ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mana Santwana: ಮನ ಸಾಂತ್ವನ- ದೀಪದ ಬೆಳಕು ಮನಸ್ಸಿನ ಮೇಲೆ ಬೀರುವ ಪ್ರಭಾವ

Diwali Festival: ಬೆಳಕು ಜ್ಞಾನ, ಭರವಸೆಯ ಮತ್ತು ಶಕ್ತಿಯ ಪ್ರತೀಕವಾದರೆ, ಕತ್ತಲು ಅಜ್ಞಾನ, ಹತಾಶೆ ಮತ್ತು ದೌರ್ಬಲ್ಯದ ಪ್ರತೀಕವಾಗಿದೆ. ನೀವೊಂದು ಸಣ್ಣ ಪ್ರಯೋಗ ಮಾಡಿನೋಡಿ. ನಿಮ್ಮ ಮನೆಯಲ್ಲಿ 10ನಿಮಿಷ ಎಲ್ಲಾ ಕಡೆ ವಿದ್ಯುತ್ ದೀಪವನ್ನು ಆರಿಸಿಬಿಡಿ. ಕತ್ತಲು ಆವರಿಸಿರಲಿ. ಈಗ ನಿಮ್ಮ ಮನಸ್ಸಿನಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ. ಯಾವ ರೀತಿಯ ಆಲೋಚನೆಗಳು ಬರುತ್ತವೆ ಮತ್ತು ನಿಮ್ಮ ಮನಸ್ಥಿತಿ ಏನಿದೆ ಎಂದು ಗಮನಿಸಿ.

ದೀಪಗಳ ಹಬ್ಬ ದೀಪಾವಳಿ-ಬೆಳಕು ಜ್ಞಾನ, ಭರವಸೆಯ ಮತ್ತು ಶಕ್ತಿಯ ಪ್ರತೀಕ

-

ಬೆಂಗಳೂರು: ಕತ್ತಲನ್ನು ಹೋಗಿಸಿ ಎಲ್ಲೆಲ್ಲೂ ಬೆಳಕನ್ನು ಹರಡುವ, ಅಜ್ಞಾನವನ್ನು ಅಳಿಸಿ ಜ್ಞಾನವನ್ನು ತುಂಬುವ, ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುವ ಹಬ್ಬವೇ ದೀಪಾವಳಿ. ಬೆಳಕು ಜ್ಞಾನ, ಭರವಸೆಯ ಮತ್ತು ಶಕ್ತಿಯ ಪ್ರತೀಕವಾದರೆ, ಕತ್ತಲು ಅಜ್ಞಾನ, ಹತಾಶೆ ಮತ್ತು ದೌರ್ಬಲ್ಯದ ಪ್ರತೀಕವಾಗಿದೆ. ನೀವೊಂದು ಸಣ್ಣ ಪ್ರಯೋಗ ಮಾಡಿನೋಡಿ. ನಿಮ್ಮ ಮನೆಯಲ್ಲಿ 10ನಿಮಿಷ ಎಲ್ಲಾ ಕಡೆ ವಿದ್ಯುತ್ ದೀಪವನ್ನು ಆರಿಸಿಬಿಡಿ. ಕತ್ತಲು ಆವರಿಸಿರಲಿ. ಈಗ ನಿಮ್ಮ ಮನಸ್ಸಿನಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ. ಯಾವ ರೀತಿಯ ಆಲೋಚನೆಗಳು ಬರುತ್ತವೆ ಮತ್ತು ನಿಮ್ಮ ಮನಸ್ಥಿತಿ ಏನಿದೆ ಎಂದು ಗಮನಿಸಿ. 10 ನಿಮಿಷದ ನಂತರ, ಆರಿಸಿರುವ ವಿದ್ಯುತ್ ದೀಪವನ್ನು ಪುನಃ ಹೊತ್ತಿಸಿ. ಈಗ ನಿಮ್ಮ ಆಲೋಚನೆಗಳು ಮತ್ತು ಮನಸ್ಥಿತಿ ಯಾವ ರೀತಿಯಾಗಿದೆಯೆಂದು ನೋಡಿ.

