Vitamin C: ಮಳೆಗಾಲ ಮತ್ತು ರೋಗನಿರೋಧಕ ಶಕ್ತಿ: ಮಳೆಗಾಲದಲ್ಲಿ ವಿಟಮಿನ್ C ಏಕೆ ಮುಖ್ಯ?
ತಂಪಾದ ಮತ್ತು ತೇವಯುಕ್ತ ವಾತಾವರಣವು ದೇಹದ ಸಹಜ ರೋಗನಿರೋಧಕ ಸಾಮರ್ಥ್ಯದ ಮೇಲೂ ಪರಿಣಾಮ ಬೀರುವುದರಿಂದ, ಈ ಸಮಯದಲ್ಲಿ ಶೀತ, ಕೆಮ್ಮು, ಅಲರ್ಜಿ ಹಾಗೂ ಚರ್ಮದ ಸೋಂಕು ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.
-
ಡಾ.ಅಂಕಿತ್ ರೈ, ಅಸೋಸಿಯೇಟ್ ಡೈರೆಕ್ಟರ್ – ಮೆಡಿಕಲ್ ಅಫೇರ್ಸ್, ಅಬಾಟ್ ಇಂಡಿಯಾ
ಮಳೆಗಾಲವು ಬೇಸಿಗೆಯ ತಾಪದಿಂದ ನಿರಾಳತೆಯನ್ನು ನೀಡಿದರೂ, ಇದೇ ಸಮಯದಲ್ಲಿ ಸಾಮಾನ್ಯ ಸೋಂಕುಗಳ ಅಪಾಯವೂ ಹೆಚ್ಚಾಗುತ್ತದೆ. ಹೆಚ್ಚಿದ ತೇವಾಂಶ ಮತ್ತು ನೀರು ನಿಂತಿ ರುವ ಪರಿಸ್ಥಿತಿಗಳು ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂಧ್ರಗಳು ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತವೆ. ಅಧ್ಯಯನಗಳ ಪ್ರಕಾರ, ಮಳೆಗೆ ಹೆಚ್ಚು ಒಡ್ಡಿಕೊಳ್ಳುವವರಲ್ಲಿ ಉಸಿರಾಟದ ಸೋಂಕುಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ.
ತಂಪಾದ ಮತ್ತು ತೇವಯುಕ್ತ ವಾತಾವರಣವು ದೇಹದ ಸಹಜ ರೋಗನಿರೋಧಕ ಸಾಮರ್ಥ್ಯದ ಮೇಲೂ ಪರಿಣಾಮ ಬೀರುವುದರಿಂದ, ಈ ಸಮಯದಲ್ಲಿ ಶೀತ, ಕೆಮ್ಮು, ಅಲರ್ಜಿ ಹಾಗೂ ಚರ್ಮದ ಸೋಂಕುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.
ಮಳೆಗಾಲದಲ್ಲಿ ಋತುಸಹಜ ಅನಾರೋಗ್ಯಗಳು ಏಕೆ ಹೆಚ್ಚಾಗುತ್ತವೆ?
ಮಳೆಗಾಲದಲ್ಲಿ ಸೋಂಕುಗಳು ಸುಲಭವಾಗಿ ಹರಡಲು ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣ ವಾಗುತ್ತವೆ. ಕಲುಷಿತ ಆಹಾರ ಮತ್ತು ನೀರು, ನೀರು ನಿಂತಿರುವ ಸ್ಥಳಗಳಲ್ಲಿ ಸೊಳ್ಳೆಗಳ ಸಂತಾ ನೋತ್ಪತ್ತಿ, ಹಾಗೂ ದೀರ್ಘಕಾಲ ತೇವಾಂಶಕ್ಕೆ ಒಡ್ಡಿಕೊಳ್ಳುವುದು ಇವೆಲ್ಲವೂ ಅನಾರೋಗ್ಯದ ಅಪಾಯವನ್ನು ಹೆಚ್ಚಿಸಬಹುದು.
ಇದನ್ನೂ ಓದಿ: Vitamin D Deficiency: ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದೀರಾ? ಆಹಾರ ತಜ್ಞರು ಹೇಳೋದೇನು?
ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು
ಕೆಲವು ಸರಳ ದೈನಂದಿನ ಅಭ್ಯಾಸಗಳು ಋತುಸಹಜ ಅನಾರೋಗ್ಯದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ:
- ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಮತ್ತು ಕುದಿಸಿ ತಣ್ಣಗಾಗಿಸಿದ ಅಥವಾ ಸುರಕ್ಷಿತವಾದ ಶುದ್ಧ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಯಿರಿ.
- ತಾಜಾ ಮತ್ತು ಸಮತೋಲನಯುತ ಆಹಾರವನ್ನು ಸೇವಿಸಿ. ನೆಲ್ಲಿಕಾಯಿ (ಆಮ್ಲಾ), ಸೀಬೆಹಣ್ಣು, ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳು, ಟೊಮೇಟೊ ಹಾಗೂ ಕ್ಯಾಪ್ಸಿಕಂ ಮುಂತಾದ ವಿಟಮಿನ್ C ಸಮೃದ್ಧ ಆಹಾರಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.
- ನಿಯಮಿತವಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಚರ್ಮವನ್ನು ಸ್ವಚ್ಛ ಮತ್ತು ಒಣವಾಗಿಟ್ಟುಕೊಳ್ಳುವುದರಿಂದ ಶಿಲೀಂಧ್ರ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.
ಅದೇ ಸಮಯದಲ್ಲಿ, ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಪಾಲಿಸುವುದೂ ಮುಖ್ಯ:
- ತೊಳೆಯದ ಹಣ್ಣು ಮತ್ತು ತರಕಾರಿಗಳನ್ನು, ಹಾಗೆಯೇ ಹಳಸಿದ ಅಥವಾ ಸರಿಯಾಗಿ ಸಂಗ್ರಹಿಸದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
- ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ, ಇದರಿಂದ ಸೊಳ್ಳೆಗಳ ಸಂತಾನೋ ತ್ಪತ್ತಿಯನ್ನು ತಡೆಯಬಹುದು.
ಸಮತೋಲನಯುತ ಆಹಾರದ ಭಾಗವಾಗಿ ವಿಟಮಿನ್ C ಅನ್ನು ಸೇರಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಮತ್ತು ಚರ್ಮದ ಆರೋಗ್ಯಕ್ಕೆ ಬೆಂಬಲ ದೊರೆಯುತ್ತದೆ. ಇದರಿಂದ ಮಳೆಗಾಲದ ಅವಧಿಯಲ್ಲೂ ಆರೋಗ್ಯವಾಗಿಯೂ ಚೈತನ್ಯದಿಂದಲೂ ಇರಲು ಸಹಾಯವಾಗುತ್ತದೆ.