ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತೂಕ ನಿಯಂತ್ರಣದಿಂದ ಚರ್ಮದ ಆರೈಕೆವರೆಗೆ ಕೊಬ್ಬರಿ ಎಣ್ಣೆಯ ಪ್ರಯೋಜನ ಒಂದೆರಡಲ್ಲ!

Health Tips: ಭಾರತೀಯ ಅಡುಗೆಯಲ್ಲಿ ಕೊಬ್ಬರಿ ಎಣ್ಣೆಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ತಾಜಾ ತೆಂಗಿನ ತಿರುಳಿನಿಂದ ಹೊರತೆಗೆಯಲಾದ ಈ ನೈಸರ್ಗಿಕ ಎಣ್ಣೆಯು ಕೊಬ್ಬಿನಾಮ್ಲಗಳಲ್ಲಿ ಹಾಗೂ ವಿಶೇಷವಾಗಿ ಲಾರಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಉತ್ಕರ್ಷಣ ನಿರೋಧಕ ಹೆಚ್ಚು ಮಾಡಿ ದೇಹಕ್ಕೆ ಉತ್ತೇಜನ ನೀಡುತ್ತದೆ.​

ಕೊಬ್ಬರಿ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ!

ಇಂಟರ್ ನೆಟ್ ಚಿತ್ರ -

Profile
Pushpa Kumari Sep 4, 2026 7:03 AM

ಬೆಂಗಳೂರು,ಸೆ.3: ಭಾರತೀಯ ಅಡುಗೆಯಲ್ಲಿ ಕೊಬ್ಬರಿ ಎಣ್ಣೆಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ಆಹಾರದ ರುಚಿ ಹೆಚ್ಚಿಸು ವುದಲ್ಲದೆ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ.ತಾಜಾ ತೆಂಗಿನ (Coconut Oil) ತಿರುಳಿನಿಂದ ಹೊರತೆಗೆಯಲಾದ ಈ ನೈಸರ್ಗಿಕ ಎಣ್ಣೆಯು ಕೊಬ್ಬಿನಾಮ್ಲಗಳಲ್ಲಿ ಹಾಗೂ ವಿಶೇಷವಾಗಿ ಲಾರಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಉತ್ಕರ್ಷಣ ನಿರೋಧಕ ಹೆಚ್ಚು ಮಾಡಿ ದೇಹಕ್ಕೆ ಉತ್ತೇಜನ ನೀಡುತ್ತದೆ.​ ಸಾಮಾನ್ಯ ಆಹಾರ ಶೈಲಿ ಹಾಗೂ ದಿನನಿತ್ಯದಲ್ಲಿ ಕೊಬ್ಬರಿ ಎಣ್ಣೆಯನ್ನು ಹಿತಮಿತವಾಗಿ ಬಳಸುವುದರಿಂದ ಏನೆಲ್ಲಾ ಆರೋಗ್ಯ ಲಾಭ ಇದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಹೃದಯ ಆರೋಗ್ಯವನ್ನು ಬೆಂಬಲಿಸುತ್ತದೆ:

ತೆಂಗಿನ ಎಣ್ಣೆಯು ಟ್ರೈಗ್ಲಿಸರೈಡ್‌ಗಳನ್ನು ಹೊಂದಿದ್ದು ಉತ್ತಮ HDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ರಕ್ತ ಸಂಚಾರವು ಸುಗಮವಾಗಿ ನಡೆಯಲಿದ್ದು ಹೃದಯದ ಆರೋಗ್ಯ ಬೆಂಬಲಿಸುವಂತೆ ಮಾಡುತ್ತದೆ.

ಶಕ್ತಿಯ ಮಟ್ಟ ಹೆಚ್ಚಳ:
ಕೊಬ್ಬರಿ ಎಣ್ಣೆಯಲ್ಲಿರುವ ಕೊಬ್ಬಿನಂಶಗಳು ಸುಲಭವಾಗಿ ಜೀರ್ಣಗೊಳ್ಳುವಂತೆ ಮಾಡುತ್ತದೆ. ಇದು ಆಯಾಸವನ್ನು ದೂರವಾಗಿಸಿ ದೇಹವನ್ನು ಆ್ಯಕ್ಟೀವ್ ಆಗಿ ಇರಿಸುತ್ತದೆ.

Vishwavani Health: ನಿಮ್ಮ ಹಿತ್ತಿಲಿನಲ್ಲಿ ಬೆಳೆಯುವ ನೀಲ ಶಂಖ ಪುಷ್ಪ ಬಳಸಿ ಆರೋಗ್ಯ, ಸೌಂದರ್ಯ ಹೆಚ್ಚಿಸಬಹುದು; ಎಲ್ಲಿ ಸಿಕ್ಕರೂ ಬಿಡಬೇಡಿ

ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ:

ದೇಹವು ಕೊಬ್ಬು-ಕರಗುವ ಜೀವಸತ್ವಗಳನ್ನು ವಿಟಮಿನ್ A, D, E, ಹೀರಿಕೊಳ್ಳಲು ಸಹಾಯ ಮಾಡುವ ಮೂಲಕ ಉತ್ತಮ ಜೀರ್ಣ ಕ್ರಿಯೆಯನ್ನು ಬೆಂಬಲಿಸುತ್ತದೆ. ಅದೇ ರೀತಿ ದೇಹದಲ್ಲಿ ಉಂಟಾಗುವ ಉರಿಯೂತವನ್ನು ಕೂಡ ಕಡಿಮೆ ಮಾಡುತ್ತದೆ.

ತೂಕ ನಿಯಂತ್ರಣಕ್ಕೆ ಸಹಕಾರಿ:

ಚಯಾಪಚಯ ಕ್ರಿಯೆಯನ್ನು ಬೆಂಬಲಿಸಿ ಬೇಗನೇ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ‌. ಇದರಿಂದ ದೇಹದ ತೂಕ ನಿರ್ವಹಣೆಗೆ ಇದು ಉತ್ತಮ ಆಯ್ಕೆಯಾಗಿದೆ.

ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ:

ಮುಖದ ಕಾಂತಿ ಹೆಚ್ಚಿಸಲು ಹೆಚ್ಚಿನವರು ತೆಂಗಿನ ಎಣ್ಣೆ ಬಳಕೆ ಮಾಡುತ್ತಾರೆ. ತೆಂಗಿನ ಎಣ್ಣೆ ಚರ್ಮವನ್ನು ತೇವಗೊಳಿಸಲು, ಶುಷ್ಕತೆಯನ್ನು ಕಡಿಮೆ ಮಾಡಿ ಮುಖದ ಬ್ರೈಟ್ ಹೆಚ್ಚಿಸುತ್ತದೆ.

ಕೂದಲಿನ ಆರೈಕೆ:

ಕೂದಲು ಉದುರುವಿಕೆಯನ್ನು ತಡೆದು, ಕೂದಲಿನ ಪ್ರೋಟೀನ್ ನಷ್ಟವಾಗದಂತೆ ತೆಂಗಿನ ಎಣ್ಣೆ ತಡೆಯುತ್ತದೆ. ಕೂದಲಿಗೆ ನೈಸರ್ಗಿಕ ಹೊಳಪು ನೀಡಲು ಸ್ನಾನಕ್ಕೂ ಮೊದಲು ತೆಂಗಿನ ಎಣ್ಣೆ ಬಳಸಿ