ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Health Tips: ಬೀಟ್ರೂಟ್ ಸೇವನೆಯಿಂದ ಆರೋಗ್ಯದಲ್ಲಿ ಈ ಬದಲಾವಣೆ ಸಾಧ್ಯ!

Beetroot For Better Health: ಕೆಂಪು ಬಣ್ಣ ಹೊಂದಿರುವ ಬೀಟ್ರೂಟ್ ಅದ್ಬುತ ಆರೋಗ್ಯ ಲಾಭ ನೀಡುವ ತರಕಾರಿಗಳಲ್ಲಿ ಒಂದಾಗಿದೆ. ಫೋಲೇಟ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ನಂತಹ ಪ್ರಮುಖ ಪೋಷಕಾಂಶಗಳ ಮೂಲವಾಗಿದ್ದು ದಿನನಿತ್ಯದ ಆಹಾರದಲ್ಲಿ ಬೀಟ್‌ರೂಟ್ ಸೇರಿಸಿಕೊಳ್ಳುವುದರಿಂದ ದೇಹಕ್ಕೆ ಹಲವು ರೀತಿಯ ಲಾಭಗಳು ಸಿಗುತ್ತದೆ.

ಬೀಟ್ರೂಟ್ ಸೇವನೆಯಿಂದ ಆರೋಗ್ಯಕ್ಕೇನು ಲಾಭ?

ಸಾಂದರ್ಭಿಕ ಚಿತ್ರ -

Profile
Pushpa Kumari Sep 27, 2026 7:01 AM

ಬೆಂಗಳೂರು: ದೇಹವನ್ನು ಆರೋಗ್ಯವಾಗಿ ಇರಿಸಲು ತರಕಾರಿಗಳ ಸೇವನೆ ಬಹಳಷ್ಟು ಅಗತ್ಯ. ಅದರಲ್ಲೂ ಕೆಂಪು ಬಣ್ಣ ಹೊಂದಿರುವ ಬೀಟ್ರೂಟ್ (Beetroot For Better Health) ಅದ್ಭುತ ಆರೋಗ್ಯ ಲಾಭ ನೀಡುವ ತರಕಾರಿಗಳಲ್ಲಿ ಒಂದಾಗಿದೆ. ಇದು ಫೋಲೇಟ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಮುಂತಾದ ಪ್ರಮುಖ ಪೋಷಕಾಂಶಗಳ ಮೂಲವಾಗಿದ್ದು, ದಿನನಿತ್ಯದ ಆಹಾರದಲ್ಲಿ ಬೀಟ್‌ರೂಟ್ ಸೇರಿಸಿಕೊಳ್ಳುವುದರಿಂದ ದೇಹಕ್ಕೆ ಹಲವು ರೀತಿಯ ಲಾಭಗಳು ಸಿಗುತ್ತದೆ.

​ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ

ಬೀಟ್‌ರೂಟ್‌ನಲ್ಲಿ ನೈಸರ್ಗಿಕ ನೈಟ್ರೇಟ್‌ಗಳು ಇದ್ದು, ರಕ್ತ ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ. ಜತೆಗೆ ಇದು ಹೀಮೋಗ್ಲೋಬಿನ್ ಹೆಚ್ಚಿಸಲು ಹಾಗೂ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ಅತಿಯಾದ ಮೊಬೈಲ್‌ ಬಳಕೆಯಿಂದ ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಮಾನಸಿಕ ಅನಾರೋಗ್ಯ

​ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಬೀಟ್ರೂಟ್‌ನಲ್ಲಿರುವ ಇತರ ಪ್ರಮುಖ ಪೋಷಕಾಂಶಗಳು  ಶಕ್ತಿಯನ್ನು ಬಲಪಡಿಸಿ ಆರೋಗ್ಯವಾಗಿರಿಸುತ್ತದೆ. 

ದೈಹಿಕ ಶಕ್ತಿ ಹೆಚ್ಚಳ

ಇದು ಸ್ನಾಯುಗಳಿಗೆ ರಕ್ತದ ಪೂರೈಕೆಯನ್ನು ಹೆಚ್ಚಿಸುತ್ತದೆ. ಇದರಿಂದ ವ್ಯಾಯಾಮ ಮಾಡುವಾಗ ದೇಹದ ಶಕ್ತಿ ಹೆಚ್ಚಾಗಿ ಸರಿಯಾಗಿ ಕೆಲಸ ಮಾಡಲು ಸಹಾಯ ನೀಡುತ್ತದೆ.

ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುತ್ತದೆ

ಬೀಟ್ರೂಟ್‌ ಉತ್ಕರ್ಷಣ ನಿರೋಧಕಗಳು ಮತ್ತು ಯಕೃತ್ತಿನ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ‌. ಈ ಪೋಷಕಾಂಶಗಳು ದೇಹವು ಆ್ಯಕ್ಸಿಡೇಟಿವ್ ಒತ್ತಡವನ್ನು ನಿಭಾಯಿಸಿ ಯಕೃತ್ತಿನ ಸಾಮಾನ್ಯ ಕಾರ್ಯಗಳನ್ನು ಬೆಂಬಲಿಸಲು ನೆರವಾಗುತ್ತದೆ.

​ಉರಿಯೂತ ಶಮನಗೊಳಿಸುವ ಗುಣ ಹೊಂದಿದೆ

ಬೀಟ್ರೂಟ್‌ನಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಉಂಟಾಗುವ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡಲ ಸಹಾಯ ಮಾಡುತ್ತದೆ. ಆದರೆ ಬೀಟ್ರೂಟ್‌ ಆರೋಗ್ಯಕ್ಕೆ ಒಳ್ಳೆಯದಾಗಿದ್ದರೂ,ಎಲ್ಲರಿಗೂ ಸೂಕ್ತವಲ್ಲ‌. ವೈಯಕ್ತಿಕ ಆರೋಗ್ಯ ಪರಿಸ್ಥಿತಿಗಳು ಮತ್ತು ಆಹಾರದ ಅಗತ್ಯ ತಿಳಿದುಕೊಂಡು ಸೇವಿಸುವುದಯ ಒಳ್ಳೆಯದು.