ಡಯಾಬಿಟಿಸ್ ಇದ್ದವರ ಕಾಲಿನಲ್ಲಿ ಗಾಯ ಆಗಲು ಕಾರಣ ಏನು? ಯಾವ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು?
ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಕೊರತೆ ಉಂಟಾಗುವ ಕಾರಣ ಡಯಾಬಿಟಿಸ್ ಕಾಣಿಸಿಕೊಳ್ಳುತ್ತದೆ. ಈ ದೀರ್ಘ ಕಾಲದ ಕಾಯಿಲೆಗೆ ನಿರಂತರ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಖ್ಯಾತ ಮಧುಮೇಹ ತಜ್ಞ ಡಾ. ಸುಮನ್ ತಿಳಿಸಿಕೊಟ್ಟಿದ್ದಾರೆ. ಡಯಾಬಿಟಿಸ್ ಕಾಯಿಲೆ ಇದ್ದವರಿಗೆ ಕಾಲಿನ ಗಾಯ ಉಂಟಾಗುವುದು ಸಾಮಾನ್ಯ. ಕಾಲಿನಲ್ಲಿ ಗಾಯಗಳು ಕಂಡು ಬರಲು ಕಾರಣ ಏನು? ಇದಕ್ಕೆ ಪರಿಹಾರ ಕ್ರಮ ಏನು? ಎಂಬುದನ್ನು ತಿಳಿದುಕೊಂಡರೆ ಗ್ಯಾಂಗ್ರೀನ್ ಆಗುವುದನ್ನು ತಡೆಗಟ್ಟಬಹುದು ಎಂದು ಈ ಬಗ್ಗೆ ಅವರು ಸಲಹೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಡಿ. 17: ಇತ್ತೀಚಿನ ದಿನದಲ್ಲಿ ಬಹುತೇಕ ಜನರಿಗೆ ಡಯಾಬಿಟಿಸ್ ಕಂಡು ಬರುವ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಡಯಾಬಿಟಿಸ್ ಎಂದರೆ ದೇಹದಲ್ಲಿ ಸಕ್ಕರೆ (ಗ್ಲುಕೋಸ್) ಮಟ್ಟ ಅಧಿಕವಾಗುವುದು ಎಂದರ್ಥ. ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಕೊರತೆ ಉಂಟಾಗುವ ಕಾರಣ ಡಯಾಬಿಟಿಸ್ ಉಂಟಾಗುತ್ತದೆ. ಈ ದೀರ್ಘ ಕಾಲದ ಕಾಯಿಲೆಗೆ ನಿರಂತರ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ಈ ಬಗ್ಗೆ ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಖ್ಯಾತ ಮಧುಮೇಹ ತಜ್ಞರ ಡಾ. ಸುಮನ್ (Dr. Suman) ತಿಳಿಸಿಕೊಟ್ಟಿದ್ದಾರೆ. ಡಯಾಬಿಟಿಸ್ ಕಾಯಿಲೆ ಇದ್ದವರಿಗೆ ಸಾಮಾನ್ಯವಾಗಿ ಕಾಲಿನ ಗಾಯಗಳು ಕಂಡು ಬರುವ ಪ್ರಮಾಣ ಹೆಚ್ಚಾಗಿದೆ. ಕಾಲಿನಲ್ಲಿ ಗಾಯಗಳು ಕಂಡು ಬರಲು ಕಾರಣ ಏನು? ಇದಕ್ಕೆ ಪರಿಹಾರ ಕ್ರಮ ಏನು? ಎಂಬುದನ್ನು ತಿಳಿದುಕೊಂಡರೆ ಗ್ಯಾಂಗ್ರೀನ್ ಆಗುವುದನ್ನು ತಡೆಗಟ್ಟಬಹುದು ಎಂದು ಈ ಬಗ್ಗೆ ಅವರು ಸಲಹೆ ನೀಡಿದ್ದಾರೆ.
ಡಯಾಬಿಟಿಸ್ ಲಕ್ಷಣಗಳೇನು?
- ಪದೇ ಪದೆ ಬಾಯಾರಿಕೆ ಮತ್ತು ಹಸಿವಾಗುವುದು.
- ಪದೇ ಪದೇ ಮೂತ್ರ ವಿಸರ್ಜಿಸುವುದು.
- ತುಂಬಾ ಆಯಾಸವಾಗುವುದು.
- ಕಣ್ಣು ಮಂಜಾಗುವುದು.
- ಗಾಯಗಳು ನಿಧಾನವಾಗಿ ಗುಣವಾಗುವುದು.
- ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುವುದು.
ಕಾರಣ ಏನು?