ಬೆಳಕು ಮತ್ತು ಕತ್ತಲು ನಿಮ್ಮ ಮನಸ್ಸಿನ ಮೇಲೆ ಯಾವ ರೀತಿಯ ಪ್ರಭಾವನ್ನು ಬೀರಿತು ಎಂದು ವಿಷ್ಲೇಷಿಸಿ. ಕತ್ತಲು ಭಯ ಅಭದ್ರತೆ ಗಾಬರಿಯನ್ನುಂಟು ಮಾಡಿದರೆ, ಬೆಳಕು ಉಲ್ಲಾಸ, ಮನಸ್ಥೈರ್ಯ ಮತ್ತು ಭರವಸೆಯನ್ನುಂಟು ಮಾಡುತ್ತದೆ. ಒಟ್ಟಾರೆ ಮನಸ್ಸಿಗೆ ಸಕಾರಾತ್ಮಕತೆಯನ್ನು ನೀಡುತ್ತದೆ.

ಉದಾ 2- ನಿಮಗೆ ರಾತ್ರಿ ನಿದ್ರೆ ಬರದೇ ಎಚ್ಚರವಿದ್ದರೇ ನಿಮಗೆ ಬರುವ ಆಲೋಚನೆಗಳನ್ಮು ಗಮನಿಸಿ ನೋಡಿ. ಕತ್ತಲಿನಲ್ಲಿ ಸಾಮಾನ್ಯವಾಗಿ ನೆಗೆಟೀವ್ ಆಲೋಚನೆಗಳು ಹೆಚ್ಚಾಗಿರುತ್ತವೆ. ಅದೇ ವಿಚಾರಗಳನ್ನು ಸೂಯೋ೯ದಯದ ನಂತರ ಬೆಳಕಿನಲ್ಲಿ ಯೋಚಿಸಿದಾಗ ನೆಗೆಟಿವಿಟಿಯ ಪ್ರಮಾಣ ಕಡಿಮೆಯಾಗುತ್ತದೆ. ಇದೇ ಬೆಳಕಿನ ಮಹತ್ವ. ಈ ಕಾರಣಕ್ಕಾಗಿಯೇ ದಿನಕ್ಕೆ ಎರಡು ಸಲವಾದರೂ ದೀಪ ಹಚ್ಚುವ ಪದ್ದತಿ ನಮ್ಮಲಿದೆ.

ದೀಪ ಬೆಳಗುವುದು ಮತ್ತು ಪೂಜೆ:

  • ಪೂಜೆಯ ಸಮಯದಲ್ಲಿ ನಾವು ಕತ್ತಲೆಯ ಮೇಲೆ ಬೆಳಕು, ಅಜ್ಞಾನದ ಮೇಲೆ ಜ್ಞಾನ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸಲು ದೀಪವನ್ನು ಬೆಳಗಿಸುತ್ತೇವೆ.
  • ಜ್ವಾಲೆಯು ದೈವಿಕ ಶಕ್ತಿಯನ್ನು ಆಹ್ವಾನಿಸುತ್ತದೆ, ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ.
  • ದೀಪದ ಬೆಳಕು ಪರಿಸರವನ್ನು ಶುದ್ಧೀಕರಿಸುವ ಮತ್ತು ನಕಾರಾತ್ಮಕತೆಯನ್ನು ಹೋಗಿಸುತ್ತದೆ.

ದೀಪಾವಳಿ ಹಬ್ಬದ ಪುರಾಣ ಕಥೆಗಳು

ದೀಪಾವಳಿಯ ಮೊದಲನೇ ದಿವಸವನ್ನು ನರಕಚತು೯ದಶಿ, ಎರಡನೇ ದಿವಸವನ್ನು ಲಕ್ಷ್ಮಿ ಪೂಜೆ ಹಾಗು ಮೂರನೇ ದಿವಸವನ್ನು ಬಲಿಪಡ್ಯಾಮಿ ಎಂದು ಆಚರಿಸಲಾಗುತ್ತದೆ. ಕೆಲವು ಕಡೆ, ಶ್ರೀ ರಾಮನು ತನ್ನ 14ವಷ೯ದ ವನವಾಸದಲ್ಲಿ ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಜನರು ದೀಪಗಳಿಂದ ರಾಮ ಸೀತೆಯನ್ನು ಸ್ವಾಗತಿಸಿದ ಕಥೆಗಳು ಇವೆ. ಹಾಗೆಯೇ, ಲಕ್ಷ್ಮಿ ದೇವಿಯೂ ಸಮುದ್ರಮಂಥನದಿಂದ ಈ ದಿನದಂದು ಮರು ಹುಟ್ಚಿದಳೆಂದು ಸಹ ಹೇಳಲಾಗುತ್ತದೆ. ಸಮುದ್ರ ಮಂಥನದಿಂದ ಲಕ್ಷ್ಮಿ ದೇವಿಯು ಹೊರಬಂದು ವಿಷ್ಣುವನ್ನು ಮದುವೆಯಾದ ಕಥೆ, ಮತ್ತು ಲಕ್ಷ್ಮಿ ದೇವಿಯು ಭೂಮಿಗೆ ಬಂದು ದೀಪಗಳನ್ನು ಬೆಳಗಿಸುವ ಮನೆಗಳಿಗೆ ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ ಎಂಬ ನಂಬಿಕೆಯಿದೆ. 

