ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತೀಯ ಮಧುಮೇಹಿಗಳಲ್ಲಿ ಒಬೆಸಿಟಿ, ಇನ್ಸುಲಿನ್ ಪ್ರತಿರೋಧ ಪ್ರಮುಖ ಸಮಸ್ಯೆ: ಅಧ್ಯಯನದಲ್ಲಿ ಬಹಿರಂಗ

ಡಯಾಬಿಟಿಸ್, ಮೆಟಾಬಾಲಿಕ್ ಸಿಂಡ್ರೋಮ್ ಅಂಡ್ ಒಬೆಸಿಟಿ ಅಂತರರಾಷ್ಟ್ರೀಯ ವೈದ್ಯಕೀಯ ದಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧಕ್ಕಾಗಿ ದೇಶದ 60 ಎಂಡೋಕ್ರೈನಾಲಜಿಸ್ಟ್‌ಗಳು ಮತ್ತು ಡಯಾ ಬೆಟಾಲಜಿಸ್ಟ್‌ಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ಭಾರತೀಯ ಮಧುಮೇಹಿಗಳಲ್ಲಿ ಕಂಡುಬರುವ ವಿಶಿಷ್ಟ ಮೆಟಾಬಾಲಿಕ್, ಪೌಷ್ಟಿಕಾಂಶ ಮತ್ತು ಜೀವನಶೈಲಿ ಅಂಶಗಳಿಗೆ ತಕ್ಕ ವೈಯಕ್ತಿಕ ಪೌಷ್ಟಿಕಾಂಶ ಕ್ರಮಗಳ ಅಗತ್ಯವನ್ನು ಅಧ್ಯಯನ ಒತ್ತಿ ಹೇಳಿದೆ.

ಮಧುಮೇಹಿಗಳಲ್ಲಿ ಒಬೆಸಿಟಿ, ಇನ್ಸುಲಿನ್ ಪ್ರತಿರೋಧ ಪ್ರಮುಖ ಸಮಸ್ಯೆ

-

Profile
Ashok Nayak Sep 24, 2026 2:28 PM

ಭಾರತದಲ್ಲಿನ ಮಧುಮೇಹ ರೋಗಿಗಳಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಸೇವನೆ, ಒಬೆಸಿಟಿ, ಇನ್ಸುಲಿನ್ ಪ್ರತಿರೋಧ ಹಾಗೂ ಕಡಿಮೆ ಪ್ರೋಟೀನ್ ಸೇವನೆ ಪ್ರಮುಖ ಲಕ್ಷಣಗಳಾಗಿ ಕಂಡು ಬರುತ್ತಿವೆ ಎಂದು ಡಾ. ರೆಡ್ಡೀಸ್–ನೆಸ್ಲೆ ಹೆಲ್ತ್ ಸೈನ್ಸ್ ನಡೆಸಿದ ಅಧ್ಯಯನದಲ್ಲಿ ಬಹಿರಂಗ ಗೊಂಡಿದೆ.

ಡಯಾಬಿಟಿಸ್, ಮೆಟಾಬಾಲಿಕ್ ಸಿಂಡ್ರೋಮ್ ಅಂಡ್ ಒಬೆಸಿಟಿ ಅಂತರರಾಷ್ಟ್ರೀಯ ವೈದ್ಯಕೀಯ ದಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧಕ್ಕಾಗಿ ದೇಶದ 60 ಎಂಡೋಕ್ರೈನಾಲಜಿಸ್ಟ್‌ಗಳು ಮತ್ತು ಡಯಾಬೆಟಾಲಜಿಸ್ಟ್‌ಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ಭಾರತೀಯ ಮಧುಮೇಹಿಗಳಲ್ಲಿ ಕಂಡುಬರುವ ವಿಶಿಷ್ಟ ಮೆಟಾಬಾಲಿಕ್, ಪೌಷ್ಟಿಕಾಂಶ ಮತ್ತು ಜೀವನಶೈಲಿ ಅಂಶಗಳಿಗೆ ತಕ್ಕ ವೈಯಕ್ತಿಕ ಪೌಷ್ಟಿಕಾಂಶ ಕ್ರಮಗಳ ಅಗತ್ಯವನ್ನು ಅಧ್ಯಯನ ಒತ್ತಿ ಹೇಳಿದೆ.

