Health Tips: 40 ವರ್ಷ ದಾಟಿದ ನಂತರವೂ ಫಿಟ್ ಆಗಿರಲು ಈ ಆಹಾರ ಸೇವಿಸಿ
50 ವರ್ಷ ದಾಟಿದ ನಂತರ ಜೀರ್ಣಕ್ರಿಯೆಯಲ್ಲಿ ಬದಲಾವಣೆ ಆಗಬಹುದು, ಸಕ್ಕರೆ ಮಟ್ಟ ಹೆಚ್ಚಾಗಬಹುದು, ರಕ್ತದೊತ್ತಡ, ಮಧುಮೇಹದಂತ ಅನೇಕ ಸಮಸ್ಯೆಗಳು ಕಾಡಬಹುದು. ಹೀಗಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಪ್ರಖ್ಯಾತ ಆಹಾರ ತಜ್ಞರೊಬ್ಬರು ವಯಸ್ಸಾದ್ದಂತೆ ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಲೇಬೇಕಾದ ಪ್ರಮುಖ ಆಹಾರಗಳನ್ನು ಶಿಫಾರಸ್ಸು ಮಾಡಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ವಯಸ್ಸು ಆಗುತ್ತಿದ್ದಂತೆ (Stay Healthy) ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. 50 ವರ್ಷ ದಾಟಿದ ನಂತರ ಜೀರ್ಣಕ್ರಿಯೆಯಲ್ಲಿ ಬದಲಾವಣೆ ಆಗಬಹುದು, ಸಕ್ಕರೆ ಮಟ್ಟ ಹೆಚ್ಚಾಗಬಹುದು, ರಕ್ತದೊತ್ತಡ, ಮಧುಮೇಹದಂತ ಅನೇಕ ಸಮಸ್ಯೆಗಳು ಕಾಡಬಹುದು. ಹೀಗಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನು ಮಾಡಿ ಕೊಳ್ಳಬೇಕಾಗುತ್ತದೆ. ದೇಹದಲ್ಲಿ ಪೋಷಕಾಂಶಗಳು, ಪ್ರೋಟೀನ್ ಅಂಶ ಹೆಚ್ಚಿಸುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಈ ಹಿನ್ನೆಲೆಯಲ್ಲಿ, ಪ್ರಖ್ಯಾತ ಆಹಾರ ತಜ್ಞರೊಬ್ಬರು ವಯಸ್ಸಾದ್ದಂತೆ ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಲೇಬೇಕಾದ ಪ್ರಮುಖ ಆಹಾರಗಳನ್ನು ಶಿಫಾರಸ್ಸು ಮಾಡಿದ್ದಾರೆ.
ಹಸಿರು ಬಾಳೆಹಣ್ಣು
ಹಸಿರು ಬಾಳೆಹಣ್ಣುಗಳು ರೋಗ ನಿರೋಧಕ ಶಕ್ತಿಯಿಂದ ಸಮೃದ್ಧವಾಗಿವೆ. ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸುವ ಒಂದು ರೀತಿಯ ಫೈಬರ್ ಅಂಶವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಜೀರ್ಣಕ್ರಿಯೆಯನ್ನು ಬಲಪಡಿಸಲು ಇದೊಂದು ಉತ್ತಮ ಆಹಾರ.
30ರ ಹರೆಯದಲ್ಲಿದ್ದೀರಾ? ನಿಮ್ಮ ಆರೋಗ್ಯ ಕಾಪಾಡಲು ತಜ್ಞರ ಈ ಟಿಪ್ಸ್ ಪಾಲಿಸಿ!
ಡಾರ್ಕ್ ಚಾಕೊಲೇಟ್
ನಿಮಗೆ ವಯಸ್ಸಾದಂತೆ ದಿನಕ್ಕೆ ಎರಡು ಸಣ್ಣ ತುಂಡು ಡಾರ್ಕ್ ಚಾಕೊಲೇಟ್ ತಿನ್ನಲು ತಜ್ಞರು ಸಲಹೆ ನೀಡುತ್ತಾರೆ. ಇದರಲ್ಲಿ ಫ್ಲೇವನಾಯ್ಡ್ ಎಂಬ ನೈಸರ್ಗಿಕ ಅಂಶಗಳಿದ್ದು, ನಿಮ್ಮ ಆರೋಗ್ಯಕ್ಕೆ ಬೆಂಬಲ ನೀಡುತ್ತವೆ. ಇವು ವಾಸ್ತವವಾಗಿ ಹೃದಯದ ಆರೋಗ್ಯವನ್ನು ಸುಧಾರಿಸಲು ಹಾಗೂ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ತುಪ್ಪ
ತುಪ್ಪದಲ್ಲಿ ನಮಗೆ ಅಗತ್ಯವಾದ ಪೌಷ್ಟಿಕಾಂಶಗಳು, ಆ್ಯಂಟಿ ಆಕ್ಸಿಡೆಂಟ್ ಅಂಶಗಳು, ವಿಟಮಿನ್ ಮತ್ತು ಖನಿಜಾಂಶಗಳು ಹೆಚ್ಚಾಗಿ ಸಿಗುತ್ತವೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಪ್ರಮಾಣದ ತುಪ್ಪ ಸೇವಿಸುವುದರಿಂದ ಇನ್ಸುಲಿನ್ ಸುಧಾರಿಸುವ ಮೂಲಕ ದೇಹವು ರಕ್ತದಲ್ಲಿನ ಸಕ್ಕರೆಯನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
ದಾಳಿಂಬೆ ಹಣ್ಣು
ಈ ಹಣ್ಣು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿನ ಆ್ಯಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹೃದಯವನ್ನು ರಕ್ಷಿಸಲು ಹಾಗೂ ವಯಸ್ಸಾದಂತೆ ಆರೋಗ್ಯವನ್ನು ಕಾಪಾಡುತ್ತದೆ.