ನರಕಚತುರ್ದಶಿಯ ದಿನ ಕೃಷ್ಣನು ನರಕಾಸುರನೆಂಬ ಅಸುರನನ್ನು ಸಂಹರಿಸಿದ. ಬಲಿಪಾಡ್ಯಮಿಯ ದಿನ ಬಲಿ ಚಕ್ರವರ್ತಿಯನ್ನು ಭಾಗವಾನ್ ವಿಷ್ಣುವು ಪಾತಳ ಲೋಕಕ್ಕೆ ತಳ್ಳಿ, ನಂತರ ಬಲಿ ಚಕ್ರವರ್ತಿ ಭೂಲೋಕದಲ್ಲಿ ದೀಪಾವಳಿಯನ್ನು ಆಚರಿಸಿ ಪೂಜೆ ಮಾಡಲೆಂದು ವರವನ್ನು ನೀಡಿದ.

ಈ ಪುರಾಣ ಕಥೆಗಳಿಂದ ನಾವು ಕಲಿತುಕೊಳ್ಳಬೇಕಾದದ್ದು ಇಷ್ಟೇ. ಆ ದೇವಾನ್ ದೇವತೆಗಳಿಗೂ ಸಹ ಕಂಟಕಗಳು ಮತ್ತು ಸಂಕಟಗಳು ತಪ್ಪಿದ್ದಲ್ಲ. ಹೀಗಿದ್ದಾಗ ಸೃಷ್ಟಿಯ ಪ್ರತಿಯೊಂದು ಜೇವಿಯೂ ಕೂಡ ತನ್ನ ಚೌಕಟ್ಟಿನ್ನಲ್ಲಿ ಸಂಕಟಗಳನ್ನು ಎದುರಿಸಲೇಬೇಕು.

ಸೃಷ್ಟಿಯ ನಿಯಮ

ಸೃಷ್ಟಿಯಲ್ಲಿ ಸರಿ ತಪ್ಪು, ಕಷ್ಟ ಸುಖ, ಒಳ್ಳೆಯದು ಮತ್ತು ಕೆಟ್ಟದು ಎರಡೂ ಶಕ್ತಿಗಳಿವೆ. ಸೋಲು ಮತ್ತು ಗೆಲುವು ಕೂಡ ಇದೆ ಹಾಗೆಯೇ ಜ್ಞಾನವೂ ಇದೆ ಅಜ್ಞಾನವು ಇದೆ, ಬೆಳಕು ಮತ್ತು ಕತ್ತಲು ಕೂಡ ಇದೆ. ಆರಂಭವೂ ಇದೆ ಅಂತ್ಯವೂ ಇದೆ, ಸಮಸ್ಯೆಯೂ ಇದೆ ಪರಿಹಾರವೂ ಇದೆ. ಇದೇ ಸೃಷ್ಟಿಯ ನಿಯಮ. ಇವೆಲ್ಲವನ್ನೂ ಪ್ರತಿಯೊಂದು ಜೀವಿಗಳು ಬದುಕಿನ ಎಲ್ಲಾ ಹಂತಗಳಲ್ಲಿ ಅನುಭವಿಸಲೇಬೇಕು. ಯಾರೂ ಕೂಡ ಇವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಈ ನಿಯಮದಂತೆ ಈ ಜೀವನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗುತ್ತಿರುತ್ತದೆ. ಅಂದರೆ ಕಷ್ಟದಿಂದ ಸುಖದೆಡೆಗೆ ಮತ್ತು ಸಮಸ್ಯೆಯಿಂದ ಪರಿಹಾರದೆಡೆಗೆ. ಈ ಒಂದು ಸಮಯದಲ್ಲಿ ನಾವು ಸಂಯಮ ಮತ್ತು ಮನಸ್ಥೈಯ೯ದಿಂದ್ದರೇ, ಅತೀಯಾದ ಆತಂಕ, ಚಿಂತೆ, ಒತ್ಡಡ, ಖಿನ್ವತೆಗಳನ್ನು ತಡೆಯಬಹುದು ಮತ್ತು ನಮಗೆ ಬಂದ ಸಂಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು.

