್ತದೊತ್ತಡ, ದೇಹದ ಉಷ್ಣತೆ ಪರಿಶೀಲನೆ ಮಾಡಲಾಗುತ್ತದೆ.
ಹೊಸ ರಕ್ತದ ಕಣಗಳ ಉತ್ಪತ್ತಿ:
ರಕ್ತದಾನ ಮಾಡಿದ ತಕ್ಷಣ ದೇಹವು ಕಳೆದುಹೋದ ರಕ್ತವನ್ನು ಮರು ಉತ್ಪತ್ತಿಗೆ ಚಾಲನೆ ನೀಡುತ್ತದೆ. ಮೂಳೆ ಮಜ್ಜೆಯೂ ಹೊಸ ರಕ್ತಕಣಗಳನ್ನು ಉತ್ಪಾದಿಸಲು ಆರಂಭಿಸುತ್ತದೆ.ಇದರಿಂದ ರಕ್ತ ಕಣಗಳು ಅಭಿವೃದ್ಧಿಯಾಗುತ್ತದೆ.
ಮಾನಸಿಕ ನೆಮ್ಮದಿ ಹಾಗೂ ಖುಷಿ:
ರಕ್ತದಾನ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ನೆಮ್ಮದಿಗೂ ತೃಪ್ತಿ ನೀಡುತ್ತದೆ. ತನ್ನ ರಕ್ತದಿಂದ ಇನ್ನೊಬ್ಬರ ಜೀವ ಉಳಿಯಿತು ಎಂಬ ಉಪಕಾರದ ಮನೋಭಾವ ಬರುತ್ತದೆ.