ಡಯಾಬಿಟಿಸ್ ಕಾಯಿಲೆ ಇದ್ದವರಿಗೆ ಕಾಲಿನಲ್ಲಿ ಗಾಯ ಆಗಲು ಕೂಡ ಕಾರಣ ಇದೆ. ಈ ಕಾಯಿಲೆ ಇದ್ದವರಿಗೆ ದೇಹದಲ್ಲಿ ಕಾಲಿನ ಭಾಗದಲ್ಲಿ ಸ್ಪರ್ಶ ಜ್ಞಾನ ಕಳೆದುಕೊಳ್ಳುವ ಕಾರಣಕ್ಕೆ ಅವರಿಗೆ ಕಾಲಿಗೆ ನೋವಾದರೆ ತಿಳಿಯಲಾರದು. ಸಕ್ಕರೆ ಕಾಯಿಲೆ ಇದ್ದವರಿಗೆ ಶುಗರ್ ಲೆವೆಲ್ ಚೆನ್ನಾಗಿಲ್ಲದಿದ್ದರೆ ನರ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಚರ್ಮದಲ್ಲಿ ಜುಮ್ ಎನ್ನುವ ಅನುಭವ, ನೋವು ಇತ್ಯಾದಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನೇ ಡಯಾಬಿಟಿಸ್ ನ್ಯೂರೋಪತಿ ಎಂದು ಕರೆಯುತ್ತಾರೆ. ಇದು ಬಂದರೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಡಯಾಬಿಟಿಸ್ ಅನ್ನು ಕಂಟ್ರೋಲ್ ಇಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ವಿಡಿಯೊ ನೋಡಿ:
ಡಯಾಬಿಟಿಸ್ ನ್ಯೂರೋಪತಿಯಾದಾಗ ಚಿಕಿತ್ಸೆ ಪಡೆಯದೆ ಇದ್ದರೆ ಚರ್ಮದ ಸ್ಪರ್ಶ ಜ್ಞಾನ ನಷ್ಟವಾಗುತ್ತದೆ. ಪರಿಣಾಮ ಕಾಲಿಗೆ ಪೆಟ್ಟಾದಾಗ ನೋವು ತಿಳಿಯಲಾರದು. ಹೀಗಾಗಿ ಮುಳ್ಳು, ಇತರ ಹಾನಿಕಾರಕ ಗಾಜು ಇತ್ಯಾದಿ ಚುಚ್ಚಿಕೊಂಡು ಗಾಯಗಳು ಆಗುವ ಪ್ರಮಾಣ ಹೆಚ್ಚಾಗುತ್ತದೆ. ಹೀಗೆ ಹೆಚ್ಚಾದಾಗ ಗ್ಯಾಂಗ್ರಿನ್ ಆಗುತ್ತದೆ. ಆಗ ಕಾಲಿನ ಭಾಗವನ್ನೇ ಕತ್ತರಿಸಬೇಕಾಗುತ್ತದೆ. ಹೀಗಾಗಿ ಡಯಾಬಿಟಿಸ್ ಕಾಯಿಲೆ ಇದ್ದವರು ಕಾಲನ್ನು ಆದಷ್ಟು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ವಸಡಿನ ಸೋಂಕಿನಿಂದ ಪಾರಾಗಲು ಈ ಸರಳ ವಿಧಾನ ಫಾಲೋ ಮಾಡಿ
ಪರಿಹಾರ ಕ್ರಮ ಏನು?
ಡಯಾಬಿಟಿಸ್ ಕಂಟ್ರೋಲ್ ಮಾಡುವುದೆ ಪರಿಹಾರ ಕ್ರಮ ಆಗಿದೆ.
- ದಿನ ನಿತ್ಯ ಎಕ್ಸಸೈಜ್ ಮಾಡಬೇಕು.
- ದಿನವೂ ವಾಕ್ ಮಾಡಬೇಕು.
- ತಿನ್ನುವ ಆಹಾರದಲ್ಲಿ ಪಥ್ಯೆ ಮಾಡಬೇಕು.
- ಶುಗರ್ ಕಂಟ್ರೋಲ್ ಮಾಡಲು ಇರುವ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು.
- ಕೆಲವು ಸಂದರ್ಭಗಳಲ್ಲಿ, ಗ್ಯಾಸ್ಟ್ರಿಕ್ ಬೈಪಾಸ್‌ನಂತಹ ಶಸ್ತ್ರಚಿಕಿತ್ಸೆಗಳು ಮಧುಮೇಹವನ್ನು ಸುಧಾರಿಸಬಹುದು.
- ಕಾಲುಗಳಿಗೆ ಗಾಯ ಆಗದಂತೆ ನೋಡಿಕೊಳ್ಳಬೇಕು.
- ಕಾಲಿನಲ್ಲಿ ನೀರಿನ ಪಸೆ ಉಳಿಯದಂತೆ ಡ್ರೈ ಆಗಿ ಇಟ್ಟುಕೊಳ್ಳಬೇಕು.
- ಕಾಲಿನಲ್ಲಿ ಡ್ರೈ ಸ್ಕಿನ್, ಕ್ರ್ಯಾಕ್ ಸ್ಕಿನ್ ಇದ್ದರೆ ಲೋಶನ್ ಹಚ್ಚಿಕೊಳ್ಳಬೇಕು., ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್ ಮಾಡುತ್ತಿರಬೇಕು. ಇದರಿಂದ ಡಯಾಬಿಟಿಸ್ ಫೂಟ್ ಇನ್‌ಫೆಕ್ಷನ್ ತಡೆಗಟ್ಟಬಹುದು.
- ಬರಿಕಾಲಿನಲ್ಲಿ ಓಡಾಡಬಾರದು, ಸಾಕ್ಸ್, ಚಪ್ಪಲಿಯನ್ನು ಕಡ್ಡಾಯವಾಗಿ ಧರಿಸಬೇಕು.
- ಕಾಲುಗಳಿಗೆ ಗಾಯವಾದರೂ ತಕ್ಷಣವೇ ಅದಕ್ಕೆ ಬೇಕಾದ ಚಿಕಿತ್ಸಾ ಕ್ರಮ ಅನುಸರಿಸುವುದರಿಂದ ಫೂಟ್ ಇನ್‌ಫೆನ್‌ಫೆಕ್ಷನ್ ಆರಂಭಿಕ ಹಂತದಲ್ಲಿ ಕಂಟ್ರೋಲ್ ಆಗಲಿದೆ.