ಸಮೀಕ್ಷೆಯಲ್ಲಿ ಶೇ.82 ಜನರು ಹೆಚ್ಚಿನ ಕಾರ್ಬೋಹೈಡ್ರೇಟ್ ಸೇವನೆ, ಶೇ.78 ಒಬೆಸಿಟಿ, ಶೇ.76 ಇನ್ಸುಲಿನ್ ರೆಸಿಸ್ಟೆನ್ಸ್, ಶೇ.75 ಕಡಿಮೆ ಪ್ರೋಟೀನ್ ಸೇವನೆ, ಶೇ.69 ಕಡಿಮೆ ಲೀನ್ ಮಸಲ್ ಮಾಸ್ ಹಾಗೂ ಶೇ.67 ಆನುವಂಶಿಕ ಪ್ರವೃತ್ತಿಯನ್ನು ಭಾರತೀಯ ಮಧುಮೇಹಿಗಳ ಪ್ರಮುಖ ಲಕ್ಷಣ ಗಳೆಂದು ಗುರುತಿಸಿದ್ದಾರೆ. ಶೇ.98 ಭಾರತೀಯ ಮಧುಮೇಹಿಗಳಲ್ಲಿ ಕೆಲವು ವಿಶಿಷ್ಟ ಲಕ್ಷಣಗಳಿದ್ದು, ಅವುಗಳಿಗೆ ಪ್ರತ್ಯೇಕ ಪೌಷ್ಟಿಕಾಂಶ ತಂತ್ರಗಳ ಅಗತ್ಯವಿದೆ ಎಂದಿದ್ದಾರೆ. ಶೇ.86 ಮಂದಿ ಈ ವ್ಯತ್ಯಾಸಗಳನ್ನು ಗುರುತಿಸುವುದು ಪರಿಣಾಮಕಾರಿ ಮಧುಮೇಹ ನಿರ್ವಹಣೆಗೆ ಮುಖ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Diabetes Control Tips: ಮಧುಮೇಹ ಇದ್ದವರು ಎಷ್ಟು ಬಾರಿ ಶುಗರ್ ಲೆವೆಲ್ ಟೆಸ್ಟ್ ಮಾಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ

ರೋಗಿಗಳ ಮೌಲ್ಯಮಾಪನದ ವೇಳೆ ಶೇ.80 ತಜ್ಞರು BMI ಮೇಲೆ ಹೆಚ್ಚಿನ ಅವಲಂಬನೆ ಹೊಂದಿದ್ದರೆ, ಶೇ.62 ಮಂದಿ 24 ಗಂಟೆಗಳ ಆಹಾರ ಸೇವನೆಯ ವಿವರ ಪರಿಶೀಲಿಸುತ್ತಾರೆ. ಆದರೆ ಕೇವಲ ಶೇ.34 ಮಂದಿ ದೇಹದಲ್ಲಿನ ಕೊಬ್ಬು ಮತ್ತು ಸ್ನಾಯು ಪ್ರಮಾಣವನ್ನು ಪರಿಶೀಲಿಸುತ್ತಿರುವುದು ಅಧ್ಯಯನ ದಲ್ಲಿ ಕಂಡುಬಂದಿದೆ.

ಮಧುಮೇಹ ಮತ್ತು ಒಬೆಸಿಟಿ ಒಂದೇ ವೇಳೆ ಕಾಣಿಸಿಕೊಳ್ಳುವ ‘ಡಯಾಬೆಸಿಟಿ’ ಸಮಸ್ಯೆಯೂ ಹೆಚ್ಚುತ್ತಿದೆ. ತಜ್ಞರ ಪ್ರಕಾರ, ಶೇ.61ರಷ್ಟು ಜನ ತಮ್ಮ ಮಧುಮೇಹ ರೋಗಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಅಧಿಕ ತೂಕ ಅಥವಾ ಒಬೆಸಿಟಿಯಿಂದ ಬಳಲುತ್ತಿದ್ದಾರೆ. ಇನ್ನೊಂದೆಡೆ, ಅನೇಕ ರೋಗಿಗಳು ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಶಿಫಾರಸು ಮಾಡಿದ ಆಹಾರ ಪದ್ಧತಿಯನ್ನು ನಿರಂತರವಾಗಿ ಪಾಲಿಸಲು ಕಷ್ಟಪಡುತ್ತಿದ್ದಾರೆ.

