ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Health Tips: ಮೆಮೊರಿ ಪವರ್‌ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

ವಿವಿಧ ಬಗೆಯ ಕೆಲಸಗಳನ್ನು ಮಾಡುವುದು, ಕೆಲಸದಲ್ಲಿ ಆಗಾಗ ಬದಲಾವಣೆ ಕಂಡುಕೊಳ್ಳುವುದರಿಂದ ಮಾನಸಿಕವಾಗಿ ಸದೃಢರಾಗಬಹುದು. ಒಂದೇ ರೀತಿಯ ಕೆಲಸ ಮಾಡುವ ಬದಲು ವಿವಿಧ ಬಗೆಯ ಕೆಲಸ ಹಾಗೂ ಕೆಲಸದಲ್ಲಿ ಬದಲಾವಣೆ ಕಂಡುಕೊಳ್ಳುವುದರಿಂದ ಹೇಗೆ ನಮ್ಮ ಆರೋಗ್ಯ ಸುಧಾರಣೆ ಕಾಣುತ್ತದೆ? ಯಾವೆಲ್ಲ ರೀತಿಯಲ್ಲಿ ಜೀವನದಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಬಹುದು? ಎನ್ನುವುದರ ಕುರಿತು ಪ್ರೊ. ಸುತ್ತೂರು ಮಾಲಿನಿ ತಿಳಿಸಿದ್ದಾರೆ.

ಅಜ್ಜಿಗಿದ್ದ ನೆನಪಿನ ಶಕ್ತಿ ಈಗಿನ ಮಕ್ಕಳಿಗೆ ಯಾಕಿಲ್ಲ ಗೊತ್ತಾ?

ಪ್ರೊ. ಸುತ್ತೂರು ಮಾಲಿನಿ -

Profile
Pushpa Kumari Mar 16, 2026 7:00 AM

ಬೆಂಗಳೂರು, ಮಾ. 16: ಜೀವನದಲ್ಲಿ ಬದಲಾವಣೆ (Change) ಎನ್ನುವುದು ಇರಬೇಕು. ಇಲ್ಲವಾದರೆ ಜೀವನ ಬಹಳ ಬೇಸರ ಹಾಗೂ ನೀರಸ ಭಾವನೆಯಿಂದ ಕೂಡಿರುತ್ತದೆ. ವಿವಿಧ ಬಗೆಯ ಕೆಲಸಗಳನ್ನು ಮಾಡುವುದು, ಕೆಲಸದಲ್ಲಿ ಆಗಾಗ ಬದಲಾವಣೆ ಕಂಡುಕೊಳ್ಳುವುದರಿಂದ ಮಾನಸಿಕ ದೃಢತೆ ಗಳಿಸಬಹುದು. ಒಂದೇ ರೀತಿಯ ಕೆಲಸ ಮಾಡುವ ಬದಲು ವಿವಿಧ ಬಗೆಯ ಕೆಲಸ ಹಾಗೂ ಕೆಲಸದಲ್ಲಿ ಬದಲಾವಣೆ ಕಂಡುಕೊಳ್ಳುವುದರಿಂದ ಹೇಗೆ ನಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ? ಇದರಿಂದ ಯಾವೆಲ್ಲ ರೀತಿಯಲ್ಲಿ ಜೀವನದಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಬಹುದು? ಎನ್ನುವುದರ ಕುರಿತು ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರೊ. ಸುತ್ತೂರು ಮಾಲಿನಿ ತಿಳಿಸಿ ಕೊಟ್ಟಿದ್ದಾರೆ.