ನಮ್ಮ ಕಷ್ಟ ಅಥವ ಸುಖದ ಸಮಯಗಳು ಶಾಶ್ವತವಲ್ಲ, ಎರಡು ಹಾದು ಹೋಗುತ್ತವೆ ಎಂದು ನಮಗೆ ಮನವರಿಕೆಮಾಡಿಕೊಂಡು ಕಂಗಾಲಾಗುವುದು ಮತ್ತು ಧೃತಿಗೆಡುವುದನ್ನು ತಡೆಯಬೇಕು. ಇದನ್ನೇ ನಾವು ಈ ಪುರಾಣ ಕಥೆಗಳಿಂದ ಕಲಿಯಬೇಕಾದುದು. ಹೀಗೆ ಪುರಾಣ ಕಥೆಯ ಹಿಂದಿರುವ ನೀತಿಯನ್ನು ನಾವು ತಿಳಿದುಕೊಂಡರೆ, ಆಚರಣೆ ಅಥ೯ಪೂಣ೯ ವಾಗಿರುತ್ತೆ.

ಬೆಳಕು ನಮ್ಮಲ್ಲಿ ಭರವಸೆಯನ್ನು ಮೂಡಿಸುತ್ತದೆ.

ಹೇಗೆ ದೀಪದ ಬೆಳಕು ಕತ್ತಲೆಯನ್ನು ಅಳಿಸುತ್ತದೆಯೋ ಹಾಗೆಯೇ ನಮ್ಮಲ್ಲಿರುವ ಬೆಳಕು ಅಂದರೆ ನಮ್ಮಲ್ಲಿರುವ ಜ್ಞಾನ , ಅಜ್ಞಾನವನ್ನು ಅಳಿಸಿ ನಮ್ಮಲ್ಲಿ ಅರಿವನ್ನು ಮೂಡಿಸುತ್ತದೆ. ಈ ಅರಿವೇಯೇ ಭರವಸೆಯೆಂಬ ಬೆಳಕನ್ನು ಹರಡುತ್ತದೆ. ಆಗ, ನಮ್ಮಲ್ಲಿ ನಮ್ಮ ಬದುಕಿನ ಬಗ್ಗೆ ಭರವಸೆ ಮತ್ತು ನಮ್ಮ ಸಾಮಥ್ಯ೯ಗಳ ನಂಬಿಕೆ ಮತ್ತು ಆತ್ಮ ವಿಶ್ವಾಸ ಹುಟ್ಟುತ್ತದೆ. ಎಷ್ಟೇ ಕಷ್ಟವಾದರೂ ಎದುರಿಸುತ್ತೀನಿ, ಇದರಿಂದ ಹೊರ ಬರುತ್ತೀನಿ ಅನ್ನುವ ಆತ್ಮ ವಿಶ್ವಾಸ ಮತ್ತು ಛಲವನ್ನು ನಮ್ಮದಾಗಿಸುತ್ತದೆ.

ಈ ಆಶ್ವಸನೆಯೊಂದಿಗೆ ದೀಪಾವಳಿ ಹಬ್ಬದ ಶುಭಾಷಯವನ್ನು ಕೋರುತ್ತಾ, ಈ ದೀಪದ ಬೆಳಕು ನಿಮ್ಮಲ್ಲೆರ ಬದುಕಿನಲ್ಲಿ ಜ್ಞಾನದ ಬೆಳಕನ್ನು ನೀಡಿ, ಸಂಯಮ ಸಂತೋಷ ಮತ್ತು ಮನಸ್ಥೈರ್ಯವನ್ನು ನಿಮ್ಮದಾಗಿಸಲೆಂದು ಹಾರೈಸುವೇ.