ಡಯಾಬಿಟಿಸ್ ಇಂಡಿಯಾದ ಗೌರವ ಕಾರ್ಯದರ್ಶಿ ಡಾ. ಬನ್ಶಿ ಸಾಬೂ ಮಾತನಾಡಿ, “ಮಧುಮೇಹ ಮತ್ತು ಹೆಚ್ಚುವರಿ ತೂಕದ ಸಮಸ್ಯೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದೆ. ಕೇವಲ ಆಹಾರ ನಿರ್ಬಂಧ ಗಳನ್ನು ಸೂಚಿಸುವುದಕ್ಕಿಂತ, ರೋಗಿಗಳು ದೀರ್ಘಕಾಲ ತಮ್ಮ ಜೀವನಶೈಲಿಯ ಭಾಗವಾಗಿ ಅನುಸರಿಸಬಹುದಾದ ಸರಳ ಮತ್ತು ವಾಸ್ತವಿಕ ಆಹಾರ ಬದಲಾವಣೆಗಳಿಗೆ ಒತ್ತು ನೀಡಬೇಕು,” ಎಂದಿದ್ದಾರೆ.

ಅಧ್ಯಯನವು ಹೈ ಪ್ರೋಟೀನ್, ಹೈ ಫೈಬರ್, ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹಾಗೂ ಕ್ಲಿನಿಕಲಿ ಪ್ರೂವನ್ ಡಯಾಬಿಟಿಸ್-ಸ್ಪೆಸಿಫಿಕ್ ನ್ಯೂಟ್ರಿಷನ್ ಫಾರ್ಮುಲಾಗಳಿಗೆ ಹೆಚ್ಚಿನ ಮಹತ್ವ ನೀಡಿದೆ. ಆಹಾರ ಪದ್ಧತಿ, ಕ್ಯಾಲೊರಿ ಮತ್ತು ಪೋಷಕಾಂಶ ಸೇವನೆ, ದೈಹಿಕ ಚಟುವಟಿಕೆ, ಆರೋಗ್ಯ ಸ್ಥಿತಿ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಆದ್ಯತೆಗಳು, ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಮತ್ತು ವೈಯಕ್ತಿಕ ಆರೋಗ್ಯ ಗುರಿಗಳ ಆಧಾರದ ಮೇಲೆ ಪೌಷ್ಟಿಕಾಂಶ ಯೋಜನೆ ರೂಪಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಡಾ.ರೆಡ್ಡೀಸ್ ನೆಸ್ಲೆ ಹೆಲ್ತ್ ಸೈನ್ಸ್‌ನ ಮೆಡಿಕಲ್ ಮತ್ತು ಸೈಂಟಿಫಿಕ್ ಅಫೇರ್ಸ್ ಮುಖ್ಯಸ್ಥ ಡಾ. ನಂದನ್ ಜೋಶಿ, “ಭಾರತೀಯ ರೋಗಿಗಳ ವಾಸ್ತವ ಪರಿಸ್ಥಿತಿಗೆ ಅನುಗುಣವಾದ ಮಾರ್ಗದರ್ಶನ ಅಗತ್ಯ. ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣದ ಜೊತೆಗೆ ತೂಕ, ಸ್ನಾಯು ಆರೋಗ್ಯ, ಪೌಷ್ಟಿಕಾಂಶದ ಗುಣಮಟ್ಟ ಮತ್ತು ದೀರ್ಘಕಾಲದ ಮೆಟಾಬಾಲಿಕ್ ಆರೋಗ್ಯಕ್ಕೂ ಸಮಾನ ಮಹತ್ವ ನೀಡಬೇಕು,” ಎಂದು ತಿಳಿಸಿದ್ದಾರೆ.