ನಾವು ದಿನ ನಿತ್ಯ ಒಂದೇ ಕೆಲಸ ಅಥವಾ ಯೋಚನೆಯಲ್ಲಿ ಇದ್ದಾಗ ನಮ್ಮ ಮೆದುಳಿನ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಮೆದುಳಿಗೆ ನೀವು ಎಷ್ಟು ಕೆಲಸವನ್ನು ನೀಡುತ್ತಿರೋ ಅಷ್ಟು ಸಕ್ರಿಯಗೊಳ್ಳುತ್ತದೆ.‌ ಹಾಗಾಗಿ ನಮ್ಮ ಮೆದುಳು ಕೂಡ ಬದಲಾವಣೆಯ ಕೆಲಸಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಇತ್ತೀಚೆಗೆ ಅಜ್ಜಿಗೆ ಇರುವಂತಹ ನೆನಪಿನ ಶಕ್ತಿ ಮೊಮ್ಮಕ್ಕಳಿಗೆ ಇರುವುದಿಲ್ಲ. ಯಾಕಂದರೆ ಹೊಸತನಕ್ಕೆ ಹೊಂದುಕೊಳ್ಳುವ ಬದಲಾವಣೆ ಈಗಿನ ಮಕ್ಕಳಲ್ಲಿ ಇರುವುದಿಲ್ಲ. ಹಾಗಾಗಿ ಬದಲಾವಣೆ ಜೀವನಶೈಲಿಯಲ್ಲಿ ಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

ವಿಡಿಯೊ ನೋಡಿ:



ಒಂದೇ ರೀತಿಯ ಕೆಲಸಕ್ಕೆ ಆದ್ಯತೆ ನೀಡೋರಿಗೆ ಮನೋವೈಜ್ಞಾನಿಕ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚಿದೆ. ಇದರಿಂದ ಹೊಸತನ ಇಲ್ಲದೆ, ಪ್ರೋತ್ಸಾಹ ಇಲ್ಲದೆ ಖಿನ್ನತೆ ಉಂಟಾಗುವ ಸಾಧ್ಯತೆಯೂ ಇದೆ. ಅದೇ ರೀತಿ ಇದು ಕೆಲಸದಲ್ಲಿನ ಸೃಜನಶೀಲತೆಯನ್ನು ಕಡಿಮೆ ಮಾಡಿ ಉತ್ಸಾಹವನ್ನು ಕುಗ್ಗಿಸಬಹುದು ಎಂದು ಪ್ರೊ. ಮಾಲಿನಿ ಹೇಳಿದರು.

ದೇಹದ ಕೊಬ್ಬು ಕತ್ತರಿಸಬೇಕೆ? ಕೊಬ್ಬನ್ನೇ ತಿನ್ನಿ!

ನಿರಂತರ ಒಂದೇ ಕೆಲಸದ ಒತ್ತಡವು ಆತಂಕದ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ನಮ್ಮಲ್ಲಿ ಖುಷಿಯ ಹಾರ್ಮೊನು ಡೋಪಪೈನ್ ಬಿಡುಗಡೆಯಾಗಬೇಕು.‌ ಇದು ನಮ್ಮ ಮೆದುಳಿನಲ್ಲಿ ಆನಂದದಾಯಕ ಚಟುವಟಿಕೆಗಳನ್ನ ಮಾಡಿದಾಗ ಮಾತ್ರ ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿದಿನ ಒಂದೇ ರೀತಿ ಕೆಲಸ ಮಾಡದೆ, ಹೊಸ ಕೌಶಲ್ಯಗಳನ್ನು ಕಲಿಯಲು ಪ್ರಯತ್ನಿಸುವುದು ಅಗತ್ಯ.‌

ಏನು ಬದಲಾವಣೆ ಬೇಕು

  • ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳಿ
  • ಆಸಕ್ತಿದಾಯಕ ಚಟುವಟಿಕೆಗಳಿಗೆ ಒತ್ತು ನೀಡಿದರೆ ಒಳಿತು
  • ಪ್ರತಿದಿನ ಒಂದೇ ರೀತಿ ಕೆಲಸ ಮಾಡದೆ, ಹೊಸ ಕೌಶಲ್ಯ,ಕ್ರಿಯಾತ್ಮಕತೆ ಕಲಿಯಲು ಪ್ರಯತ್ನಿಸಿ
  • ಹೊಸದಾದ ಹವ್ಯಾಸ ರೂಢಿಸಿಕೊಳ್ಳಿ